Kolara: ಮುನಿಸ್ವಾಮಿ ರಾಜಕೀಯ ಪ್ರತಿಷ್ಠೆಗೆ ಪೊಲೀಸರು ಹೈರಾಣ!

ರಾಜಕೀಯ ನಾಯಕರ ದಿಢೀರ್ ನಿರ್ಧಾರಗಳಿಂದ ಒಮ್ಮೊಮ್ಮೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪರದಾಟ ಎದುರಿಸಬೇಕಾದ ಅನಿರೀಕ್ಷಿತ ಬೆಳವಣಿಗೆ ನಡೆದಿರುವ ಸಾಕಷ್ಟು ಉದಾಹರಣೆ ನಮ್ಮ ಮುಂದಿದೆ. ಇಂತದ್ದೆ ಒಂದು ನಿರ್ಧಾರದಿಂದ ಕೋಲಾರ (Kolara) ಎಸ್ಪಿ ಡಿ ದೇವರಾಜ್ ಅವರು ತಬ್ಬಿಬ್ಬಾಗಿದ್ದಾರೆ.

ರಾಜಕೀಯ ನಾಯಕರ ದಿಢೀರ್ ನಿರ್ಧಾರಗಳಿಂದ ಒಮ್ಮೊಮ್ಮೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪರದಾಟ ಎದುರಿಸಬೇಕಾದ ಅನಿರೀಕ್ಷಿತ ಬೆಳವಣಿಗೆ ನಡೆದಿರುವ ಸಾಕಷ್ಟು ಉದಾಹರಣೆ ನಮ್ಮ ಮುಂದಿದೆ. ಇಂತದ್ದೆ ಒಂದು ನಿರ್ಧಾರದಿಂದ ಕೋಲಾರ (Kolara) ಎಸ್ಪಿ ಡಿ ದೇವರಾಜ್ ಅವರು ತಬ್ಬಿಬ್ಬಾಗಿದ್ದಾರೆ.

ರಾಜಕೀಯ ನಾಯಕರ ದಿಢೀರ್ ನಿರ್ಧಾರಗಳಿಂದ ಒಮ್ಮೊಮ್ಮೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪರದಾಟ ಎದುರಿಸಬೇಕಾದ ಅನಿರೀಕ್ಷಿತ ಬೆಳವಣಿಗೆ ನಡೆದಿರುವ ಸಾಕಷ್ಟು ಉದಾಹರಣೆ ನಮ್ಮ ಮುಂದಿದೆ. ಇಂತದ್ದೆ ಒಂದು ನಿರ್ಧಾರದಿಂದ ಕೋಲಾರ (Kolara) ಎಸ್ಪಿ ಡಿ ದೇವರಾಜ್ ಅವರು ತಬ್ಬಿಬ್ಬಾಗಿದ್ದಾರೆ.

  • Share this:
ಕೋಲಾರ(ಜೂ.28): ಜನಪ್ರತಿನಿಧಿಗಳು ಹಾಗು ರಾಜಕೀಯ ನಾಯಕರ ದಿಢೀರ್ ನಿರ್ಧಾರಗಳಿಂದ ಒಮ್ಮೊಮ್ಮೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪರದಾಟ ಎದುರಿಸಬೇಕಾದ ಅನಿರೀಕ್ಷಿತ ಬೆಳವಣಿಗೆ ನಡೆದಿರುವ ಸಾಕಷ್ಟು ಉದಾಹರಣೆ ನಮ್ಮ ಮುಂದಿದೆ. ಇಂತದ್ದೆ ಒಂದು ನಿರ್ಧಾರದಿಂದ ಕೋಲಾರ (Kolara) ಎಸ್ಪಿ ಡಿ ದೇವರಾಜ್ ಅವರು ತಬ್ಬಿಬ್ಬಾಗಿದ್ದಾರೆ.  513 ನೇ ನಾಡಪ್ರಭು ಕೆಂಪೇಗೌಡರ ಜಯಂತಿ (Kempegowda Jayanti) ಪ್ರಯುಕ್ತ ಕೋಲಾರ ಜಿಲ್ಲೆಯಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನೆರವೇರಿದೆ.  ಜಯಂತಿ ಅಂಗವಾಗಿ ಮೊದಲು, ಕೋಲಾರ ನಗರದ ಪ್ರವಾಸಿ ಮಂದಿರ ವೃತ್ತದಿಂದ ಟಿ ಚನ್ನಯ್ಯ ರಂಗಮಂದಿರ ವರೆಗು, ಕೆಂಪೇಗೌಡ ರ ಪಲ್ಲಕ್ಕಿ ಉತ್ಸವ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪಲ್ಲಕ್ಕಿ ಉತ್ಸವ ಕಾರ್ಯಕ್ರಮಕ್ಕೆ ಒಕ್ಕಲಿಗ ಸಮಾಜದ ಹಿರಿಯ ನಾಯಕರು ಹಾಜರಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮೆರವಣಿಯಲ್ಲಿ ಸುಮಾರು 150 ಕ್ಕು ಹೆಚ್ಚು ಪಲ್ಲಕ್ಕಿಗಳು ವಿವಿಧ ಬಗೆಯಲ್ಲಿ ಕೆಂಪೇಗೌಡರ ಮೂರ್ತಿಯನ್ನಿಸಿ ಮೆರವಣಿಯೆಲ್ಲಿ (Procession) ಭಾಗಿಯಾಗಿದ್ದರು. ಮೆರವಣಿಗೆಯ ದಾರಿಯುದ್ದಕ್ಕು ಊಟ, ನೀರಿನ ವ್ಯವಸ್ಥೆ ಮಾಡಲಾಗಿತ್ತು. ರೈತರೊಬ್ಬರು ಎತ್ತಿನ ಬಂಡಿಯಲ್ಲಿ ಕೆಂಪೇಗೌಡರ ಭಾವಚಿತ್ರ ಇರಿಸಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದು ವಿಭಿನ್ನವಾಗಿ ಕಂಡುಬಂತು.

ಅಣ್ಣಿಹಳ್ಳಿ ಗ್ರಾಮದಿಂದ ಮೆರವಣಿಗೆಯಲ್ಲಿ ಭಾಗಿಯಾಗಲು ಹೊರಟಿದ್ದ ಪಲ್ಲಕ್ಕಿ,  ವಿದ್ಯುತ್ ತಂತಿಗೆ ಸಿಲುಕಿ, ಪಲ್ಲಕ್ಕಿ ಮೇಲೆ ವಿದ್ಯುತ್ ಕಂಬ ಕುಸಿದು ಬಿದ್ದಿದ್ದು, ವಿದ್ಯುತ್ ನಿಲುಗಡೆ ಮಾಡಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಕೆವಿ ಶಂಕರಪ್ಪ, ವೆಂಕಟಶಿವಾರೆಡ್ಡಿ, ಕೃಷ್ಣಾರಡ್ಡಿ, ಶ್ರೀನಾಥ್, ರಾಜೇಶ್ವರಿ, ಸೇರಿದಂತೆ ಒಕ್ಕಲಿಗ ಜನಾಂಗದ ಪ್ರಮುಖ ನಾಯಕರು ಭಾಗಿಯಾಗಿದ್ದರು.

ಅನುಚಿತವಾಗಿ ವರ್ತಿಸಿದ ಯುವಕನಿಗೆ ಲಾಠಿ ರುಚಿ

ಕೆಂಪೇಗೌಡ ಜಯಂತಿಯ  ಪಲ್ಲಕ್ಕಿ ಮೆರವಣಿಗೆಯಲ್ಲಿ  ಸಂಸದ ಮುನಿಸ್ವಾಮಿ ಭಾಗಿಯಾಗಿದ್ದು ಬೆಂಬಲಿಗ ಮುಖಂಡರ ಜೊತೆ ಭರ್ಜರಿಯಾಗಿ ತಮಟೆ ವಾದ್ಯಕ್ಕೆ ಕುಣಿದು ಕುಪ್ಪಳಿಸಿದರು. ಇನ್ನು ಸಂಸದ ಮುನಿಸ್ವಾಮಿ ನೃತ್ಯದ ವೇಳೆ ಅನುಚಿತವಾಗಿ ವರ್ತಿಸಿದ, ಯುವಕನಿಗೆ, ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಅನುಚಿತವಾಗಿ ವರ್ತಿಸಿದ ಯುವಕನನ್ನ ಪಕ್ಕಕ್ಕೆ ಎಳೆದೊಯ್ದ ಸರ್ಕಲ್ ಇನ್ಸ್ ಪೆಕ್ಟರ್ ರಾಘವೇಂದ್ರ ಪ್ರಕಾಶ್, ಲಾಠಿ ಮುರಿಯುವಂತೆ ಹೊಡೆದು ಎಚ್ಚರಿಕೆ ನೀಡಿ ವಾಪಾಸ್ ಕಳಿಸಿದರು.

ಸಂಸದ ಮುನಿಸ್ವಾಮಿ ಗೆ ಪ್ರತಿಷ್ಟೆ, ಪೊಲೀಸರಿಗೆ ಪೀಕಲಾಟ

ಕೆಂಪೇಗೌಡ ಜಯಂತಿ ಪ್ರಯುಕ್ತ ಬಿಜೆಪಿ ಮುಖಂಡರು ಮೆರವಣಿಗೆ ಮಾಡಲೆಂದು ಸಿದ್ದಪಡಿಸಿದ್ದ ಪಲ್ಲಕ್ಕಿ ಉತ್ಸವ, ಕ್ಲಾಕ್ ಟವರ್ ಕಡೆಗೆ ಹೋಗಬೇಕೆಂದು ಸಂಸದ ಮುನಿಸ್ವಾಮಿ ಹಾಗು ಕೆಲ ಬಿಜೆಪಿ ನಾಯಕರು ಇದ್ದಕ್ಕಿದ್ದಂತೆ ಪಟ್ಟು ಹಿಡಿದರು. ಪ್ರವಾಸಿ ಮಂದಿರ ವೃತ್ತದಿಂದ ಎಂ.ಜಿ ರಸ್ತೆ ಕಡೆಗೆ ಹೋಗಬೇಕಿದ್ದ ಮೆರವಣಿಗೆ ಹಾಗು ವಿವಿಧ ಕಲಾತಂಡಗಳನ್ನ ಕ್ಲಾಕ್ ಟವರ್ ಕಡೆಗೆ ಹೋಗುವಂತೆ ಕರೆ ನೀಡಿ ನೇತೃತ್ವ ವಹಿಸಿಕೊಂಡರು. ಆದರೆ ಡೂಂಲೈಟ್ ವೃತ್ತದಲ್ಲೆ ಮುನಿಸ್ವಾಮಿ ಹಾಗು ಬಿಜೆಪಿ ಮುಖಂಡರನ್ನ  ಬ್ಯಾರಿಕೇಡ್ ಹಾಕಿ ತಡೆದ ಪೊಲೀಸರು, ಅನುಮತಿ ಇಲ್ಲದೆ ಕ್ಲಾಕ್ ಟವರ್ ಕಡೆಗೆ ಚಲಿಸುಲು ಆಗುವವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Chitradurga: ದಾಳಿಂಬೆ, ಟೊಮೇಟೋ ಬೆಳೆಗಳಿಗೆ ವಿಮೆ ನೋಂದಣಿಗೆ ಅವಕಾಶ, ಇಲ್ಲಿದೆ ಮಾಹಿತಿ

ಕೂಡಲೇ  ಸ್ಥಳಕ್ಕೆ ಎಸ್ಪಿ ದೇವರಾಜ್ ಬೇಟಿ ನೀಡಿ, ಕಲಾ ತಂಡಗಳನ್ನು ವಾಪಾಸ್ ಕಳಿಸಿದರು.  ಸಂಸದರ ಜೊತೆಗೆ ಮಾತುಕತೆ ನಡೆಸಿದ ಎಸ್ಪಿ ದೇವರಾಜ್ ಎಲ್ಲರ  ಮನವೊಲಿಸಿ ಮೆರವಣಿಗೆಯನ್ನು ವಾಪಾಸ್ ಕಳಿಸಿದರು. ಈ ಹಿಂದೆಯೇ ಒಕ್ಕಲಿಗ ಸಮಾಜದ ಮುಖಂಡರು ಪಲ್ಲಕ್ಕು ಉತ್ಸವ ಮೆರವಣಿಗೆ ಬಗ್ಗೆ ಪೊಲೀಸ್ ಇಲಾಖೆಯ ಜೊತೆಗೆ ಮಾತುಕತೆ ನಡೆಸಿದ್ದು, ಭದ್ರತೆ ದೃಷ್ಟಿಯಿಂದ ಪೊಲೀಸರು ಸೂಕ್ಷ್ಮ ಪ್ರದೇಶಗಳಲ್ಲಿ ಮೆರವಣಿಗೆ ಸಂಚರಿಸಲು ಅವಕಾಶ ನೀಡಿರುವುದಿಲ್ಲ. ಹೀಗಾಗಿ ಸಂಸದ ಮುನಿಸ್ವಾಮಿ ದಿಡೀರ್ ನಡೆಯಿಂದ ಕೋಲಾರ ನಗರ ಪೊಲೀಸರು ಹಾಗು ಜಿಲ್ಲಾ ಎಸ್ಪಿ ಒಂದು ಕ್ಷಣ ದಂಗಾದರು.

ಇದನ್ನೂ ಓದಿ: BK Hariprasad Allegation: ನನ್ನ ಸ್ವಂತ ಸಾಮಾಜಿಕ ಜಾಲತಾಣದ ನಿರ್ವಹಣೆಗೆ ಸರ್ಕಾರದ ಹಣ ಬಳಸಿಲ್ಲ: BC Nagesh ಸ್ಪಷ್ಟನೆ

ಈಗಾಗಲೇ ಕೋಲಾರ ನಗರದ ಕ್ಲಾಕ್ ಟವರ್ ಪ್ರದೇಶ ಸೂಕ್ಷ್ಮ ಪ್ರದೇಶದಲ್ಲಿ ಒಂದಾಗಿದೆ, ಹಾಗಾಗಿ ಕ್ಲಾಕ್ ಟವರ್ ವೃತ್ತದಲ್ಲಿ ಯಾವುದೇ ಪ್ರತಿಭಟನೆ, ಕಾರ್ಯಕ್ರಮ ನಡೆಸಲು ಪೂರ್ವಾನುಮತಿ ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾಡಳಿತ ಈಗಾಗಲೇ ಸ್ಪಷ್ಟಪಡಿಸಿದೆ. ಅದರ ಮಧ್ಯೆ ಸಂಸದ ಮುನಿಸ್ವಾಮಿ ಅವರ ದಿಢೀರ್ ಮಾರ್ಗ ಬದಲಾವಣೆ ನಿರ್ಧಾರ,  ರಾಜಕೀಯ ಪ್ರತಿಷ್ಟೆಗೆ  ಕಾರಣವಾಗಿದೆಯೆಂದು ಚರ್ಚೆ ಆರಂಭವಾಗಿದೆ.
Published by:Divya D
First published: