• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bharat Jodo Yatra: ಸಿದ್ದು ಬಣವನ್ನೇ ಟಾರ್ಗೆಟ್ ಮಾಡಿದ್ರಾ ಡಿಕೆಶಿ! ಭಾರತ್ ಜೋಡೋ ಯಾತ್ರೆ ಸಮಿತಿ ಲಿಸ್ಟ್​ನಿಂದ​ R V ದೇಶಪಾಂಡೆ ಔಟ್!

Bharat Jodo Yatra: ಸಿದ್ದು ಬಣವನ್ನೇ ಟಾರ್ಗೆಟ್ ಮಾಡಿದ್ರಾ ಡಿಕೆಶಿ! ಭಾರತ್ ಜೋಡೋ ಯಾತ್ರೆ ಸಮಿತಿ ಲಿಸ್ಟ್​ನಿಂದ​ R V ದೇಶಪಾಂಡೆ ಔಟ್!

ಡಿ.ಕೆ ಶಿವಕುಮಾರ್​, ಆರ್​.ವಿ ದೇಶಪಾಂಡೆ

ಡಿ.ಕೆ ಶಿವಕುಮಾರ್​, ಆರ್​.ವಿ ದೇಶಪಾಂಡೆ

ಕಾಂಗ್ರೆಸ್​ ಹಿರಿಯ ನಾಯಕ ಆರ್​.ವಿ ದೇಶಪಾಂಡೆ ಹೆಸರನ್ನು ಭಾರತ್​ ಜೋಡೋ ಸಮಿತಿ ಪಟ್ಟಿಯಿಂದ ಕೈಬಿಟ್ಟಿದ್ದು, ಈ ಮೂಲಕ ಡಿ.ಕೆ ಶಿವಕುಮಾರ್​ ಅವರು ಸಿದ್ದರಾಮಯ್ಯ ಆಪ್ತರಿಗೆ ಶಾಕ್​ ಕೊಡಲು ಮುಂದಾಗಿದ್ದಾರೆ ಎನ್ನಲಾಗ್ತಿದೆ.

  • Share this:

ಭಾರತ್​ ಜೋಡೋ ಯಾತ್ರೆಯನ್ನು (Bharat Jodo Yatra) ಯಶಸ್ವಿಗೊಳಿಸಲು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (KPCC President DK Shivakumar)​ ಪಣ ತೊಟ್ಟಿದ್ದಾರೆ. ಜನರನ್ನು ಕರೆದುಕೊಂಡು ಬರೋಕೆ ಆಗಲ್ಲ ಎಂದಿದ್ದ ದೇಶಪಾಂಡೆ ಅವರನ್ನು  ಭಾರತ್​ ಜೋಡೋ ಯಾತ್ರೆ ಸಮಿತಿ ಲಿಸ್ಟ್​ನಿಂದ ಕೈಬಿಡಲಾಗಿದೆ. ಆರ್​. ವಿ ದೇಶಪಾಂಡೆಗೆ (R. V deshpande ) ಭಾರತ್​ ಜೋಡೋ ಯಾತ್ರೆಗೆ ಸಂಬಂಧಿಸಿದಂತೆ ಯಾವುದೇ ಜವಾಬ್ದಾರಿ ನೀಡಿಲ್ಲ. ಇತ್ತೀಚಿಗೆ ಭಾರತ್​ ಜೋಡೋ ಯಾತ್ರೆಗೆ ಜನರನ್ನು ಕರೆದುಕೊಂಡು ಬರಲು ಆಗಲ್ಲ ಎಂದು ಆರ್​.ವಿ ದೇಶಪಾಂಡೆ ಹೇಳಿದ್ರು. ಈ ಕುರಿತು ವೇದಿಕೆ ಮೇಲೆ ಬಹಿರಂಗವಾಗಿಯೇ ಡಿಕೆ ಶಿವಕುಮಾರ್​ ಅವರು ದೇಶಪಾಂಡೆ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು.


ಸಿದ್ದು ಬಣವನ್ನೇ ಟಾರ್ಗೆಟ್ ಮಾಡಿದ್ರಾ ಡಿಕೆಶಿ!


ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ಬಣವನ್ನೇ ಟಾರ್ಗೆಟ್​ ಮಾಡಿದ್ದಾರೆ ಅನ್ನೋ ಮಾತುಗಳು ಕಾಂಗ್ರೆಸ್​ ವಲಯದಲ್ಲೇ ಕೇಳಿಬರ್ತಿದೆ. ಸಿದ್ದರಾಮಯ್ಯ ಅಂಡ್​ ಟೀಮ್​ ವಿರುದ್ಧ ಸೇಡು ತೀರಿಸಿಕೊಳ್ಳಲು ಡಿಕೆಶಿ ಮುಂದಾಗಿದ್ದಾರಾ ಅನ್ನೋ ಅನುಮಾನಗಳು ಹುಟ್ಟಿದೆ. ಸಮಯ ಸಿಕ್ಕಾಗಲೆಲ್ಲಾ ಡಿಕೆಶಿ ಸಿದ್ದು ಬಣದ ವಿರುದ್ಧ ಸಮರ ಸಾರಿದ ಅನೇಕ ಉದಾಹರಣೆಗಳಿವೆ. ಮಾಧ್ಯಮಗಳ ಎದುರೇ ಹೇಳಿಕೆಗಳು ನೀಡಿದ್ದಾರೆ.
ಸಿದ್ದು ಆಪ್ತರಿಗೆ ಡಿಕೆಶಿ ಕೊಡ್ತಿದ್ದಾರೆ ಶಾಕ್​!


ಇದೀಗ ಕಾಂಗ್ರೆಸ್​ ಹಿರಿಯ ನಾಯಕ ಆರ್​.ವಿ ದೇಶಪಾಂಡೆ ಹೆಸರನ್ನು ಭಾರತ್​ ಜೋಡೋ ಸಮಿತಿ ಪಟ್ಟಿಯಿಂದ ಕೈಬಿಟ್ಟಿದ್ದು, ಈ ಮೂಲಕ ಡಿ.ಕೆ ಶಿವಕುಮಾರ್​ ಅವರು ಸಿದ್ದರಾಮಯ್ಯ ಆಪ್ತರಿಗೆ ಶಾಕ್​ ಕೊಡಲು ಮುಂದಾಗಿದ್ದಾರೆ ಅನ್ನೋದು ಅನೇಕರ ಅಭಿಪ್ರಾಯವಾಗಿದೆ. ಕಾಂಗ್ರೆಸ್​ನ ಎಲ್ಲಾ ಹಿರಿಯರಿಗೂ ಜವಾಬ್ದಾರಿ ಕೊಟ್ಟು, ಇದೀಗ ದೇಶಪಾಂಡೆಗೆ ಭಾರತ್ ಜೋಡೋ ಯಾತ್ರೆಯಲ್ಲಿ ಯಾವುದೇ ಜವಾಬ್ದಾರಿ ನೀಡಿಲ್ಲ. ಇದರ ಹಿಂದಿನ ಕಾರಣ ಏನು ಅನ್ನೋ ಬಗ್ಗೆ ಡಿ.ಕೆ ಶಿವಕುಮಾರ್​ ಅವರೇ ತಿಳಿಸಬೇಕಿದೆ.


ಇದನ್ನೂ ಓದಿ: D.K Shivakumar: ವೇದಿಕೆ ಮೇಲೆ ಶಾಸಕರ ವಿರುದ್ಧ ಸಿಡಿದೆದ್ದ ಡಿಕೆಶಿ; ದೇಶಪಾಂಡೆಗೆ ಕೊಟ್ರು ಡಿಚ್ಚಿ!


ಕೈ ಶಾಸಕರ ವಿರುದ್ಧ ಡಿಕೆ ಶಿವಕುಮಾರ್ ಕಿಡಿ


ಭಾರತ್ ಜೋಡೋ ಯಾತ್ರೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ನಡುವೆ ಗೊಂದಲ ಉಂಟಾಗಿದ್ದು, ಕೈ ನಾಯಕರ ಮುಸುಕಿನ ಗುದ್ದಾಟ ಬಟಾಬಯಲಾಗಿತ್ತು. ಕಾಂಗ್ರೆಸ್ ‌ಪಕ್ಷದ‌ ಶಾಸಕರ ವಿರುದ್ಧ ಡಿಕೆಶಿ ವೇದಿಕೆಯಲ್ಲೇ ಗರಂ ಆಗಿದ್ರು. ನಮ್ಮಲ್ಲಿ ಕೆಲ ಶಾಸಕರು ಇದ್ದಾರೆ. ಒಂದು ದಿನ ಬಂದು ಕೆಲಸ ಮಾಡೋಕೆ ಆಗಲ್ಲ. ನಾನು ದೇಶಪಾಂಡೆ ಅವರಿಗೆ ಒಂದು ದಿನ ಜನರನ್ನ ಕಳಿಸೋಕೆ  ಕೇಳಿದೆ. ಅವರು ಆಗಲ್ಲ ಅಂದ್ರು , 5 ವರ್ಷದಲ್ಲಿ ಒಂದು ದಿನ ಅದ್ರೂ ರಾಹುಲ್ ಗಾಂಧಿ ಜೊತೆ ಕೆಲಸ ಮಾಡೋಕೆ ಆಗಲ್ಲ ಅಂದ್ರೆ‌ ಏನ್ಮಾಡೋದು? ಯಾವ ಎಂಎಲ್‌ಎಗೂ  ಮಾಫಿ ಮಾಡೋಕೆ ಆಗಲ್ಲ ಎಂದಿದ್ರು.


ಪ್ರತಿ ದಿನ ಎರಡು ಎಂಎಲ್ಎ ಫಿಕ್ಸ್


ಪ್ರತಿ ದಿನ ಎರಡು ಎಂಎಲ್ಎ ಫಿಕ್ಸ್ ಮಾಡಿದ್ದೇವೆ. ಅವರು ಜನರ ಜೊತೆ ಬಂದು ಯಾತ್ರೆಯಲ್ಲಿ ಭಾಗವಹಿಸಿ ಎಂದು ಹೇಳಿದ್ದೇವೆ. ಯಾರು ಮುಂದಿನ ಚುನಾವಣೆಗೆ ಆಕಾಂಕ್ಷಿ ಇದ್ದಿರೋ ಅವರು ಬನ್ನಿ, ನನ್ನ, ಸಿದ್ದರಾಮಯ್ಯ ‌ಫೋಟೋ ಹಾಕಬೇಡಿ ನೀವು ಕೆಲಸ ಮಾಡಿ ಎಂದು ಡಿಕೆ ಶಿವಕುಮಾರ್​ ಕಿಡಿಕಾರಿದ್ದರು.


ಹೇಳಿಕೆಗಳಿಗೆ ಬೇರೆ ಅರ್ಥ ಕಲ್ಪಿಸುವುದು ಬೇಡಿ


ಕೆಪಿಸಿಸಿ ಅಧ್ಯಕ್ಷರ ಅಸಮಾಧಾನ ವಿಚಾರದ ಕುರಿತು ಪ್ರತಿಕ್ರಿಯಿಸಿದ ಆರ್​ ವಿ ದೇಶಪಾಂಡೆ, ಇಂತಹ ಯಾವುದೇ ಊಹಾಪೋಹಗಳಿಲ್ಲ. ಅವರ ಉದ್ದೇಶ ಭಾರತ್ ಜೋಡೋ ಕಾರ್ಯಕ್ರಮ ಯಶಸ್ವಿಯಾಗಬೇಕೆಂಬುದಾಗಿದೆ. ಎಲ್ಲ ಕಡೆಯಿಂದ ನಮ್ಮ ಮುಖಂಡರು, ಕಾರ್ಯಕರ್ತರು ಕಾರ್ಯಕ್ರಮಕ್ಕೆ ಬರಬೇಕು. ಇದನ್ನು ಯಶಸ್ವಿಗೊಳಿಸಬೇಕೆಂದು ಹೇಳಿದ್ದಾರೆ ಎಂದರು.ಕೆಪಿಸಿಸಿ ಅಧ್ಯಕ್ಷರ ಹೇಳಿಕೆಗಳಿಗೆ ಬೇರೆ ಅರ್ಥ ಕಲ್ಪಿಸುವುದು ಬೇಡಿ ಎಂದಿದ್ದರು.

First published: