ಬೆಳಗ್ಗೆ ಆಣೆ ಮಾಡಿ ಸಂಜೆ ತಾಯಿ ಚಾಮುಂಡೇಶ್ವರಿಯ ಕ್ಷಮೆಯಾಚಿಸಿದ ಸಾರಾ ಮಹೇಶ್​​​​

ಯಾರು ಅಧಿಕಾರದಲ್ಲಿದ್ದರೂ ಆತ್ಮಸಾಕ್ಷಿಯೇ ಮುಖ್ಯ. ಆ ಆತ್ಮಸಾಕ್ಷಿಗೆ ಅನುಗುಣವಾಗಿ ನಾನು ನಡೆದುಕೊಂಡಿದ್ದೇನೆ. ನಮ್ಮ ವೈಯಕ್ತಿಕ ವಿಷಯದಲ್ಲಿ ತಾಯಿಯನ್ನು ಕರೆತಂದೆವು. ನನ್ನ ಆತ್ಮಸಾಕ್ಷಿಗೆ ನೋವಾಗಿದೆ. ಇದಕ್ಕಾಗಿ ರಾಜ್ಯದ ಜನರ ಕ್ಷಮೆಯಾಚಿಸುತ್ತೇನೆ. ನಿನ್ನೆ ನಡೆದ ಸತ್ಯಾಸತ್ಯತೆಯನ್ನ ಅಮ್ಮನೇ ತೀರ್ಮಾನಿಸುತ್ತಾಳೆ

Seema.R | news18-kannada
Updated:October 18, 2019, 10:54 AM IST
  • Share this:
ಮೈಸೂರು (ಅ.18): ಅನರ್ಹ ಶಾಸಕ ವಿಶ್ವನಾಥ್​ಗೆ ಸಾವಾಲೆಸೆದಂತೆ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ನಿನ್ನೆ ಬೆಳಗ್ಗೆ ಆಣೆ ಮಾಡಿದ್ದ ಸಾರಾ ಮಹೇಶ್​​, ಸಂಜೆಯೊಷ್ಟೊತ್ತಿಗೆ ತಾಯಿಯ ಕ್ಷಮಾಪಣೆ ಕೇಳಿದ್ದಾರೆ. 

ಬೆಳಗ್ಗಿನ ಹೈ ಡ್ರಾಮದ ಬಳಿಕ ಸಂಜೆ ಮತ್ತೆ ಚಾಮುಂಡಿ ಬೆಟ್ಟಕ್ಕೆ ಏಕಾಂಗಿಯಾಗಿ ಬಂದಿದ್ದ ಸಾರಾ ಮಹೇಶ್​​, ಕೆಲ ಹೊತ್ತು ಧ್ಯಾನಗ್ರಸ್ತರಾಗಿದ್ದರು.

ದೇವರ ದರ್ಶನದ ಬಳಿಕ ಮಾತನಾಡಿದ ಅವರು,  ಚಾಮುಂಡಿ ತಾಯಿಯ ಬಳಿ ಕ್ಷಮೆ ಕೇಳಲು ಬಂದಿದ್ದೇನೆ. ವೈಯಕ್ತಿಕ ವಿಚಾರಕ್ಕೆ ತಾಯಿಯನ್ನ ಸಾಕ್ಷಿ ಮಾಡಿದೆವು. ಇದರಿಂದ ನೋವಾಗಿ ಅಮ್ಮನ ಕ್ಷಮೆ ಕೇಳಲು ಬಂದಿದ್ದೇನೆ. ಆತ್ಮಸಾಕ್ಷಿಗಿಂತ ದೊಡ್ಡದು ಯಾವುದು ಇಲ್ಲ  ಎಂದರು.

ಯಾರು ಅಧಿಕಾರದಲ್ಲಿದ್ದರೂ ಆತ್ಮಸಾಕ್ಷಿಯೇ ಮುಖ್ಯ. ಆ ಆತ್ಮಸಾಕ್ಷಿಗೆ ಅನುಗುಣವಾಗಿ ನಾನು ನಡೆದುಕೊಂಡಿದ್ದೇನೆ. ನಮ್ಮ ವೈಯಕ್ತಿಕ ವಿಷಯದಲ್ಲಿ ತಾಯಿಯನ್ನು ಕರೆತಂದೆವು. ನನ್ನ ಆತ್ಮಸಾಕ್ಷಿಗೆ ನೋವಾಗಿದೆ. ಇದಕ್ಕಾಗಿ ರಾಜ್ಯದ ಜನರ ಕ್ಷಮೆಯಾಚಿಸುತ್ತೇನೆ. ನಿನ್ನೆ ನಡೆದ ಸತ್ಯಾಸತ್ಯತೆಯನ್ನ ಅಮ್ಮನೇ ತೀರ್ಮಾನಿಸುತ್ತಾಳೆ ಎಂದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ವಿಶ್ವನಾಥ್​ 25 ಕೋಟಿಗೆ ಮಾರಿಕೊಂಡಿದ್ದಾರೆ ಎಂಬ ಸಾರಾ ಮಹೇಶ್​ ಆಪಾದನೆ ಮಾಡಿದ್ದರು. ಬಳಿಕ ಅನರ್ಹ ಶಾಸಕ ಎಚ್​ ವಿಶ್ವನಾಥ್​ ಮತ್ತು ಸಾರಾ ಮಹೇಶ್​ ಇಬ್ಬರು ಆಪಾದನೆಗಳ ಕೆಸರೆರಾಚಾಟದಲ್ಲಿ ತೊಡಗಿದ್ದರು. ಅವರು ಮಾರಿಕೊಂಡಿರುವುದು ಸುಳ್ಳಾದರೆ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಆಣೆ ಮಾಡುವಂತೆ ಸವಾಲೆಸದಿದ್ದರು.

ಇದನ್ನು ಓದಿ: ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಣೆ ಪ್ರಮಾಣದ ನಾಟಕದ ಅವಶ್ಯಕತೆ ಇರಲಿಲ್ಲ; ಎಚ್​ಡಿ ಕುಮಾರಸ್ವಾಮಿ

ಈ ಸವಾಲನ್ನು ಸ್ವೀಕರಿಸಿದ ವಿಶ್ವನಾಥ್​ ಆಣೆ ಮಾಡಲು ಸಿದ್ಧ ಎಂದಿದ್ದರು. ಗುರುವಾರ ನಾಡ ದೇವತೆ ಚಾಮುಂಡೇಶ್ವರಿ ಸನ್ನಿಧಾನಕ್ಕೆ ನಾಯಕರು ಆಗಮಿಸಿದ್ದರು. ಈ ವೇಳೆ ಸಾರಾ ಮಹೇಶ್​ ಶಕ್ತಿ ದೇವತೆ ಮೇಲೆ ಆಣೆ ಮಾಡಿ ತಾವು ಹೇಳಿದ ಆಪಾದನೆ ಸತ್ಯ ಎಂದಿದ್ದರು. ಆದರೆ, ಕೊನೆ ಕ್ಷಣದಲ್ಲಿ ವಿಶ್ವನಾಥ್​ ತಾವು ಆಣೆ ಮಾಡುವುದಿಲ್ಲ ಎಂದು ಉಲ್ಟಾ ಹೊಡೆದರು.(ವರದಿ : ಪುಟ್ಟಪ್ಪ)

First published:October 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ