ವನ್ಯ ಜೀವಿಗಳ ಸ್ವರ್ಗ ಈ ಮುತ್ತೋಡಿ; ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ ಪ್ರವಾಸಿಗರ ಸಂಖ್ಯೆ

ಇನ್ನು ಈ ಅಭಯಾರಣ್ಯದಲ್ಲಿ 250 ಇದ್ದ ಆನೆಗಳ ಸಂಖ್ಯೆ ಈಗ 350ರ ಗಡಿ ದಾಟಿದ್ದು, ಪ್ರಾಣಿ ಪ್ರಿಯರಿಗೆ ಹರ್ಷ ಉಂಟು ಮಾಡಿದೆ. ಇನ್ನು ಈ ಕಾಡಿನಲ್ಲಿ ನೀಲ್​ಗಾಯ್​ ಹಾಗೂ ಹುಲಿಗಳ ಸಂಖ್ಯೆ ಕೂಡ ಹೆಚ್ಚಿದ್ದು, ವನ್ಯ ಪ್ರೇಮಿಗಳ ನೆಚ್ಚಿನ ತಾಣವಾಗಿದೆ

ಅಭಯಾರಣ್ಯದ ಚಿತ್ರ

ಅಭಯಾರಣ್ಯದ ಚಿತ್ರ

  • Share this:
ಚಿಕ್ಕಮಗಳೂರು(ಫೆ.8) ಕಾಫಿನಾಡಿನಿಂದ ಕೇವಲ 20 ಕಿ.ಮೀ ದೂರದಲ್ಲಿರುವ ಮುತ್ತೋಡಿ ಅಭಯಾರಣ್ಯ ದಟ್ಟ ಕಾಡು ಮಾತ್ರವಲ್ಲದೇ, ಅನೇಕ ವೈವಿಧ್ಯಮಯ ಜೀವ ಸಂಕುಲಗಳಿಗೆ ಹೆಸರಾಗಿರುವ ಅರಣ್ಯ ಪ್ರದೇಶ. 

ನಿಸರ್ಗತೆಯ ರಮಣೀಯತೆಯನ್ನು ಮೈಗೂಡಿಸಿಕೊಂಡಿರುವ ಈ ಕಾಡು 1 ಲಕ್ಷದ 25 ಸಾವಿರ ಹೆಕ್ಟೇರ್​ನಷ್ಟು ವಿಶಾಲವಾಗಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಜಿಲ್ಲಾ ಕೇಂದ್ರದಿಂದ ಅನತಿ ದೂರದಲ್ಲಿರುವ ಈ ಅಭಯಾರಣ್ಯದಲ್ಲಿ ಹುಲಿ, ಚಿರತೆ, ಆನೆ, ನೀಲ್​ಗಾಯ್​, ಜಿಂಕೆ ಸೇರಿದಂತೆ ಅನೇಕ ಜೀವಸಂಕುಲ ಮಾತ್ರವಲ್ಲದೇ ವೈವಿಧ್ಯಮಯ ಸಸ್ಯ ಸಂಕುಲಗಳನ್ನು ಒಳಗೊಂಡಿದೆಇನ್ನು ಈ ಅಭಯಾರಣ್ಯದಲ್ಲಿ ಈ ಹಿಂದೆ ಇದ್ದ ಆನೆಗಳ ಸಂಖ್ಯೆ ದುಪ್ಪಟ್ಟು ಗೊಂಡಿದ್ದು,  ಈಗ 350ರ ಗಡಿ ದಾಟಿದೆ. ಇನ್ನು ಈ ಕಾಡಿನಲ್ಲಿ ನೀಲ್​ಗಾಯ್​ ಹಾಗೂ ಹುಲಿಗಳ ಸಂಖ್ಯೆ ಕೂಡ ಹೆಚ್ಚಿದ್ದು, ವನ್ಯ ಪ್ರೇಮಿಗಳ ನೆಚ್ಚಿನ ತಾಣವಾಗಿದೆ.ಸಫಾರಿಗೆ ಎಂದು ಬರುವ ದೂರದ ಪ್ರವಾಸಿಗರಿಗೆ ಅನುಕೂಲವಾಗಲಿ ಎಂದು ಅರಣ್ಯ ಇಲಾಖೆಯ ವಿಹಾರಧಾಮಗಳಲ್ಲಿ ತಂಗುವ ವ್ಯವಸ್ಥೆಯನ್ನು ಮಾಡಿದೆ.  ಎರಡು ಕಡೆ ಎಕೋ ಟೂರಿಸಂ, ಟೆಂಟ್, ಕಾಟೇಜ್, ಡಾಮೆಂಟ್ರಿ ವ್ಯವಸ್ಥೆ ಇದೆ.ಈ ಅಭಯಾರಣ್ಯದ ಮತ್ತೊಂದು ವಿಶೇಷತೆ ಎಂದರೆ ಇಲ್ಲಿನ ತೇಗದ ಮರ. 20 ಮೀಟರ್ ಎತ್ತರ, 6 ಮೀಟರ್ ಸುತ್ತಳತೆಯ 300 ವರ್ಷದ ತೇಗದ ಮರ ಈ ಕಾಡಿನ ಸೌಂದರ್ಯವನ್ನ ಮತ್ತಷ್ಟು ಇಮ್ಮಡಿಗೊಳಿಸಿದ್ದು, ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.

ಇದನ್ನು ಓದಿ: 9ನೇ ವಯಸ್ಸಿಗೆ ಭರತನಾಟ್ಯದಲ್ಲಿ ದಾಖಲೆ ಬರೆದ ಮಲೆನಾಡಿ ಪೋರಿ

1 ಲಕ್ಷದ 25 ಸಾವಿರ ಹೆಕ್ಟೇರ್​ ವಿಸ್ತೀರ್ಣದ ಈ ಅರಣ್ಯವನ್ನು ಮುತ್ತೋಡಿ, ತಣಿಗೆಬೈಲು, ಹೆಬ್ಬೆ, ಲಕ್ಕವಳ್ಳಿ ನಾಲ್ಕು ವಿಭಾಗಗಳಾಗಿ ವಿಂಗಡಿಸಿ ನಿರ್ವಹಣೆ ಮಾಡಲಾಗುತ್ತಿದೆ. ತಡಬೆಹಳ್ಳ, ಸೋಮವಾಹಿನಿ, ಮೇಲಗಿರಿಹಳ್ಳಗಳು ವರ್ಷದ 365 ದಿನವೂ ಹರಿಯೋದ್ರಿಂದ ಮುತ್ತೋಡಿಯಲ್ಲಿ ನೀರಿನ ಸಮಸ್ಯೆ ಇಂದಿಗೂ ಎದುರಾಗಿಲ್ಲ. ಸದಾ  ದಟ್ಟ ಕಾನನದಂತಿರುವ ಈ ಕಾಡಿನಲ್ಲಿ ಸಫಾರಿ ಪ್ರಿಯರಿಗೆ ಬಲು ಇಷ್ಟದ ಜಾಗವಾಗಿದ್ದು, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗುತ್ತಲೇ ಇದೆ.
First published: