ಆರೆಸ್ಸೆಸ್ ಎಲ್ಲಾ ಕಡೆ ತನ್ನವರನ್ನು ಪ್ಲಾಂಟ್ ಮಾಡಿದೆ: ರಾಹುಲ್ ಗಾಂಧಿ ಆರೋಪ


Updated:February 13, 2018, 3:44 PM IST
ಆರೆಸ್ಸೆಸ್ ಎಲ್ಲಾ ಕಡೆ ತನ್ನವರನ್ನು ಪ್ಲಾಂಟ್ ಮಾಡಿದೆ: ರಾಹುಲ್ ಗಾಂಧಿ ಆರೋಪ

Updated: February 13, 2018, 3:44 PM IST
- ನ್ಯೂಸ್18 ಕನ್ನಡ

ಕಲಬುರ್ಗಿ(ಫೆ. 13): ಆರೆಸ್ಸೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ರಾಹುಲ್ ಗಾಂಧಿ ಈಗ ಇನ್ನೊಂದು ಗಂಭೀರ ಆರೋಪ ಮಾಡಿದ್ದಾರೆ. ಆರೆಸ್ಸೆಸ್​ನವರು ಎಲ್ಲಾ ಕಡೆಯಲ್ಲೂ ತನ್ನವರನ್ನೇ ಪ್ಲಾಂಟ್ ಮಾಡಿದೆ ಎಂದು ರಾಹುಲ್ ಕಿಡಿಕಾರಿದ್ದಾರೆ. ಕೇಂದ್ರದ ಎಲ್ಲಾ ಸಚಿವಾಲಯಗಳಲ್ಲಿ ಓಎಸ್​ಡಿ(Officer on Special  Duty)ಗಳೆಲ್ಲರೂ ಆರೆಸ್ಸೆಸ್​ನವರೇ. ನೀತಿ ಆಯೋಗದಲ್ಲೂ ಅವರು ತುಂಬಿಕೊಂಡಿದ್ದಾರೆ. ಕೇಂದ್ರ ಸರಕಾರದ ಮೂಲಕ ಆರೆಸ್ಸೆಸ್ ಸಿದ್ಧಾಂತವನ್ನು ಜಾರಿಗೆ ತರುವ ಕೆಲಸ ಮಾಡುತ್ತಿದ್ದಾರೆ. ನೋಟ್ ಬ್ಯಾನ್ ನಿರ್ಧಾರವು ಆರ್​ಬಿಐನದ್ದಲ್ಲ, ಆರೆಸ್ಸೆಸ್​ನವರ ತೀರ್ಮಾನ ಎಂದು ರಾಹುಲ್ ಗಾಂಧಿ ಆಪಾದಿಸಿದ್ದಾರೆ.

ವೃತ್ತಿಪರರು ಹಾಗೂ ಉದ್ಯಮಿಗಳೊಂದಿಗಿನ ಸಂವಾದ ಕಾರ್ಯಕ್ರಮದ ವೇಳೆ ರಾಹುಲ್ ಗಾಂಧಿ ಮಾತನಾಡುತ್ತಿದ್ದರು.

ಹಣಕಾಸು ಸಚಿವ ಅರುಣ್ ಜೇಟ್ಲಿಯವರನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, ಸಣ್ಣ ಉದ್ಯಮಿಗಳನ್ನು ಜೇಟ್ಲಿ ಕಡೆಗಣಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಾನತೆಯ ಸಮಾಜದಲ್ಲಿ ದೊಡ್ಡ ಉದ್ಯಮಿಯಾಗಲೀ, ಸಣ್ಣ ಉದ್ಯಮಿಯಾಗಲೀ ಹಣಕಾಸು ಸಚಿವರ ಕಚೇರಿಗೆ ಹೋಗುವ ಅವಕಾಶವಿರಬೇಕು. ಆದರೆ, ಅರುಣ್ ಜೇಟ್ಲಿಯ ಕಚೇರಿಗೆ ಸಣ್ಣ ಉದ್ಯಮಿಗಳಿಗೆ ಹೋಗಲು ಅವಕಾಶವೇ ಇಲ್ಲ ಎಂದು ರಾಹುಲ್ ಗಾಂಧಿ ಆಪಾದಿಸಿದ್ದಾರೆ.

ರಾಜಕೀಯದಲ್ಲಿ ಹೆಚ್ಚೆಚ್ಚು ಮಹಿಳೆಯರನ್ನು ನೋಡಲು ಬಯಸುತ್ತೇನೆ. ಮಹಿಳಾ ಮುಖ್ಯಮಂತ್ರಿಗಳು, ಸಚಿವರು ಹೆಚ್ಚು ಸಂಖ್ಯೆಯಲ್ಲಿರುವುದನ್ನು ನೋಡುವುದು ನನ್ನ ಆಸೆ ಎಂದು ರಾಹುಲ್ ಗಾಂಧಿ ಈ ವೇಳೆ ಹೇಳಿದ್ದಾರೆ.

ಇದೇ ವೇಳೆ, ಜವಾರಿ ಕೋಳಿ ತಿಂದು ಹಿಂದೂ ದೇವಸ್ಥಾನಕ್ಕೆ ಹೋದ ಆಪಾದನೆಯನ್ನು ರಾಹುಲ್ ಗಾಂಧಿ ತಳ್ಳಿಹಾಕಿದ್ದಾರೆ. ನಾನು ಚಿಕನ್ ತಿಂದು ದೇವಸ್ಥಾನಕ್ಕೆ ಹೋಗಿಲ್ಲ. ಚುನಾವನಾ ದೃಷ್ಟಿಯಿಂದ ಈ ಆರೋಪ ಮಾಡುತ್ತಿದ್ದಾರೆ ಎಂದವರು ತಿಳಿಸಿದ್ದಾರೆ.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮೊದಲಾದವರೂ ಕೂಡ ಬಿಜೆಪಿಯ ಆರೋಪವನ್ನು ನಿರಾಕರಿಸಿದ್ದಾರೆ. ತಾವು ಚಿಕನ್ ತಿಂದು ದೇವಸ್ಥಾನಕ್ಕೆ ಹೋಗಿದ್ದನ್ನು ನೋಡಿದ್ದಾರಾ ಎಂದು ಬಿಜೆಪಿಯವರನ್ನು ಪ್ರಶ್ನಿಸಿದ್ದಾರೆ.
Loading...

ಇವತ್ತು ರಾಹುಲ್ ಗಾಂಧಿಯವರ ಹೈ-ಕ ಭಾಗದ ಪ್ರವಾಸದ 4ನೇ ಮತ್ತು ಕೊನೆಯ ದಿನವಾಗಿದೆ. ಬೀದರ್​ನ ಅನುಭವ ಮಂಟಪಕ್ಕೆ ಭೇಟಿಕೊಟ್ಟು ತಮ್ಮ ಪ್ರವಾಸ ಅಂತ್ಯಗೊಳಿಸಿದ್ದಾರೆ.
First published:February 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ