ಬೆಂಗಳೂರು (ದಕ್ಷಿಣ): ಬೆಂಗಳೂರು ದಕ್ಷಿಣದ ಚೆನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ಆರ್.ಎಸ್.ಎಸ್‌ನ ಸಭೆ ನಡೆಯಿತು. ಅಖಿಲ ಭಾರತೀಯ ಪರಿಷತ್ ಸಭೆಯನ್ನ ಮುಖಂಡ ಮೋಹನ್ ಭಾಗವತ್ ರವರು ಉದ್ಘಾಟನೆ ಮಾಡಿದರು. ವೇದಿಕೆಯಲ್ಲಿ ಸುರೇಶ್ ಭಯ್ಯಜೋಷಿ ಸಹ ಉಪಸ್ಥಿತಿ ಇದ್ದರು. ಪ್ರತಿವರ್ಷವೂ ನಡೆಯುತ್ತಿದ್ದ ಬೈಠಕ್ ಈ ಬಾರಿ ಸರಳವಾಗಿ ಆಯೋಜನೆ ಮಾಡಲಾಗಿದೆ. ಕಳೆದ ಬಾರಿಯೂ ಸಹ ಕೊರೋನಾಯಿಂದಾಗಿ ಸಭೆಯನ್ನ ಸ್ಥಗಿತ ಮಾಡಲಾಗಿತ್ತು. ಆದರೆ ಈ ಬಾರಿ ಎರಡನೇ ಅಲೆಯಿರುವ ಕಾರಣದಿಂದ 450 ಜನರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಸಭೆಯಲ್ಲಿ ಸಾಮಾಜಿಕ ಅಂತರದೊಂದಿಗೆ ಪ್ರತಿಯೊಬ್ಬರು ಸಹ ಮಾಸ್ಕ್ ಧರಿಸಿ ಸಭೆಗೆ ಹಾಜರಾಗಿದ್ದಾರೆ. ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೋಹನ್ ಭಾಗವತ್ ಸಭೆ ಉದ್ಘಾಟನೆ ಮಾಡಿದರು.
ನಂತರ ಆರ್.ಎಸ್.ಎಸ್ ನ ಮುಖಂಡ ಮನಮೋಹನ್ ವೈದ್ಯ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಕಳೆದ ಮೂರು ವರ್ಷಗಳಿಂದ ಸಂಘದಲ್ಲಿ ನಡೆದಿರುವ ಕಾರ್ಯಚಟುವಟಿಕೆಗಳು, ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೊರೋನಾ ಸಂದರ್ಭದಲ್ಲಿ ದೇಶಾದ್ಯಂತ ನಮ್ಮ ಸಂಘದ ಕಾರ್ಯಕರ್ತರು 90 ಸಾವಿರಕ್ಕೂ ಹೆಚ್ಚು ಸ್ಥಾನಗಳಲ್ಲಿ ವಾರಿಯರ್ಸ್ಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ 70 ಲಕ್ಷಕ್ಕೂ ಹೆಚ್ಚಾಗಿ ಫುಡ್ ಪ್ಯಾಕೇಟ್‌ಗಳನ್ನ ಅಗತ್ಯವಿರುವ ಜನರಿಗೆ ಹಂಚಿಕೆ ಮಾಡಲಾಗಿದೆ. 60 ಸಾವಿರಕ್ಕೂ ಹೆಚ್ಚು ರಕ್ತನಿಧಿಯನ್ನ ಸಂಗ್ರಹ ಮಾಡಲಾಗಿದೆ. ದೇಶದಲ್ಲಿ ಕೊರೋನಾ ಇದ್ದ ಸಂದರ್ಭದಲ್ಲಿ ಆರ್.ಎಸ್.ಎಸ್‌ನ ಕಾರ್ಯಕರ್ತರು ತಮ್ಮ ಚಿಂತೆಯನ್ನು ಬಿಟ್ಟು ದೇಶದ ಜನರಿಗಾಗಿ ದುಡಿದ್ದಿದ್ದಾರೆಂದು ತಿಳಿಸಿದರು.
ಇದನ್ನು ಓದಿ: Siddaramaiah: ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವೈರಸ್ಗೆ ಲಸಿಕೆ ಎಲ್ಲಿದೆ?; ಸಿದ್ದರಾಮಯ್ಯ ಲೇವಡಿ
ದೇಶದ 33 ಸಾವಿರಕ್ಕೂ ಹೆಚ್ಚು ಸ್ಥಾನಗಳಲ್ಲಿ ನಮ್ಮ ಸಂಘದ 55 ಸಾವಿರಕ್ಕೂ ಹೆಚ್ಚು ಶಾಖೆಗಳಿದ್ದು, ಕೆಲಸ ಕಾರ್ಯ ನಡೆಯುತ್ತಿದೆ. ಇಡೀ ದೇಶದಲ್ಲಿ 7 ಸಾವಿರಕ್ಕೂ ಹೆಚ್ಚು ಮಂಡಳಿಗಳಿದ್ದು, ಆ ಮಂಡಳಿಯವರು ಪ್ರತಿತಿಂಗಳು ಸಹ ಸಾಮಾಜಿಕ ಸಭೆಗಳನ್ನು ನಡೆಸುತ್ತಾರೆ. ಶೇ. 60 ಶಾಖೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳು, ಯುವಕರಿದ್ದಾರೆ, ಶೇ. 11 ರಷ್ಟು 40 ವರ್ಷ ಮೇಲ್ಪಟ್ಟ ಉದ್ಯೋಗಿಗಳು ಇದ್ದಾರೆ. ದೇಶದಲ್ಲಿ ಶೇ. 89 ರಷ್ಟು ಜನರು ಸಂಘಕ್ಕಾಗಿ ಕೆಲಸ ಮಾಡ್ತಿದ್ದಾರೆಂದು ತಿಳಿಸಿದರು. ಇದರ ಜೊತೆಗೆ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರದ ಬಗ್ಗೆ ದೇಶದ ಜನರು ಬಹಳ ಉತ್ಸುಕರಾಗಿದ್ದಾರೆ. ದೇಶಾದ್ಯಂತ ಲಕ್ಷಾಂತರ ಜನರು ದೇಣಿಗೆ ನೀಡಿದ್ದಾರೆ. ಈ ವಿಚಾರವಾಗಿ ಆರ್.ಎಸ್.ಎಸ್ ಕಾರ್ಯಕರ್ತರು ಬಹಳ ನಿಷ್ಠೆಯಿಂದ ಕೆಲಸ ಮಾಡ್ತಿದ್ದಾರೆಂದು ತಿಳಿಸಿದರು.
ವರದಿ : ಎ.ಟಿ.ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ