• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Sa Ra Mahesh: ಮಂತ್ರಿಗಿರಿ ಆಸೆ ಇದ್ದವರು ಸತ್ತು ದೆವ್ವವಾದ್ರು! ಸದನದಲ್ಲಿ ‘ದೆವ್ವ’ಗಳ ಬಗ್ಗೆ ಸ್ವಾರಸ್ಯಕರ ಚರ್ಚೆ

Sa Ra Mahesh: ಮಂತ್ರಿಗಿರಿ ಆಸೆ ಇದ್ದವರು ಸತ್ತು ದೆವ್ವವಾದ್ರು! ಸದನದಲ್ಲಿ ‘ದೆವ್ವ’ಗಳ ಬಗ್ಗೆ ಸ್ವಾರಸ್ಯಕರ ಚರ್ಚೆ

ವಿಧಾನಸಭಾ ಅಧಿವೇಶನ

ವಿಧಾನಸಭಾ ಅಧಿವೇಶನ

ವಿಧಾನಸೌಧದ ಸುತ್ತ ಆತ್ಮಗಳಾಗಿ ತಿರುಗುತ್ತಿದ್ದಾರೆ. ಅದಕ್ಕೆ ಇಲ್ಲಿರೋ ಫೈಲ್ ಕ್ಲಿಯರ್ ಆಗ್ತಿಲ್ಲ. ಒಂದು ಬಾರಿ ಸೋತರೆ ನಮ್ಮ ಕಥೆ ಮುಗಿಯಿತು ಎಂದು ಸಾ.ರಾ ಮಹೇಶ್​​ ಹೇಳಿದ್ದಾರೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಮಂತ್ರಿಗಳಾಗಬೇಕು (Minister) ಅಂತಾ ಆಸೆ ಇಟ್ಟುಕೊಂಡವರು ಸತ್ತು ದೆವ್ವಗಳಾಗಿದ್ದಾರೆ ಎಂದು ಮಾಜಿ ಸಚಿವ ಸಾ.ರಾ ಮಹೇಶ್ (Sa Ra Mahesh) ವ್ಯಂಗ್ಯವಾಡಿದ್ದಾರೆ. ವಿಧಾನಸಭೆಯಲ್ಲಿ (Vidhan Sabha Session) ಮಾತಾಡಿದ ಸಾ.ರಾ ಮಹೇಶ್, ಮೊದಲು ಇಲ್ಲಿಗೆ ಆರಿಸಿ ಬರಬೇಕು ಅಂತಾ ಆಸೆಪಡುತ್ತಾರೆ. ಆಮೇಲೆ ಮಂತ್ರಿ ಆರುವ ಆಸೆ ಹುಟ್ಟುತ್ತೆ. ನಂತರ ಇಂತದ್ದೇ ಖಾತೆ ಬೇಕು ಎನ್ನುವ ಆಸೆ ಬರುತ್ತೆ. ಈ ತರಾ ಆಸೆ ಇಟ್ಟುಕೊಂಡ ಅನೇಕರು ಆಸೆ ತೀರದೆ ಸತ್ತೇ ಹೋಗಿದ್ದಾರೆ. ಅವರೆಲ್ಲಾ ದೆವ್ವಗಳಾಗಿ ವಿಧಾನಸೌಧದ (Vidhana Soudha) ಸುತ್ತ ತಿರುಗಾಡ್ತಾ ಇರ್ತಾರೆ ಎಂದು ತಮಾಷೆ ಮಾಡಿದ್ದಾರೆ.


ರಾಜಕೀಯ ಗುರು ಅಂತ ಹೇಳೋದು ಯಡಿಯೂರಪ್ಪರನ್ನ


ಸದನದ ಕೊನೆ ದಿನವಾದ ಇಂದು ಮಾತನಾಡಿದ ಸಾ.ರಾ ಮಹೇಶ್​ ಅವರು, ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹೇಗೆ ಸಭಾಧ್ಯಕ್ಷ ಸ್ಥಾನ ಹೇಗೆ ನಿರ್ವಹಿಸ್ಥಾರೆ ಅಂದುಕೊಂಡಿದ್ದೆ‌. ಹಿಂದೆಂದೂ ಯಾರೂ ನಿರ್ವಹಿಸದ ರೀತಿ ನಿರ್ವಹಣೆ ಮಾಡಿದ್ದಾರೆ. ನನ್ನದೇ ಸಮಸ್ಯೆ ಬಂದಾಗ ಸಮರ್ಥವಾಗಿ ನಿರ್ವಹಣೆ ಮಾಡಿದ್ದರು. ನನ್ನ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚು ಪೂಜಿಸುವುದು ನಮ್ಮ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರನ್ನು.


ಇದನ್ನೂ ಓದಿ: Savitha Bai Malleshanaik: ಕಾಂಗ್ರೆಸ್​ ಟಿಕೆಟ್​​ ಆಕಾಂಕ್ಷಿಯ ಖಾಸಗಿ ಫೋಟೋ ವೈರಲ್​​; ದ್ವೇಷ ರಾಜಕಾರಣ ಅಂತ ಸವಿತಾ ಬಾಯಿ ತಿರುಗೇಟು


ರಾಜಕೀಯ ಗುರು ಅಂತ ಹೇಳೋದು ಯಡಿಯೂರಪ್ಪ ಅವರನ್ನು. ನಾನು ಕೃಷ್ಣರಾಜಸಾಗರ ಅಭ್ಯರ್ಥಿ ಆಗಬೇಕು ಅಂದಾಗ ನನಗೆ ಬಿ ಫಾರ್ಮ್ ಕೊಟ್ಟಿದ್ದರು. ಎಲ್ಲರೂ ಬಿ ಫಾರ್ಮ್ ಕೊಡಲಿ ಅಂತ ಕಾಯ್ತಾರೆ, ಹೋಗೋ ನಾಮಪತ್ರ ಸಲ್ಲಿಸು ಅಂತ ಬೈದಿದ್ದರು. ಅಂದು ನಾಮಪತ್ರ ಸಲ್ಲಿಸದಿದ್ದರೆ ನಾನು ಇಲ್ಲಿಗೆ ಬರಲು ಆಗುತ್ತಿರಲಿಲ್ಲ.




ಅಧಿಕಾರಿಗಳು ಕಾನೂನು ಪಾಲನೆ ಮಾಡ್ತಾರಾ?


ನನ್ನ ಬೆಳೆಸಿದ್ದು ನಮ್ಮ ನಾಯಕ ಕುಮಾರಸ್ವಾಮಿ ಅವರು. ಸಮ್ಮಿಶ್ರ ಸರ್ಕಾರದಲ್ಲಿ ನಾಯಕನಾಗಿ ಮಾಡಿದ್ದು ಕುಮಾರಣ್ಣ ಅವರು. ನಾವು ಶಾಸಕರಾಗಿ ಆಯ್ಕೆ ಬರಲು ಬಹಳ ಕಷ್ಟ ಪಡಬೇಕಿದೆ. ನಿಮ್ಮ ಕಾಲದ ರೀತಿ ಆಗಿಲ್ಲ. ಅನೇಕರು ವೈಯುಕ್ತಿಕವಾಗಿ ಆಮಿಷಕ್ಕೆ ಒಳಗಾಗ್ತಿದ್ದಾರೆ.


ನಮ್ಮ ಬದುಕನ್ನು ಕಟ್ಟಿಕೊಳ್ಳಲು ರಾಜಕಾರಣಕ್ಕೆ ಬಂದಿಲ್ಲ, ಜನರ ಬದುಕು ಕಟ್ಟಿಕೊಡಲು ಬಂದಿದ್ದೇವೆ. ನಾವು ಕಾನೂನು ಪಾಲನೆ ಮಾಡ್ತೀವಿ, ಅಲ್ಲಿರೋ ಅಧಿಕಾರಿಗಳು ಮಾಡ್ತಾರಾ? ಯಡಿಯೂರಪ್ಪ ಅವರು ಇದ್ದಾಗ ಗದರಿಸಿ ಮಾತನಾಡುತ್ತಿದ್ದರು.  ಅವರ ಗರಡಿಯಲ್ಲೇ ನಾವು ಬೆಳೆದಿದ್ದೇವೆ ಎಂದು ಹೇಳಿದರು.


ನಮ್ಮ ಪರಿಸ್ಥಿತಿ ಏನು ಅಂತ ಜನರಿಗೆ ತಿಳಿಸಿ


ನಮಗೂ ಗೌರವ ಧನ ಅಂತ ಕೊಡ್ತಿಲ್ಲ, ಸಂಬಳ ಅಂತ ಕೊಡುತ್ತಿದ್ದಾರೆ. 50 ಸಾವಿರ ಸಂಬಳ ಕೊಡುತ್ತಾರೆ, ಬೆಳಗ್ಗೆ ಹೋಗಿ ಸಂಜೆ ಬರುವಾಗ ಇನ್ನೊಂದು ಸೊನ್ನೆ ಸೇರಿಸಿ ಖರ್ಚು ಮಾಡಬೇಕಿದೆ. ನಮಗೆ ಐದು ವರ್ಷಕ್ಕೊಮ್ಮೆ ರೀನಿವಲ್, ಅವರಿಗೆ 30 ವರ್ಷ ವರೆಗೂ ಇರ್ತಾರೆ. ನಾರಾಯಣಗೌಡರನ್ನು ನಾನು ರೇಗಿಸಿದೆ. ಅಲ್ಲಯ್ಯ ನಿನ್ನ ಪೈಲ್ವಾನ್ ಮಂತ್ರಿ ಮಾಡಿದ್ದಾರೆ, ಲಂಗೋಟಿ ಮಂತ್ರಿ ಮಾಡಿದ್ದಾರೆ ಅಂತ ರೇಗಿಸಿದೆ. ಎಇಇ ಆದರೆ ಪೊಲೀಸ್ ಆದರೆ ಅವನಿಗೆ ಜೀಪ್ ಕೊಡುತ್ತೇವೆ. ಜಿಲ್ಲಾ ಮಂತ್ರಿಗಳಾದರೂ ಹೋಗ್ತಾ ಇರ್ತಾರೆ. ನಮ್ಮ ಪರಿಸ್ಥಿತಿ ಏನು ಅಂತ ಜನರಿಗೆ ತಿಳಿಸಿ ಹೇಳಬೇಕಿದೆ.


ಇದನ್ನೂ ಓದಿ: BS Yediyurappa: ಇದು ನನ್ನ ಕೊನೆ ಅಧಿವೇಶನ ಮತ್ತೆ ಚುನಾವಣೆಗೆ ನಿಲ್ಲಲ್ಲ, ಆದ್ರೆ ರಾಜಕೀಯ ನಿವೃತ್ತಿ ಇಲ್ಲ; ಬಿಎಸ್​ವೈ ವಿದಾಯ ಭಾಷಣ




ಅನೇಕರಿಗೆ ಸಚಿವರಾಗಬೇಕು ಅಂತ ಆಸೆ ಇದೆ


ಇಲ್ಲಿ ಮೂರು ರೀತಿಯ ಪಕ್ಷದ ಶಾಸಕರಿದ್ದೇವೆ. ಯಾರಿಂದಲೂ ಅಪೇಕ್ಷೆ ಪಡೆಯದೆ ಸೇವೆ ಮಾಡುವವರು ಇದ್ದೇವೆ. ಜನರಿಗೆ ಬೇರೆ ರೀತಿಯ ಸೇವೆ ಮಾಡುವವರೂ ಇದ್ದಾರೆ. ಜನರಿಗೆ ರಾಜಕಾರಣಿಗಳ ಕಷ್ಟ ಹೇಳಬೇಕಿದೆ. ಕಳೆದ ಬಾರಿ ಗೆಲ್ಲಲೇ ಬೇಕು ಅನ್ನೋ ಆಸೆ ಇತ್ತು. ಒಂದು ಬಾರಿ ಮಂತ್ರಿ ಆಗಬೇಕು ಅನ್ನೋ ಆಸೆ ಇತ್ತು.


ನಮ್ಮ ಸಾಹೇಬರು (ಯಡಿಯೂರಪ್ಪ) ಎಂಟು ಬಾರಿ ಆಯ್ಕೆಯಾಗಿದ್ದಾರೆ. ನಮಗೆ ಆ ರೀತಿ ಆಯ್ಕೆಯಾಗೋದು ಕಷ್ಟ ಇದೆ. ಅನೇಕರಿಗೆ ಸಚಿವರಾಗಬೇಕು ಅಂತ ಆಸೆ ಇದೆ. ಆಸೆ ಇಟ್ಟುಕೊಂಡೆ ಸತ್ತೋಗಿದ್ದಾರೆ. ವಿಧಾನಸೌಧದ ಸುತ್ತ ಆತ್ಮಗಳಾಗಿ ತಿರುಗುತ್ತಿದ್ದಾರೆ. ಅದಕ್ಕೆ ಇಲ್ಲಿರೋ ಫೈಲ್ ಕ್ಲಿಯರ್ ಆಗ್ತಿಲ್ಲ. ಒಂದು ಬಾರಿ ಸೋತರೆ ನಮ್ಮ ಕಥೆ ಮುಗಿಯಿತು. ಆದರೆ ಅಧಿಕಾರಿಗಳು ಇರ್ತಾರೆ, ಪ್ರಮೋಷನ್ ಪಡೆದುಕೊಳ್ಳುತ್ತಾರೆ. ಒಳ್ಳೆಯ ಕಾರಲ್ಲಿ ಓಡಾಡುತ್ತಾರೆ. ಆದರೆ ನಮಗೆ ನಾವು ಒಮ್ಮೆ ಸೋತರೆ ಮುಗಿತು, ಆದ್ದರಿಂದ ನಮಲ್ಲಿ ಇನ್ನೂ ಕೆಲವು ಸುಧಾರಣೆಗಳು ಬರಬೇಕಿದೆ ಎಂದು ಸ್ಪೀಕರ್ ಅವರಿಗೆ ಮನವಿ ಮಾಡಿದರು.




ಮಾಧುಸ್ವಾಮಿ ಅವರಿಗೆ ಸಾ.ರಾ ಮಹೇಶ್ ಸಲಹೆ


ಸಚಿವರಾದ ಮಾಧುಸ್ವಾಮಿ ಅವರನ್ನ ನೋಡಿ ಬಹಳ ದುರಹಂಕಾರ ಅಂತ ತಿಳಿದಿದ್ದೆ. ಸರ್​ ನಿಮ್ಮನ್ನ ಹತ್ತಿರದಿಂದ ನೋಡಿದ ಮೇಲೆ ನಿಮ್ಮ ಬಗ್ಗೆ ಗೊತ್ತಾಯಿತು. ನಾವು ಅಂದುಕೊಂಡಂತೆ ನೀವಿಲ್ಲ. ಹೊರಗೆ ಹೋಗುವಾಗ ಜನ ಬೈಕೋತಾರೆ. ನೋಡೋ ಅವನು ಮೂರು ಬಾರಿ ಶಾಸಕ ಆಗಿ ದುರಹಂಕಾರ ಬಂದಿದೆ ಅಂತಾರೆ. ಸಾರ್ವಜನಿಕ ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ಸಲಹೆ ನೀಡಿದರು.

Published by:Sumanth SN
First published: