ಬೆಂಗಳೂರಿನಿಂದ ಸದಾನಂದ ಗೌಡರಿಗೆ ಗೇಟ್​ಪಾಸ್​, ಹಳೆ ಕ್ಷೇತ್ರವೇ ಗತಿ?

news18
Updated:August 10, 2018, 1:21 PM IST
ಬೆಂಗಳೂರಿನಿಂದ ಸದಾನಂದ ಗೌಡರಿಗೆ ಗೇಟ್​ಪಾಸ್​, ಹಳೆ ಕ್ಷೇತ್ರವೇ ಗತಿ?
ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ
news18
Updated: August 10, 2018, 1:21 PM IST
ಚಿದಾನಂದ ಪಟೇಲ್​, ನ್ಯೂಸ್​ 18 ಕನ್ನಡ

ಬೆಂಗಳೂರು( ಆ.10): ಲೋಕಸಭಾ ಚುನಾವಣೆಗೆ ತಯಾರಿ ನಡೆಸಿರುವ ಬಿಜೆಪಿ, ಈಗಾಗಲೇ ಕ್ಷೇತ್ರದಲ್ಲಿ ಯಾರು, ಯಾವ ರೀತಿ ವರ್ಚಸ್ಸು ಹೊಂದಿದ್ದರೆ, ಗೆಲ್ಲುವ  ಕುದುರೆ ಯಾರು ಎಂಬ ಲೆಕ್ಕಾಚಾರ ನಡೆಸಿದೆ.

ಈಗಾಗಲೇ ಕ್ಷೇತ್ರದಲ್ಲಿ ಯಾವ ಸಂಸದರು ಗೆಲ್ಲುವ ಸಾಮಾರ್ಥ್ಯವನ್ನು ಹೊಂದಿದ್ದಾರೆ ಎಂಬ ಕುರಿತು ಆಂತರಿಕ ಸಮೀಕ್ಷೆಯನ್ನು ಬಿಜೆಪಿ ನಡೆಸಿದೆ. ಈ ಸಮೀಕ್ಷೆಯ ಲೆಕ್ಕಾಚಾರದ ಪ್ರಕಾರ ಕೇಂದ್ರ ಸಚಿವ ಡಿ. ವಿ ಸದಾನಂದ ಗೌಡಗೆ ಸಂಕಷ್ಟ ಉಂಟಾಗಿದೆ. ಅವರಿಗೆ ಈ ಬಾರಿ ಟಿಕೆಟ್​ ಕೈ ತಪ್ಪುವ ಲೆಕ್ಕಾಚಾರಗಳು ನಡೆದಿದೆ ಎನ್ನಲಾಗಿದೆ.

ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ಸಚಿವ ಡಿವಿ ಸದಾನಂದಗೌಡ, ಅವರು ತಮ್ಮ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವುದೇ ಅಪರೂಪವಾಗಿದ್ದು, ಕ್ಷೇತ್ರದಲ್ಲಿ  ಉತ್ತಮ ರೀತಿ ಪಕ್ಷ ಸಂಘಟನೆಯನ್ನು ನಡೆಸಿಲ್ಲ. ಇದರಿಂದಾಗಿ ವಿಧಾನಸಭಾ ಚುನಾವಣೆಯಲ್ಲಿಯೂ ಪಕ್ಷ ಸೋಲನ್ನು ಅನುಭವಿಸುವಂತೆ ಆಯಿತು ಎಂದು ಸಮೀಕ್ಷೆಗಳು ತಿಳಿಸಿದೆ.

ಇನ್ನು ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್​-ಕಾಂಗ್ರೆಸ್​ ಮೈತ್ರಿಯಾದರೆ, ಬಿಜೆಪಿಗೆ ಒಕ್ಕಲಿಗ ಮತ್ತು ಓಬಿಸಿ ಮತಗಳು ಅನುಮಾನ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ಹೈ ಕಮಾಂಡ್​ ಸದಾನಂದ ಗೌಡ ಬದಲು ಪ್ರಬಲ ಒಕ್ಕಲಿಗ ಮುಖಂಡರಿಗೆ ಮಣೆ ಹಾಕಲು ತಯಾರಿ ನಡೆಸಿದೆ.

ಹಳೆ ಕ್ಷೇತ್ರದ ಮೇಲೆ ಒಲವು:  ಇನ್ನು ತಮ್ಮ ವರ್ಚಸ್ಸು ಕುಂದಿರುವ ಹಿನ್ನಲೆ ಸದಾನಂದ ಗೌಡರು ತಮ್ಮ ಹಳೆ ಕ್ಷೇತ್ರದ ಮೇಲೆ ಒಲವು ತೋರಿದ್ದಾರೆ. ಚಿಕ್ಕಮಗಳೂರು-ಉಡುಪಿ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಮುಂಬರುವ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನಲೆ ತಮ್ಮ ಹಳೆ ಕ್ಷೇತ್ರಕ್ಕೆ ಮರಳಲು ಸದಾನಂದ ಗೌಡ ಅವರು ಮುಂದಾಗಿದ್ದಾರೆ ಎಂಬುದು ಕೂಡ ಮೂಲಗಳಿಂದ ತಿಳಿದು ಬಂದಿದೆ.

ಈ ಮಧ್ಯೆ ಮಾಜಿ ಶಾಸಕ ಡಿ.ಎನ್ ಜೀವರಾಜ್, ಮಾಜಿ ಸಂಸದ ಜಯಪ್ರಕಾಶ್ ಹೆಗಡೆ ಟಿಕೆಟ್ ಪಡೆಯಲು ಪ್ರಯತ್ನ ನಡೆಸುತ್ತಿದ್ದು ಅಂತಿಮವಾಗಿ ಹೈ ಕಮಾಂಡ್​ ಯಾರಿಗೆ ಮಣೆಹಾಕಲಿದೆ ಕಾದು ನೋಡಬೇಕಿದೆ.
Loading...

ಹಳೆ ಮೈಸೂರು ಭಾಗದಲ್ಲಿ ಬಲ ಹೆಚ್ಚಿಸಲು ತಂತ್ರ: ಮೈಸೂರು ಭಾಗದಲ್ಲಿ ಬಿಜೆಪಿಗೆ ಜನರು ಕೈ ಹಿಡಿಯದ ಹಿನ್ನಲೆ ಅಲ್ಲಿ ಪ್ರಬಲ ಒಕ್ಕಲಿಗರ ನಾಯಕರಿಗೂ ಹುಡುಕಾಟ ನಡೆದಿದೆ. ಚುನಾವಣೆಗೆ ಜೆಡಿಎಸ್​- ಕಾಂಗ್ರೆಸ್  ಮೈತ್ರಿ ಕೂಡ ಮುಂದುವರೆದರೆ ಪಕ್ಷಕ್ಕೆ ಭಾರೀ ಹೊಡೆತ ಬೀಳುವ ಸಾಧ್ಯತೆ ಇರುವುದರಿಂದಾಗಿ ಈ ಭಾಗದಲ್ಲಿ  ಮಾಜಿ ವಿದೇಶಾಂಗ ಸಚಿವ ಎಸ್.ಎಂ ಕೃಷ್ಣರನ್ನು ನಿಲ್ಲಿಸುವ ಲೆಕ್ಕಾಚಾರ ಬಿಜೆಪಿ ನಡೆಸಿದೆ.

ಈಗಾಗಲೇ ಎಸ್​ ಎಂ ಕೃಷ್ಣ ತಮ್ಮ ಬದಲು ತಮ್ಮ ಪುತ್ರಿ ಶಾಂಭವಿಗೆ ಟಿಕೆಟ್​ ನೀಡುವಂತೆ ತಿಳಿಸಿದ್ದು ಅವರ ಪುತ್ರಿಗೆ ಟಿಕೆಟ್ ಕೊಡುವುದರಿಂದ ಹಳೇ ಮೈಸೂರು ಭಾಗದ ಒಕ್ಕಲಿಗ ಮತಗಳ ಸೆಳೆಯುವ ಯೋಜನೆ ರೂಪಿಸಿದೆ.

ಇದರ ನಡುವೆ ಶಾಸಕ‌ ಅಶ್ವಥ್ ನಾರಾಯಣಗೌಡ‌ ಮೇಲೂ ಕಣ್ಣಿಟ್ಟಿರುವ ಹೈಕಮಾಂಡ್ ಶಾಂಭವಿ ಬಿಟ್ಟರೆ ಇವರನ್ನು ಕಣಕ್ಕೆ ಇಳಿಸುವ ಬಗ್ಗೆ ಕೂಡ ಚಿಂತಿಸಿದೆ.  ಮಲ್ಲೇಶ್ವರಂ ಬಿಜೆಪಿ ಶಾಸಕ ಅಶ್ವಥ್ ನಾರಾಯಣಗೌಡ ಸ್ಥಳೀಯ ಒಕ್ಕಲಿಗರಾಗಿದ್ದು, ಈ ಮೂಲಕ ಒಕ್ಕಲಿಗ ಮತಗಳು ತಮಗೆ ಲಭಿಸುವುದೇ ಎಂಬ ಚಿಂತನೆ ಕೂಡ ನಡೆಸಿದೆ.
First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...