ಬೆಂಗಳೂರು: ಇಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ (Kantheerava Stadium) ನೂತನ ಸಿಎಂ, ಡಿಸಿಎಂ ಮತ್ತು ಸಚಿವರ ಪ್ರಮಾಣವಚನ ಕಾರ್ಯಕ್ರಮವನ್ನು (Oath Taking) ಕಂಠೀರವ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. ಪ್ರಮಾಣವಚನ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಜನರು ಬೆಂಗಳೂರಿಗೆ ಆಗಮಿಸಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮ 12.30ಕ್ಕೆ ನಿಗದಿಯಾಗಿದ್ರೂ ಬೆಳಗ್ಗೆ 8 ಗಂಟೆಯಿಂದಲೇ ಸ್ಟೇಡಿಯಂನತ್ತ ಆಗಮಿಸುತ್ತಿದ್ದಾರೆ. ದಿಢೀರ್ ಅಂತ ಜನರು ಆಗಮಿಸಿದ ಕಾರಣ ಪೊಲೀಸರು ಎಲ್ಲರನ್ನು ತಡೆಯಲು ಹೈರಾಣು ಆದರು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡುವ ಅನಿವಾರ್ಯ ಎದುರಾಯ್ತು. ಗೇಟ್ ನಂಬರ್ ಮೂರರಲ್ಲಿ ನೂಕು ನುಗ್ಗಲಿನಿಂದಾಗಿ ಪೊಲೀಸ್ ಪೇದೆಯ ಶರ್ಟ್ ಹರಿದು ಹೋಗಿದೆ. ಕೊನೆಗೆ ಪೊಲೀಸ್ ಪೇದೆಯನ್ನು ಆಟೋದಲ್ಲಿ ಕಳುಹಿಸಲಾಯ್ತು.
ಈಗಾಗಲೇ ಭಾಗಶಃ ಸ್ಟೇಡಿಯಂ ಭರ್ತಿಯಾಗಿದ್ದು, ಇನ್ನು ಜನರು ಆಗಮಿಸುತ್ತಿದ್ದಾರೆ. ಸ್ಟೇಡಿಯಂನಲ್ಲಿ ಡಿಕೆ, ಸಿದ್ದು ಎಂದು ಅಭಿಮಾನಿಗಳು ಘೋಷಣೆ ಕೂಗುತ್ತಿದ್ದಾರೆ. ದೂರದೂರುಗಳಿಂದ ಬಂದಿರುವ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.
ಇಬ್ಬರಿಗೆ ಗಾಯ
ಲಾಠಿ ಚಾರ್ಜ್ ವೇಳೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರವೇಶ ದ್ವಾರದ ಬಳಿಯಲ್ಲಿರಿಸಿದ್ದ ಮೆಟಲ್ ಡಿಟೆಕ್ಟರ್ ಪೀಸ್ ಪೀಸ್ ಆಗಿದೆ.
ಮೊದಲ ಸಚಿವ ಸಂಪುಟದಲ್ಲಿ ಆರು ಸಮುದಾಯಕ್ಕೆ ಅವಕಾಶ ನೀಡಲಾಗುತ್ತಿದೆ. ದಲಿತ ಸಮುದಾಯಕ್ಕೆ ಮೂರು, ಅದರಲ್ಲಿ ದಲಿತ ಬಲ ಸಮುದಾಯಕ್ಕೆ ಎರಡು, ದಲಿತ ಎಡ ಸಮುದಾಯಕ್ಕೆ ಒಂದು ಸಚಿವ ಸ್ಥಾನ ನೀಡಲಾಗುತ್ತದೆ.
ಇಂದು ಪ್ರಮಾಣ ವಚನ ಸ್ವೀಕರಿಸಲಿರುವ ಸಂಭಾವ್ಯ ನಾಯಕರು.
1.ಎಂ ಬಿ ಪಾಟೀಲ್: ಲಿಂಗಾಯತ
2.ಡಾ. ಜಿ ಪರಮೇಶ್ವರ್: ದಲಿತ ಬಲ
3.ಪ್ರಿಯಾಂಕ್ ಖರ್ಗೆ: ದಲಿತ ಬಲ
4.ಕೆ ಎಚ್ ಮುನಿಯಪ್ಪ: ದಲಿತ ಎಡ
5.ಕೆ ಜೆ ಜಾರ್ಜ್: ಕ್ರಿಶ್ಚಿಯನ್
6.ಸತೀಶ್ ಜಾರಕಿಹೊಳಿ: ಎಸ್ ಟಿ (ವಾಲ್ಮೀಕಿ)
7.ಜಮೀರ್ ಅಹಮದ್ ಖಾನ್: ಮುಸ್ಲಿಂ
8.ರಾಮಲಿಂಗಾ ರೆಡ್ಡಿ: ರೆಡ್ಡಿ ಸಮುದಾಯ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ