HOME » NEWS » State » RTI ACTIVIST COMPLAINT AGAINST MLA MUNIRATNA FOR JALAHALLI UNDERPASS PROJECT RHHSN DBDEL

ವೈಯಕ್ತಿಕ ಲಾಭಕ್ಕಾಗಿ ಜಾಲಹಳ್ಳಿ ಅಂಡರ್ ಪಾಸ್ ಯೋಜನೆ; ಶಾಸಕ ಮುನಿರತ್ನ ನಾಯ್ಡು ವಿರುದ್ಧ ಬಿಜೆಪಿ ಹೈಕಮಾಂಡಿಗೆ ದೂರು

ಈಗಾಗಲೇ ರಾಜ್ಯಪಾಲ ವಜೂಬಾಯ್ ವಾಲಾ ಅವರಿಗೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ, ನಮ್ಮ ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮತ್ತು ಈ ಯೋಜನೆಗೆ ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ಎಸಿಬಿಗೆ ದೂರು ನೀಡಲಾಗಿದೆ ಎಂದು ಕೂಡ ಆರ್ ಟಿಐ ಕಾರ್ಯಕರ್ತ ರವಿಕುಮಾರ್ ತಿಳಿಸಿದರು.

news18-kannada
Updated:March 4, 2021, 6:46 PM IST
ವೈಯಕ್ತಿಕ ಲಾಭಕ್ಕಾಗಿ ಜಾಲಹಳ್ಳಿ ಅಂಡರ್ ಪಾಸ್ ಯೋಜನೆ; ಶಾಸಕ ಮುನಿರತ್ನ ನಾಯ್ಡು ವಿರುದ್ಧ ಬಿಜೆಪಿ ಹೈಕಮಾಂಡಿಗೆ ದೂರು
ಮುನಿರತ್ನ
  • Share this:
ನವದೆಹಲಿ (ಮಾ. 4): ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಕಾಡಿ ಬೇಡಿ ಟಿಕೆಟ್ ಪಡೆದು ಗೆಲುವು ಸಾಧಿಸಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ನಾಯ್ಡು ವಿರುದ್ಧ ವೈಯಕ್ತಿಕ ಲಾಭಕ್ಕಾಗಿ ಸರ್ಕಾರದ ಯೋಜನೆ ರೂಪಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ನಾಯಕರಿಗೆ ದೂರು ಸಲ್ಲಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅಂಚೆ ಮೂಲಕ ದೂರು ನೀಡಿದ್ದೇನೆ. ಅಲ್ಲದೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಗೆ ನೇರವಾಗಿ ದೂರು ನೀಡಿದ್ದೇನೆ ಎಂದು ದೂರು ನೀಡಿರುವ ಬೆಂಗಳೂರಿನ ಆರ್ ಟಿಐ ಕಾರ್ಯಕರ್ತ ರವಿಕುಮಾರ್ ತಿಳಿಸಿದ್ದಾರೆ.

ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಆರ್​ಟಿಐ ಕಾರ್ಯಕರ್ತ ರವಿಕುಮಾರ್, ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ನಲ್ಲಿ ಶಾಸಕರಾದ ಮುನಿರತ್ನ ನಾಯ್ಡು ಮತ್ತು ಅವರ ಬೀಗರಾದ ರಾಕ್ ಲೈನ್ ವೆಂಕಟೇಶ್ ಅವರ ಆಸ್ತಿ ಇದೆ. ಅದರ ಮೌಲ್ಯ ಹೆಚ್ಚಿಸಿಕೊಳ್ಳುವುದಕ್ಕಾಗಿ ಜಾಲಹಳ್ಳಿ ಕ್ರಾಸ್ ಬಳಿ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ನಾಯ್ಡು ಅಂಡರ್ ಪಾಸ್ ಯೋಜನೆಯನ್ನು ಆರಂಭಿಸಲು ಹೊರಟಿದ್ದಾರೆ. ಇದಕ್ಕೆ ಜಾಲಹಳ್ಳಿ ಕ್ರಾಸ್ ನ ಇನ್ನೊಂದು ಬಗಲಿಗೆ ಬರುವ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಮಂಜುನಾಥ್ ಕೂಡ ಕೈಜೋಡಿಸಿದ್ದಾರೆ. ಮುನಿರತ್ನ ನಾಯ್ಡು ಅವರ ವೈಯಕ್ತಿಕ ಲಾಭಕ್ಕಾಗಿ ಅಂಡರ್ ಪಾಸ್ ಯೋಜನೆ ಮಾಡಲಾಗುತ್ತಿದ್ದು, ಕೂಡಲೇ ಯೋಜನೆಯನ್ನು ತಡೆಯುವಂತೆ  ಬಿಜೆಪಿ ಹೈಕಮಾಂಡಿಗೆ ದೂರು ನೀಡಿರುವುದಾಗಿ ರವಿಕುಮಾರ್ ತಿಳಿಸಿದ್ದಾರೆ.

ಜಾಲಹಳ್ಳಿ ಕ್ರಾಸ್ ನಲ್ಲಿ 'ಪೀಕ್ ಅವರ್'ಗಳಲ್ಲಿ ಉಂಟಾಗುವ ಟ್ರಾಫಿಕ್ ಜಾಮ್ ಅನ್ನೇ ನೆಪ ಮಾಡಿಕೊಂಡು ಅಂಡರ್ ಪಾಸ್ ಯೋಜನೆ ರೂಪಿಸಲಾಗಿದೆ. ಆದರೆ ಇಲ್ಲಿ ಅಂಡರ್ ಪಾಸ್ ಮಾಡಲು ಭೂಮಿ ಅಗೆದರೆ ಅಲ್ಲೇ ಇರುವ ಮೆಟ್ರೋ ಪಿಲ್ಲರ್ ಗಳು ಶಿಥಿಲ ಆಗಲಿವೆ. ರಾಷ್ಟ್ರೀಯ ಹೆದ್ದಾರಿ ಪಿಲ್ಲರ್ ಗಳೂ ಶಿಥಿಲಗೊಳ್ಳಲಿವೆ. ಜೊತೆಗೆ ಈ ಯೋಜನೆಗಾಗಿ ರಸ್ತೆ ಅಗಲೀಕರಣ ಮಾಡುವುದರಿಂದ ಎರಡೂ ಬದಿಯಲ್ಲಿ ಇರುವ ಅಂಗಡಿ ಮಳಿಗೆಗಳನ್ನು ನೆಲ ಸಮ ಮಾಡಬೇಕಾಗುತ್ತದೆ. ಅದಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಪರಿಹಾರ ನೀಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ: Session | ಸದನದಲ್ಲಿ ಗದ್ದಲ; ಬಾವಿಗಿಳಿದು ಕಾಂಗ್ರೆಸ್ ಸದಸ್ಯರಿಂದ ಪ್ರತಿಭಟನೆ, ಸ್ಪೀಕರ್ ವಿರುದ್ಧ ಘೋಷಣೆ

ಇದೇ  ಜಾಲಹಳ್ಳಿ ಕ್ರಾಸ್ ಸಮೀಪ ಬಸವೇಶ್ವರ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಆದರೆ ಅದರ ಸದ್ಬಳಕೆ ಆಗುತ್ತಿಲ್ಲ. ಅದಕ್ಕೆ ಹೊಂದಿಕೊಂಡಂತೆ ಡಬ್ಬಲ್ ರೋಡ್ ಇದೆ. ಟ್ರಾಫಿಕ್ ಜಾಮ್ ಕಡಿಮೆ ಮಾಡಲು ಆ ಡಬಲ್ ರೋಡ್ ಬಳಸಿಕೊಳ್ಳಬಹುದು‌. ಅದನ್ನೂ ಮಾಡುತ್ತಿಲ್ಲ. ಮನಿರತ್ನ ನಾಯ್ಡು ಅವರ ವೈಯಕ್ತಿಕ ಲಾಭಕ್ಕಾಗಿ ಸರ್ಕಾರದ ಹಣ ಪೋಲಾಗುವಂತಹ ಯೋಜನೆ ರೂಪಿಸಲಾಗಿದೆ. ಅಲ್ಲಿರುವ ಇತರೆ ಅಂಗಡಿ ಮುಂಗಟ್ಟುಗಳಲ್ಲಿ ವ್ಯವಹಾರ ನಡೆಸುತ್ತಿರುವವರ ಬದುಕಿನ ಜೊತೆ ಚೆಲ್ಲಾಟ ಆಡಲಾಗುತ್ತಿದೆ ಎಂದು ಆರ್ ಟಿಐ ಕಾರ್ಯಕರ್ತ ರವಿಕುಮಾರ್ ಆರೋಪಿಸಿದರು.
Youtube Video

ಈ ಬಗ್ಗೆ ಈಗಾಗಲೇ ರಾಜ್ಯಪಾಲ ವಜೂಬಾಯ್ ವಾಲಾ ಅವರಿಗೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ, ನಮ್ಮ ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮತ್ತು ಈ ಯೋಜನೆಗೆ ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ಎಸಿಬಿಗೆ ದೂರು ನೀಡಲಾಗಿದೆ ಎಂದು ಕೂಡ ಆರ್ ಟಿಐ ಕಾರ್ಯಕರ್ತ ರವಿಕುಮಾರ್ ತಿಳಿಸಿದರು.
Published by: HR Ramesh
First published: March 4, 2021, 6:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories