ಸಿಎಂ ಆಗುವ ಕನಸು ಕಂಡಿದ್ದ ಯಡಿಯೂರಪ್ಪಗೆ ಶಾಕ್​ ಕೊಟ್ಟ ಆರ್​ಎಸ್​ಎಸ್​!

ಆಪರೇಷನ್ ಕಮಲದಿಂದ‌ ಬಿಜೆಪಿ ಪಕ್ಷದ ವರ್ಚಸ್ಸಿಗೆ ಕುಂದುಂಟಾಗುತ್ತದೆ.  ರಾಜ್ಯದ ಬಿಜೆಪಿ ನಾಯಕರು ತಂತ್ರ ರೂಪಿಸಿದರೂ ದೋಸ್ತಿ ಪಕ್ಷದ ನಾಯಕರು ಪ್ರಧಾನಿ ನರೇಂದ್ರ ಮೋದಿ‌, ಅಮಿತ್ ಶಾ ಅವರನ್ನೇ ಹೊಣೆಗಾರರನ್ನಾಗಿ ಮಾಡುತ್ತಾರೆ ಎಂಬುದು ಸಂಘ ಪರಿವಾರದ ಲೆಕ್ಕಾಚಾರ.

Sushma Chakre | news18
Updated:July 3, 2019, 12:16 PM IST
ಸಿಎಂ ಆಗುವ ಕನಸು ಕಂಡಿದ್ದ ಯಡಿಯೂರಪ್ಪಗೆ ಶಾಕ್​ ಕೊಟ್ಟ ಆರ್​ಎಸ್​ಎಸ್​!
ಬಿ.ಎಸ್​. ಯಡಿಯೂರಪ್ಪ.
  • News18
  • Last Updated: July 3, 2019, 12:16 PM IST
  • Share this:
ಬೆಂಗಳೂರು (ಜು.3): ಮೈತ್ರಿ ಸರ್ಕಾರದ ಪತನದ ನಂತರ ಮುಖ್ಯಮಂತ್ರಿ ಗಾದಿಯನ್ನೇರಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ತುದಿಗಾಲಿನಲ್ಲಿ ನಿಂತಿದ್ದಾರೆ. ಅದಕ್ಕೆ ಪೂರಕವಾಗಿ ಕಾಂಗ್ರೆಸ್​ ಪಕ್ಷದ ಇಬ್ಬರು ಶಾಸಕರು ರಾಜೀನಾಮೆ ನೀಡಿರುವುದರಿಂದ ಬಿಜೆಪಿ ತನ್ನ ತಂತ್ರ ರೂಪಿಸಲು ಸಜ್ಜಾಗಿದೆ. ಆದರೆ, ಮುಖ್ಯಮಂತ್ರಿಯಾಗುವ ಯಡಿಯೂರಪ್ಪನವರ ಕನಸು ನಿಜವಾಗಲೂ ನನಸಾಗುತ್ತದೆಯಾ?

ಇಂಥದ್ದೊಂದು ಅನುಮಾನ ಶುರುವಾಗಲು ಕಾರಣವೂ ಇದೆ. ಮುಖ್ಯಮಂತ್ರಿಯಾಗಬೇಕು ಎಂದು ಕನಸು ಕಾಣುತ್ತಿರುವ ಯಡಿಯೂರಪ್ಪನವರಿಗೆ ಸಂಘ ಪರಿವಾರವೇ ತಣ್ಣೀರೆರಚುವ ಸಾಧ್ಯತೆಯಿದೆ. ಆಪರೇಷನ್​ ಕಮಲಕ್ಕೆ ಅಪಸ್ವರ ಹೊರಡಿಸಿರುವ ರಾಜ್ಯದ ಸಂಘ ಪರಿವಾರದ ಮುಖಂಡರು ಮೈತ್ರಿ ಸರ್ಕಾರವನ್ನು ಬೀಳಿಸಲು ಮಾಡುತ್ತಿರುವ ಸರ್ಕಸ್ಸಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇದು ಬಿಜೆಪಿಗೆ ಮುಳುವಾಗುವ ಸಾಧ್ಯತೆಯಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ


ಸರ್ಕಾರ ರಚನೆಗೆ 15 ಶಾಸಕರು ರಾಜೀನಾಮೆ ನೀಡಬೇಕು. ಒಂದುವೇಳೆ ರಾಜೀನಾಮೆ ಕೊಡ್ಡರೂ ರಾಜೀನಾಮೆ ಕೊಟ್ಟ ಕೂಡಲೇ ಸ್ಪೀಕರ್ ಅದನ್ನು ಅಂಗೀಕರಿಸೋ ಖಾತರಿಯೂ ಇಲ್ಲ. 15 ಶಾಸಕರ ಕೈಯಲ್ಲಿ ರಾಜೀನಾಮೆ‌ ಕೊಡಿಸೋದು ಅಷ್ಟು ಸುಲಭವಲ್ಲ. ಆಪರೇಷನ್ ಕಮಲದಿಂದ‌ ಬಿಜೆಪಿ ಪಕ್ಷದ ವರ್ಚಸ್ಸಿಗೆ ಕುಂದುಂಟಾಗುತ್ತದೆ.  ರಾಜ್ಯದ ಬಿಜೆಪಿ ನಾಯಕರು ತಂತ್ರ ರೂಪಿಸಿದರೂ ದೋಸ್ತಿ ಪಕ್ಷದ ನಾಯಕರು ಪ್ರಧಾನಿ ನರೇಂದ್ರ ಮೋದಿ‌, ಅಮಿತ್ ಶಾ ಅವರನ್ನೇ ಹೊಣೆಗಾರರನ್ನಾಗಿ ಮಾಡುತ್ತಾರೆ. ಆಪರೇಷನ್​ ಕಮಲ ರಾಷ್ಟ್ರಮಟ್ಟದಲ್ಲೂ ಸದ್ದು ಮಾಡಲಿದೆ. ಇದರಿಂದ ಬಿಜೆಪಿಗೆ ದೊಡ್ಡ ಹೊಡೆತವಾಗಲಿದೆ ಎಂದು ಸಂಘ ಪರಿವಾರದ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

Drought Monitor: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬರಪ್ರವಾಸ ಮುಂದೂಡಿಕೆ; ಕಾರಣವೇನು ಗೊತ್ತಾ?

ಒಂದು ವೇಳೆ ಕಾಂಗ್ರೆಸ್​- ಜೆಡಿಎಸ್​ ಪಕ್ಷದ 15 ಅತೃಪ್ತ ಶಾಸಕರು ರಾಜೀನಾಮೆ ಕೊಟ್ಟು ಬಿಜೆಪಿ ಸರ್ಕಾರ ರಚನೆ ಮಾಡಿದರೂ ಆ ರೆಬೆಲ್​ಗಳನ್ನು ಸಚಿವರನ್ನಾಗಿ ಮಾಡಬೇಕಾಗುತ್ತದೆ. ಬಿಜೆಪಿ ಸರ್ಕಾರ ಒಂದು ವೇಳೆ ರಚನೆ ಆದರೆ ಕಾಂಗ್ರೆಸ್ , ಜೆಡಿಎಸ್‌ ನೆಮ್ಮದಿಯಾಗಿ ಆಡಳಿತ ನಡೆಸಲು ಬಿಡುವುದಿಲ್ಲ. ರೆಬೆಲ್ ಗಳು ಸಚಿವರಾದ‌ ಮೇಲೆ ಪಾರದರ್ಶಕವಾಗಿ ಕೆಲಸ‌ ಮಾಡುವುದಿಲ್ಲ. ಸಿಎಂ ಕುಮಾರಸ್ವಾಮಿಯವರ ಅವೈಜ್ಞಾನಿಕ ಸಾಲಮನ್ನಾ ಯೋಜನೆ ಬಿಜೆಪಿಯ ಕುತ್ತಿಗೆಗೆ ಸಿಲುಕಲಿದೆ. ರೈತರು ಸಾಲಮನ್ನಾ ಮಾಡುವಂತೆ ಬೆನ್ನು ಬೀಳುತ್ತಾರೆ.

ಸಿಲಿಕಾನ್​ ಸಿಟಿಯ ಮಾದಾವರ ಕೆರೆ ಒತ್ತುವರಿ ವಿವಾದದಲ್ಲೂ ಜಿಂದಾಲ್ ಹೆಸರು
BS Yeddyurappa hand 1
ಬಿಎಸ್ ಯಡಿಯೂರಪ್ಪ


ಮೈತ್ರಿ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರ ರಚನೆಯಾದರೂ ಹೆಚ್ಚು ಅಧಿಕಾರಾವಧಿ ಸಿಗುವುದಿಲ್ಲ. ಮೂರು‌ ಮುಕ್ಕಾಲು ವರ್ಷ ಸಿಗಬಹುದು. ಕಡಿಮೆ ಅವಧಿಯಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಸಿಗುವುದಿಲ್ಲ. ರಾಜೀನಾಮೆಯಿಂದ ತೆರವಾದ ಕ್ಷೇತ್ರಗಳ ಉಪಚುನಾವಣೆಯ ತಲೆಬಿಸಿಯೂ ಶುರುವಾಗುತ್ತದೆ. ಉಪಚುನಾವಣೆಯಲ್ಲಿ 15ಕ್ಕೆ‌ 15 ಬಿಜೆಪಿ ಅಭ್ಯರ್ಥಿಗಳು ಗೆಲ್ಲೋ ಗ್ಯಾರಂಟಿ‌ ಇಲ್ಲ. ಮತ್ತೆ ಸರ್ಕಾರಕ್ಕೆ ಸಮಸ್ಯೆ ಶುರುವಾಗುತ್ತದೆ. ಬಿಜೆಪಿಯ ಆಡಳಿತ ವೈಫಲ್ಯದಿಂದ ಕಾಂಗ್ರೆಸ್​-ಜೆಡಿಎಸ್​ಗೆ ಅನುಕೂಲ ಆಗುತ್ತದೆ. ಹಾಗಾಗಿ ಆಪರೇಷನ್ ಕಮಲ‌ ಬೇಡ. ಸರ್ಕಾರ ರಚನೆಯೂ ಬೇಡ ಎಂಬುದು
ಸಂಘದ ಮುಖಂಡರ ಅಭಿಪ್ರಾಯ ಎನ್ನಲಾಗಿದೆ.

ದತ್ತಾ ನೇತೃತ್ವದಲ್ಲಿ ಜೆಡಿಎಸ್ ಸಂಘಟನೆ; ಅನುಮಾನ ಮೂಡಿಸಿದ ದೊಡ್ಡ ಗೌಡ ನಿರ್ಧಾರ; ಮಧ್ಯಂತರ ಚುನಾವಣೆ ಸಾಧ್ಯತೆ?

ಮೈತ್ರಿ ಸರ್ಕಾರದಲ್ಲಿ ಎಲ್ಲರೂ ಅವರಾಗೇ ಕಿತ್ತಾಡಿಕೊಳ್ಳುತ್ತಿದ್ದಾರೆ. ಅತೃಪ್ತರಲ್ಲಿ ಕೆಲವರು ಅವರಾಗೇ ರಾಜೀನಾಮೆ ಕೊಡಬಹುದು. ಮೈತ್ರಿ ಸರ್ಕಾರದ ಬಗ್ಗೆ ಕೆಟ್ಟ ಜನಾಭಿಪ್ರಾಯ ವ್ಯಕ್ತವಾಗಿದೆ. ಕಿತ್ತಾಡಿಕೊಂಡೆ ಸರ್ಕಾರ ಬಿದ್ದೋಗುತ್ತದೆ. ಅಲ್ಲಿಯವರೆಗೂ ಆಡಳಿತ ವೈಫಲ್ಯದ ವಿರುದ್ಧ ಹೋರಾಟ ಮಾಡಿ. ಅನಿವಾರ್ಯವಾಗಿ ಮಧ್ಯಂತರ ಚುನಾವಣೆ ಬರುತ್ತದೆ. ಮಧ್ಯಂತರ ಚುನಾವಣೆ ಬಂದರೆ ಬಿಜೆಪಿ 150 ಸೀಟು ಗೆಲ್ಲುತ್ತದೆ. ಭರ್ತಿ ಐದು ವರ್ಷ ಅಧಿಕಾರವೂ ಇರುತ್ತದೆ. ಆಪರೇಷನ್​ ಕಮಲ ಮಾಡಿ ಹೆಸರು ಕೆಡಿಸಿಕೊಳ್ಳಬೇಡಿ ಎಂಬುದು ಸಂಘ ಪರಿವಾರದ ಮುಖಂಡರ‌ ಸಲಹೆ.  ಹೀಗಾಗಿ, ಸದ್ಯಕ್ಕಂತೂ ಯಡಿಯೂರಪ್ಪನವರಿಗೆ ಸಿಎಂ ಆಗುವ ಭಾಗ್ಯ ಇಲ್ಲವೆಂದೇ ಹೇಳಬಹುದು.

ವರದಿ: ಚಿದಾನಂದ ಪಟೇಲ್

First published:July 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ