ಬೈಕ್​ನಲ್ಲೇ ನೇಪಾಳ, ಭೂತಾನ್​ ಸುತ್ತಿಬಂದ ಕನ್ನಡಿಗರು; ಉಡುಪಿಯ ಸಚಿನ್​, ಅಭಿಷೇಕ್​ ವಿಭಿನ್ನ ಸಾಹಸ

ಪ್ರತಿಯೊಬ್ಬರಿಗೂ ಒಂದೊಂದು ಆಸಕ್ತಿಯ ಕ್ಷೇತ್ರವಿರುತ್ತದೆ. ಟ್ರೆಕ್ಕಿಂಗ್​, ಟ್ರಾವೆಲಿಂಗ್​, ಸೈಕ್ಲಿಂಗ್​, ಬೈಕಿಂಗ್​ ಹೀಗೆ ಒಬ್ಬೊಬ್ಬರು ಒಂದೊಂದು ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುತ್ತಾರೆ. ಅದೇರೀತಿ, ಉಡುಪಿಯ ಇಬ್ಬರು ಗೆಳೆಯರು ನೇಪಾಳ, ಭೂತಾನ್​ ಕಡೆಗೆಲ್ಲ ಬೈಕ್​​ನಲ್ಲೇ ಸುತ್ತಾಡಿ ಬಂದಿದ್ದಾರೆ.

news18
Updated:August 30, 2018, 8:57 AM IST
ಬೈಕ್​ನಲ್ಲೇ ನೇಪಾಳ, ಭೂತಾನ್​ ಸುತ್ತಿಬಂದ ಕನ್ನಡಿಗರು; ಉಡುಪಿಯ ಸಚಿನ್​, ಅಭಿಷೇಕ್​ ವಿಭಿನ್ನ ಸಾಹಸ
ಸಚಿನ್​ ಮತ್ತು ಅಭಿಷೇಕ್​
news18
Updated: August 30, 2018, 8:57 AM IST
ಸುಷ್ಮಾ ಎನ್​. ಚಕ್ರೆ,  ನ್ಯೂಸ್​18 ಕನ್ನಡ


ಬೇರೆ ದೇಶಗಳ ಸಂಸ್ಕೃತಿ, ಆಹಾರಪದ್ಧತಿಯನ್ನು ತಿಳಿಯುವ ಸಲುವಾಗಿ ನೇಪಾಳ, ಭೂತಾನ್​ ದೇಶಗಳಿಗೆ ಬೈಕ್​ನಲ್ಲಿಯೇ ಪ್ರಯಾಣ ಬೆಳೆಸಿದ್ದಾರೆ ಕರ್ನಾಟಕದ ಇಬ್ಬರು ಬೈಕ್​ ಪ್ರಿಯರು. ಉಡುಪಿಯ ಕಾಪು ಎಂಬ ಊರಿನ ಸಚಿನ್​ ಶೆಟ್ಟಿ ಮತ್ತು ಅಭಿಷೇಕ್​ ಶೆಟ್ಟಿ ಈ ರೀತಿಯ ಹೊಸ ಸಾಹಸಕ್ಕೆ ಕೈಹಾಕಿದವರು. ಗೋ ಹಿಮಾಲಯಾಸ್​​ ಎಂಬ ಹೆಸರಿನಲ್ಲಿ ಪ್ರತಿವರ್ಷ ಪ್ರವಾಸ ಮಾಡುತ್ತಾರೆ.

ಸಚಿನ್​ ಶೆಟ್ಟಿ


ಕಳೆದ ಜುಲೈ ಅಂತ್ಯದಲ್ಲಿ ಈ ಬೈಕಿಂಗ್​ ಶುರು ಮಾಡಿದ ಇವರು ಇದೀಗ ನೇಪಾಳ, ಭೂತಾನ್​ ಸುತ್ತಿ ಬೆಂಗಳೂರಿಗೆ ವಾಪಾಸಾಗಿದ್ದಾರೆ. ಇಲ್ಲಿಂದ ಮಂಗಳೂರು ತಲುಪಿದರೆ ಅವರ ಪ್ರವಾಸ ಪೂರ್ಣವಾದಂತೆ. ಸಚಿನ್​ ಶೆಟ್ಟಿ ತುಳು ಸಿನಿಮಾಗಳಲ್ಲಿ ಸಿನಿಮಾಟೋಗ್ರಾಫರ್​ ಆಗಿ ಕೆಲಸ ಮಾಡಿದವರು. 40 ದಿನಗಳ ಪ್ರವಾಸದ ಯೋಜನೆಯನ್ನು ಹಮ್ಮಿಕೊಂಡಿದ್ದ ಇವರು ಒಬ್ಬರೇ ಹೋಗುವುದಕ್ಕಿಂತ ಜೊತೆಗೊಬ್ಬರು ಇದ್ದರೆ ಒಳ್ಳೆಯದು ಎಂದುಕೊಂಡು ಸ್ನೇಹಿತ ಅಭಿಷೇಕ್​ ಶೆಟ್ಟಿಯನ್ನು ಕರೆದುಕೊಂಡು ಹೋದರು. 36 ದಿನಗಳಲ್ಲಿಯೇ ಬೆಂಗಳೂರಿಗೆ ಮರಳಿರುವ ಈ ಬೈಕಿಂಗ್​ ಪ್ರಿಯರು ನೂರಾರು ನೆನಪುಗಳನ್ನು ಹೊತ್ತುಬಂದಿದ್ದಾರೆ.ಯಾವ ಮಾರ್ಗ?:
Loading...

ಮಂಗಳೂರಿನಿಂದ ಮಹಾರಾಷ್ಟ್ರದ ಸತಾರಾ ಮೂಲಕ ಮುಂಬೈ, ಮಧ್ಯಪ್ರದೇಶ ತಲುಪಿದರು. ಅಲ್ಲಿಂದ ಉತ್ತರಪ್ರದೇಶಕ್ಕೆ ಹೋಗಿ ನೇಪಾಳ, ಕಠ್ಮಂಡು, ಭೂತಾನ್​ಗೆ ಹೋಗಿ ಆಂಧ್ರಪ್ರದೇಶದ ಮೂಲಕ ಬೆಂಗಳೂರಿಗೆ ಬಂದಿದ್ದಾರೆ. ಇಲ್ಲಿಂದ ಮಂಗಳೂರಿಗೆ ತಲುಪಲಿದ್ದಾರೆ. ಒಟ್ಟು 13,560 ಕಿ.ಮೀ. ದೂರ ಬೈಕ್​ನಲ್ಲೇ ಪ್ರಯಾಣಿಸಿ ಸೈ ಎನಿಸಿಕೊಂಡಿದ್ದಾರೆ.ಸಚಿನ್​ ಶೆಟ್ಟಿ ವರ್ಷಕ್ಕೊಮ್ಮೆ ಸೋಲೋ ಬೈಕ್​ ರೈಡ್​ ಮಾಡುತ್ತಾರೆ. ಆಗೆಲ್ಲ ಹೋದ ಸ್ಥಳಗಳ ದಾಖಲೀಕರಣ ಮಾಡುವುದು ಕಷ್ಟವಾಗುತ್ತಿದ್ದುದರಿಂದ ಈ ಬಾರಿ ತಮ್ಮ ಕ್ಯಾಮೆರಾ ಅಸಿಸ್ಟೆಂಟ್​ ಆಗಿದ್ದ ಬಾಲ್ಯದ ಗೆಳೆಯ ಅಭಿಷೇಕ್​ನೊಂದಿಗೆ ಬೈಕ್​ ರೈಡ್​ ಮಾಡಿಬಂದಿದ್ದಾರೆ.ಅನುಭವ ಸಾಕಷ್ಟು ಕಲಿಸಿದೆ:

ಬೆಂಗಳೂರಿನಲ್ಲೇ ಹಲವಾರು ಕಡೆ ಭೂತಾನ್​, ನೇಪಾಳದ ಆಹಾರ ಸಿಗುವ ರೆಸ್ಟೋರೆಂಟ್​ಗಳಿವೆ. ಆದರೆ,  ಭೂತಾನ್​ಗೆ ಹೋಗಿ ಅಲ್ಲಿನ ನಿಜವಾದ ಸ್ಪೈಸ್​, ರುಚಿಯನ್ನು ಸವಿಯುವುದು ವಿಭಿನ್ನವಾದ ಅನುಭವವನ್ನು ಕೊಡುತ್ತದೆ. ಅಲ್ಲಿನ ಜನರೂ ನಮ್ಮನ್ನು ಅಷ್ಟೇ ಪ್ರೀತಿಯಿಂದ ಬರಮಾಡಿಕೊಂಡರು. ಇದೇ ಮೊದಲ ಬಾರಿಗೆ ನಾನು ಅಷ್ಟು ದೂರಕ್ಕೆ ಬೈಕ್​ ರೈಡ್​ ಮಾಡಿಕೊಂಡು ಹೋಗಿದ್ದರಿಂದ ಹೊಸ ರೀತಿಯ ಅನುಭವಗಳಾದವು ಎನ್ನುತ್ತಾರೆ ಅಭಿಷೇಕ್​ ಶೆಟ್ಟಿ.

ಕಳೆದ ವರ್ಷ ಕಾಶ್ಮೀರದಿಂದ ಕನ್ಯಾಕುಮಾರಿಗೆ 11,200 ಕಿ.ಮೀ. ಬೈಕ್​ ರೈಡಿಂಗ್​ ಮಾಡಿದ್ದ ಸಚಿನ್​ ಶೆಟ್ಟಿಗೆ ಮುಂದಿನ ವರ್ಷ ಶ್ರೀಲಂಕಾಗೆ ತಮ್ಮ ಬೈಕ್​ನೊಂದಿಗೆ ಪ್ರವಾಸ ಹೋಗಬೇಕೆಂಬ ಬಯಕೆಯಿದೆ.ದುಬಾರಿ ಪ್ರಯಾಣ:

ಸಾಮಾನ್ಯವಾಗಿ ಪ್ರವಾಸ ಹೋಗುವುದೆಂದರೆ ಅದರ ಸಿದ್ಧತೆಗಳಿಗೇ ಹೆಚ್ಚು ಖರ್ಚಾಗುತ್ತದೆ. ಸಚಿನ್ ಅವರ ಬಳಿ ರಾಯಲ್​ ಎನ್​ಫೀಲ್ಡ್​ ಹಿಮಾಲಯನ್​ ಬೈಕಿದೆ. ಅವರು ಆಗಾಗ ಬೈಕಿಂಗ್​ ಹೋಗುವುದರಿಂದ ಅದನ್ನು ಬೈಕಿಂಗ್​ಗೆ ಸರಿಹೊಂದುವಂತೆ ವಿನ್ಯಾಸಗೊಳಿಸಿಕೊಂಡಿದ್ದಾರೆ. ಆದರೆ, ಅಭಿಷೇಕ್​ ಅವರಿಗೆ ಇದೇ ಮೊದಲ ಟ್ರಿಪ್​ ಆದ್ದರಿಂದ ಅವರು ತಮ್ಮ ರಾಯಲ್​ ಎನ್​ಫೀಲ್ಡ್​ ಕ್ಲಾಸಿಕ್​ 350 ಬೈಕ್​ನಲ್ಲಿ ಚಾರ್ಜಿಂಗ್​, ಬ್ಯಾಗ್​ ಇಡಲು ವ್ಯವಸ್ಥೆ ಮುಂತಾದ ಎಲ್ಲ ಸೌಕರ್ಯಗಳನ್ನೂ ಮಾಡಿಕೊಂಡರು. 36 ದಿನಗಳ ಈ ಪ್ರಯಾಣಕ್ಕೆ ಅಂದಾಜು ತಲಾ 1 ಲಕ್ಷದಂತೆ ಇಬ್ಬರಿಗೆ 2 ಲಕ್ಷ ಹಣ ಖರ್ಚಾಗಿದೆ. ಆದರೆ, ಗೆಳೆಯರು, ಸಂಬಂಧಿಕರು ಹಣ ಸಹಾಯ ಮಾಡಿದ್ದರಿಂದ ಹೆಚ್ಚು ಹೊರೆಯಾಗಲಿಲ್ಲ.

ಭೂತಾನ್​ನಲ್ಲಿ ರೂಂಗಳು ಬಹಳ ದುಬಾರಿ.  ಅಲ್ಲಿ ಟೆಂಟ್​ಗಳನ್ನು ಕೂಡ ಹಾಕುವಂತಿರಲಿಲ್ಲ. ಅಲ್ಲಿ ಟ್ರಾಫಿಕ್​ ನಿಯಮಕ್ಕೆ ಬಹಳ ಪ್ರಾಮುಖ್ಯತೆ ನೀಡುತ್ತಾರೆ. ಅಲ್ಲಿ ಹಾರನ್​ ಮಾಡುವಂತಿಲ್ಲ. ಅದೆಲ್ಲವನ್ನೂ ಅಲ್ಲಿಂದ ನೋಡಿ ಕಲಿಯಬೇಕು ಎನ್ನುತ್ತಾರೆ ಸಚಿನ್​. 

ನಾವು ಹೋಗಿದ್ದ ಪ್ರದೇಶಗಳು ಎಲ್ಲವೂ ಚೆನ್ನಾಗಿತ್ತು. ಅಲ್ಲಿ ಒಂದೊಂದು ಕಡೆಯೇ 10 ದಿನಗಳಿದ್ದರೂ ಸಾಕಾಗುವುದಿಲ್ಲ. ಅಷ್ಟು ನೋಡುವ ಸ್ಥಳಗಳಿದ್ದವು. ಆದರೆ, ನಾವು ಅಲ್ಲೆಲ್ಲ ಹೆಚ್ಚು ದಿನ ಕಳೆಯಲು ಸಾಧ್ಯವಾಗಲಿಲ್ಲ. ನಮ್ಮ ದೇಶದ ಉತ್ತರ ಭಾರತದ ಸ್ಥಳಗಳಲ್ಲಿ ಹೆಚ್ಚು ಸಮಯ ಉಳಿದುಕೊಳ್ಳದೆ ನೇಪಾಳ, ಭೂತಾನ್​ ದೇಶದಲ್ಲಿ ಹೆಚ್ಚು ಸಮಯ ಕಳೆದೆವು. ಅಲ್ಲಿನ ಸ್ವೀಟ್​, ಸ್ಪೈಸಿ ಅಡುಗೆಯನ್ನು ಈಗಲೂ ಮಿಸ್​ ಮಾಡಿಕೊಳ್ಳುತ್ತಿದ್ದೇವೆ ಎಂದು ಸಚಿನ್​ ಶೆಟ್ಟಿ ತಮ್ಮ ಪಯಣವನ್ನು ಮೆಲುಕು ಹಾಕಿದರು.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...