News18 India World Cup 2019

ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ 'ಸಬಿಯಾ'ಗೆ 'ಕೆಂಪೇಗೌಡ ಪ್ರಶಸ್ತಿ'

news18
Updated:September 2, 2018, 4:16 PM IST
ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ 'ಸಬಿಯಾ'ಗೆ 'ಕೆಂಪೇಗೌಡ ಪ್ರಶಸ್ತಿ'
news18
Updated: September 2, 2018, 4:16 PM IST
ನ್ಯೂಸ್ 18 ಕನ್ನಡ

ಬಿಬಿಎಂಪಿಯ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿ ಪ್ರಧಾನ ಸಮಾರಂಭ ಬಿಬಿಎಂಪಿಯ ಗಾಜಿನ ಮನೆಯಲ್ಲಿ ನಡೆದಿದ್ದು, ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಸಬಿಯಾ ಎಸ್ ಅವರು ಮೇಯರ್ ಸಂಪತ್ ರಾಜ್​​ರಿಂದ ಪ್ರಶಸ್ತಿ ಸ್ವೀಕರಿಸಿದರು.

19 ವರ್ಷ ವರ್ಷದ ಸಬಿಯಾ ಇತ್ತೀಚೆಗಷ್ಟೆ ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಅಂತರಾಷ್ಟ್ರೀಯ ಥ್ರೋ ಬಾಲ್ ಚಾಂಪಿಯನ್​ಶಿಪ್​ ಟೂರ್ನಮೆಂಟ್​​ನಲ್ಲಿ ಭಾರತದ ಪರವಾಗಿ ಆಡಿದ್ದರು. ಈ ಪಂದ್ಯದಲ್ಲಿ ಭಾರತದ ಗೆಲುವಿಗೆ ಸಬಿಯಾ ಪ್ರಮುಖ ಪಾತ್ರ ವಹಿಸಿದ್ದರು. ಅಷ್ಟೇ ಅಲ್ಲದೆ ಏಳು ಅಂತರಾಷ್ಟ್ರೀಯ ಥ್ರೋ ಬಾಲ್ ಪಂದ್ಯಗಳನ್ನು ಆಡಿದ್ದು, ಆ ಏಳೂ ಪಂದ್ಯಗಳಲ್ಲಿ ಭಾರತ ಜಯಶಾಲಿಯಾಗಿದೆ ಎಂಬುವುದು ಗಮನಾರ್ಹ ವಿಚಾರ. ಏ. 2013ರ ಕೊಲಂಬೋದಲ್ಲಿ ನಡೆದ ಇಂಡೋ-ಥೈಲ್ಯಾಂಡ್​ ಟೂರ್ನಿಯಲ್ಲಿ ಶ್ರೀಲಂಕಾದ ಥ್ರೋ ಬಾಲ್ ಫೆಡರೇಷನ್ ಸಬಿಯಾ ಅವರಿಗೆ ಬೆಸ್ಟ್ ಥ್ರೋ ಬಾಲ್ ಪ್ಲೇಯರ್ ಎಂದು ಸನ್ಮಾನಿಸಿತ್ತು. ಕೇವಲ ಥ್ರೋ ಬಾಲ್ ಮಾತ್ರವಲ್ಲದೆ ಫುಟ್ಬಾಲ್, ಕಬಡ್ಡಿ, ಬ್ಯಾಡ್ಮಿಂಟನ್​, ವಾಲಿಬಾಲ್, ಲಾಂಗ್​ಜಂಪ್, ಹೈಜಂಪ್​​ನಲ್ಲು ಸಬಿಯಾ ಅವರ ಸಾಧನೆ ಉತ್ತಮವಾಗಿದೆ.

ಸದ್ಯ ಇದನ್ನೆಲ್ಲ ಮನಗಂಡು ಸಾಧಕರಿಗೆ ಬಿಬಿಎಂಪಿ ವತಿಯಿಂದ ನೀಡಲಾಗುವ 2018ನೇ ಸಾಲಿನ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಸಬಿಯಾ ಅವರು ಭಾಜನರಾಗಿದ್ದಾರೆ.
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...