ಮಂಗಳೂರು ವಿವಿಯಲ್ಲಿ ಲಾಠಿ ಚಾರ್ಜ್; ಹಿಂದೂ ಧರ್ಮದ ಬಗ್ಗೆ ಮಾತನಾಡುವುದು ಕೋಮು ಪ್ರಚೋದನೆಯಾ: Kalladka Prabhakar Bhat

ಕೋಮು ದ್ವೇಷದ ಭಾಷಣ ಮಾಡುವ ಆರ್​ಎಸ್​ಎಸ್​ ಮುಖಂಡ ಪ್ರಭಾಕರ್​ ಭಟ್​ ಅವರಿಗೆ ಯಾವುದೇ ಕಾರಣಕ್ಕೂ ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು ಎಂದು ಪಟ್ಟು ಹಿಡಿದಿದ್ದರು

ಕಲ್ಲಡ್ಕ ಪ್ರಭಾಕರ ಭಟ್

ಕಲ್ಲಡ್ಕ ಪ್ರಭಾಕರ ಭಟ್

 • Share this:
  ಮಂಗಳೂರು (ಮಾ. 30): ಮಂಗಳೂರು ವಿಶ್ವವಿದ್ಯಾಲಯದಲ್ಲಿ (Mangalore University) ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆರ್​​ಎಸ್​​ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್​ ಭಟ್ (RSS leader Kalladka Prabhakar Bhat) ಆಹ್ವಾನವನ್ನು ವಿರೋಧಿಸಿ ಸಿಎಫ್ಐ ವಿದ್ಯಾರ್ಥಿಗಳ ಪ್ರತಿಭಟನೆ ಉದ್ವಿಗ್ನಗೊಂಡಿದ್ದು, ಪೊಲೀಸರು ಲಾಠಿ ಚಾರ್ಜ್ (Lathi Charge)​ ನಡೆಸಿದ್ದಾರೆ. ಮಂಗಳೂರು ವಿವಿ ಗೇಟ್ ಮುಂಭಾಗದಲ್ಲಿ ಸಿಎಫ್​ಐ ಪ್ರತಿಭಟನೆ ನಡೆಸಿದ ಸಿಎಫ್ಐ ಕಾರ್ಯಕರ್ತರು 'ಕಲ್ಲಡ್ಕ ಪ್ರಭಾಕರ್ ಭಟ್ ಗೋ ಬ್ಯಾಕ್' ಎಂದು ಘೋಷಣೆ ಕೂಗಿದ್ದಾರೆ. ಅಲ್ಲದೇ ಇದೇ ವೇಳೆ ವಿವಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಕೆಲವು ಸಿಎಫ್​ಐ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ.

  ಪ್ರಭಾಕರ್​ ಭಟ್​ ವಿರುದ್ಧ ಪ್ರತಿಭಟನೆ
  ಕಲ್ಲಡ್ಕ ಪ್ರಭಾಕರ್​ ಭಟ್​ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದನ್ನು ಈ ಹಿಂದೆಯೇ ಸಿಎಫ್​​ಐ ವಿರೋಧಿಸಿತು. ಕೋಮು ದ್ವೇಷದ ಭಾಷಣ ಮಾಡುವ ಆರ್​ಎಸ್​ಎಸ್​ ಮುಖಂಡ ಪ್ರಭಾಕರ್​ ಭಟ್​ ಅವರಿಗೆ ಯಾವುದೇ ಕಾರಣಕ್ಕೂ ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು ಎಂದು ಪಟ್ಟು ಹಿಡಿದಿದ್ದರು. ಈ ಪ್ರತಿಭಟನೆ ವಿರೋಧದ ನಡುವೆಯೂ ಇಂದು ಅವರು ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ.

  ಈ ಕ್ರಮ ಖಂಡಿಸಿ ಸಿಎಫ್​ಐ ಇಂದು ಪ್ರತಿಭಟನೆಗೆ ಸಜ್ಜಾಗಿದ್ದು ಪ್ರಭಾಕರ್​  ಅವರು ಶೈಕ್ಷಣಿಕ ವಾತಾವರಣದಲ್ಲಿ ಕೋಮು ವೈಷಮ್ಯ ಬೆಳೆಸುತ್ತಾರೆ ಎಂದು ವಿರೋಧ ವ್ಯಕ್ತಪಡಿಸಿದರು.

  ಇದನ್ನು ಓದಿ:  Kodagu: ಕೊಡವರಿಗೆ ಟಿಪ್ಪು ಮೇಲೆ ಏಕೆ ಸಿಟ್ಟು; ದೇವಟುಪರಂಬುವಿನ ಘಟನೆ ಏನು?

  ವಿರೋಧ ಮಾಡುವವರು ಮಾಡಲಿ ಎಂದ ಆರ್​ಎಸ್​ಎಸ್​ ನಾಯಕ
  ಇನ್ನು ತಮ್ಮ ವಿರುದ್ಧ ಸಿಎಫ್​ಐ ಪ್ರತಿಭಟನೆ ನಡೆಸಿದ ವಿಚಾರ ಕುರಿತು ಮಾತನಾಡಿದ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ್ ಭಟ್​​, ಯಾರು ಬೇಕಾದರೂ ಪ್ರತಿಭಟನೆ ಮಾಡಬಹುದು. ವಿರೋಧಿಸುವವರು ವಿರೋಧ ಮಾಡುತ್ತಾರೆ. ದೇಶಕ್ಕೋಸ್ಕರ ಕೆಲಸ ಮಾಡುವವರು ಕೆಲಸ ಮಾಡುತ್ತಾರೆ. ಸಾಮರಸ್ಯದ ಜೀವನ ಮಾಡಬೇಕೆಂದರೆ ಈ ದೇಶದಲ್ಲಿ ಬದುಕಿ. ಅದು ಆಗುದಿಲ್ಲ ಎಂದಾದರೆ ಎಲ್ಲಿ ಬೇಕಾದರೂ ಹೋಗಿ ಬದುಕಿ. ನಮಗೆ ಯಾವುದೇ ಸಮಸ್ಯೆಯಿಲ್ಲ ಎಂದರು.

  ಇದನ್ನು ಓದಿ: ಮತಾಂತರವಾಗು, ಶರಣಾಗು, ಇಲ್ಲವೇ ಪ್ರಾಣತ್ಯಾಗ ಮಾಡು ಎಂಬುದು ಟಿಪ್ಪು ರಾಜನೀತಿ: ಬಿಜೆಪಿ

  ಹಿಂದೂ ಬಗ್ಗೆ ಮಾತನಾಡಿದ್ರೆ ಕೋಮು ಪ್ರಚೋದನೆಯಾ

  ಇದೇ ವೇಳೆ ತಮ್ಮಿಂದಾಗಿ ಕೋಮು ದ್ವೇಷ ಹರಡುತ್ತದೆ ಎಂಬ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಈ ಭಾಷಣದಲ್ಲಿ ಕೋಮು ದ್ವೇಷ ಹರಡಿಸಿದ್ನಾ? ಕೋಮು ದ್ವೇಷ ಎಂದರೆ ಏನು? ಹಿಂದೂ ಧರ್ಮದ ಬಗ್ಗೆ ಮಾತನಾಡಿದ್ರೆ ಕೋಮುನಾ? ಹಿಂದೂ ಎನ್ನುವುದು ಈ ದೇಶದ ಹೆಸರು. ಅಮೆರಿಕಾದಲ್ಲಿ ಇರುವವರು ಅಮೆರಿಕನ್. ಜಪಾನ್ ನಲ್ಲಿ ಇರುವವರು ಜಪಾನಿಯರು. ಭಾರತದಲ್ಲಿ ಇರುವವರು ಭಾರತೀಯರು. ಹಿಂದೂಸ್ಥಾನಾದಲ್ಲಿ ಇರುವವರು ಹಿಂದೂಗಳು. ಇದರಲ್ಲಿ ಕೋಮುದ್ವೇಷದ ಪ್ರಶ್ನೆಯೇ ಇಲ್ಲ. ಈ ದೇಶದಲ್ಲಿ ಇರುವವರು ಎಲ್ಲಾ ಹಿಂದೂಗಳು. ಬ್ರಿಟಿಷರು ಬಂದು ಅದನ್ನು ವ್ಯತ್ಯಾಸ ಮಾಡಿದ್ರು ಅಷ್ಟೇ. ಹಿಂದೂಗಳ‌ ಜೊತೆ ಜೊತೆಯಲ್ಲಿ ಎಲ್ಲರೂ ಬದುಕುವ ಪ್ರಯತ್ನ ಮಾಡಬೇಕು. ನಾವು ಸತ್ಯ ಮಾತನಾಡುತ್ತೇವೆ ಇದನ್ನು ತಪ್ಪು ಎಂದು ಹೇಳುವವರು ಧೈರ್ಯದಿಂದ ಎದುರು ಬಂದು ಮಾತನಾಡಲಿ. ನಾನು ಅದಕ್ಕೆ ಉತ್ತರ ಕೊಡುತ್ತೇನೆ ಎಂದರು.

  ಶಿಕ್ಷಣ ವ್ಯವಸ್ಥೆಯನ್ನು ಝೀರೋ ಮಾಡಿದ್ದಾರೆ
  ಪಠ್ಯಪುಸ್ತಕದಿಂದ ಟಿಪ್ಪು ಪಾಠವನ್ನು ಕೈ ಬಿಡುವ ವಿಚಾರ ಕುರಿತು ಮಾತನಾಡಿದ ಅವರು, ಅವತ್ತಿನಿಂದಲೂ ದೇಶ ವಿರೋಧಿಗಳ ಚಿತ್ರಣವನ್ನೆ ಪಠ್ಯದಲ್ಲಿ ಹಾಕಿದ್ದಾರೆ. ಅಕ್ಬರ್ ದಿ ಗ್ರೇಟ್, ಔರಂಗಜೇಬ್ ಹುಲಿ ಹೇಳೊದು ಬಿಟ್ಟು ಬೇರೆನೂ ನಮಗೆ ಹೇಳಿಲ್ಲ. ವಿಕ್ಟೊರಿಯಾ ರಾಣಿ, ಜಾರ್ಜ್‌ ಅದೇ ಕತೆಯನ್ನು ನಮಗೆ ಹೇಳಿದ್ದಾರೆ. ಈ ದೇಶದ ನಿಜವಾದ ಹೀರೋಗಳನ್ನು ಶಿಕ್ಷಣ ವ್ಯವಸ್ಥೆ ಝೀರೋ ಮಾಡಿದೆ. ಅವರನ್ನು ಮತ್ತೆ ಹೀರೋ ಮಾಡಬೇಕಾದ ಕೆಲಸ ನಾವು ಮಾಡಬೇಕಾಗಿದೆ. ಆ ರೀತಿ ಯೋಚನೆ ಸರ್ಕಾರ ಮಾಡುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಟಿಪ್ಪು ಸುಲ್ತಾನ್ ನ ಪಾಠವನ್ನು‌ನಾವು ಯಾಕೆ‌ ಕಲಿಯಬೇಕು. ಇಡೀ ಹಿಂದೂ ಸಮಾಜಕ್ಕೆ ಅನ್ಯಾಯ‌ ಮಾಡಿದವನ  ಬಗ್ಗೆ ನಾವು ಯಾಕೆ ಕಲಿಯಬೇಕು ಎಂದು ಕೇಳಿದರು
  Published by:Seema R
  First published: