ಸಾ.ರಾ. ಮಹೇಶ್​ ಕೇಂದ್ರ ಸಚಿವರ ಕ್ಷಮೆ ಕೇಳಬೇಕು; ಯಡಿಯೂರಪ್ಪ ಆಗ್ರಹ

news18
Updated:August 25, 2018, 4:24 PM IST
ಸಾ.ರಾ. ಮಹೇಶ್​ ಕೇಂದ್ರ ಸಚಿವರ ಕ್ಷಮೆ ಕೇಳಬೇಕು; ಯಡಿಯೂರಪ್ಪ ಆಗ್ರಹ
news18
Updated: August 25, 2018, 4:24 PM IST
ನ್ಯೂಸ್​18 ಕನ್ನಡ

ಬೆಂಗಳೂರು (ಆ. 25): ನಿನ್ನೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಕೊಡಗಿಗೆ ಭೇಟಿ ನೀಡಿದಾಗ ಅವರೊಂದಿಗೆ ಸಚಿವ ಸಾ.ರಾ. ಮಹೇಶ್​ ನಡೆದುಕೊಂಡ ರೀತಿ ಸರಿಯಿಲ್ಲ. ಈ ಬಗ್ಗೆ ಸಾ.ರಾ. ಮಹೇಶ್​ ಅವರು ಕೇಂದ್ರ ಸಚಿವರ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಆಗ್ರಹಿಸಿದ್ದಾರೆ.

ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಅವರ ವಿರುದ್ಧ ಮಾತನಾಡುವ ಮೂಲಕ ಸಾ.ರಾ. ಮಹೇಶ್​ ರಾಜ್ಯದ ಎಲ್ಲ ರಾಜ್ಯಸಭಾ ಸದಸ್ಯರಿಗೂ ಅವಮಾನ ಮಾಡಿದ್ದಾರೆ. ಸಾ.ರಾ. ಮಹೇಶ್​ ಹೇಗೆ ಸಚಿವರಾಗಿದ್ದಾರೆಂದು ಮೊದಲು ತಿಳಿದುಕೊಳ್ಳಲಿ.  ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕೊಡಗಿಗೆ ಬಂದು ಪೂರ್ವ ನಿಗದಿ ಸಭೆಯಲ್ಲಿ ಭಾಗಿಯಾಗಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಅನುದಾನಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿ ಹೇಳಿದ್ದಾರೆ. ಇಷ್ಟಾದರೂ ಕೊಡಗು ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರು ನಿರ್ಮಲಾ ಸೀತಾರಾಮನ್ ವಿರುದ್ಧ ಮಾತನಾಡಿರುವ ಮೂಲಕ ದೇಶದ ಎಲ್ಲ ರಾಜ್ಯಸಭಾ ಸದಸ್ಯರಿಗೂ ಅವಮಾನ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ಸಾ.ರಾ. ಮಹೇಶ್ ಹೇಗೆ ಸಚಿವರಾಗಿದ್ದಾರೆ ಎಂಬುದನ್ನು ಮೊದಲು ಮನವರಿಕೆ ಮಾಡಿಕೊಳ್ಳಬೇಕು. ಅದೃಷ್ಟವಶಾತ್ ಸಚಿವರಾಗಿರುವ ಅವರು ಯಾರ ಜೊತೆ ಮಾತನಾಡುತ್ತಿದ್ದೇನೆ ಎಂಬುದನ್ನು ತಿಳಿದು ಮಾತನಾಡಬೇಕು. ಅದನ್ನು ಬಿಟ್ಟು ಬಾಲಿಶವಾದ ಹೇಳಿಕೆಗಳನ್ನು ನೀಡಬಾರದು ಎಂದು ಸಚಿವ ಸಾ.ರಾ. ಮಹೇಶ್ ವಿರುದ್ಧ ಬಿಎಸ್ ವೈ ಗರಂ ಆಗಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲಮನ್ನಾ ವಿಚಾರ ಪ್ರಸ್ತಾಪಿಸಿದ ಯಡಿಯೂರಪ್ಪ, ಋಣಮುಕ್ತ ಪ್ರಮಾಣಪತ್ರವನ್ನು ಬ್ಯಾಂಕ್​ಗಳು ನೀಡಬೇಕೇ ಹೊರತು ಸರ್ಕಾರವಲ್ಲ. ನನ್ನ ಅನುಭವದಲ್ಲಿ ಸರ್ಕಾರ ಋಣಮುಕ್ತ ಪತ್ರ ನೀಡಿದ ಉದಾಹರಣೆಯಿಲ್ಲ. ಸಾಲಮನ್ನಾ ಹೇಗೆ ಕಾರ್ಯರೂಪಕ್ಕೆ ಬರುತ್ತದೆ ಅಂತ ಕಾದು ನೋಡುತ್ತೇವೆ. ರೈತರ ಸಾಲಮನ್ನಾ ಹೇಗೆ ರೈತರಿಗೆ ತಲುಪುತ್ತದೆ ಎಂಬುದನ್ನು ತಿಳಿಯಬೇಕಾಗಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲಮನ್ನಾ ಬಗ್ಗೆ ಬ್ಯಾಂಕ್ ಗಳು ಈವರೆಗೂ ಸ್ಪಷ್ಟಪಡಿಸಿಲ್ಲ. ಸರ್ಕಾರದ ನಾಲ್ಕು ಕಂತುಗಳಲ್ಲಿ ಹಣ ಜಮಾ ಮಾಡುವ ಬಗ್ಗೆಯೂ ಸ್ಪಷ್ಟನೆ ಇಲ್ಲ ಎಂದು ಬಿಎಸ್​ವೈ ಹೇಳಿದ್ದಾರೆ.

 
First published:August 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...