ಬಿಎಸ್​ ಯಡಿಯೂರಪ್ಪ ನಿಜವಾದ ಮಣ್ಣಿನ ಮಗ; ಕಲ್ಲಡ್ಕ ಪ್ರಭಾಕರ್​ ಭಟ್​ ಪ್ರಶಂಸೆ

ಬಿಎಸ್​ವೈ ಆಕಸ್ಮಿಕ ಅಥವಾ ಅವಕಾಶವಾದಿ ಮುಖ್ಯಮಂತ್ರಿಯಲ್ಲ, ಬದಲಿಗೆ ಸೊನ್ನೆಯಿಂದ ಅಧಿಕಾರದ ವರೆಗೂ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದಾರೆ. ರಾಜ್ಯದಲ್ಲಿ ಮಾದರಿ ಆಡಳಿತ ನೀಡುವುದಾಗಿ ಹೇಳಿದ್ದಾರೆ. ನಿಜದ ಅರ್ಥದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿಜವಾದ ಮಣ್ಣಿನ ಮಗ ಎಂದು ಕಲ್ಲಡ್ಕ ಪ್ರಭಾಕರ್​ ತಿಳಿಸಿದ್ದಾರೆ.

MAshok Kumar | news18-kannada
Updated:January 20, 2020, 11:40 AM IST
ಬಿಎಸ್​ ಯಡಿಯೂರಪ್ಪ ನಿಜವಾದ ಮಣ್ಣಿನ ಮಗ; ಕಲ್ಲಡ್ಕ ಪ್ರಭಾಕರ್​ ಭಟ್​ ಪ್ರಶಂಸೆ
ಕಲ್ಲಡ್ಕ ಪ್ರಭಾಕರ್ ಭಟ್
  • Share this:
ಚಿಕ್ಕಬಳ್ಳಾಪುರ (ಜನವರಿ 19); ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿಜವಾದ ಮಣ್ಣಿನ ಮಗ ಎಂದು ಹಿಂದೂ ಪರ ಹೋರಾಟಗಾರ ಕಲ್ಲಡ್ಕ ಪ್ರಭಾಕರ ಭಟ್​ ಪ್ರಶಂಸಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಇಂದು ಮಾತನಾಡಿರುವ ಕಲ್ಲಡ್ಕ ಪ್ರಭಾಕರ ಭಟ್​, "ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ ಹಾಗೂ ದೀನದಯಾಳ್ ಆಶಯದಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಯಾವುದೆ ಮುಖ್ಯಮಂತ್ರಿ ಮಾಡದ ಕೆಲಸವನ್ನು ಬಿ.ಎಸ್.ವೈ ಮಾಡ್ತಿದ್ದಾರೆ. ಇವರು ಯಡಿಯೂರಪ್ಪ ಏಕೈಕ ಜನಪರ ದಿನ ದಲಿತರ ಉದ್ದಾರಕ ಮುಖ್ಯಮಂತ್ರಿ" ಎಂದು ಹಾಡಿಹೊಗಳಿದ್ದಾರೆ.

"ಬಿಎಸ್​ವೈ ಆಕಸ್ಮಿಕ ಅಥವಾ ಅವಕಾಶವಾದಿ ಮುಖ್ಯಮಂತ್ರಿಯಲ್ಲ, ಬದಲಿಗೆ ಸೊನ್ನೆಯಿಂದ ಅಧಿಕಾರದ ವರೆಗೂ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದಾರೆ. ರಾಜ್ಯದಲ್ಲಿ ಮಾದರಿ ಆಡಳಿತ ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ, ಮೂರುವರೆ ವರ್ಷಗಳ ನಂತರವೂ ನಿಷ್ಠಾವಂತ ಬಿಜೆಪಿ ಕಾರ್ಯಕರ್ತನಾಗಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.  ನಿಜದ ಅರ್ಥದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿಜವಾದ ಮಣ್ಣಿನ ಮಗ" ಎಂದಿದ್ದಾರೆ.

ಇದನ್ನೂ ಓದಿ : ವಿದ್ಯಾರ್ಥಿಗಳಿಗೆ ಉಚಿತ ಬಸ್, ಯಮುನಾ ಸ್ವಚ್ಚ, ದೆಹಲಿ ಮಾಲಿನ್ಯ ನಿಯಂತ್ರಣ; 10 ಗ್ಯಾರಂಟಿ ಕಾರ್ಡ್​ ಬಿಡುಗಡೆ ಮಾಡಿದ ಆಪ್​

 
First published:January 19, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ