RSS: ಧಾರವಾಡದಲ್ಲಿ ನಾಳೆಯಿಂದ ಆರ್​ಎಸ್​ಎಸ್​ ಸಭೆ​​; ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ, ಬೆಲೆ ಏರಿಕೆ ಕುರಿತು ಚರ್ಚೆ

ಸಭೆಯಲ್ಲಿ ಹಲವಾರು ಕಾರ್ಯಕರ್ತರಿಗೆ ಭದ್ರತೆ ಒದಗಿಸಿರುವುದರಿಂದ ಸ್ಥಳದ ಸುತ್ತಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಝಡ್ ಕೆಟಗರಿ ಭದ್ರತೆ ಒದಗಿಸಲಾಗಿದೆ

ಮೋಹನ್ ಭಾಗವತ್

ಮೋಹನ್ ಭಾಗವತ್

 • Share this:
  ವದೆಹಲಿ (ಅ.27): ನಾಳೆಯಿಂದ ಮೂರು ದಿನಗಳ ಕಾಲ ಅಂದರೆ ಅ. 28, 29 ಮತ್ತು 30 ರಂದು ರಾಷ್ಟ್ರೀಯ ಸ್ವಯಂ ಸೇವ ಸಂಘದ (Rashtriya Swayamsevak Sangh) ಅಖಿಲ ಭಾರತ ಕಾರ್ಯಕಾರಿ ಮಂಡಳಿ ಬೈಠಕ್​ ನಡೆಯಲಿದೆ. ಧಾರವಾಡದ ಧಾರವಾಡದ ರಾಷ್ಟ್ರೋತ್ಥಾನ ಶಾಲೆಯಲ್ಲಿ ಈ ಬೈಠಕ್​ ನಡೆಯಲಿದ್ದು, ಆರ್​ಎಸ್​ಎಸ್​ನ ಮುಖ್ಯಸ್ಥ ಮೋಹನ್​ ಭಾಗವತ್ (RSS chief Mohan Bhagwat )​ ಮತ್ತು ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ (Dattatreya Hosabale), ಬಿಜೆಪಿ ಮುಖ್ಯ ಕಾರ್ಯದರ್ಶಿ ಬಿಎಲ್​ ಸಂತೋಷ್ (​​BL Santosh) ಸೇರಿದಂತೆ 356ಕ್ಕೂ ಹೆಚ್ಚು ಕಾರ್ಯಕರ್ತರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಕೋವಿಡ್​ನಿಂದಾಗಿ ಕಳೆದೆರಡು ವರ್ಷಗಳಿಂದ ಯಾವುದೇ ರಾಷ್ಟ್ರೀಯ ಕಾರ್ಯಕಾರಿಣಿ ನಡೆಸದ ಎಸ್​​ಎಸ್​ಎಸ್​ ನಾಳೆ ಸಭೆಗೆ ಮುಂದಾಗಿದೆ. ಸಭೆಯಲ್ಲಿ ಸಂಘದ ಮುಂದಿನ ಯೋಜನೆ ಜೊತೆಗೆ ಅನೇಕ ಪ್ರಮುಖ ವಿಚಾರ ಪ್ರಸ್ತಾಪಗೊಳ್ಳಲಿದೆ.

  ಹೀಗಿದೆ ಪ್ರಮುಖ ಮಾರ್ಗ ಸೂಚಿ
  ಕಾರ್ಯ ಕಾರಿಣಿಯಲ್ಲಿ ಪ್ರಮುಖವಾಗಿದೆ ಬಾಂಗ್ಲಾದೇಶದಲ್ಲಿ ದಾಳಿಗೊಳಗಾದ ಹಿಂದೂಗಳ ಕುರಿತ ನಿರ್ಣಯ, ಇಂಧನ ಬೆಲೆ ಏರಿಕೆ ಕುರಿತ ಚರ್ಚೆ ಮತ್ತು ಐದು ರಾಜ್ಯಗಳ ಚುನಾವಣೆಗೆ ಮುನ್ನ ಕಾರ್ಯತಂತ್ರದ ಕುರಿತು ಚರ್ಚೆ ನಡೆಯಲಿದೆ. ಸಭೆಯ ಕೊನೆಯಲ್ಲಿ ಬಾಂಗ್ಲಾದೇಶದಲ್ಲಿ ದಾಳಿಗೆ ಒಳಗಾಗಿರುವ ಹಿಂದೂಗಳ ಕುರಿತು ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಆರ್‌ಎಸ್‌ಎಸ್ ಪ್ರತಿನಿಧಿಗಳು ತಿಳಿಸಿದ್ದಾರೆ.
  ದುರ್ಗಾ ಪೂಜೆ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆದ ಹಲ್ಲೆಯನ್ನು ಆರ್​ಎಸ್​ಎಸ್​ ನಾಯಕರು ಸೇರಿದಂತೆ ಅನೇಕ ಬಿಜೆಪಿ ನಾಯಕರು ಕೂಡ ಟೀಕಿಸಿದ್ದರು.

  ಇಂಧನ ಬೆಲೆ ಏರಿಕೆ ಕುರಿತು ಚರ್ಚೆ
  ನಿರಂತರವಾಗಿ ಪೆಟ್ರೋಲ್​, ಡಿಸೇಲ್​ ಮತ್ತು ಅಡುಗೆ ಸಿಲಿಂಡರ್​ ಬೆಲೆ ಏರಿಕೆಯಾಗುತ್ತಿರುವ ಹಿನ್ನಲೆ ಈ ಸಂಬಂಧ ಕೂಡ ಚರ್ಚೆ ನಡೆಯುವ ಸಾಧ್ಯತೆ ಇದೆ. ಜನ ಸಾಮಾನ್ಯರ ಹಿತಾಸಕ್ತಿ ಕೂಡ ಸಂಘಟಕ್ಕೆ ಮುಖ್ಯವಾಗಿರುವ ಹಿನ್ನಲೆ ಸರ್ಕಾರದ ಆದಾಯ ಉತ್ಪಾದನೆ ಮತ್ತು ಜನರ ಹಿತಾಸಕ್ತಿ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ಮುಖ್ಯ ಎಂದು ಸಂಸ್ಥೆಯು ಭಾವಿಸುತ್ತದೆ. ಬೆಲೆ ಏರಿಕೆಯನ್ನು ತಡೆಯಲು ಉತ್ತಮ ಸಂವಹನ ಮತ್ತು ಉತ್ತಮ ಪರಿಹಾರಗಳನ್ನು ಆರ್‌ಎಸ್‌ಎಸ್ ಸರ್ಕಾರಕ್ಕೆ ಸೂಚಿಸುವ ಸಾಧ್ಯತೆಯಿದೆ.

  ಇದನ್ನು ಓದಿ: ತಮಿಳುನಾಡಿನ ಪಟಾಕಿ ಮಳಿಗೆಯಲ್ಲಿ ಅಗ್ನಿ ದುರಂತ; 5 ಮಂದಿ ಸಾವು, 25 ಮಂದಿಗೆ ಗಾಯ

  ಚುನಾವಣೆ ಕುರಿತು ರೂಪು ರೇಷ
  ಮುಂದಿನ ವರ್ಷ ಹಲವು ರಾಜ್ಯಗಳಲ್ಲಿ ನಡೆಯುವ ಚುನಾವಣೆಗಳ ಬಗ್ಗೆ ಈ ಕುರಿತು ನಡೆಸಬೇಕಾದ ಮೌಲ್ಯ ಮಾಪನದ ಬಗ್ಗೆ ಚರ್ಚೆಯಾಗಲಿದೆ.

  ಇದರ ಹೊರತಾಗಿ 75ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮಗಳ ಕಾರ್ಯಸೂಚಿ, ಸ್ವದೇಶಿ ಉತ್ಪನ್ನಗಳನ್ನು ಪ್ರಚಾರ ಮಾಡುವುದು.  ಕೋವಿಡ್​ ಸಂಬಂಧಿತ ಪರಿಹಾರ ಕುರಿತು ಕೂಡ ಪ್ರಸ್ತಾಪವಾಗಲಿದೆ. ಇನ್ನು ಸಂಘ ಸ್ಥಾಪನೆಯಾಗಿ 100 ವರ್ಷ ಆದ ಹಿನ್ನಲೆ ಶತಮಾನೋತ್ಸವ ಸಮಾರಂಭ ನಡೆಸುವ ಚರ್ಚೆ ನಡೆಯಲಿದೆ. 1925ರಲ್ಲಿ ಸ್ಥಾಪನೆಯಾದ ಸಂಘ 100 ವರ್ಷ ಪೂರೈಸುತ್ತಿದ್ದು, ಇನ್ನು ಮೂರು ವರ್ಷದಲ್ಲಿ ಇದರ ಆಚರಣೆಗೆ ಯಾವ ರೀತಿ ಕಾರ್ಯಕ್ರಮ ರೂಪಿಸಬಹುದು ಎಂದು ಚರ್ಚೆಯಾಗಲಿದೆ.

  ಇದನ್ನು ಓದಿ: ಪಾಕ್ ವಿರುದ್ಧ ಭಾರತಕ್ಕೆ ಸೋಲು; ಸಂಭ್ರಮಾಚರಣೆ ಮಾಡಿದ ಶಿಕ್ಷಕಿ ಅಮಾನತು!

  ಕೋವಿಡ್​ ಸಾಂಕ್ರಾಮಿಕ ಸಮಯದಲ್ಲಿ  ಸುಮಾರು 10 ಲಕ್ಷ ಸ್ವಯಂಸೇವಕರು ಪರಿಹಾರ ಕಾರ್ಯವನ್ನು ಕೈಗೊಂಡಿದ್ದಾರೆ.  ಮತ್ತೊಂದು ಅಲೆಯ ಸಂದರ್ಭದಲ್ಲಿ ಬಿಕ್ಕಟ್ಟನ್ನು ನಿಭಾಯಿಸಲು ಸ್ವಯಂಸೇವಕರಿಗೆ ಹೆಚ್ಚಿನ ತರಬೇತಿಯನ್ನು ಸಹ ನೀಡಲಾಗುವುದು ಎಂದು ಕೂಡ ಸಂಘ ತಿಳಿಸಿದೆ.

  ಸಭೆಯಲ್ಲಿ ಹಲವಾರು ಕಾರ್ಯಕರ್ತರಿಗೆ ಭದ್ರತೆ ಒದಗಿಸಿರುವುದರಿಂದ ಸ್ಥಳದ ಸುತ್ತಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಝಡ್ ಕೆಟಗರಿ ಭದ್ರತೆ ಒದಗಿಸಲಾಗಿದೆ. ಈ ಸಭೆಯಲ್ಲಿ ಯಾವುದೇ ಕೇಂದ್ರ ಮತ್ತು ರಾಜ್ಯ ಸಚಿವರುಗಳು ಭಾಗಿಯಾಗುವುದಿಲ್ಲ.
  Published by:Seema R
  First published: