ಮಧ್ಯರಾತ್ರಿ ಸಿಎಂ ಬಿಎಸ್​ವೈ ಭೇಟಿ ಮಾಡಿದ ರೋಷನ್ ಬೇಗ್; ತ್ರಿಶಂಕು ಸ್ಥಿತಿಯಲ್ಲಿ ಅನರ್ಹ ಶಾಸಕ

ಭೇಟಿ ವೇಳೇ ರೋಷನ್​ ಬೇಗ್​ಗೆ ಸಿಎಂ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ. ಅಲ್ಲದೆ, ತಾವು ಪಕ್ಷೇತರನಾಗಿ ನಿಂತರೆ ಬಿಜೆಪಿ ಬೆಂಬಲ ಸಿಗಬಹುದೇ ಎನ್ನುವ ಬಗ್ಗೆಯೂ ಬೇಗ್​ ಚರ್ಚೆ ನಡೆಸಿದ್ದಾರೆ ಎನ್ನುವುದು ಮೂಲಗಳ ಮಾಹಿತಿ.

Rajesh Duggumane | news18-kannada
Updated:November 14, 2019, 11:54 AM IST
ಮಧ್ಯರಾತ್ರಿ ಸಿಎಂ ಬಿಎಸ್​ವೈ ಭೇಟಿ ಮಾಡಿದ ರೋಷನ್ ಬೇಗ್; ತ್ರಿಶಂಕು ಸ್ಥಿತಿಯಲ್ಲಿ ಅನರ್ಹ ಶಾಸಕ
ರೋಷನ್​​ ಬೇಗ್​
  • Share this:
ಬೆಂಗಳೂರು (ನ.14): ಅನರ್ಹ ಶಾಸಕರಿಗೆ ಉಪ ಚುನಾವಣೆಗೆ ನಿಲ್ಲಲು ಸುಪ್ರೀಂಕೋರ್ಟ್​​ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ 17ಅನರ್ಹ ಶಾಸಕರ ಪೈಕಿ 16 ಅನರ್ಹ ಶಾಸಕರು ಇಂದು ಬಿಜೆಪಿ ಸೇರ್ಪಡೆಯಾಗುತ್ತಿದ್ದು, ಪಟ್ಟಿಯಿಂದ ರೋಷನ್​ ಬೇಗ್​ ಹೆಸರನ್ನು ಬಿಜೆಪಿ ಕೈ ಬಿಟ್ಟಿದೆ. ಈ ವಿಚಾರವಾಗಿ ಅವರು ಮಧ್ಯರಾತ್ರಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಸುಪ್ರೀಂ ತೀರ್ಪಿನ ಆಧಾರದ ಮೇಲೆ ಅನರ್ಹ ಶಾಸಕರ ಭವಿಷ್ಯ ನಿಂತಿತ್ತು. ಈ ನಡುವೆ ಸುಪ್ರೀಂಕೋರ್ಟ್​ ಅನರ್ಹರು ಚುನಾವಣೆಗೆ ಸ್ಪರ್ಧಿಸಬಹುದು ಎಂದು ಹೇಳಿತ್ತು. ಸುಪ್ರೀಂ ತೀರ್ಪನ್ನು ಸ್ವಾಗತಿಸಿದ್ದ ಅನರ್ಹ ಶಾಸಕರು ಬಿಜೆಪಿ ಸೇರುವುದಾಗಿ ಹೇಳಿದ್ದರು. ಅಂತೆಯೇ ಇಂದು ಬೆಳಗ್ಗೆ 10.30ಕ್ಕೆ ಬಿಜೆಪಿ ಕಚೇರಿಯಲ್ಲಿ 16 ಮಂದಿ ಅನರ್ಹರು ಅಧಿಕೃತವಾಗಿ ಕಮಲ ಪಾಳಯ ಸೇರಲಿದ್ದಾರೆ. ಆದರೆ, ಈ ಪಟ್ಟಿಯಲ್ಲಿ ರೋಷನ್​ ಹೆಸರು ಇರದ ಹಿನ್ನಲೆಯಲ್ಲಿ ಅವರು​ ಸಿಎಂ ಭೇಟಿ ಮಾಡಿದ್ದಾರೆ.

ಭೇಟಿ ವೇಳೇ ರೋಷನ್​ ಬೇಗ್​ಗೆ ಸಿಎಂ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ. ಅಲ್ಲದೆ, ತಾವು ಪಕ್ಷೇತರನಾಗಿ ನಿಂತರೆ ಬಿಜೆಪಿ ಬೆಂಬಲ ಸಿಗಬಹುದೇ ಎನ್ನುವ ಬಗ್ಗೆಯೂ ಬೇಗ್​ ಚರ್ಚೆ ನಡೆಸಿದ್ದಾರೆ ಎನ್ನುವುದು ಮೂಲಗಳ ಮಾಹಿತಿ.

ಇದನ್ನೂ ಓದಿ: ಇಂದು ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ 16 ಮಂದಿ ಅನರ್ಹ ಶಾಸಕರು

ಪಟ್ಟಿಯಿಂದ ಕೈ ಬಿಟ್ಟಿದ್ದೇಕೆ?:

ಕೆಲ ಹಿಂದುಗಳ ಹತ್ಯೆ ಪ್ರಕರಣದಲ್ಲಿ ರೋಷನ್​ ಬೇಗ್​ ವಿರೋಧಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ರೋಷನ್​ ಬೇಗ್​ ಸೇರ್ಪಡೆಗೆ ಆರ್​ಎಸ್​ಎಸ್​ ಮೊದಲಿನಿಂದಲೂ ತೀವ್ರ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಇನ್ನು ಐಎಂಎ ಹಗರಣದಲ್ಲಿ ರೋಷನ್​ ಬೇಗ್​ ಹೆಸರು ತಳುಕು ಹಾಕಿಕೊಂಡಿದೆ. ಒಂದೊಮ್ಮೆ ಕಳಂಕಿತರನ್ನು ಸೇರ್ಪಡೆ ಮಾಡಿಕೊಂಡರೆ ಪಕ್ಷಕ್ಕೆ ಕೆಟ್ಟ ಹೆಸರು ಎನ್ನುವುದು ಹಿರಿಯ ನಾಯಕರ ಲೆಕ್ಕಾಚಾರ. ಹೀಗಾಗಿ ಆರ್​ಎಸ್​ಎಸ್​ ಹಾಗೂ ಹೈಕಮಾಂಡ್​ ರೋಷನ್​ ಬೇಗ್​ಗೆ ಬಿಜೆಪಿ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ತ್ರಿಶಂಕು ಸ್ಥಿತಿಯಲ್ಲಿ ರೋಷನ್​:ಬಿಜೆಪಿಯಿಂದ ಟಿಕೆಟ್​ ಸಿಗಲಿದೆ ಎನ್ನುವ ಕಾರಣಕ್ಕೆ ರೆಬೆಲ್​ ಬಣ ಸೇರಿದ್ದ ರೋಷನ್​, ಶಿವಾಜಿ ನಗರದಿಂದ ಬಿಜೆಪಿ ಟಿಕೆಟ್​ ಸಿಗಲಿದೆ ಎಂದುಕೊಂಡಿದ್ದರು. ಆದರೆ, ಈಗ ಬಿಜೆಪಿ ರೋಷನ್​ ಬೇಗ್​ ಅವರನ್ನು ಕೈಬಿಟ್ಟಿದೆ. ಹೀಗಾಗಿ ಮತ್ತೆ ಕಾಂಗ್ರೆಸ್​​ಗೂ ಮರಳಲಾಗದೆ, ಬಿಜೆಪಿಗೂ ಸೇರಲಾಗದೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ.

(ವರದಿ: ಗಂಗಾಧರ್​)

First published:November 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ