BJP ಪಕ್ಷಕ್ಕೆ ದೇಣಿಗೆ ಕೊಡುವರಿಗೆ ಶಕ್ತಿ ತುಂಬಿದೆ, ಇಬ್ಬರ ಭೇಟಿ ಒಳ್ಳೆಯದು ಅಲ್ಲವೇ? HD Kumaraswamy

ಕಾರವಾರದಲ್ಲಿ ಹೋರಾಟ ನಡೆಯುತ್ತಿದೆ. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಜಿಲ್ಲಾ ಆಸ್ಪತ್ರೆಗಳನ್ನು ಇನ್ನಾದರೂ ಮೇಲ್ದರ್ಜೆಗೆ ಏರಿಸಲಿ, ಈಗಿನ ಬಿಜೆಪಿ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದರು.

ಹೆಚ್ ಡಿ ಕುಮಾರಸ್ವಾಮಿ

ಹೆಚ್ ಡಿ ಕುಮಾರಸ್ವಾಮಿ

  • Share this:
ಒಕ್ಕಲಿಗ (Vokkaliga) ವಿಚಾರವಾಗಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ (Congress MLA Zameer Ahmed Khan) ಹೇಳಿಕೆ ವಿಚಾರವಾಗಿ ರಾಮನಗರದಲ್ಲಿ (Ramanagar) ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಪ್ರತಿಕ್ರಿಯೆ ನೀಡಿದ್ದಾರೆ.‌ ಖಾಸಗಿ ಕಾರ್ಯಕ್ರಮ ಹಿನ್ನೆಲೆ ರಾಮನಗರಕ್ಕೆ ಬಂದಿದ್ದ ಕುಮಾರಸ್ವಾಮಿ ಅದು ಬಿಟ್ಟಾಕಿ ಅವರ ಬಗ್ಗೆ ಚರ್ಚೆ ಬೇಡ, ತಲೆಕೆಡಿಸಿಕೊಳ್ಳಬೇಡಿ ಜನ ತೀರ್ಮಾನ ಮಾಡುತ್ತಾರೆ.‌ ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ ಎಂದರು. ಇನ್ನು ಸೋನಿಯಾ ಗಾಂಧಿ (Sonia Gandhi) ಇಡಿ ತನಿಖೆ ವಿಚಾರವಾಗಿ ಮಾತನಾಡಿ ಈಗಾಗಲೇ ತನಿಖೆ ಸಂಬಂಧ ಪ್ರತಿಭಟನೆ ಮಾಡುತ್ತಿದ್ದಾರೆ. ದೇಶದಾದ್ಯಂತ ಇಡಿ ವಿಚಾರವಾಗಿ ಪ್ರತಿಭಟನೆ ನಡೆಯುತ್ತಿದೆ. ಕಾಂಗ್ರೆಸ್ ನವರು ಪ್ರತಿಭಟನೆ (Congress Protest) ನಡೆಸುತ್ತಿದ್ದಾರೆ.‌ ಬಿಜೆಪಿ ಅವರು ವಿರೋಧಿಗಳನ್ನ ಸಂಸ್ಥೆ ಮೂಲಕ ಹಣಿಯುತ್ತಿದೆ ಎಂದು ಆರೋಪಿಸಿದರು.

ಕೆಲವು ತನಿಖಾ ಸಂಸ್ಥೆಗಳ ಮೂಲಕ ಮಟ್ಟ ಹಾಕುತ್ತಿದೆ.‌ ವಿರೋಧಿಗಳನ್ನು ಸ್ತಬ್ಧ ಮಾಡುವ ವಾತಾವರಣ ಕಾಣುತ್ತಿದ್ದೇವೆ. ಇಂತಹ ವಿಷಯದಲ್ಲಿ ರಸ್ತೆಗಿಳಿದು ಜನಕ್ಕೆ ತೊಂದರೆ ಕೊಡುವುದು ಅನವಶ್ಯಕ. ಬಿಜೆಪಿ ಸರ್ಕಾರದಲ್ಲಿ ನಡೆದ ಜನವಿರೋಧಿ ಚಟುವಟಿಕೆಗಳು, ಕೆಲವು ವ್ಯಕ್ತಿಗಳನ್ನು ಅರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಿರೋದನ್ನ ಜನರ ಮುಂದೆ ಇಡಬೇಕು ಎಂದರು.

ಜನಸಾಮಾನ್ಯರ ಆರ್ಥಿಕ ಸ್ಥಿತಿ ಕುಸಿತ

ಯಾರೋ ಒಬ್ಬ ವ್ಯಕ್ತಿಯ ದಿನದ ಸಂಪಾದನೆ ಸಾವಿರಾರು ಕೋಟಿ, ಬಿಜೆಪಿಯ ಆತ್ಮೀಯ ವ್ಯಕ್ತಿಯ ಒಂದು ದಿನದ ವರಮಾನವಿದು. ಜನ ಸಾಮಾನ್ಯರ ಆರ್ಥಿಕ ಸ್ಥಿತಿ ಕುಸಿತವಾಗಿದೆ. ಬಿಜೆಪಿ ಸರ್ಕಾರದಲ್ಲಿ ಜನರ ಆರ್ಥಿಕ ಸ್ಥಿತಿ ದುಸ್ಥಿತಿಯಲ್ಲಿದೆ.‌ಎರಡು ಹೊತ್ತಿನ ಊಟ ಮಾಡಲು ಶಕ್ತಿ ತುಂಬಿಲ್ಲ.‌ ಯಾವುದೇ ಕುಟುಂಬಗಳಿಗೆ ಬಿಜೆಪಿಯವರು ಶಕ್ತಿ ನೀಡಿಲ್ಲ. ಬಡವರು ದೀನದಲಿತರ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:  BBMP: ಯಲಹಂಕ ವಲಯದಲ್ಲಿ ಜನರ ಪ್ರಮುಖ ಸಮಸ್ಯೆ; ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಉತ್ತರ

ಬಿಜೆಪಿ ಪಕ್ಷಕ್ಕೆ ದೇಣಿಗೆ ಕೊಡುವರಿಗೆ ಶಕ್ತಿ ತುಂಬಿದೆ.‌ ತಮ್ಮ ಪರವಿರುವ ವ್ಯಕ್ತಿಗಳಿಗೆ ಆರ್ಥಿಕ ಶಕ್ತಿ ಬಿಜೆಪಿ ನೀಡಿದೆ. ಇದಕ್ಕೆ ಸಂಬಂಧಿಸಿದ ದಾಖಲೆ ಇಟ್ಟುಕೊಂಡು ಹೋರಾಟ ಮಾಡಲಿ.  ಅದು ಬಿಟ್ಟು ದಿನ ಇಡಿ ವಿರುದ್ಧ ಪ್ರತಿಭಟನೆ ನಡೆಸಿದರೆ ಅದು ಜನಸಾಮಾನ್ಯರ ಮೇಲೆ ಹೊಡೆತ ಬೀಳುತ್ತದೆ. ಜನಸಾಮಾನ್ಯರಿಗೆ ತೊಂದರೆಯಾಗುವುದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಿ

ಇನ್ನು ಬಹುತೇಕ ಜಿಲ್ಲೆಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳೇ ಇಲ್ಲ, ಪ್ರತಿ ಜಿಲ್ಲೆಯಲ್ಲೂ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಬೇಕಿದೆ. ಕಾರವಾರದಲ್ಲಿ ಜಿಲ್ಲಾ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಿದ್ದೆ. ಇದಕ್ಕಾಗಿ  250 ಕೋಟಿ ಹಣವನ್ನು ಬಜೆಟ್ ನಲ್ಲಿ ಘೋಷಿಸಿದ್ದೇ, ಎರಡನೇ ಬಾರಿ ಸಿಎಂ ಆಗಿದ್ದ ವೇಳೆ ಘೋಷಣೆ ಮಾಡಿದ್ದೆ. ಜನರಿಗೆ ಆರೋಗ್ಯ ತೊಂದರೆಯಾದರೆ ಚಿಕಿತ್ಸೆ ಸಿಗುತ್ತಿಲ್ಲ. ಸರಿಯಾದ ವೈದ್ಯಕೀಯ ಚಿಕಿತ್ಸೆ ದೊರೆಯುತ್ತಿಲ್ಲ.

ಹೀಗಾಗಿ ಹಲವು ಸಾವು ನೋವುಗಳಾಗುವ ಘಟನೆ ಏನಿದೆ. ಅದರ ವಿರುದ್ಧ ಕಾರವಾರದಲ್ಲಿ ಹೋರಾಟ ನಡೆಯುತ್ತಿದೆ. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಜಿಲ್ಲಾ ಆಸ್ಪತ್ರೆಗಳನ್ನು ಇನ್ನಾದರೂ ಮೇಲ್ದರ್ಜೆಗೆ ಏರಿಸಲಿ, ಈಗಿನ ಬಿಜೆಪಿ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದರು.

ಇದನ್ನೂ ಓದಿ:  Chikkamagaluru: ನೀರಿನಲ್ಲಿ ಕೊಚ್ಚಿ ಹೋಗಿದ್ದವ ದಿಢೀರ್ ಪ್ರತ್ಯಕ್ಷ, ರಸ್ತೆಯಲ್ಲಿ ಹೆಂಡತಿ ಜೊತೆ ಬಿಂದಾಸ್​ ಓಡಾಟ

ಇಬ್ಬರು ನಾಯಕರ ಭೇಟಿ ಒಳ್ಳೆಯ ಬೆಳವಣಿಗೆ ಅಲ್ಲವೇ?

ಜಿಟಿಡಿ ಸಾ.ರಾ.ಮಹೇಶ್ ಭೇಟಿ ವಿಚಾರವಾಗಿ ಮಾತನಾಡಿ ಅವರು ಏನು ಶತ್ರುಗಳೇ, ಒಂದೇ ಕುಟುಂಬದವರು ಭೇಟಿ ಮಾಡಿರೋದು ಒಳ್ಳೆಯ ಬೆಳವಣಿಗೆಯ ಅಲ್ಲವೇ? ನಿನ್ನೆಯ ದಿನ ಭೇಟಿ ಮಾಡಿರೋದು ಒಳ್ಳೆಯ ಬೆಳವಣಿಗೆ, ಜೆಡಿಎಸ್​ ಮುಗಿದೇ ಹೋಯ್ತು, ಮುಗಿಸಿಬಿಡ್ತೀವಿ ಹೀಗೆಂದು ಹೇಳುವವರಿಗೆ ಈ ಭೇಟಿ ಉತ್ತರ ನೀಡಿದೆ ಎಂದರು.
Published by:Mahmadrafik K
First published: