Covid Tough Rules: ಗೋವಾ-ಕಾರವಾರ ಗಡಿಯಲ್ಲಿ ಇನ್ನಷ್ಟು ಟಫ್​​ ರೂಲ್ಸ್​​.. ಕಂಗಾಲಾದ ಜನ!

ಉತ್ತರ ಕನ್ನಡ ಜಿಲ್ಲಾಡಳಿತ ಬಿಗಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಗೋವಾದಿಂದ ಕಾರವಾರ ಬರಬೇಕಾದ್ರೆ RTPCR ಕಡ್ಡಾಯ ಮಾಡಿದ್ದು, ಕಾರವಾರ-ಗೋವಾ ಮಧ್ಯೆ ಓಡಾಡುವ ಜನರು ಹೈರಾಣಾಗಿದ್ದಾರೆ.

ಗಡಿಯಲ್ಲಿ ತಪಾಸಣೆ

ಗಡಿಯಲ್ಲಿ ತಪಾಸಣೆ

  • Share this:
ಕಾರವಾರ: ರಾಜ್ಯದಲ್ಲಿ ಕೊರೊನಾ (Corona) ಸೋಂಕು ನಿಯಂತ್ರಕ್ಕೆ ಸರ್ಕಾರ (Karnataka Govt) ಕಠಿಣ ಕ್ರಮಗಳನ್ನು ಕೈಗೊಂಡಿದೆ. ನೆರೆಯ ಗೋವಾ(Goa), ಮಹಾರಾಷ್ಟ್ರ (Maharashtra) ಮತ್ತು ಕೇರಳ (Kerala) ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ ಬಿಗಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಗೋವಾದಿಂದ ಕಾರವಾರ ಬರಬೇಕಾದ್ರೆ RTPCR ಕಡ್ಡಾಯ ಮಾಡಿದ್ದು, ಕಾರವಾರ-ಗೋವಾ ಮಧ್ಯೆ ಓಡಾಡುವ ಜನರು ಹೈರಾಣಾಗಿದ್ದಾರೆ. ಸರಕಾರದ ಹೊಸ‌ಮಾರ್ಗಸೂಚಿಯಿಂದ ಜನರು ಕಂಗಾಲಾಗಿದ್ದು ಕಿರಿಕಿರಿ ಅನುಭವಿಸುತ್ತಿದ್ದಾರೆ.

 ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ? 

1)  ಮುಖ್ಯವಾಗಿ ಜಿಲ್ಲೆಯ ಗಡಿಭಾಗಗಳಾದ ಕಾರವಾರ ತಾಲೂಕಿನ ಮಾಜಾಳಿ  (ಕರ್ನಾಟಕ -ಗೋವಾ ಗಡಿ) ಯಲ್ಲಿ,  ಜೋಯಿಡಾ ತಾಲೂಕಿನ ಅನಮೋಡ, ದಾಂಡೇಲಿ ತಾಲೂಕಿನ ಭರ್ಚಿ ಹಾಗೂ ಭಟ್ಕಳ ತಾಲೂಕಿನ ಶಿರೂರು ನಲ್ಲಿ ಹೊರ ರಾಜ್ಯದಿಂದ ಬರುವಂತಹ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲು ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ.

2) ಗೋವಾ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಿಂದ ಬರುವಂತಹ ಪ್ರಯಾಣಿಕರು ಕೋವಿಡ್ 72 ಗಂಟೆಯೊಳಗಿನ ಕೊರೋನಾ ನೆಗೆಟಿವ್ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯವಾಗಿರುತ್ತದೆ.

3) ಚೆಕ್ ಪೋಸ್ಟ್ ಗಳು  24*7 ಕಾರ್ಯನಿರ್ವಹಿಸುವಂತೆ ತಂಡಗಳನ್ನು ರಚಿಸಿದ್ದು, ಕಂದಾಯ, ಪೋಲಿಸ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಿದ್ದು ಪ್ರಯಾಣಿಕರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.  ಅದೇ ರೀತಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಗಳಲ್ಲಿ ಪ್ರಯಾಣಿಕರ ಮೇಲೆ ನಿಗಾ ವಹಿಸಲು ತಪಾಸಣಾ ತಂಡಗಳನ್ನು ನಿಯೋಜಿಸಿದ್ದು ಪ್ರಯಾಣಿಕರ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಇದನ್ನೂ ಓದಿ: Weekend Curfewನಲ್ಲಿ ಮದ್ಯ ಮಾರಾಟ ವಿಚಾರ; ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟ ರಾಜ್ಯ ಸರ್ಕಾರ

4) ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷಾ ಪ್ರಮಾಣಗಳನ್ನು ಸಹ ಹೆಚ್ಚಿಸಲಾಗುತ್ತಿದ್ದು ಪ್ರತಿದಿನ 3500 -4000 ಪರೀಕ್ಷೆಗಳನ್ನು ನಡೆಸಲು ಗುರಿಯನ್ನು ಹಾಕಿಕೊಂಡಿದ್ದು ಸಾರ್ವಜನಿಕರ ಸಹಕಾರದ ಅಗತ್ಯವಿರುತ್ತದೆ. ಪರೀಕ್ಷೆಗಳನ್ನು ಪರಿಣಾಮಕಾರಿಯಾಗಿ ಮಾಡಲು ತಾಲೂಕಾ ಮಟ್ಟದಲ್ಲಿ ತಂಡಗಳನ್ನ ರಚಿಸಲಾಗಿರುತ್ತದೆ.

5)ಕೋವಿಡ್ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ 18 ವರ್ಷ ಮೇಲ್ಪಟ್ಟ ವ್ಯಕ್ತಿಗಳ(15,45,720) ಪೈಕಿ ಶೇ.97.80 ರಷ್ಟು (10,54,238) ಜನರಿಗೆ ಮೊದಲನೆ ಡೋಸ್, ಶೇ. 82.23 ರಷ್ಟು (8,86,401) ಜನರಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ.
8 ಕೋವಿಡ್ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ 15 -17 ವರ್ಷದ ಮಕ್ಕಳ (66,001) ಪೈಕಿ  ಶೇ.40 ರಷ್ಟು (26,673) ಜನರಿಗೆ ಮೊದಲನೆ  ಡೋಸ್ ಲಸಿಕೆಯನ್ನು ನೀಡಲಾಗಿದೆ. ಉಳಿದ ಮಕ್ಕಳಿಗೆ ಆಯಾ ಶಾಲಾ ಕಾಲೇಜುಗಳಲ್ಲಿ ಲಸಿಕೆಯನ್ನು ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ.

ಗೋವಾದಿಂದ‌ ಕಾರವಾರಕ್ಕೆ ಬರಲು RTPCR ಕಡ್ಡಾಯ.. ಜನ‌ ಹೈರಾಣು

ಇವತ್ತಿನಿಂದ ಗೋವಾ ದಿಂದ ಕಾರವಾರ ಬರುವವರಿಗೆ RTPCR ಕಡ್ಡಾಯ ಮಾಡಿರುವ ಹಿನ್ನಲೆಯಲ್ಲಿ ಇವತ್ತು ಮಾಹಿತಿ‌ಇಲ್ಲದೆ ಕಾರವಾರ ಬರುತ್ತಿದ್ದ ಸಾವಿರಾರು ಮಂದಿ ಪುನಃ ಗೋವಾಕ್ಕೆ ವಾಪಾಸ್ ತೆರಳಿದ್ರು. RTPCR ಇಲ್ಲದೆ ಬಂದಿದ್ದ ಗೊವಾದ ಜನ ಮತ್ತು ಕಾರವಾರದ ಜನ ಸರಕಾರದ ಹೊಸ ಮಾರ್ಹಸೂಚಿಗೆ ಹೈರಾಣಾಗಿದ್ದಾರೆ...ವಿವಿಧ ಮದುವೆ ಕಾರ್ಯಕ್ಕೆ ಬಂದಿದ್ದ ಜನ ಕಾರವಾರಕ್ಕೆ ಬರಲಾಗದೆ ವಾಪಾಸ್ ಗೋವಾ ತೆರಳಿದ್ರು...ಹೀಗೆ ಕಟ್ಟುನಿಟ್ಟಿನ ನಿಯಮ ಜಾರಿ ತರಲಾಗಿದೆ.

ಇದನ್ನೂ ಓದಿ: Karnataka Weekend Curfew: ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿ: ನೈಟ್ ಕರ್ಫ್ಯೂ ವಿಸ್ತರಣೆ, ಶಾಲೆಗಳು ಬಂದ್​

ವೀಕೆಂಡ್ ಕರ್ಫ್ಯೂನಲ್ಲಿ ಮದ್ಯ ಮಾರಾಟ ವಿಚಾರವನ್ನು ಆಯಾ ಜಿಲ್ಲಾಧಿಕಾರಿಗಳ ವಿವೇಚನೆಗೆ ರಾಜ್ಯ ಸರ್ಕಾರ ಬಿಟ್ಟಿದೆ. ಪ್ರಾದೇಶಿಕ ಅವಶ್ಯಕತೆಗಳಿಗೆ ಆನುಗುಣವಾಗಿ ಆಯಾ ಜಿಲ್ಲಾಧಿಕಾರಿಗಳು ನಿರ್ಧಾರ ಕೈಗೊಳ್ಳಬಹುದು. ಈ ಮೊದಲು ವೀಕೆಂಡ್ ಕರ್ಫ್ಯೂನಲ್ಲಿ ಮದ್ಯ ಪ್ರಿಯರಿಗೆ ಎಣ್ಣೆ ಸಿಗಲ್ಲ ಎಂದು ಸರ್ಕಾರ ಹೇಳಿತ್ತು. ಎಣ್ಣೆ ಅಂಗಡಿ ಬಂದ್ ಮಾಡುವಂತೆ ಅಬಕಾರಿ ಇಲಾಖೆಯಿಂದ ಸೂಚನೆ ನೀಡಲಾಗಿತ್ತು. ಆದರೆ ಈಗ Weekend Curfew ವೇಳೆ ಶನಿವಾರ ಭಾನುವಾರ ಮದ್ಯ ಮಾರಾಟ ಜಿಲ್ಲಾಧಿಕಾರಿ ವಿವೇಚನೆಗೆ ಬಿಟ್ಟಿದ್ದು ಎಂದು ಸರ್ಕಾರ ಹೇಳಿದೆ. ಒಂದು ಕಡೆ ವಾರಾಂತ್ಯ ಕರ್ಫ್ಯೂ ವಿಧಿಸಿ ಸರ್ಕಾರ ಆದೇಶ ಹೊರಡಿಸಿದ್ದರೆ, ಮತ್ತೊಂದು ಕಡೆ ಖಜಾನೆ ತುಂಬಿಸಲು ಬಾರ್​​ಗಳಿಗೆ ಮದ್ಯ ಮಾರಾಟ ಮಾಡಲು ಅವಕಾಶ ನೀಡಿದೆ.
Published by:Kavya V
First published: