ಮೈಸೂರು (ಮಾ. 6): ತಮ್ಮ ವಿರುದ್ದದ ಮಾನಹಾನಿ ಸುದ್ದಿ ಪ್ರಸಾರ ಮಾಡದಂತೆ ನ್ಯಾಯಾಲಯಕ್ಕೆ ಹೋಗಿರುವ ಸಚಿವರನ್ನು ಮುಖ್ಯಮಂತ್ರಿಗಳು ಸಂಪುಟದಿಂದ ವಜಾ ಮಾಡಬೇಕು ಎಂದು ಮಾಜಿ ಸಚಿವ, ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಆಗ್ರಹಿಸಿದರು. ಈ ಕುರಿತು ಮಾತನಾಡಿದ ಅವರು, ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಎಂಂತೆ ಸಚಿವರು ತಾವಾಗಿಯೇ ಹೋಗಿ ಅರ್ಜಿ ಸಲ್ಲಿಸಿರೋದರಿಂದ ತಿಳಿಯುತ್ತದೆ. ಸಚಿವರ ಈ ನಡೆ ಕುರಿತು ಸದನಲ್ಲೂ ರಾಜೀನಾಮೆಗೆ ಒತ್ತಾಯಿಸುತ್ತೇವೆ ಎಂದರು. ಸಚಿವರು ನ್ಯಾಯಾಲಯಕ್ಕೆ ಅರ್ಜಿ ಹಾಕಿರುವುದು ನಾವೆಲ್ಲರು ತಲೆ ತಗ್ಗಿಸುವ ವಿಚಾರ. ಇದೇಲ್ಲದರ ಹಿಂದೆ ಒಂದು ಷಡ್ಯಂತ್ರ ಇದೆ. ಅದು ಆಚೆಗೆ ಬರಬೇಕು. ಬಾಂಬೆಯಲ್ಲಿ ಅಷ್ಟು ಬಿಗಿ ಭದ್ರತೆಯಲ್ಲಿ ಇಟ್ಟುಕೊಂಡಿದ್ದವರು. ಇಂತಹ ಸಿಡಿಗಳನ್ನು ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುವ ಷಡ್ಯಂತ್ರ ಮೊದಲೇ ಆಗಿತ್ತಾ ? ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಚಿವರನ್ನೇ ಬ್ಲಾಕ್ ಮೇಲ್ ಮಾಡುವುದಾದರೆ, ರಾಜ್ಯದ ಜನಸಾಮಾನ್ಯರ ಗತಿ ಏನು? ಅವರು ಹೇಗೆ ಜೀವನ ಮಾಡಬೇಕು ಅಂತ ಪ್ರಶ್ನಿಸಿದರು.
ಬಾಂಬೆಗೆ ಹೋಗಿ ವಾಪಸ್ ಬಂದಿದ್ದ ಅನರ್ಹ ಶಾಸಕರನ್ನ ಯಾಕಾಗಿ ಬಾಂಬೆಗೆ ಹೋಗಿದ್ರಿ ಎಂದು ಪ್ರಶ್ನಿಸಿದ್ದಕ್ಕೆ, ಜನಪರ ಸರ್ಕಾರ ತರಲು ಬಾಂಬೆಗೆ ಹೋಗಿದ್ವಿ ಅಂತ ಹೇಳಿದ್ದರು. ಆದರೆ, ಬಾಂಬೆನಲ್ಲಿ ಏನ್ ಮಾಡುತ್ತಿದ್ದರು ಎಂದು ಈಗ ಹೇಳಲಿ, ಅವರು ಏನ್ ಮಾಡುತ್ತಿದ್ದರು ಎಂದು ಮಾತನಾಡುವುದಕ್ಕೆ ಅಸಹ್ಯ ಆಗುತ್ತದೆ. ವಿಡಿಯೋ ಪ್ರಸಾರಕ್ಕೆ ತಡೆಕೋರಿ ಅರ್ಜಿ ಹಾಕಿರುವುದು ಶಾಸಕಾಂಗಕ್ಕೆ ಮಾಡಿದ ಅಪಮಾನವಾಗಿದೆ. ಜನರು ನಮ್ಮನ್ನ ಆಯ್ಕೆ ಮಾಡಿ ಕಳುಹಿಸಿರುವುದು ಬೇಯದೇ ಉದ್ದೇಶಕ್ಕೆ ಇವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಮಾಡುತ್ತಿರುವ ಕೆಲಸವೇ ಬೇರೆಯಾಗಿದೆ. ನಿಮ್ಮ ಮೇಲೆಯೇ ನಿಮಗೆ ಅನುಮಾನ ಯಾಕೆ? ತಪ್ಪು ಮಾಡದೆ ಇದ್ದರೆ ನೀವ್ಯಾಕೆ ನ್ಯಾಯಾಲಯಕ್ಕೆ ಹೋದ್ರಿ? ಬಾಂಬೆಗೆ ಹೋಗಿ ಮಾಡಿದ್ದು ಇದೇನಾ ನಿಮ್ಮ ಘನಕಾರ್ಯ, ಕೋರ್ಟ್‌ಗೆ ಹೋದ ಸಚಿವರ ವಿರುದ್ದ ವಾಗ್ದಾಳಿ ನಡೆಸಿದರು.
ಇದನ್ನು ಓದಿ: ಅಲ್ಲು ಅರ್ಜುನ್ ದಾಂಪತ್ಯಕ್ಕೆ 10ರ ಸಂಭ್ರಮ; ತಾಜ್ಮಹಲ್ ಎದುರು ಫೋಟೋ ಶೂಟ್ ನಡೆಸಿದ ದಂಪತಿ
ಇನ್ನು ಮೊನ್ನೆಯು ಅನೇಕ ಶಾಸಕರ ವಿಡಿಯೋ ಇದೆ ಅಂತ ಒಬ್ಬ ಹೇಳಿಕೆ ನೀಡಿದ್ದರು. ಆ ಹೇಳಿಕೆ ನೀಡಿದವರನ್ನ ತಕ್ಷಣ ಯಾಕೆ ಬಂಧಿಸಲಿಲ್ಲ. ಅವರ ಬಳಿ ಇರುವ ಸಿಡಿ ಇಟ್ಟುಕೊಂಡು ಅದೇನು ಬ್ಲಾಕ್ ಮೇಲ್ ತಂತ್ರನಾ ಪ್ರಶ್ನಿಸಿದರು. ಈ ಘಟನೆಯಿಂದ ನಮ್ಮ ಕುಟುಂಬದವರೇ ನಮ್ಮನ್ನ ಅನುಮಾನದಿಂದ ನೋಡುತ್ತಿದ್ದಾರೆ. ಮನೇಲಿ ಕುಟುಂಬಸ್ಥರ ಜೊತೆ ಕುಳಿತು ಟಿವಿ ನೋಡಲು ಹಿಂಸೆ ಆಗುತ್ತಿದೆ. ಇದನ್ನ ಮಾತನಾಡಲಿಕ್ಕೆ ಅಸಹ್ಯ, ಸಿಎಂ ಇದನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು
ನಮ್ಮ ಸ್ನೇಹಿತರು ಹಿಂದೆ ಬಾಂಬೆ ಡೇಸ್ ಬಗ್ಗೆ ಹೇಳಿದಾಗ ಸುಳ್ಳು ಅಂದುಕೊಂಡಿದ್ದೆ, ಆದರೆ ಈಗ ಈ ಘಟನಾವಳಿಗಳನ್ನ ನೋಡುತ್ತಿದ್ದರೆ, ಎಲ್ಲವು ಸತ್ಯ ಅಂತ ಅನ್ನಿಸುತ್ತಿದೆ. ಆ ನಮ್ಮ ಸ್ನೇಹಿತರು ಹುಣಸೂರಿನಿಂದ ಬಾಂಬೆವರೆಗೆ ಪುಸ್ತಕ ಬರೆತೀನಿ ಅಂದಿದ್ರು, ಆ ಪುಸ್ತಕ ಇದೇಲ್ಲವು ಉಲ್ಲೇಖ ಆಗಬಹುದು ಎಂದು ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೆಸರೇಳದೆ ಟಾಂಗ್ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ