RSS Shakhas: ಲಾಕ್‍ಡೌನ್ ಸಮಯದಲ್ಲಿ ಕರ್ನಾಟಕದಲ್ಲಿ ಆರ್‌ಎಸ್‌ಎಸ್ ಶಾಖೆಗಳ ಸಂಖ್ಯೆಯಲ್ಲಿ ಹೆಚ್ಚಳ..

Increased RSS Shakhas In Karnataka: ಉಡುಪಿ, ರಾಯಚೂರು, ಉತ್ತರ ಕನ್ನಡ ಮತ್ತು ಕಲಬುರಗಿಯಲ್ಲೂ ಮಕ್ಕಳ ಸೇರ್ಪಡೆ ಹೆಚ್ಚಾಗಿದೆ ಎಂದು ಆರ್‍ಎಸ್‍ಎಸ್ ಮೂಲಗಳು ತಿಳಿಸಿವೆ. ಸಾಂಕ್ರಾಮಿಕ ಸಮಯದಲ್ಲಿ ಅಪಾರ ಸಾಮಾಜಿಕ ಕಾರ್ಯದಿಂದಾಗಿ, ಜನರು ಆರ್‍ಎಸ್‍ಎಸ್‍ಗೆ ಸೇರಲು ಉತ್ಸುಕರಾಗಿದ್ದಾರೆ ಎಂದು ಆರ್​ ಎಸ್‍ಎಸ್ ಅಧಿಕಾರಿಗಳು ಹೇಳಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಕೋವಿಡ್(Covid 19) ಮಹಾಮಾರಿಯಿಂದಾಗಿ ಶಾಲೆಗಳನ್ನು ಮುಚ್ಚಲಾಯಿತು. ಈ ಸಂದರ್ಭದಲ್ಲಿ ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಶಾಖೆಗಳನ್ನು ಸೇರುವ ಮಕ್ಕಳ ಸಂಖ್ಯೆಯಲ್ಲಿ (10 ರಿಂದ 16 ವರ್ಷಗಳು) ಏರಿಕೆ ಕಂಡಿದೆ ಎಂದು ಸಂಸ್ಥೆಯು ಹೇಳಿದೆ. ಕಳೆದ ಎರಡು ವರ್ಷಗಳಲ್ಲಿ ಸಾಂಕ್ರಾಮಿಕದ ಹೊರತಾಗಿಯೂ ಆರ್​ಎಸ್‍ಎಸ್ ಕಾರ್ಯದರ್ಶಿಗಳು ಹಂಚಿಕೊಂಡ ಮಾಹಿತಿಯ ಆಧಾರದ ಮೇಲೆ ಶಾಖೆಗಳ ಸಂಖ್ಯೆಯಲ್ಲಿ ಶೇಕಡಾ 5 ರಷ್ಟು ಹೆಚ್ಚಳವಾಗಿದೆ ಎಂದು ತೋರಿಸುತ್ತದೆ.


ಲಾಕ್‍ಡೌನ್ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ, ಶಾಖೆಗಳು ಉಚಿತ ಬೋಧನೆ ಮಾಡುತ್ತಿದ್ದವು ಮತ್ತು ಕ್ರೀಡೆಗಳಿಗೆ ಪೂರಕ ವಾತಾವರನ ನಿರ್ಮಿಸಿ ಕೊಟ್ಟಿದ್ದವು. ಸಂಘ ಪರಿವಾರದ ಅಂದಾಜಿನ ಪ್ರಕಾರ, ಕರ್ನಾಟಕದಲ್ಲಿ 2019 ರಲ್ಲಿ 4,404 ಶಾಖೆಗಳಿದ್ದರೆ, 2021 ರ ವೇಳೆಗೆ ಈ ಸಂಖ್ಯೆ 4,614 ಕ್ಕೆ ಏರಿದೆ.


ಇದು ನಮ್ಮ ಅಂದಾಜು ಮಾತ್ರ. ಅಧಿಕೃತ ದತ್ತಾಂಶವನ್ನು ಪರಿಶೀಲಿಸಿದಾಗ ಶಾಖೆಗಳ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದ್ದು, ಸಂಖ್ಯೆಯೂ ಇನ್ನಷ್ಟು ಏರುವ ಸಾಧ್ಯತೆ ಇದೆ ಎಂದು ಸಂಘ ಪರಿವಾರದ ಕಾರ್ಯಕರ್ತರು ಹೇಳುತ್ತಾರೆ.


ಲಾಕ್‍ಡೌನ್ ಕಾರಣದಿಂದಾಗಿ ಶಾಲೆಗಳು ಮುಚ್ಚಲ್ಪಟ್ಟಿದ್ದರಿಂದ, ಮಕ್ಕಳು ದೈಹಿಕ ಚಟುವಟಿಕೆಯಿಂದ ವಂಚಿತರಾಗಿದ್ದರು. ಈ ಸಂದರ್ಭದಲ್ಲಿ ಮಕ್ಕಳ ಚಟುವಟಿಕೆ ಮತ್ತು ಬೆರೆಯುವಿಕೆಯನ್ನು ಹೆಚ್ಚಿಸುವ ಸಲುವಾಗಿ ಶಾಖೆಗಳು ಮಧ್ಯಪ್ರವೇಶಿಸಿದವು. ಮಕ್ಕಳು ಕೇವಲ ಗೆಳೆಯರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಬಯಸುತ್ತಾರೆ ಎಂದು ಕಾರ್ಯಕರ್ತರು ಹೇಳುತ್ತಾರೆ.


ಇದನ್ನೂ ಓದಿ: ಅಪರಿಚಿತನ ಜೊತೆ ಮಾತನಾಡಿದ್ದೆ ತಪ್ಪಾಯ್ತಾ? ಮಹಿಳೆಯನ್ನ ಮರಕ್ಕೆ ಕಟ್ಟಿ ಥಳಿಸಿ ಕೌರ್ಯ

ಆದಾಗ್ಯೂ, ಉತ್ತರ ಕರ್ನಾಟಕದಲ್ಲಿ ಶಾಖೆಗಳ ಸಂಖ್ಯೆ 1,108 ರಿಂದ 1,363 ಕ್ಕೆ ಹೆಚ್ಚಿದ್ದರೆ, ದಕ್ಷಿಣ ಪ್ರಾಂತದಲ್ಲಿ (ದಕ್ಷಿಣ ಮತ್ತು ಮಧ್ಯ ಕರ್ನಾಟಕ) 2019ರಲ್ಲಿ 3,296 ರಿಂದ 2021ರಲ್ಲಿ 3,255ಕ್ಕೆ ಇಳಿದಿದೆ. ಆದರೆ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಕಾರ್ಯಕರ್ತರು ತಿಳಿಸುತ್ತಾರೆ.


ಕೊರೋನಾದ ಸಮಯದಲ್ಲಿ ಆರ್​ಎಸ್‍ಎಸ್ ಶಾಖೆಗಳಲ್ಲಿ ದಾಖಲೆಯ ರೀತಿಯಲ್ಲಿ ವಿವಿಧ ಶಾಖೆಗಳಲ್ಲಿ ಮಕ್ಕಳು ಸೇರಿಕೊಂಡಿದ್ದಾರೆ ಎಂದು ಬೆಳಗಾವಿಯ ಸ್ಥಳೀಯ ಆರ್​ಎಸ್‍ಎಸ್ ಕಾರ್ಯಕರ್ತ ರಾಘವೇಂದ್ರ ಕಾಗವಾಡ ಹೇಳಿದರು. "ಮಕ್ಕಳ ಈ ಬೇಡಿಕೆಯನ್ನು ಪೂರೈಸುವ ಸಲುವಾಗಿ ನಾವು ಇನ್ನೂ ಹೆಚ್ಚಿನದಾಗಿ 50 ಶಾಖೆಗಳನ್ನು ಆರಂಭಿಸಿದ್ದೇವೆ. ಇದರಲ್ಲಿ 33 ದೈನಂದಿನ ಶಾಖೆಗಳಾಗಿದ್ದು, 18 ಸಾಪ್ತಾಹಿಕ ಶಾಖೆಗಳು" ಎಂದು ಅವರು ಹೇಳಿದರು.


ಕೊರೋನಾ ಮೊದಲು, ಸಂಜೆಯ ವೇಳೆಗೆ ಶಾಖೆಗಳಲ್ಲಿ ಸುಮಾರು 10-12 ಮಕ್ಕಳ ಹಾಜರಾತಿ ಇರುತ್ತಿತ್ತು. ಆದರೆ ಈಗ ಅದು 25 ರಿಂದ 30 ಕ್ಕೆ ಏರಿದೆ ಎಂದು ಕಾಗವಾಡ ಹೇಳಿದರು. ಬೇಡಿಕೆ ಹೆಚ್ಚಿರುವ ಸ್ಥಳಗಳಲ್ಲಿ ಮತ್ತು ಜನಸಾಮಾನ್ಯರನ್ನು ತಲುಪಲು ಸ್ಥಳೀಯ ಘಟಕಗಳು ಹೊಸ ಶಾಖೆಗಳನ್ನು ರಚಿಸಿವೆ.


ಉತ್ತರ ಕರ್ನಾಟಕದಲ್ಲಿ 'ಸುಬೋಧಾ' ಬ್ಯಾನರ್ ಅಡಿಯಲ್ಲಿ, ಸಂಘವು ಮಕ್ಕಳಿಗೆ ಉಚಿತ ಬೋಧನೆಯನ್ನು ಒದಗಿಸುತ್ತದೆ, ಇದು ದೊಡ್ಡ ಆಕರ್ಷಣೆಯಾಗಿದೆ. ಬೆಂಗಳೂರಿನಲ್ಲಿ, ಬಾಲ ಭಾರತಿ ಕಾರ್ಯಕ್ರಮಕ್ಕೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.


ದಕ್ಷಿಣ ಕನ್ನಡದಲ್ಲಿ, ಕಲ್ಲಡ್ಕ ಪ್ರಭಾಕರ್ ಭಟ್, ದಕ್ಷಿಣ ಕ್ಷೇತ್ರಿಯ ಕಾರ್ಯಕಾರಿಣಿ ಸದಾಶಿಯವರು, ಹೊಸದಾಗಿ ತೆರೆದಿರುವ ಶಾಖೆಗಳಲ್ಲಿಯೂ ಸಹ, ಮಕ್ಕಳ ಸಂಖ್ಯೆಯಲ್ಲಿಯೂ ಏರಿಕೆ ಕಂಡಿದ್ದು, ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು. ಕರ್ನಾಟಕ ಉತ್ತರ ಪ್ರಾಂತ ಪ್ರಚಾರಕರ ಸಿಆರ್ ನರೇಂದ್ರನ್, ಪರಿವಾರ ನೀಡುವ ವಿವಿಧ ವಿಭಿನ್ನವಾದ ಚಟುವಟಿಕೆಗಳಿಂದ ಮಕ್ಕಳು ಸಂಜೆ ಮನೆಗೆ ಹೋಗಲು ಹಿಂಜರಿಯುತ್ತಾರೆ. ಎರಡೂ ಲಾಕ್‍ಡೌನ್‍ಗಳ ಸಮಯದಲ್ಲಿ, ಕಾಲೇಜುಗಳಲ್ಲಿ ಓದುತ್ತಿರುವ ನಮ್ಮ ಕಾರ್ಯಕರ್ತರಿಗೆ ಸುಬೋಧಾ ಹೆಸರಿನಲ್ಲಿ ತಮ್ಮ ಪ್ರದೇಶದಲ್ಲಿನ ಮಕ್ಕಳಿಗೆ ಟ್ಯೂಷನ್ ತೆಗೆದುಕೊಳ್ಳುವಂತೆ ಸಲಹೆ ನೀಡಿದೆವು. ಗಣಿತ, ಭೌತಶಾಸ್ತ್ರ ಮತ್ತು ಇತರ ವಿಷಯಗಳಲ್ಲದೆ, ಅವರು ನೈತಿಕ ಶಿಕ್ಷಣವನ್ನೂ ನೀಡಿದರು ಎಂದು ಹೇಳಿದರು.


ಉಡುಪಿ, ರಾಯಚೂರು, ಉತ್ತರ ಕನ್ನಡ ಮತ್ತು ಕಲಬುರಗಿಯಲ್ಲೂ ಮಕ್ಕಳ ಸೇರ್ಪಡೆ ಹೆಚ್ಚಾಗಿದೆ ಎಂದು ಆರ್​ಎಸ್‍ಎಸ್ ಮೂಲಗಳು ತಿಳಿಸಿವೆ. ಸಾಂಕ್ರಾಮಿಕ ಸಮಯದಲ್ಲಿ ಅಪಾರ ಸಾಮಾಜಿಕ ಕಾರ್ಯದಿಂದಾಗಿ, ಜನರು ಆರ್​ಎಸ್‍ಎಸ್‍ಗೆ ಸೇರಲು ಉತ್ಸುಕರಾಗಿದ್ದಾರೆ ಎಂದು ಆರ್​ ಎಸ್‍ಎಸ್ ಅಧಿಕಾರಿಗಳು ಹೇಳಿದರು.


ಇದನ್ನೂ ಓದಿ: ಟಿಎಂಸಿ ಕಾರ್ಯಕರ್ತರು ನನ್ನನ್ನು ಕೊಲ್ಲಲು ಬಂದರು, ಬಿಜೆಪಿಯ ದಿಲೀಪ್ ಘೋಷ್ ಗಂಭೀರ ಆರೋಪ

ಲಾಕ್‍ಡೌನ್ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ, ಶಾಖೆಗಳು ಉಚಿತ ಬೋಧನೆ ಮತ್ತು ಕ್ರೀಡೆಗಳಿಗೆ ಆಸ್ಪದ ಕೊಟ್ಟಿದ್ದು ಸಂಖ್ಯೆಯಲ್ಲಿ ಹೆಚ್ಚಳವಾಗಲು ಪ್ರಮುಖ ಕಾರಣವಾಗಿದೆ ಎಂದು ಆರ್​ಎಸ್‍ಎಸ್ ಅಧಿಕಾರಿಗಳು ಹೇಳುತ್ತಾರೆ.Published by:Sandhya M
First published: