ದೇಶದಲ್ಲಿ (Country) ರಸ್ತೆ ಅಪಘಾತಗಳ (Accidents) ಸಂಖ್ಯೆ ಹೆಚ್ಚುತ್ತಿದೆ. ವಾಹನ ಸವಾರರಿಗೆ (Two Wheelers) ಎಷ್ಟೇ ನಿಯಮಗಳನ್ನು (Rules) ಮಾಡಿದರೂ ಪ್ರಯೋಜನಕ್ಕೆ ಬರುತ್ತಿಲ್ಲ. ಆದರೂ ಸಹ ಅತಿಯಾದ ಸ್ಪೀಡ್ (Speed), ರಾಂಗ್ ರೂಟ್, ಮದ್ಯಪಾನ ಸೇವಿಸಿ ವಾಹನ ಚಲಾವಣೆ, ಹೆಲ್ಮೆಟ್ (Helmet) ಧರಿಸದೇ ಇರುವುದು ಅಪಘಾತಕ್ಕೆ ಕಾರಣವಾಗುತ್ತಿದೆ. ಇನ್ನು ಎಷ್ಟೇ ಸುರಕ್ಷಿತವಾಗಿ ವಾಹನ ಸವಾರಿ ಮಾಡಿದರೂ ಕೆಲವೊಮ್ಮೆ ತಮ್ಮದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಕೆಲವೊಮ್ಮೆ ವಾಹನ ಸವಾರರು ಮಾಡುವ ತಪ್ಪಿಗೆ ಹಿಂಬದಿ ಸವಾರರೂ ಬಲಿಯಾಗಿದ್ದಾರೆ. ರಸ್ತೆ ಅಪಘಾತಗಳಿಂದ ಪ್ರಾಣಹಾನಿ ತಪ್ಪಿಸಲು ಹೆಲ್ಮೆಟ್ ಧರಿಸುವುದು ಕಡ್ಡಾಯ, ದ್ವಿಚಕ್ರ ವಾಹನದಲ್ಲಿ ಇಬ್ಬರಿಗಿಂತ ಹೆಚ್ಚು ಜನ ಪ್ರಯಾಣ ನಿರ್ಬಂಧ ವಿಧಿಸಿ, ದಂಡ, ಶಿಕ್ಷೆ ವಿಧಿಸಲಾಗುತ್ತಿದೆ.
ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ನಿಯಮಗಳನ್ನು ಕಟ್ಟುನಿಟ್ಟುಗೊಳಿಸಲಾಗಿದೆ. ಈಗ ಮಕ್ಕಳ (Children's) ಹಿತದೃಷ್ಟಿಯಿಂದ “ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು (MoRTH) ನಾಲ್ಕು ವರ್ಷದೊಳಗಿನ ಮಕ್ಕಳು, ದ್ವಿಚಕ್ರ ವಾಹನ ಸವಾರಿ ಮಾಡುವಾಗ ಕ್ರ್ಯಾಶ್ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿದೆ”.
ಮಕ್ಕಳ ಹಿತದೃಷ್ಟಿಯಿಂದ MoRTH ಹೊಸ ನಿಯಮ:
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು (MoRTH) ನಾಲ್ಕು ವರ್ಷದೊಳಗಿನ ಮಕ್ಕಳು ದ್ವಿಚಕ್ರ ವಾಹನ ಸವಾರಿ ಮಾಡುವಾಗ ಕ್ರ್ಯಾಶ್ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಇದರೊಂದಿಗೆ, MoRTH ನಾಲ್ಕು ವರ್ಷದೊಳಗಿನ ಮಕ್ಕಳಿಗೆ ದ್ವಿಚಕ್ರ ವಾಹನದಲ್ಲಿ ಸುರಕ್ಷತಾ ಸರಂಜಾಮು ಧರಿಸುವುದನ್ನು ಕಡ್ಡಾಯಗೊಳಿಸಿದೆ. ನಾಲ್ಕು ವರ್ಷದೊಳಗಿನ ಮಕ್ಕಳು ಸವಾರಿ ಮಾಡುತ್ತಿರುವ ದ್ವಿಚಕ್ರ ವಾಹನದ ವೇಗವನ್ನು ಗಂಟೆಗೆ 40 ಕಿ.ಮೀ.ಗೆ ನಿರ್ಬಂಧ ವಿಧಿಸಲಾಗಿದೆ. ಈ ನಿಯಮವು 15 ಫೆಬ್ರವರಿ 2023 ರಿಂದ ಜಾರಿಗೆ ಬರಲಿದೆ.
ಇದನ್ನೂ ಓದಿ: ಸಾಂಸ್ಕೃತಿಕ ನಗರಿಗೆ ಕಾಲಿಟ್ಟ ರೋಬೋ ಸೇವೆ, ಮೈಸೂರಿನಲ್ಲಿ ಹೋಟೆಲ್ ಕೆಲಸಕ್ಕೆ ರೋಬೋಟ್ ಬಳಕೆ
ಕಳೆದ ವರ್ಷ ಅಕ್ಟೋಬರ್ನಲ್ಲಿ MoRTH ಕರಡು ಅಧಿಸೂಚನೆ
ಈ ಸಂಬಂಧ ಕಳೆದ ವರ್ಷ ಅಕ್ಟೋಬರ್ನಲ್ಲಿ ಕೇಂದ್ರ ಮೋಟಾರು ವಾಹನ ಕಾಯ್ದೆಗೆ (CMVR) ನಾಲ್ಕು ವರ್ಷದೊಳಗಿನ ಮಕ್ಕಳು ದ್ವಿಚಕ್ರ ವಾಹನ ಸವಾರಿ ಮಾಡುವಾಗ ಕ್ರ್ಯಾಶ್ ಹೆಲ್ಮೆಟ್ ಧರಿಸುವುದು ಕಡ್ಡಾಯ ಮತ್ತು ಮಕ್ಕಳು ಸವಾರಿ ಮಾಡುತ್ತಿರುವ ದ್ವಿಚಕ್ರ ವಾಹನದ ವೇಗವನ್ನು ಗಂಟೆಗೆ 40 ಕಿ.ಮೀ.ಗೆ ನಿರ್ಬಂಧ ವಿಧಿಸುವ ಬದಲಾವಣೆಗಳನ್ನು ಸೇರಿಸಲು MoRTH ಕರಡು ಅಧಿಸೂಚನೆ ಹೊರಡಿಸಿತ್ತು.
ಮೋಟಾರ್ ಸೈಕಲ್ ಅಥವಾ ಸ್ಕೂಟರ್ ನಲ್ಲಿ ಸವಾರಿ ಮಾಡುವ ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈ ಸುರಕ್ಷತಾ ನಿಬಂಧನೆಗಳನ್ನು ಸೇರಿಸಲು CMVR, 1989 ರ ನಿಯಮ 138 ಗೆ ತಿದ್ದುಪಡಿಗಳನ್ನು ಮಾಡಿದೆ. ಮೊದಲೇ ಹೇಳಿದಂತೆ, ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸರ್ಕಾರ ನಿಗದಿಪಡಿಸಿದ ಸುರಕ್ಷತಾ ಮಾನದಂಡಗಳನ್ನು ಅನುಸರಿಸುವ ಕ್ರ್ಯಾಶ್ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸಬೇಕಾಗುತ್ತದೆ.
ವಾಹನಗಳ ವೇಗವನ್ನು ಗಂಟೆಗೆ 40 ಕಿ.ಮೀ ಮಿತಿ ನಿರ್ಬಂಧ:
ದ್ವಿಚಕ್ರ ವಾಹನ ಸವಾರರು ದ್ವಿಚಕ್ರ ವಾಹನದಿಂದ ಮಗು ಬೀಳುವುದನ್ನು ತಡೆಯಲು ಮಗುವಿಗೆ ಸುರಕ್ಷತಾ ಸರಂಜಾಮುಗಳನ್ನು ಅಳವಡಿಸಿಕೊಳ್ಳುವುದನ್ನು ಅಧಿಸೂಚನೆಯು ಕಡ್ಡಾಯಗೊಳಿಸಿದೆ. ಸುರಕ್ಷತಾ ಸರಂಜಾಮು ಮೂಲಭೂತವಾಗಿ ಒಂದು ಕಾಂಟ್ರಾಪ್ಶನ್ ಆಗಿದ್ದು, ಅದು ಸವಾರನೊಂದಿಗೆ ಪಿಲಿಯನ್ ಅನ್ನು ಜೋಡಿಸುವಂತೆ ಮತ್ತು 30 ಕೆಜಿ ತೂಕವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರಬೇಕು.
ಮಕ್ಕಳ ಪ್ರಯಾಣಿಕರ ಸುರಕ್ಷತೆಯನ್ನು ಮತ್ತಷ್ಟು ಸುಧಾರಿಸುವ ಪ್ರಯತ್ನದಲ್ಲಿ ಸರ್ಕಾರವು ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನೊಂದಿಗೆ ಸಂಚರಿಸುವ ದ್ವಿಚಕ್ರ ವಾಹನಗಳ ವೇಗವನ್ನು ಗಂಟೆಗೆ 40 ಕಿ.ಮೀ ಮಿತಿ ಎಂದು ನಿರ್ಬಂಧಿಸಿದೆ.
ಮಕ್ಕಳ ರಸ್ತೆ ಸುರಕ್ಷತೆಯ ಸಮಸ್ಯೆಯನ್ನು ಪರಿಹರಿಸಲು:
ಈ ರೀತಿಯ ನಿಬಂಧನೆ ಅಳವಡಿಸಿರುವ ಮತ್ತು ವಯಸ್ಸಿನ ಆಧಾರದ ಮೇಲೆ ನಿರ್ದಿಷ್ಟ ಸುರಕ್ಷತಾ ನಿಬಂಧನೆಗಳನ್ನು ಹೊಂದಿರುವ ವಿಶ್ವದ ಕೆಲವೇ ದೇಶಗಳ ಪಟ್ಟಿಗೆ ಭಾರತ ಕೂಡ ಸೇರ್ಪಡೆಯಾಗಿದೆ. ಇದು ಮಕ್ಕಳ ಸಂಚಾರವನ್ನು ಸುಗಮ ಹಾಗೂ ಅಪಾಯ, ಮಕ್ಕಳ ರಸ್ತೆ ಸುರಕ್ಷತೆಯ ಸಮಸ್ಯೆಯನ್ನು ಪರಿಹರಿಸಲು ಸಹಕಾರಿಯಾಗಲಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ, ಭೀಕರ ಕಾರು ಅಪಘಾತದಲ್ಲಿ ನಾಲ್ವರು ವಿದ್ಯಾರ್ಥಿಗಳ ಸಾವು
ಕಳೆದ ವರ್ಷ ರಸ್ತೆ ಅಪಘಾತಗಳ ಹೆಚ್ಚಳ ತಪ್ಪಿಸಲು, ಅಪಘಾತ ಘಟನೆಗಳಿಗೆ ಕಡಿವಾಣ ಹಾಕಲು ಭಾರತ ಸರ್ಕಾರ ಮೋಟಾರು ವಾಹನ ಕಾಯಿದೆಯಲ್ಲಿ ಬದಲಾವಣೆಗಳ ಬಗ್ಗೆ ಪ್ರಸ್ತಾಪಿಸಿತ್ತು. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಈ ಬದಲಾವಣೆಗಳನ್ನು ಪ್ರಸ್ತಾಪಿಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ