Omicron: ರಾಜ್ಯದ 6 ಜಿಲ್ಲೆಗಳಲ್ಲಿ ಶಾಲೆಗಳು ಬಂದ್.. ಪರೀಕ್ಷೆ ಬರ್ತಿದೆ ಸ್ಕೂಲ್ ಓಪನ್ ಮಾಡ್ಸಿ ಅಂತ `ರುಪ್ಸಾ’ ಮನವಿ!

ಕನಿಷ್ಠ 5 ರಿಂದ ಮೇಲ್ಪಟ್ಟ ತರಗತಿಯನ್ನು ಪ್ರಾರಂಭಿಸಿ ಎಂದು ಶಿಕ್ಷಣ ‌ಇಲಾಖೆಗೆ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪತ್ರ ಬರೆದಿದ್ದಾರೆ. ಅತ್ತ ಸಿಎಂ ಬಸವರಾಜ ಬೊಮ್ಮಾಯಿ ಅವರು ಸೋಂಕು ಕಟ್ಟಿಹಾಕಲು ಇಂದು ತಜ್ಞರ ಜೊತೆ ಸಾಲು ಸಾಲು ಸಭೆ ನಡೆಸುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹೊಸ ವರ್ಷ ಬಂತು.. ಕೊರೋನಾ(Corona) ಕಾಟ ತಪ್ಪಿತು ಎಂದು ಎಲ್ಲರು ಸಂತಸದಿಂದ ಇದ್ದರು. ಆದರೆ, ರಾಜ್ಯದಲ್ಲಿ ಯಾವಾಗ ನೈಟ್​ ಕರ್ಫ್ಯೂ(Night Curfew) ಜಾರಿಗೊಳಿಸಲಾಯಿತೋ ಅಂದೆ ಜನರಿಗೆ ಗೊತ್ತಾಗಿದ್ದು, ಮತ್ತೆ ಕೊರೋನಾ ಹೊಸ ಅಲೆ ಆರಂಭವಾಗಿದೆ ಅಂತ. ಕೊರೋನಾ ಕಳೆದ ಒಂದೂವರೆ ವರ್ಷಗಳಿಂದ ಇಡೀ ವಿಶ್ವವನ್ನೇ ತನ್ನ ಕಪಿ ಮುಷ್ಟಿಯಲ್ಲಿ ಇಟ್ಟುಕೊಂಡು ಹಿಂಡಿ ಹಿಪ್ಪೆ ಮಾಡಿದೆ. ಇದೀಗ ರೂಪಾಂತರಿ ಓಮಿಕ್ರಾನ್​(Omicron) ಅಬ್ಬರ ಜೋರಾಗಿದೆ. ಸಿಕ್ಕ ಸಿಕ್ಕವರ ರಕ್ಕಸನಂತೆ ದಾಳಿ ಮಾಡುತ್ತಿದೆ ಭಯಾನಕ ಓಮಿಕ್ರಾನ್​. ವೀಕೆಂಡ್​ ಕರ್ಫ್ಯೂ(Weekend Curfew) ಮಾಡಿದ್ದರು ಈ ಅಬ್ಬರ ಮಾತ್ರ ಕಡಿಮೆಯಾಗುತ್ತಿಲ್ಲ. ಹೇಗಾದರೂ ಮಾಡಿ ಇದನ್ನು ಕಟ್ಟಿಹಾಕಲು ಸರ್ಕಾರ ಕೂಡ ಶತ ಪ್ರಯತ್ನ ಮಾಡುತ್ತಿದೆ. ಕೊರೋನಾ 3 ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುತ್ತೆ ಎಂದು ಹೇಳಲಾಗಿತ್ತು. ಅದು ಈಗ ನಿಜವಾಗುತ್ತಿದೆ. ಶಾಲೆ(School)ಗಳಲ್ಲಿ ಕೊರೋನಾ ಕೇಸ್​ ಸಂಖ್ಯೆಗಳು ಹೆಚ್ಚುತ್ತಿದೆ. ಎರಡು ವಾರಗಳ ಕಾಲ ಶಾಲೆಗಳನ್ನು ಬಂದ್​ ಮಾಡಲಾಗಿತ್ತು. ಈಗಾಗಲೇ 6 ಜಿಲ್ಲೆಗಳಲ್ಲಿ ಶಾಲೆಗಳನ್ನು ಬಂದ್​ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಕರೋನಾ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. 1 ರಿಂದ 9 ನೇ ತರಗತಿವರೆಗೆ ಶಾಲೆ ಬಂದ್ ಮಾಡಿರುವ ಶಿಕ್ಷಣ ‌ಇಲಾಖೆ ವಿರುದ್ಧ ರುಪ್ಸಾ ಖಾಸಗಿ ಒಕ್ಕೂಟ ಗರಂ ಆಗಿದೆ. 

5 ನೇ ತರಗತಿ ಮೇಲ್ಪಟ್ಟ ತರಗತಿ ಪ್ರಾರಂಭಕ್ಕೆ ಒತ್ತಾಯ!

ಮಕ್ಕಳ ಮೇಲೆ ಯಾವುದೇ ಪರಿಣಾಮ ಬೀರಬಾರದೆಂದು ಸರ್ಕಾರ 6 ಜಿಲ್ಲೆಗಳಲ್ಲಿ ಶಾಲೆಗಳನ್ನು ಬಂದ್ ಮಾಡಿದೆ. ಆನ್​ಲೈನ್​ ಕ್ಲಾಸ್​ ನೆಡೆಸುವಂತೆ  ಆದೇಶ ನೀಡಿದೆ. ಆದರೆ, ಬಂದ್​ ಆಗಿರುವ ಜಿಲ್ಲೆಗಳಲ್ಲಿ ಶಾಲೆ ಪ್ರಾರಂಭ ಮಾಡಿ ಅಂತ ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ಮನವಿ ಮಾಡಿಕೊಂಡಿದೆ. 5 ನೇ ತರಗತಿ ಮೇಲ್ಪಟ್ಟ ತರಗತಿ ಪ್ರಾರಂಭಕ್ಕೆ ಒತ್ತಾಯ ಮಾಡಿದೆ. ‘ಈಗಾಗಲೇ ಪರೀಕ್ಷೆ ಹತ್ತೀರವಾಗುತ್ತಿವೆ. ಕಳೆದ ಒಂದೂವರೆ ವರ್ಷದಿಂದ ಭೌತಿಕ ತರಗತಿ ಸರಿಯಾಗಿ ನಡೆದಿಲ್ಲ.ಈಗ ಮತ್ತೆ 1 ರಿಂದ 9 ನೇ ತರಗತಿವರೆಗೆ ಶಾಲೆಗಳನ್ನ ಬಂದ್ ಮಾಡಲಾಗಿದೆ. ಕೊರೋನಾ ಬಂದಿರುವ ಪ್ರದೇಶದ ಶಾಲೆಗಳನ್ನ ಮಾತ್ರ ಬಂದ್ ಮಾಡಿ. ಆದರೆ, ಇಡೀ ಜಿಲ್ಲೆಯ ಶಾಲೆಗಳನ್ನ ಬಂದ್ ಮಾಡೋದು ಸರಿಯಲ್ಲ ಎಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನು ಓದಿ : ಇಂದು ಸಂಜೆ ಸಿಎಂ‌ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ಸಿದ್ಧತೆ ಕುರಿತು ಸಭೆ

ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರ ಹಿಂದೇಟು!

ಬೆಂಗಳೂರು ನಗರ, ಬೆಳಗಾವಿ, ಮೈಸೂರು, ಧಾರವಾಡ, ಮಂಡ್ಯ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಶಾಲೆಗಳನ್ನ ಬಂದ್ ಮಾಡಲಾಗಿದೆ. ಈ ಜಿಲ್ಲೆಗಳಲ್ಲಿ ಕೊರೋನಾ ಮಹಾಮಾರಿ ಅಬ್ಬರ ಜೋರಾಗಿದೆ. ಶಾಲೆಗಳಲ್ಲಿ ಎಷ್ಟೇ ಮುನ್ನೆಚರಿಕಾ ಕ್ರಮಗಳನ್ನು ಕೈಗೊಂಡರು ಕೊರೋನಾ ಪ್ರಕರಣಗಳು ಹೆಚ್ಚುತ್ತಲೇ ಇದೆ. ಬೇರೆ ಜಿಲ್ಲೆಗಳಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹೆದರುತ್ತಿದ್ದಾರೆ. ಇನ್ನೂ ಹಾಸನ ಜಿಲ್ಲೆಯಲ್ಲಿ ಒಂದೇ ದಿನ 385 ಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು ಅಂಟಿದೆ. ಹೀಗಾಗಿ ಮಕ್ಕಳು ಮನೆಯಲ್ಲೇ ಆನ್​ಲೈನ್​ ಕ್ಲಾಸ್​ ಅಟೆಂಡ್ ಮಾಡಲಿ ಎಂದು ಪೋಷಕರು ಹೇಳುತ್ತಿದ್ದಾರೆ.

ಇದನ್ನು ಓದಿ: Hubli-Dharwad ಪೊಲೀಸರಿಗೆ ಕೊರೋನಾಘಾತ: 200ಕ್ಕೂ ಹೆಚ್ಚು ಸಿಬ್ಬಂದಿಗೆ ಪಾಸಿಟಿವ್

ತಜ್ಞರ  ಜೊತೆ ಸಿಎಂ ಸಾಲು ಸಾಲು ಸಭೆ!

ಕನಿಷ್ಠ 5 ರಿಂದ ಮೇಲ್ಪಟ್ಟ ತರಗತಿಯನ್ನು ಪ್ರಾರಂಭಿಸಿ ಎಂದು ಶಿಕ್ಷಣ ‌ಇಲಾಖೆಗೆ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪತ್ರ ಬರೆದಿದ್ದಾರೆ. ಅತ್ತ ಸಿಎಂ ಬಸವರಾಜ ಬೊಮ್ಮಾಯಿ ಅವರು ಸೋಂಕು ಕಟ್ಟಿಹಾಕಲು ಇಂದು ತಜ್ಞರ ಜೊತೆ ಸಾಲು ಸಾಲು ಸಭೆ ನಡೆಸುತ್ತಿದ್ದಾರೆ.ಫೆಬ್ರವರಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಹಿನ್ನೆಲೆ ಇಂದು ಸಂಜೆ 4 ಗಂಟೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕೋವಿಡ್ ಸಿದ್ಧತೆಯ ಕುರಿತು ಚರ್ಚೆಗಳು ನಡೆಯಲಿವೆ.
Published by:Vasudeva M
First published: