• Home
  • »
  • News
  • »
  • state
  • »
  • Sa Ra Mahesh: ಭಾಷಣದ ವೇಳೆ ವೇದಿಕೆಯಲ್ಲೇ ಕಣ್ಣೀರಿಟ್ಟ ಶಾಸಕ ಸಾ ರಾ ಮಹೇಶ್!

Sa Ra Mahesh: ಭಾಷಣದ ವೇಳೆ ವೇದಿಕೆಯಲ್ಲೇ ಕಣ್ಣೀರಿಟ್ಟ ಶಾಸಕ ಸಾ ರಾ ಮಹೇಶ್!

ಸಾ ರಾ ಮಹೇಶ್

ಸಾ ರಾ ಮಹೇಶ್

ಮೈಸೂರು ಜಿಲ್ಲೆಯ ಕೆ.ಆರ್.ನಗರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಸಾ.ರಾ ಮಹೇಶ್ ಭಾಗಿಯಾಗಿದ್ದರು. ಕಾಲೇಜು ಕಟ್ಟಡ ಉದ್ಘಾಟಿಸಿ ಭಾಷಣ ಮಾಡುತ್ತಿದ್ದ ವೇಳೆ ಅವರು ಎಲ್ಲರ ಸಮ್ಮುಖದಲ್ಲಿ ಕಣ್ಣೀರಿಟ್ಟರು.

  • Share this:

ಮೈಸೂರು ಜಿಲ್ಲೆಯ ಕೆ.ಆರ್.ನಗರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಸಾ.ರಾ ಮಹೇಶ್  (SA RA Mahesh) ಭಾಗಿಯಾಗಿದ್ದರು. ಕಾಲೇಜು (College)  ಕಟ್ಟಡ (Building) ಉದ್ಘಾಟಿಸಿ (Inauguration)  ಭಾಷಣ (Speech) ಮಾಡುತ್ತಿದ್ದ ವೇಳೆ ಅವರು ಎಲ್ಲರ ಸಮ್ಮುಖದಲ್ಲಿ ಕಣ್ಣೀರಿಟ್ಟರು(Wept). ವಿದ್ಯಾರ್ಥಿಯೊಬ್ಬ ಅವರ ಕುರಿತು ಅವಾಚ್ಯ ಶಬ್ದಗಳಿಂದ ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ (Post) ಮಾಡಿದ್ದನು. ಈ ವಿಚಾರದ ಕುರಿತು ಭಾವುಕರಾಗಿ (Emotional) ವೇದಿಕೆಯಲ್ಲಿ ಕಣ್ಣೀರಿಟ್ಟರು.


ಕಾಲೇಜು ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗಿ


ಮೈಸೂರು ಜಿಲ್ಲೆಯ ಕೆ. ಆರ್ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು. ಆದರೆ ವಿದ್ಯಾರ್ಥಿಯೊಬ್ಬ ಈ ಹಿಂದೆ  ಅವಾಚ್ಯ ಶಬ್ಧಗಳನ್ನು ಬಳಸಿ ಅವರ ಬಗ್ಗೆ ಹಾಕಿದ್ದ ಪೋಸ್ಟ್ ಬಗ್ಗೆ ಮನನೊಂದ ಅವರು ಒಮ್ಮೆ ಈ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದಿದ್ದೆ ಎಂದು ಭಾಷಣದಲ್ಲಿ ಹೇಳಿಕೊಂಡರು.


ಇದನ್ನೂ ಓದಿ: Rahul Gandhi: ರಾಷ್ಟ್ರಧ್ವಜ ತಯಾರಿಕಾ ಘಟಕಕ್ಕೆ ರಾಹುಲ್ ಭೇಟಿ; ಕೇಂದ್ರ ಸರ್ಕಾರದ ಧೋರಣೆಗೆ ಕಿಡಿ


ಅವಾಚ್ಯ ಪದಗಳಿಂದ ಪೋಸ್ಟ್


ವಿದ್ಯಾರ್ಥಿಯೊಬ್ಬನು ಸಾ ರಾ ಮಹೇಶ್ ಕುರಿತು ಹೆಚ್ಚುವರಿ ಕಟ್ಟಡ ನಿರ್ಮಾಣವಾದರೂ ಅದರ ಉದ್ಘಾಟನೆ ಆಗದ ಹಿನ್ನೆಲೆ ಕೆಟ್ಟ ಪದಗಳನ್ನು ಬಳಸಿ ಪೋಸ್ಟ್ ಬರೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಎರಡು ತಿಂಗಳ ಹಿಂದೆ ಹಂಚಿಕೊಂಡಿದ್ದನು. ಈ ರೀತಿಯಾಗಿ ವೈಯಕ್ತಿಕವಾಗಿ ತೇಜೋವಧೆ ಮಾಡಿದ ವಿಚಾರವನ್ನು ನೆನೆಸಿಕೊಂಡು ಸಾ ರಾ ಮಹೇಶ್ ಕಾಲೇಜಿನಲ್ಲಿ ಭಾಷಣ ಮಾಡುವಾಗ ಭಾವುಕರಾಗಿ ಕಣ್ಣೀರಿಟ್ಟರು.ಬೇರೆ ಜಾತಿಯೆಂಬ ಕಾರಣದಿಂದ ಈ ರೀತಿಯಾಗಿ ಮಾಡುವುದು ಸರಿಯೇ


ವಿದ್ಯಾರ್ಥಿ ಹಾಕಿದ್ದ ಪೋಸ್ಟ್ ಬಗ್ಗೆ ಮಾತನಾಡುತ್ತಿದ್ದ ಅವರು, ನಾನೊಬ್ಬ ಬೇರೆ ಜಾತಿಯವನೆಂಬ ಕಾರಣದಿಂದ ಈ ರೀತಿಯಾಗಿ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು. ಅದು ಒಬ್ಬ ವಿದ್ಯಾರ್ಥಿ ಈ ರೀತಿಯಾಗಿ ಪೋಸ್ಟ್ ಮಾಡಿರುವುದರ ಬಗ್ಗೆ ಬೇಸರ ವ್ಯಕ್ತ ಪಡಿಸಿದರು.


ನನಗೂ ಸ್ವಾಭಿಮಾನವಿದೆ


ನಾನು ನಗರದ ಅಭಿವೃದ್ಧಿಗಾಗಿ ಎಷ್ಟೆಲ್ಲಾ ಕೆಲಸ ಮಾಡಿದ್ದೇನೆ. ಆದರೂ ಈ ರೀತಿಯಾಗಿ ಕೆಟ್ಟ ಕೆಟ್ಟ ಪದಗಳನ್ನು ಬಳಸಿ ಪೋಸ್ಟ್ ಹಾಕ್ತೀರಲ್ಲ ನಿಮಗೆ ಮನಸಾಕ್ಷಿ ಬೇಡವೇ ಎಂದು ಪ್ರಶ್ನಿಸಿದರು. ಅಲ್ಲದೆ ನನಗೂ ಸ್ವಾಭಿಮಾನವಿದೆ ಎಂದು ಹೇಳಿದರು. ನಾನು ಮನಸ್ಸು ಮಾಡಿದರೆ ವಿದ್ಯಾರ್ಥಿಯನ್ನು ಸಸ್ಪೆಂಡ್ ಮಾಡಬಹುದಿತ್ತು ಆದರೆ ನನಗೆ ನನ್ನ ಅಪ್ಪ ಅಮ್ಮ ಸಂಸ್ಕಾರ ಕಲಿಸಿದ್ದಾರೆ ಎಂದರು.


ಇಂತಹ ಅಯೋಗ್ಯನನ್ನು ಇನ್ನೂ ಇಟ್ಟುಕೊಂಡಿದ್ದೀರಲ್ಲ


ವಿದ್ಯಾರ್ಥಿ ಬರೆದ ಪೋಸ್ಟ್ ಅನ್ನು ಎಲ್ಲರ ಮುಂದೆ ಓದಿದ ಅವರು ಇಂತಹ ಅಯೋಗ್ಯನನ್ನು ಇನ್ನೂ ಕಾಲೇಜಿನಲ್ಲಿ ಇಟ್ಟುಕೊಂಡಿದ್ದೀರಲ್ಲ ಎಂದು ಪ್ರಾಂಶುಪಾಲರನ್ನು ಪ್ರಶ್ನಿಸಿದರು.


ಬೆಳಗ್ಗೆ ಟಿಫನ್ ಬಾಕ್ಸ್ ಹಿಡಿದುಕೊಂಡೆ ಹೊರಡುತ್ತೇನೆ


ತಾಲೂಕಿನ ಅಭಿವೃದ್ಧಿಗಾಗಿ ಸದಾ ಶ್ರಮಿಸುವ ನಾನು ಬೆಳಿಗ್ಗೆನೆ ಮನೆಯಿಂದ ಟಿಫನ್ ಬಾಕ್ಸ್ ಹಿಡಿದುಕೊಂಡು ಹೊರಡುತ್ತೇನೆ. ವಿದ್ಯಾರ್ಥಿಗಳ ತರ ನಾನು ಕೆಲಸ ಮಾಡುತ್ತೇನೆ. ತಾಲೂಕಿನ ಶ್ರೇಯೋಭಿವೃದ್ಧಿಗಾಗಿ ಇಷ್ಟೆಲ್ಲಾ ಮಾಡಿದರೂ ನನ್ನನ್ನು ಕೆಟ್ಟ ಪದಗಳಿಂದ ಬಳಸಿ ಅವಮಾನಿಸಿದ್ದು ತುಂಬಾ ನೋವುಂಟು ಮಾಡಿದೆ ಎಂದು ಹೇಳಿದರು.


ಇದನ್ನೂ ಓದಿ: Tennis Krishna: ರಾಜಕೀಯಕ್ಕೆ ಎಂಟ್ರಿ ಕೊಡ್ತಿದ್ದಾರೆ ಸ್ಯಾಂಡಲ್​ವುಡ್​ನ ಖ್ಯಾತ ಹಾಸ್ಯ ನಟ, ನಾಳೆಯೇ ಹೊಸ ಪಕ್ಷ ಸೇರ್ಪಡೆ


ನಾನು ಹುಟ್ಟುತ್ತಲೇ ಶ್ರೀಮಂತ ಅಲ್ಲ ಕಷ್ಟಪಟ್ಟು ಬೆಳೆದವನು


ನಾನೇನು ಹುಟ್ಟುತ್ತಲೇ ಶ್ರೀಮಂತ ಅಲ್ಲ ಸೈಕಲ್ ತುಳ್ಕೊಂಡು ಬೆಳೆದವನು ನನಗೆ ಕಷ್ಟದ ಅರಿವಿದೆ ಎಂದರು. ಅಲ್ಲದೆ ನನಗೆ ಬೈರಿ ಪರವಾಗಿಲ್ಲ ಆದರೆ ನನ್ನ ತಾಯಿಗೆ ಬೈಯುವುದು ಎಷ್ಟು ಸರಿ ಎಂದರು.  ನೀವು ಎಷ್ಟೇ ಬೈದರೂ ನನ್ನನ್ನು ಕೈ ಹಿಡಿಯುವ ಜನರು ಇದ್ದಾರೆ ಎಂದು ಹೇಳಿಕೊಂಡರು,

Published by:Nalini Suvarna
First published: