ಬಿಜೆಪಿ ಮುಖಂಡರೊಂದಿಗೆ ಸಾರಾ ಮಹೇಶ್ ಭೇಟಿ; ಬಿಜೆಪಿ ಜೊತೆ ಡೀಲ್​ಗೆ ಜೆಡಿಎಸ್ ಪ್ರಯತ್ನ? ಆಟ ಶುರುವಾಗಿದೆ ಕಾದು ನೋಡಿ ಎಂದ ಜೆಡಿಎಸ್ ಮುಖಂಡ

ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಮತ್ತು ಜಿ. ಪರಮೇಶ್ವರ್ ಅವರು ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸಾರಾ ಮಹೇಶ್ ಭೇಟಿಯ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

news18
Updated:July 11, 2019, 11:09 PM IST
ಬಿಜೆಪಿ ಮುಖಂಡರೊಂದಿಗೆ ಸಾರಾ ಮಹೇಶ್ ಭೇಟಿ; ಬಿಜೆಪಿ ಜೊತೆ ಡೀಲ್​ಗೆ ಜೆಡಿಎಸ್ ಪ್ರಯತ್ನ? ಆಟ ಶುರುವಾಗಿದೆ ಕಾದು ನೋಡಿ ಎಂದ ಜೆಡಿಎಸ್ ಮುಖಂಡ
ಸಚಿವ ಸಾ.ರಾ. ಮಹೇಶ್​
  • News18
  • Last Updated: July 11, 2019, 11:09 PM IST
  • Share this:
ಬೆಂಗಳೂರು(ಜುಲೈ 11): ಮೈತ್ರಿಸರ್ಕಾರ ತೂಗುಯ್ಯಾಲೆಯಲ್ಲಿರುವಂತೆಯೇ ಇವತ್ತು ಕುಮಾರಕೃಪ ಅತಿಥಿ ಗೃಹದಲ್ಲಿ ಜೆಡಿಎಸ್ ಮುಖಂಡ ಸಾ.ರಾ. ಮಹೇಶ್ ಅವರು ಬಿಜೆಪಿ ಮುಖಂಡರನ್ನು ಭೇಟಿಯಾಗಿದ್ದಾರೆ. ಕೆಕೆ ಗೆಸ್ಟ್ ಹೌಸ್​ನಲ್ಲಿ ಬಿಜೆಪಿ ವರಿಷ್ಠ ಮುರಳೀಧರ್ ರಾವ್ ಮತ್ತು ಕೆ.ಎಸ್. ಈಶ್ವರಪ್ಪ ಅವರ ಜೊತೆ ಸಾ.ರಾ. ಮಹೇಶ್ ಅವರು ರಾತ್ರಿ 9ರ ನಂತರ ಅರ್ಧಗಂಟೆ ರಹಸ್ಯವಾಗಿ ಮಾತನಾಡಿದ ಘಟನೆ ನಡೆಯಿತು. ಈ ಘಟನೆ ಜೆಡಿಎಸ್​ನ ಮಿತ್ರ ಪಕ್ಷ ಕಾಂಗ್ರೆಸ್ಸನ್ನು ತಲ್ಲಣಗೊಳಿಸುವಂತಿದೆ. ಕೆಲ ಮೂಲಗಳ ಪ್ರಕಾರ, ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸುವ ಸಾಧ್ಯತೆ ಇದೆ. ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಜೆಡಿಎಸ್ ಬೇಷರತ್ ಬೆಂಬಲ ನೀಡಲಿದೆ. ಯಡಿಯೂರಪ್ಪ ಸಿಎಂ ಆಗಲಿದ್ದಾರೆ, ರೇವಣ್ಣ ಡಿಸಿಎಂ ಆಗಲಿದ್ದಾರೆ. ಈ ಸಂಬಂಧ ಸಾರಾ ಮಹೇಶ್ ಅವರು ಬಿಜೆಪಿ ನಾಯಕರೊಂದಿಗೆ ಮಾತನಾಡಿದರೆನ್ನಲಾಗುತ್ತಿದೆ.

ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಮತ್ತು ಜಿ. ಪರಮೇಶ್ವರ್ ಅವರು ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸಾರಾ ಮಹೇಶ್ ಭೇಟಿಯ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಇದನ್ನೂ ಓದಿ: ಅವಿಶ್ವಾಸ ನಿರ್ಣಯ, ವಿಪ್ ಎಂದರೇನು? ನೀವು ತಿಳಿದುಕೊಳ್ಳಬೇಕಾದ ವಿಚಾರಗಳಿವು

ಇದೇ ವೇಳೆ, ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ಸಾ.ರಾ. ಮಹೇಶ್ ಅವರು ಬಿಜೆಪಿ ಜೊತೆ ಯಾವ ರಹಸ್ಯ ಮಾತುಕತೆಯೂ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಕೆಕೆ ಗೆಸ್ಟ್ ಹೌಸ್​ಗೆ ಹೋಗಿ ಬರುವಾಗ ಈಶ್ವರಪ್ಪ ಮತ್ತು ಮುರಳೀಧರ್ ರಾವ್ ಸಿಕ್ಕಿದ್ದರ. ಅವರ ಕ್ಷೇತ್ರದ ಕೆಲಸದ ಬಗ್ಗೆ ನನ್ನೊಂದಿಗೆ ಮಾತನಾಡಿದರು. ಅದು ಬಿಟ್ಟರೆ ರಾಜಕೀಯದ ಬಗ್ಗೆ ಮಾತನಾಡಲಿಲ್ಲ ಎಂದು ಸಾ.ರಾ. ಮಹೇಶ್ ತಿಳಿಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಸರ್ಕಾರವೇ ಮುಂದುವರಿಯುತ್ತದೆ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಈಗ ಆಟ ಶುರುವಾಗಿದೆ. ಕ್ಲೈಮ್ಯಾಕ್ಸ್ ಬರುತ್ತೆ ಕಾದು ನೋಡಿ ಎಂದು ಹೇಳಿದ ಸಾ.ರಾ. ಮಹೇಶ್ ಕುತೂಹಲ ಹುಟ್ಟಿಸುವ ಮಾತುಗಳನ್ನಾಡಿದ್ಧಾರೆ.

ಇದನ್ನೂ ಓದಿ: ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ಸ್ಪೀಕರ್​ಗೆ ಕೊಟ್ಟಿದ್ದೇ ತಪ್ಪು: ಬಿ.ವಿ. ಆಚಾರ್ಯ

ಇನ್ನು, ಬಿಜೆಪಿ ನಾಯಕ ಎಂ.ಪಿ. ರೇಣುಕಾಚಾರ್ಯ ಅವರೂ ಕೂಡ ಬಿಜೆಪಿ-ಜೆಡಿಎಸ್ ಮೈತ್ರಿ ಸಾಧ್ಯತೆಯನ್ನು ತಳ್ಳಿಹಾಕಿದರು. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಅಗತ್ಯವಿಲ್ಲ. ಬಿಜೆಪಿ ಸ್ವತಂತ್ರವಾಗಿಯೇ ಅಧಿಕಾರ ಹಿಡಿಯುತ್ತದೆ ಎಂದು ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದರು.ನ್ಯೂಸ್18 ಕನ್ನಡಕ್ಕೆ ಗುಪ್ತಚರ ಮೂಲಗಳಿಂದ ಸಿಕ್ಕ ಮಾಹಿತಿ ಪ್ರಕಾರ, ಮುಖ್ಯಮಂತ್ರಿಗಳ ಸೂಚನೆ ಮೇರೆಗೆಯೇ ಸಾ.ರಾ. ಮಹೇಶ್ ಅವರು ಬಿಜೆಪಿ ಮುಖಂಡರನ್ನು ಭೇಟಿಯಾಗಿದ್ದಾರೆ. ಬಿಜೆಪಿಗೆ ಬೆಂಬಲ ನೀಡುವ ಆಫರ್ ಕೊಟ್ಟು ಕಳುಹಿಸಿದ್ದರು. ಆದರೆ, ಮುರಳೀಧರ್ ರಾವ್ ಅವರು ಈ ಆಫರ್ ತಿರಸ್ಕರಿಸಿದರೆನ್ನಲಾಗಿದೆ.

ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್​​ನಲ್ಲೂ ಹಿಂಬಾಲಿಸಿ
First published: July 11, 2019, 10:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading