ಸಿಡಿಗೆ ಸದಾನಂದ ಗೌಡ ತಡೆಯಾಜ್ಞೆ; ಬಿಜೆಪಿಯಲ್ಲಿ ಸ್ವಚ್ಛ ಚಾರಿತ್ರ್ಯದವರು ಒಬ್ಬರೂ ಇಲ್ಲ ಎಂದ ಕಾಂಗ್ರೆಸ್
ತಮ್ಮವರಿಂದಲೇ #BlackMailJanataParty ಎಂದು ಕರೆಸಿಕೊಂಡ ಬಿಜೆಪಿಯಲ್ಲಿ ಬ್ಲಾಕ್ಮೇಲ್ ಭರ್ಜರಿಯಾಗಿ ನಡೆಯುತ್ತಿರುವಂತಿದೆ. ಕಂಡವರ ಬೆಡ್ ರೂಮಲ್ಲಿ ಕ್ಯಾಮೆರಾ ಇಡುವ ಚಾಳಿ ಹೊಂದಿರುವ ಕರ್ನಾಟಕದ ಬಿಜೆಪಿಯರದ್ದು ಎಂದು ಕಾಂಗ್ರೆಸ್ ಕಿಡಿಕಾರಿದೆ.
ಬೆಂಗಳೂರು (ಜುಲೈ 03); ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸೆಕ್ಸ್ ಸಿಡಿ ಇತ್ತೀಚೆಗೆ ಬಿಡುಗಡೆಯಾಗಿದ್ದು, ಭಾರೀ ದೊಡ್ಡ ಸದ್ದು ಮಾಡಿತ್ತು. ಇಡೀ ವಿರೋಧ ಪಕ್ಷ ಬಿಜೆಪಿಯ ವಿರುದ್ಧ ನಿಂತಿತ್ತು. ಅಲ್ಲದೆ, ರಾಷ್ಟ್ರಾದ್ಯಂತ ಬ್ಯೂಜೆಪಿ ಎಂಬ ಹ್ಯಾಷ್ಟ್ಯಾಗ್ ಟ್ರೆಂಡ್ ಸೃಷ್ಟಿಯಾಗಿತ್ತು. ಇದರ ಬೆನ್ನಿಗೆ ಆರೋಗ್ಯ ಸಚಿವ ಡಾ. ಸುಧಾಕರ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಶಾಸಕರು ತಮ್ಮ ಸಿಡಿ ಬಿಡುಗಡೆಯಾಗದಂತೆ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದರು. ಈ ವಿಚಾರ ಸಹ ದೊಡ್ಡ ಮಟ್ಟದ ಸುದ್ದಿಗೆ ಗ್ರಾಸವಾಗಿತ್ತು. ಇದರ ಬೆನ್ನಿಗೆ ನಿನ್ನೆ ಸಂಸದ ಕೇಂದ್ರ ಸಚಿವ ಸದಾನಂದ ಗೌಡ ಸಹ ತಮ್ಮ ಸಿಡಿ ಬಿಡುಗಡೆಯಾಗದಂತೆ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ. ಸದಾನಂದ ಗೌಡರ ಈ ನಡೆ ಇದೀಗ ಸಾಕಷ್ಟು ಚರ್ಚೆಗೆ ಗುರಿಯಾಗಿದೆ. ಅಲ್ಲದೆ, ಕಾಂಗ್ರೆಸ್ ಈ ವಿರುದ್ಧ ಟ್ವಿಟರ್ ಮೂಲಕ ಕಾಲೆಳೆದಿದೆ.
ತಮ್ಮವರಿಂದಲೇ #BlackMailJanataParty ಎಂದು ಕರೆಸಿಕೊಂಡ ಬಿಜೆಪಿಯಲ್ಲಿ ಬ್ಲಾಕ್ಮೇಲ್ ಭರ್ಜರಿಯಾಗಿ ನಡೆಯುತ್ತಿರುವಂತಿದೆ.
ಕಂಡವರ ಬೆಡ್ ರೂಮಲ್ಲಿ ಕ್ಯಾಮೆರಾ ಇಡುವ ಚಾಳಿ ಹೊಂದಿರುವ @BJP4Karnataka ನಾಯಕರು @DVSadanandGowda ಅವರನ್ನೂ ಬ್ಲಾಕ್ಮೇಲ್ ಮಾಡುತ್ತಿರುವಂತಿದೆ.
ಬಿಜೆಪಿಯಲ್ಲಿ ಸ್ವಚ್ಛ ಚಾರಿತ್ರ್ಯ ಹೊಂದಿದವರು ಒಬ್ಬರೂ ಇಲ್ಲ.
ಸದಾನಂದ ಗೌಡರು ತಮ್ಮ ಸಿಡಿ ಬಿಡುಗಡೆಯಾಗದಂತೆ ತಡೆ ತಂದ ಬಗ್ಗೆ ಇಂದು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, "ತಮ್ಮವರಿಂದಲೇ #BlackMailJanataParty ಎಂದು ಕರೆಸಿಕೊಂಡ ಬಿಜೆಪಿಯಲ್ಲಿ ಬ್ಲಾಕ್ಮೇಲ್ ಭರ್ಜರಿಯಾಗಿ ನಡೆಯುತ್ತಿರುವಂತಿದೆ. ಕಂಡವರ ಬೆಡ್ ರೂಮಲ್ಲಿ ಕ್ಯಾಮೆರಾ ಇಡುವ ಚಾಳಿ ಹೊಂದಿರುವ ಕರ್ನಾಟಕದ ಬಿಜೆಪಿ ನಾಯಕರು ಡಿವಿ ಸದಾನಂದ ಗೌಡ ಅವರನ್ನೂ ಬ್ಲಾಕ್ಮೇಲ್ ಮಾಡುತ್ತಿರುವಂತಿದೆ. ಬಿಜೆಪಿಯಲ್ಲಿ ಸ್ವಚ್ಛ ಚಾರಿತ್ರ್ಯ ಹೊಂದಿದವರು ಒಬ್ಬರೂ ಇಲ್ಲ" ಎಂದು ಕಿಡಿಕಾರಿದೆ.
ಕಳ್ಳನ ಮನಸು ಹುಳ್ಳುಳ್ಳಗೆ ಎಂಬಂತೆ ಕೇಂದ್ರ ಸಚಿವ @DVSadanandGowda ಅವರು ಸಿಡಿ ಬಿಡುಗಡೆಯಾಗದಂತೆ ತಡೆಯಾಜ್ಞೆ ತಂದಿದ್ದಾರೆ, ತಡೆಯಾಜ್ಞೆ ತಂದ ಬಿಜೆಪಿಗರಲ್ಲಿ ಇವರು ಏಳನೆಯವರು!
ಬಿಜೆಪಿಯವರಿಗೇ ಏಕೆ ಈ ಪರಿ ಸಿಡಿ ಭಯ ಕಾಡುವುದು ಎಂಬದೇ ಯಕ್ಷಪ್ರಶ್ನೆ.
ತಡೆಯಾಜ್ಞೆ ತರುವ ಮೂಲಕ ತಮ್ಮದೂ ಸಿಡಿ ಇದೆ ಎಂದು ಗೌಡರು ಸ್ವಯಂ ಒಪ್ಪಿಕೊಂಡಂತಾಗಿದೆ!
ಮತ್ತೊಂದು ಟ್ವೀಟ್ನಲ್ಲಿ ಸದಾನಂದ ಗೌಡರ ಕಾಲೆಳೆದಿರುವ ಕಾಂಗ್ರೆಸ್, "ಕಳ್ಳನ ಮನಸು ಹುಳ್ಳುಳ್ಳಗೆ ಎಂಬಂತೆ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅವರು ಸಿಡಿ ಬಿಡುಗಡೆಯಾಗದಂತೆ ತಡೆಯಾಜ್ಞೆ ತಂದಿದ್ದಾರೆ, ತಡೆಯಾಜ್ಞೆ ತಂದ ಬಿಜೆಪಿಗರಲ್ಲಿ ಇವರು ಏಳನೆಯವರು! ಬಿಜೆಪಿಯವರಿಗೇ ಏಕೆ ಈ ಪರಿ ಸಿಡಿ ಭಯ ಕಾಡುವುದು ಎಂಬದೇ ಯಕ್ಷಪ್ರಶ್ನೆ. ತಡೆಯಾಜ್ಞೆ ತರುವ ಮೂಲಕ ತಮ್ಮದೂ ಸಿಡಿ ಇದೆ ಎಂದು ಗೌಡರು ಸ್ವಯಂ ಒಪ್ಪಿಕೊಂಡಂತಾಗಿದೆ!" ಎಂದು ಅಪಹಾಸ್ಯಕ್ಕೆ ಗುರಿಮಾಡಿದ್ದಾರೆ.
ಒಟ್ಟಾರೆ ರಾಜ್ಯ ರಾಜಕಾರಣದಲ್ಲಿ ಸದ್ಯಕ್ಕಂತು ಅಶ್ಲೀಲ ಸಿಡಿ ಆಟ ಮುಗಿಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ರಮೇಶ್ ಜಾರಕಿಹೊಳಿ ಸಿಡಿ ಉಂಟು ಮಾಡಿರುವ ಬಿಸಿ ಆರುವ ಮುನ್ನವೇ ರಾಜ್ಯ ರಾಜಕೀಯದಲ್ಲಿ ಸಿಡಿ ಬ್ಲಾಕ್ಮೇಲ್ ಮತ್ತೆ ಸದ್ದು ಮಾಡುತ್ತಿರುವುದು ವಿಪರ್ಯಾಸವೇ ಸರಿ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ