ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ದೂರು!

ಮಾಹಿತಿ ಹಕ್ಕು ಆಯುಕ್ತ ಪಿ.ಜಿ.ವಿಜಯಕುಮಾರ್ ವಿರುದ್ದ ರಾಜ್ಯಪಾಲರು, ರಾಜ್ಯ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ದೂರು ನೀಡಿದ್ದಾರೆ. ನ್ಯಾಯಾಂಗ ಘತನೆಗೆ ದಕ್ಕೆ ತಂದಿದ್ದಾರೆ ಅವರನ್ನು ಆಯುಕ್ತ ಸ್ಥಾನದಿಂದ ವಜಾ ಮಾಡಬೇಕು ಎಂದು ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.

news18-kannada
Updated:December 18, 2019, 7:29 PM IST
ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ದೂರು!
ಆರ್​ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ದಾಖಲಿಸಿರುವ ದೂರು.
  • Share this:
ಬೆಳಗಾವಿ: ಮಾಹಿತಿ ಹಕ್ಕು ಕಾಯ್ದೆಯಿಂದ ದೇಶದಲ್ಲಿ ನಡೆದ ಅನೇಕ ಭ್ರಷ್ಟಾಚಾರ ಬಯಲಾಗಿವೆ. ಸದ್ಯ ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತ ಪಿ.ಜಿ. ವಿಜಯಕುಮಾರ್ ವಿರುದ್ಧವೇ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿದೆ. ಆಯುಕ್ತರು ನ್ಯಾಯಾಂಗ ಘತನೆಗೆ ಅಗೌರವ ತಂದಿದ್ದಾರೆ. ಅವರನ್ನು ತಕ್ಷಣ ಮಾಹಿತಿ ಆಯೋಗದ ಆಯುಕ್ತ ಸ್ಥಾನದಿಂದ ವಜಾ ಮಾಡಬೇಕು ಎಂದು ದೂರು ದಾಖಲಾಗಿಸಿದ್ದಾರೆ.

ಇತ್ತೀಚಿಗೆ ಬೆಳಗಾವಿಯ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ವಿವಿಧ ಇಲಾಖೆಗಳಲ್ಲಿ 16 ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದರು. ಈ ಬಗ್ಗೆ ಮಾಹಿತಿ ಹಕ್ಕು ಆಯುಕ್ತ ಪಿ.ಜಿ. ವಿಜಯಕುಮಾರ್ ಗಡಾದಗೆ ಪತ್ರ ಮೂಲಕ ಉತ್ತರ ನೀಡಿದ್ದು. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಓರ್ವ ವ್ಯಕ್ತಿ ವರ್ಷಕ್ಕೆ ಮೂರು ಅರ್ಜಿ ಮಾತ್ರ ಸಲ್ಲಿಸಬಹುದು ಎಂದು ಹೇಳಿದ್ದರು. ಅಷ್ಟೇ ಅಲ್ಲ ನೀವು ಮೊದಲು ಸಲ್ಲಿಸಿದ ಮೂರು ಅರ್ಜಿಗಳಿಗೆ ಮಾತ್ರ ಉತ್ತರ ನೀಡುತ್ತೇವೆ ಎಂದು ಲಿಖಿತ ರೂಪದಲ್ಲಿ ಆದೇಶ ನೀಡಿದ್ದರು.

ನಂತರ ಇದಕ್ಕೆ ಪ್ರತಿಯಾಗಿ ಮಾಹಿತಿ ಹುಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಪತ್ರ ಬರೆದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರತಿ ನೀಡುವಂತೆ ಕೇಳಿದ್ದರು. ರಾಜ್ಯ ಮಾಹಿತಿ ಆಯೋಗದಿಂದ ಇದಕ್ಕೆ ಉತ್ತರ ಬಂದಿದ್ದು, ಓರ್ವ ವ್ಯಕ್ತಿ ನಿರ್ದಿಷ್ಟವಾಗಿ ಇಷ್ಟೇ ಪ್ರಶ್ನೆ ಕೇಳಬೇಕು ಎಂಬ ಬಗ್ಗೆ ಸುಪ್ರೀಂಕೋರ್ಟ್ ಯಾವುದೇ ತೀರ್ಪು ನೀಡಿಲ್ಲ ಎಂದು ಉತ್ತರ ಬಂದಿದೆ. ಸದ್ಯ ಭೀಮಪ್ಪ ಗಡಾದ್ ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಮಾಹಿತಿ ಹಕ್ಕು ಆಯೋಗದ ಆಯುಕ್ತ ಪಿ.ಜಿ. ವಿಜಯಕುಮಾರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನು ಓದಿ: ಮಹದಾಯಿ ವಿಚಾರವಾಗಿ ಕರ್ನಾಟಕಕ್ಕೆ ಮತ್ತೆ ಮೋಸ; ಪರಿಸರ ಇಲಾಖೆ ನೀಡಿದ್ದ ಒಪ್ಪಿಗೆ ತಡೆ ಹಿಡಿದ ಕೇಂದ್ರ ಸರ್ಕಾರ

ಮಾಹಿತಿ ಹಕ್ಕು ಆಯುಕ್ತ ಪಿ.ಜಿ.ವಿಜಯಕುಮಾರ್ ವಿರುದ್ದ ರಾಜ್ಯಪಾಲರು, ರಾಜ್ಯ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ದೂರು ನೀಡಿದ್ದಾರೆ. ನ್ಯಾಯಾಂಗ ಘತನೆಗೆ ದಕ್ಕೆ ತಂದಿದ್ದಾರೆ ಅವರನ್ನು ಆಯುಕ್ತ ಸ್ಥಾನದಿಂದ ವಜಾ ಮಾಡಬೇಕು ಎಂದು ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ರಾಜ್ಯಪಾಲರು ಮತ್ತು ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
Published by: HR Ramesh
First published: December 18, 2019, 7:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading