HOME » NEWS » State » SADHUS CONSUME GANJA IN YADAGIRI MOUNESHWARA TEMPLE FESTIVAL KNOW THE HISTORIC RITUALS NMPG SCT

ಮೌನೇಶ್ವರನ ಜಾತ್ರೆಯಲ್ಲಿ ಧಮ್ ಮಾರೋ ಧಮ್!; ಕೈಲಾಸಕಟ್ಟೆಯಲ್ಲಿ ಸಾಧು-ಸಂತರ ಗಾಂಜಾ ಗಮ್ಮತ್ತು

ಮೌನೇಶ್ವರನ ಜಾತ್ರೆಯಲ್ಲಿ ಸಾಧು-ಸಂತರು ಆಗಮಿಸಿ ಕೈಲಾಸ ಕಟ್ಟೆಯಲ್ಲಿ ಗಾಂಜಾ ಸೇದುತ್ತಾರೆ. 5 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಸಾಧುಗಳು ಗಾಂಜಾ ಸೇದುವುದೇ ವಿಶೇಷವಾಗಿದೆ. ಕೈಲಾಸ ಕಟ್ಟೆಯಲ್ಲಿ ಗಾಂಜಾ ಸೇದುವುದಕ್ಕೆ ಧಾರ್ಮಿಕ ಕಾರಣವಿದೆ.

news18-kannada
Updated:February 27, 2021, 1:54 PM IST
ಮೌನೇಶ್ವರನ ಜಾತ್ರೆಯಲ್ಲಿ ಧಮ್ ಮಾರೋ ಧಮ್!; ಕೈಲಾಸಕಟ್ಟೆಯಲ್ಲಿ ಸಾಧು-ಸಂತರ ಗಾಂಜಾ ಗಮ್ಮತ್ತು
ಯಾದಗಿರಿಯ ಜಾತ್ರೆಯಲ್ಲಿ ಗಾಂಜಾ ಸೇದುತ್ತಿರುವ ಸಾಧುಗಳು
  • Share this:
ಯಾದಗಿರಿ (ಫೆ. 27): ಅದು ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ದಕ್ಷಿಣ ಕಾಶಿ ಎಂದೇ ಖ್ಯಾತಿ ಹೊಂದಿದ್ದ ಧಾರ್ಮಿಕ ಜಾತ್ರೆ. ಕೈಲಾಸಕಟ್ಟೆಯಲ್ಲಿ ಗಾಂಜಾ ಗುಂಗಿನಲ್ಲಿ ಸಾಧು ಸಂತರು ತೇಲಾಡುತ್ತಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದ ಜಗದ್ಗುರು ಮೌನೇಶ್ವರನ ಜಾತ್ರೆಯಲ್ಲಿ ಸಾಧುಗಳು ಗಾಂಜಾ ಹೊಡೆಯುವ ದೃಶ್ಯ  ಕಾಣುತ್ತದೆ. ಚಿಲುಮೆ ಹಿಡಿದು ಸಾಧು ಸಂತರು ಗಾಂಜಾ ಮತ್ತಿನಲ್ಲಿ ತೇಲಾಡುತ್ತಿದ್ದಾರೆ. ಜಿಲ್ಲಾಡಳಿತದ ನಿಷೇಧದ ನಡುವೆಯೂ ಕೈಲಾಸ ಕಟ್ಟೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯದಿಂದ ಮೌನೇಶ್ವರನ ಜಾತ್ರೆಗೆ ಆಗಮಿಸಿದ ಸಾಧು- ಸಂತರು ಗಾಂಜಾ ಸೇದುತ್ತಾರೆ. ಮೌನೇಶ್ವರ ಮಂದಿರ ಪಕ್ಕದಲ್ಲಿಯೇ ಕೈಲಾಸ ಕಟ್ಟೆಯಿದ್ದು, ಈ ಕೈಲಾಸ ಕಟ್ಟೆಯಲ್ಲಿಯೇ ಸಾಧು-ಸಂತರು ಗಾಂಜಾ ಹೊಡೆಯುತ್ತಾರೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಭಕ್ತ ಶಿವರಾಯ ಪೂಜಾರಿ ಮಾತನಾಡಿ, ಮೌನೇಶ್ವರನ ಜಾತ್ರೆಯಲ್ಲಿ ಸಾಧು-ಸಂತರು ಆಗಮಿಸಿ ಕೈಲಾಸ ಕಟ್ಟೆಯಲ್ಲಿ ಗಾಂಜಾ ಸೇದುತ್ತಾರೆ. ಆದರೆ, ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸಾಧುಗಳು ಗಾಂಜಾ ಸೇದುತ್ತಿಲ್ಲ. 5 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಸಾಧುಗಳು ಗಾಂಜಾ ಸೇದುವುದೇ ವಿಶೇಷವಾಗಿದೆ. ಕೈಲಾಸ ಕಟ್ಟೆಯಲ್ಲಿ ಗಾಂಜಾ ಸೇದುವುದಕ್ಕೆ ಧಾರ್ಮಿಕ ಕಾರಣವಿದೆ.

Sadhus Consume Ganja in Yadagiri Mouneshwara Temple Festival Know the Historic Rituals.

ಶತಮಾನಗಳ ಹಿಂದೆ ಮೌನೇಶ್ವರನ ಶಿಷ್ಯರು ಕೈಲಾಸ ಕಾಣಲು ಕಾಶಿಗೆ ಪಾದಯಾತ್ರೆ ಹೊಗುತ್ತಿದ್ದರಂತೆ. ಆದರೆ, ಜಗದ್ಗುರು ಮೌನೇಶ್ವರನು ಶಿಷ್ಯರಿಗೆ ಕಾಶಿಗೆ ತೆರಳಿ ಕೈಲಾಸ ಕಾಣುವುದು ಬೇಡ. ನಾನೇ ಇಲ್ಲೇ ಕೈಲಾಸ ತೋರಿಸುತ್ತೇನೆ ಎಂದು ಹೇಳಿ, ಶಿಷ್ಯಂದಿರಿಗೆ ಕಣ್ಣು ಮುಚ್ಚಿ ಕೈಲಾಸ ತೋರಿಸಿದರಂತೆ. ಬಳಿಕ ಗಾಂಜಾ ಹೊಡೆದಿದ್ದರಂತೆ. ಹೀಗಾಗಿ ಈ ಕಟ್ಟೆಗೆ ಕೈಲಾಸ ಕಟ್ಟೆ ಎಂಬ ಹೆಸರು  ಬಂದಿದೆ. ಹೀಗಾಗಿ, ಭಕ್ತರೇ ಸಾಧು ಸಂತರಿಗೆ ಪ್ರಸಾದ ರೂಪದಲ್ಲಿ ಗಾಂಜಾವನ್ನು ತಂದು ಕೊಡುತ್ತಾರೆ.

ಇದನ್ನೂ ಓದಿ: ಮಕ್ಕಳಿಗೆ ಮೊಬೈಲ್ ಕೊಡುತ್ತೀರಾ? ಈ ಸುದ್ದಿನೋಡಿ – ಪೋಕ್ಸೋ ಕೇಸ್ ಹೆಚ್ಚಾಗಲು ಕಾರಣ ಬಿಚ್ಚಿಟ್ಟ ಮನೋವೈದ್ಯರು

ಕೇವಲ ಸಾಧುಗಳಲ್ಲ, ಇಲ್ಲಿ ಬಂದ ಕೆಲ ಭಕ್ತರು ಗಾಂಜಾ ಹೊಡೆಯುವುದು ವಾಡಿಕೆಯಾಗಿದೆ. ಪ್ರತಿ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಸಾಧುಗಳು ಗಾಂಜಾ ಸೇದುತ್ತಿದ್ದರು. ಆದರೆ, ಪೊಲೀಸರು ಕೂಡ ಈ ಬಾರಿ ವ್ಯಾಪಕ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಗಾಂಜಾ ಸೇದುವುದು ಈ ಬಾರಿ ಸ್ವಲ್ಪ ಕಡಿಮೆಯಾಗಿದೆ. ಗಾಂಜಾ ಸೇದುವವರ ಮೇಲೆ ಹದ್ದಿನ ಕಣ್ಣಿಟ್ಟು ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಿದ್ದಾರೆ. ಆದರೆ, ಪೊಲೀಸರ ಕಣ್ಣು ತಪ್ಪಿಸಿ ಅಲ್ಲಲ್ಲಿ‌ ಕೇಲ ಸಾಧುಗಳು ಗಾಂಜಾ ಮತ್ತಿನಲ್ಲಿ ತೇಲಾಡಿದ್ದಾರೆ.
Youtube Video
ಮೌನೇಶ್ವರನ ಜಾತ್ರೆಯಲ್ಲಿ ವ್ಯಾಪಕ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಗಾಂಜಾ ಸಿಗದೆ ಕೆಲ ಸಾಧು ಸಂತರು ಗಾಂಜಾಗಾಗಿ ಪರದಾಡುವಂತಾಗಿದೆ. ಮೌನೇಶ್ವರನ ಜಾತ್ರೆಗೆ ಆಂಧ್ರಪ್ರದೇಶ, ತೆಲಂಗಾಣ ಹಾಗೂ ರಾಜ್ಯದ ವಿವಿಧ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಮೌನೇಶ್ವರ ಕೃಪೆಗೆ ಪಾತ್ರರಾದರು. ಜಿಲ್ಲಾಡಳಿತ ಎಷ್ಟೇ ಕಡಿವಾಣ ಹಾಕಿದರು. ಸಾಧುಗಳು ಮಾತ್ರ ಪೊಲೀಸರ ಕಣ್ಣು ತಪ್ಪಿಸಿ ಕಾನೂನು ಉಲ್ಲಂಘಿಸಿ ಗಾಂಜಾ ಹೊಡೆಯುತ್ತಿದ್ದಾರೆ. ಜಾತ್ರೆಯಲ್ಲಿ ಕೋವಿಡ್ ನಿಯಮ ಪಾಲನೆ ಮಾಡದೆ ಮಾಸ್ಕ್ ಹಾಕದೆ ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡದೇ ನಿಯಮ ಗಾಳಿಗೆ ತೂರಲಾಗಿತ್ತು.
Published by: Sushma Chakre
First published: February 27, 2021, 1:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories