ಸಮನ್ಸ್​ ರದ್ದು ಕೋರಿ‌ ಸಲ್ಲಿಸಿದ್ದ ಡಿಕೆಶಿ ಆಪ್ತನ ಅರ್ಜಿ ಮುಂದೂಡಿಕೆ

news18
Updated:August 29, 2018, 10:31 PM IST
ಸಮನ್ಸ್​ ರದ್ದು ಕೋರಿ‌ ಸಲ್ಲಿಸಿದ್ದ ಡಿಕೆಶಿ ಆಪ್ತನ ಅರ್ಜಿ ಮುಂದೂಡಿಕೆ
ಡಿಕೆ ಶಿವಕುಮಾರ್
news18
Updated: August 29, 2018, 10:31 PM IST
- ಪುಟ್ಟರಾಜು, ನ್ಯೂಸ್ 18 ಕನ್ನಡ

ಬೆಂಗಳೂರು (ಆಗಸ್ಟ್ 29) :  ಅಕ್ರಮ ಹಣ  ಸಂಗ್ರಹಣೆ ಹಾಗೂ ವರ್ಗಾವಣೆ  ಆರೋಪ ಸಂಬಂಧ ಉದ್ಯಮಿ ಸಚಿನ್ ನಾರಾಯಣ್ ಅವರು ಐಟಿ ಇಲಾಖೆ ನೀಡಿರುವ ಸಮನ್ಸ್​ ರದ್ದು ಕೋರಿ‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.

ಸಚಿವ ಡಿಕೆಶಿ ಮತ್ತು ಆವರ ಅಪ್ತರ ಮನೆಗಳ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಇಲಾಖೆ ಸಚಿನ್ ನಾರಾಯಣ್​ಗೆ ಸಮಸ್ಸ್ ನೀಡಿತ್ತು.
ಈಗಾಗಲೇ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ತೆಗೆದುಕೊಂಡಿದ್ದ ಸಚಿನ್, ಇಂದು ಐಟಿ ಇಲಾಖೆ ನೀಡಿದ್ದ ಸಮನ್ಸ್​​ಗೆ ರದ್ದು ಕೋರಿ‌ ಅರ್ಜಿ ಸಲ್ಲಿಸಿದ್ದರು.

ವಿಚಾರಣೆಯ ತಡೆಯಾಜ್ಞೆಯನ್ನು ಸೆ. 6ರ ವರೆಗೆ ಮುಂದುವರೆಸಿದ ಕೋರ್ಟ್, ರದ್ದು ಅರ್ಜಿ ವಿಚಾರಣೆಯನ್ನು ಒಂದು ವಾರ ಕಾಲ ಮುಂದೂಡಿದೆ.

ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಅವರಿಗೆ ಆಪ್ತರಾಗಿದ್ದ ಎನ್ನಲಾದ  ಉದ್ಯಮಿ ಸಚಿನ್ ನಾರಾಯಣ್ ಅವರ ದೆಹಲಿಯ 4 ನಿವಾಸಗಳ ಮೇಲೆ ಐಟಿ ದಾಳಿ ನಡೆದಿತ್ತು. ದಾಳಿ ಸಮಯದಲ್ಲಿ 8.59 ಕೋಟಿ ರೂಪಾಯಿ ಪತ್ತೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಸೇರಿ ದಂತೆ  ಒಟ್ಟು 5 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದನ್ನು ಪ್ರಶ್ನಿಸಿ ಉದ್ಯಮಿ ಸಚಿನ್ ನಾರಾಯಣ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
Loading...

 

 
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...