ಸಿದ್ದರಾಮಯ್ಯ ವಿರುದ್ಧ ದೇಶಪಾಂಡೆ ಅಸ್ತ್ರ; ಕುಮಾರಸ್ವಾಮಿ ಹೊಸ ದಾಳ ಪ್ರಯೋಗ

news18
Updated:August 30, 2018, 1:28 PM IST
ಸಿದ್ದರಾಮಯ್ಯ ವಿರುದ್ಧ ದೇಶಪಾಂಡೆ ಅಸ್ತ್ರ; ಕುಮಾರಸ್ವಾಮಿ ಹೊಸ ದಾಳ ಪ್ರಯೋಗ
news18
Updated: August 30, 2018, 1:28 PM IST
ಧರಣೀಶ್​ ಬೂಕನಕೆರೆ, ನ್ಯೂಸ್​ 18 ಕನ್ನಡ

ನವದೆಹಲಿ (ಆ.30): ನಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈತ್ರಿ ಸರ್ಕಾರದ ಸಿಎಂ ಕುಮಾರಸ್ವಾಮಿ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ. ಅದುವೇ ಕಾಂಗ್ರೆಸ್​ ಹಿರಿಯ ಮುಖಂಡ ಆರ್​.ವಿ ದೇಶಪಾಂಡೆ.

ಹೊಳೆ ನರಸೀಪುರದಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದೆ ಜನರು ಆಶೀರ್ವಾದಿಸಿದರೆ ತಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದರು. ಇದರ ಬೆನ್ನಲ್ಲೇ ಕೃಷಿ ಸಚಿವ ಶಿವಶಂಕರರೆಡ್ಡಿ, ಎರಡು ಪಕ್ಷದ ಸಮನ್ವಯ ಅಧಿಕಾರಿಗಳು ಒಪ್ಪಿದರೆ ಸಿಎಂ ಬದಲಾವಣೆ ಸಾಧ್ಯ ಎಂದಿದ್ದರು. ಶಾಸಕರುಗಳ ಈ ಹೇಳಿಕೆ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ತರಲಿದೆ ಎಂಬ ಮುನ್ಸೂಚನೆಯನ್ನು ನೀಡಿದ್ದವು.

ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಆದರೆ ಅದು ಸಿದ್ದರಾಮಯ್ಯ ಅವರ ಹೆಗಲಿಗೆ ​ ಹೋಗುವ ಸಾಧ್ಯತೆ ಇರುವುದನ್ನು ಅರಿತ ಕುಮಾರಸ್ವಾಮಿ ಈಗ ಹೊಸ ದಾಳ ಉರುಳಿಸಿದ್ದಾರೆ.  ಅವರಿಗೆ ಸ್ಪರ್ಧೆಯಾಗಿ ಅವರ ಪಕ್ಷದ ಹಿರಿಯ ನಾಯಕ ದೇಶಪಾಂಡೆ ಕೂಡ ಇದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ಅವರು ಕೂಡ ಅರ್ಹರು ಎಂದು ಕಾಂಗ್ರೆಸ್​ ನಾಯಕರ ನಡುವೆ ಸ್ಪರ್ಧೆ ಏರ್ಪಡುವಂತೆ ಮಾಡಿದ್ದಾರೆ.

ರಾಹುಲ್​ ಗಾಂಧಿ ಭೇಟಿ ಬಳಿಕ ಕುಮಾರಸ್ವಾಮಿ ನೀಡಿದ ಈ ಹೇಳಿಕೆ ಸಾಕಷ್ಟು ಕುತೂಹಲ ಮೂಡಿಸಿದ್ದು, ಈ ಹೇಳಿಕೆ ಹಿಂದೆ ಹಲವು ಲೆಕ್ಕಾಚಾರಗಳು ಕೂಡ ಇದೆ ಎನ್ನಲಾಗಿದೆ. ಈ ಮೂಲಕ  ಆಪ್ತರ ನಡುವೆ ಬಿರುಕು ಮೂಡಿಸುವ ಪ್ರಯತ್ನ ಕೂಡ ಎಚ್​ಡಿಕೆ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿಸಿದೆ.

ಆರ್​ ವಿ ದೇಶಪಾಂಡೆ ಸಿದ್ದರಾಮಯ್ಯ ಆಪ್ತರಾಗಿದ್ದು, ಅವರ ಸರ್ಕಾರದಲ್ಲಿ ಸಚಿವರಾಗಿ ಕೂಡ ಕೆಲಸಮಾಡಿದ್ದಾರೆ. ನಾಳೆ ಯುರೋಪ್ ಪ್ರವಾಸ ನಡೆಸಲಿರುವ ಸಿದ್ದರಾಮಯ್ಯ ಅವರ ಜೊತೆಗೆ ದೇಶಪಾಂಡೆ ಕೂಡ ಪ್ರಯಾಣ ಬೆಳೆಸಲಿದ್ದು, ​ಒಟ್ಟಿಗೆ ಪ್ರವಾಸ ಹೊರಡುವ ಸಂದರ್ಭದಲ್ಲೇ  ಎಚ್‌ಡಿಕೆ ನೀಡಿದ ಹೇಳಿಕೆ ಕುತೂಹಲ ಮೂಡಿಸಿದೆ.

ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಆರ್​ ವಿ ದೇಶಪಾಂಡೆ, ಸಿಎಂ ಆಗಲು ಅರ್ಹತೆ ಇರಬಹುದು, ಆದರೆ ಅವಕಾಶ ಸಿಕ್ಕಿಲ್ಲ. ನಾನು ಸಿಎಂ ಆಗಲೇಬೇಕು ಅಂತ ಎಲ್ಲೂ ಹೇಳಿಲ್ಲ. ಈ ರೀತಿ ಹೇಳಿಕೆ ನೀಡುವ ಮೂಲಕ ಅನವಶ್ಯಕ ಗೊಂದಲ ಸೃಷ್ಟಿಯಾಗುತ್ತಿದೆ. ನಾನು ಬದುಕಿನಲ್ಲಿ ಸಾಕಷ್ಟು ರಾಜಕೀಯ ಏರುಪೇರು ನೋಡಿದ್ದೇನೆ ಎಂದರು.
Loading...

ಸಿದ್ದರಾಮಯ್ಯ ಪರ ಬ್ಯಾಟಿಂಗ್​ ನಡೆಸಿದ ಅವರು, ಮತ್ತೆ ಮುಖ್ಯಮಂತ್ರಿಯಾಗುವ ವಿಚಾರ ಸಿದ್ದರಾಮಯ್ಯಗೆ ಇಲ್ಲ. ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಬೆಂಬಲ ಇದೆ. ಮಾಜಿ ಸಿಎಂ ಈ ರೀತಿ ಬೇಜವ್ದಾರಿ ಹೇಳಿಕೆ ನೀಡುವ ವ್ಯಕ್ತಿಯಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಈ ಹಿಂದೆ ಸ್ಪೀಕರ್​ ರೇಸ್​ನಲ್ಲಿದ್ದ ದೇಶಪಾಂಡೆ ಅವರಿಗೆ ಸ್ವಲ್ಪದರಲ್ಲಿಯೇ  ಆ ಸ್ಥಾನ ಕೈ ತಪ್ಪಿತ್ತು. ಆದರೆ ಸಚಿವ ಸ್ಥಾನಗಿಟ್ಟಿಸುವಲ್ಲಿ ಅವರು ಯಶಸ್ವಿಯಾಗಿದ್ದರು. ಏಳು ಬಾರಿ ಶಾಸಕರಾಗಿರುವ ಇವರು ಕಳೆದ ಸರ್ಕಾರದಲ್ಲಿ ಬೃಹತ್ ಕೈಗಾರಿಕಾ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...