ಹುಬ್ಬಳ್ಳಿಯಲ್ಲಿ ಗಾಯಗೊಂಡಿದ್ದ ಹಾವಿನ ರಕ್ಷಣೆ; ಕಾಡಿಗೆ ಬಿಡೋ ಮೊದಲೇ 48 ಮರಿಗಳಿಗೆ ಜನ್ಮ ನೀಡಿದ ಕೊಳಕು ಮಂಡಲ

ಸಾಮಾನ್ಯವಾಗಿ ಎಲ್ಲ ಹಾವುಗಳು ಮೊಟ್ಟೆ ಹಾಕುತ್ತವೆ. ಆದರೆ. ರಸಲ್ ವೈಫರ್ ಹಾವು ಮೊಟ್ಟೆಗಳನ್ನು ಹಾಕುವುದಿಲ್ಲ. ಈ ಹಾವಿನ ವಿಶೇಷ ಎಂದರೆ ಅದು ಗರ್ಭದಲ್ಲಿಯೇ ಮೊಟ್ಟೆಗಳಿಗೆ ಕಾವು ಕೊಡುತ್ತದೆ. ಗರ್ಭದಲ್ಲಿ ಬೆಳೆಯುವ ಮರಿಗಳು ಮೊಟ್ಟೆ ಸೀಳಿ ಹೊರ ಬರುತ್ತವೆ.

news18-kannada
Updated:June 1, 2020, 1:10 PM IST
ಹುಬ್ಬಳ್ಳಿಯಲ್ಲಿ ಗಾಯಗೊಂಡಿದ್ದ ಹಾವಿನ ರಕ್ಷಣೆ; ಕಾಡಿಗೆ ಬಿಡೋ ಮೊದಲೇ 48 ಮರಿಗಳಿಗೆ ಜನ್ಮ ನೀಡಿದ ಕೊಳಕು ಮಂಡಲ
ಮರಿಗಳಿಗೆ ಜನ್ಮ ನೀಡಿದ ಹಾವು
  • Share this:
ಹುಬ್ಬಳ್ಳಿ (ಜೂ.1): ನಗರದಲ್ಲಿ ಉರಗ ತಜ್ಞರೊಬ್ಬರು ರಕ್ಷಿಸಿದ್ದ ರಸೆಲ್​ ವೈಪರ್​ ಅಥವಾ ಕೊಳಕು ಮಂಡಲ ಹಾವು 48 ಮರಿಗಳಿಗೆ ಜನ್ಮ ನೀಡಿದೆ.  ಕೊಳಕ ಮಂಡಲ ಎಂದು ಕರೆಯಲಾಗುವ ರಸೆಲ್ ವೈಫರ್ ‌ಹಾವಿನ ತಲೆಗೆ ಪೆಟ್ಟು ಬಿದ್ದು ಗಾಯಗೊಂಡಿತ್ತು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಹಾವನ್ನು ಉರಗ ಪ್ರೇಮಿ ಸ್ನೇಕ್ ಸಂಗಮೇಶ್ ರಕ್ಷಿಸಿದ್ದರು. ಹಾವಿಗೆ ಪ್ರಥಮ ಚಿಕಿತ್ಸೆ ನೀಡಿ ಬದುಕಿಸಿದ್ದರು. ಚೇತರಿಸಿಕೊಂಡಿದ್ದ ಹಾವನ್ನು ಕಾಡಿಗೆ ಬಿಡಲು ತಯಾರಿ ನಡೆಸಿದ್ದರು‌. ಗರ್ಭಿಣಿಯಾಗಿದ್ದ ಹಾವು‌ ಕಾಡಿಗೆ ಬಿಡುವ ವೇಳೆಯಲ್ಲಿ ಮರಿಗಳಿಗೆ ಜನ್ಮ ನೀಡಿದೆ. 48 ಮರಿಗಳು ಆರೋಗ್ಯವಾಗಿವೆ.

ಸಾಮಾನ್ಯವಾಗಿ ಎಲ್ಲ ಹಾವುಗಳು ಮೊಟ್ಟೆ ಹಾಕುತ್ತವೆ. ಆದರೆ. ರಸಲ್ ವೈಫರ್ ಹಾವು ಮೊಟ್ಟೆಗಳನ್ನು ಹಾಕುವುದಿಲ್ಲ. ಈ ಹಾವಿನ ವಿಶೇಷ ಎಂದರೆ ಅದು ಗರ್ಭದಲ್ಲಿಯೇ ಮೊಟ್ಟೆಗಳಿಗೆ ಕಾವು ಕೊಡುತ್ತದೆ. ಗರ್ಭದಲ್ಲಿ ಬೆಳೆಯುವ ಮರಿಗಳು ಮೊಟ್ಟೆ ಸೀಳಿ ಹೊರ ಬರುತ್ತವೆ. ನೋಡಲು ಆಕರ್ಷಕವಾಗಿ ಕಾಣುವ ಹಾವು ತೇವಾಂಶವಿರುವ ಪ್ರದೇಶಗಳಲ್ಲಿ ಇರುತ್ತದೆ.

ಕೊಳಕು ಮಂಡಲ ಭಾರತದ ಎಲ್ಲ ಭಾಗಗಳಲ್ಲೂ ಕಂಡು ಬರುತ್ತದೆ. ಉಳಿದಂತೆ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಥೈಲೆಂಡ್​ ಪಾಕ್​ ಸೇರಿ ಏಷ್ಯಾದ ಸಾಕಷ್ಟು ರಾಷ್ಟ್ರಗಳಲ್ಲಿ ಈ ಪ್ರಭೇದ ಇದೆ. ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಇದನ್ನು ಕರೆಯುತ್ತಾರೆ. ಸಾಮಾನ್ಯವಾಗಿ ಈ ಹಾವು 4 ಅಡಿ ಒಂದು ಇಂಚು ಉದ್ದ ಇರುತ್ತದೆ. ಬಾಲದ ಉದ್ದ 7 ಇಂಚುಗಳಷ್ಟಿರುತ್ತದೆ.

ಇದನ್ನೂ ಓದಿ: ಕೇಂದ್ರದ ತಪ್ಪಿನಿಂದಾಗಿ 560 ಜನ ಮೃತಪಟ್ಟಿದ್ದಾರೆ, ಈ ಸಾವಿಗೆ ಯಾರು ಹೊಣೆ? ಸರ್ಕಾರದ ವಿರುದ್ಧ ಖರ್ಗೆ ಕಿಡಿ

ಮೇ ತಿಂಗಳಿಂದ ನವೆಂಬರ್​ವರೆಗೆ ಇವುಗಳು ಮರಿಗಳನ್ನು ಇಡುತ್ತವೆ. ಅದರಲ್ಲೂ ಜೂನ್​ ಹಾಗೂ ಜುಲೈ ತಿಂಗಳಲ್ಲಿ ಇವು ಮರಿ ಹಾಕುವುದು ಹೆಚ್ಚು. ಕನಿಷ್ಠ  20ರಿಂದ ಗರಿಷ್ಠ 75 ಮರಿಗಳಿಗೆ ಇವು ಜನ್ಮ ನೀಡುತ್ತವೆ.

"ಜನರು ಹಾವು ಕಚ್ಚುವ ಭಯದಿಂದ ಕಂಡ ಕೂಡಲೆ ಹೊಡೆದು ಕೊಲ್ಲುತ್ತಾರೆ. ಯಾರೂ ಹಾವುಗಳನ್ನು ಸಾಯಿಸಬಾರದು‌. ಹಾವುಗಳು ತಮ್ಮ ಬಿಲಗಳನ್ನು ಬಿಟ್ಟು ಜನವಸತಿ ಪ್ರದೇಶಕ್ಕೆ ಬಂದರೆ ಕೂಡಲೆ ನಮ್ಮ ಗಮನಕ್ಕೆ ತರಬೇಕು. ಹಾವುಗಳನ್ನು ಸುರಕ್ಷಿತವಾಗಿ ಹಿಡಿದಿ ಕಾಡಿಗೆ ಬಿಡಲಾಗುವುದು," ಎನ್ನುತ್ತಾರೆ ಸ್ನೇಕ್ ಸಂಗಮೇಶ.
First published: June 1, 2020, 1:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading