ಆರ್​ಎಸ್​ಎಸ್​ನ‌ ನೂತನ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಆಯ್ಕೆ 

ಅಖಿಲ ಭಾರತ ಪ್ರತಿನಿಧಿ ಸಭಾದ ಚುನಾವಣೆ ನಡೆದಿದ್ದು ದತ್ತಾತ್ರೇಯ ಹೊಸಬಾಳೆ ಅವರು ನೂತನ ಸರಕಾರ್ಯವಾಹರಾಗಿ ಆಯ್ಕೆಯಾಗಿದ್ದಾರೆ.‌

Dattatreya Hosabale

Dattatreya Hosabale

  • Share this:
ರಾಮನಗರ (ಮಾ. 20): ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಪ್ರತಿನಿಧಿ ಸಭಾದ  ಸರಕಾರ್ಯವಾಹಕ (ಪ್ರಧಾನ ಕಾರ್ಯದರ್ಶಿ)ಯಾಗಿ ದತ್ತಾತ್ರೇಯ ಹೊಸಬಾಳೆ ಅವರನ್ನು ಆಯ್ಕೆ ಮಾಡಲಾಗಿದೆ. ಈ ಹಿಂದೆ ಈ ಸ್ಥಾನದಲ್ಲಿ ಸುರೇಶ್​ ಭೈಯಾಜಿ ಇದ್ದರು.  ಹೊಸಬಾಳೆ ಅವರು ಮೂರು ವರ್ಷಗಳ ಈ ಹುದ್ದೆಯನ್ನು ನಿಭಾಯಿಸಲಿದ್ದಾರೆ. ಈ ಕುರಿತು ಮಾತನಾಡಿದ ಆರ್​ಎಸ್​ಎಸ್​ ಮುಖಂಡ  ಅರುಣ್​ ಕುಮಾರ್​,  ಅಖಿಲ ಭಾರತ ಪ್ರತಿನಿಧಿ ಸಭಾದ ಚುನಾವಣೆ ನಡೆದಿದ್ದು, ದತ್ತಾತ್ರೇಯ ಹೊಸಬಾಳೆ ಅವರು ನೂತನ ಸರಕಾರ್ಯವಾಹರಾಗಿ ಆಯ್ಕೆಯಾಗಿದ್ದಾರೆ ಎಂದರು.  ಬಳಿಕ ಮಾತನಾಡಿದ ಹೊಸಬಾಳೆ ಅವರು, ಇಂದಿನ ಸಭೆಯಲ್ಲಿ ಕಳೆದ 3 ವರ್ಷದ ಸಂಘದ ಪ್ರಗತಿ ಹಾಗೂ ಮುಂದಿನ 3 ವರ್ಷದ ಸಂಘದ ಗುರಿಯನ್ನು ಚರ್ಚಿಸಲಾಗಿದೆ. ಕನ್ನಡ ನನ್ನ ಮಾತೃಭಾಷೆ, ಪ್ರತಿನಿಧಿ ಸಭೆ ಸಾಮಾನ್ಯವಾಗಿ ನಗಪುರದಲ್ಲಿ ನಡೆಯುತ್ತದೆ. ಕೊರೋನಾ ಕಾರಣದಿಂದ ಈಗ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈಗ ನನ್ನ ಮೇಲೆ ಹೊಸ ಜವಾಬ್ದಾರಿ ಇದೆ.  ಸಂಘದ ಬಗ್ಗೆ ದೇಶ ವಿದೇಶಗಳಲ್ಲಿ ಪರಿಚಯ ಇದೆ. ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಗಳಿಂದ ಸಾಮಾನ್ಯ ವ್ಯಕ್ತಿಗಳವೆರೆಗೆ ಸಂಘದಲ್ಲಿ ಜನರಿದ್ದಾರೆ.

.ಕನ್ನಡ, ಇಂಗ್ಲಿಷ್, ಹಿಂದಿ ಹಾಗೂ ತಮಿಳು ಭಾಷೆ ನಿಪುಣರಾಗಿ ದತ್ತಾತ್ರೇಯ ಅವರು 1954 ಶಿವಮೊಗ್ಗ ಜಿಲ್ಲೆಯ ಹೊಸಬಾಳೆ  ಹುಟ್ಟಿದ್ದರು. 1972 ರ ತುರ್ತು ಸಮಯದಲ್ಲಿ ಜೈಲು ವಾಸದಲ್ಲಿದ್ದರು. 1978 ಎಂ ಎ (ಇಂಗ್ಲಿಷ್) ಸ್ನಾತಕೋತ್ತರ ಪದವಿ ಪಡೆದರು. 1992-2003 ರವರೆತೆ ಎ ಬಿ ವಿ ಪಿ ಪ್ರಮುಖರಾಗಿದ್ದರು.‌ 2009 ರಿಂದ ಸಹ ಸರಕಾರ್ಯವಾಹರಾಗಿದ್ದರು ಎಂದರು.

ಕಳೆದ ವರ್ಷ ಕೋವಿಡ್ ಕಾರಣದಿಂದ ಶಾಖೆಗಳು ನಡೆಸಲು ಸಾಧ್ಯವಾಗಲಿಲ್ಲ. ಮೈದಾನಗಳಲ್ಲಿ ಬೇರೆ ಬೇರೆ ಕುಟುಂಬಗಳಲ್ಲಿ ಜನರನ್ನು ಒಂದೆಡೆ ಸೇರಿಸುವುದು ಸರಿ ಅಲ್ಲ. ಹೀಗಾಗಿ ಮನೆಯಿಂದಲೇ ಸ್ವಯಂಸೇವಕರ ಜಾಗೃಕತೆಗೆ ಸಂಪರ್ಕದಲ್ಲಿತ್ತು. ಸಂಘ ಕೋವಿಡ್ ಸಮಯದಲ್ಲಿ ಸೇವೆಯ ರೂಪದಲ್ಲಿ ದಿನಸಿ ಹಾಗೂ ಇನ್ನಿತರೆ ವಸ್ತುಗಳನ್ನ ಸಮಾಜಕ್ಕೆ ನೀಡಿದೆ. ಇದಕ್ಕೆ ನಮಗೆ ಕೃತಜ್ಞತೆ ಬೇಡ. ಸಭೆಯಲ್ಲಿ ಸಮಾಜಕ್ಕೆ ಅಭಿನಂದನೆ ಹಾಗೂ ಕೃತಜ್ಞತೆ ತಿಳಿಸುತ್ತದೆ. ತಪ್ಪುಗಳನ್ನ ನೋಡದೆ, ದೇಶ ಒಂದಾಗಿ ನಿಂತು, ಮಹಾಮಾರಿ ಎದಿರುಸುವುದಕ್ಕೆ ಸಾಧ್ಯವಾಯಿತು. ಈಗಲೂ 2ನೇ ಅಲೆ ಬರುತ್ತಿದ್ದರೂ ದೇಶ ತನ್ನ ಶಕ್ತಿಯನ್ನು ಪ್ರದರ್ಶನ ಮಾಡಿದೆ. ಹೀಗಾಗಿ ಲಸಿಕೆ ನಮಗೆ ಮಾತ್ರವಲ್ಲದೆ ಬೇರೆ ರಾಷ್ಟ್ರಗಳಿಗೂ ಲಸಿಕೆ ನೀಡಲಾಗುತ್ತಿದೆ. ಮುಂದಿನ ಪೀಳಿಗೆ ಈ ಸಮಯವನ್ನು ಪ್ರೇರಣೆಯಾಗಿ ತೆಗೆದುಕೊಂಡು ಮುಂದೆ ಯಾವುದೇ ಕಷ್ಟದ ಪರಿಸ್ಥಿತಿ ಎದುರಿಸಲು ಸಾಧ್ಯ ಎಂದು ದಾಖಲಾಗಬೇಕು.

ಆರ್ ಎಸ್ ಎಸ್ 2025ಕ್ಕೆ 100 ವರ್ಷ ಪೂರೈಸಲಿದೆ. ಹೀಗಾಗಿ ಸಂಘ ಪ್ರತಿ ಮಂಡಲ್ ಗೆ ತಲುಪಬೇಕಿದೆ. ಅಭಿವೃದ್ಧಿ ಕಡೆಗೂ ಸಂಘ ಕೆಲಸ ಮಾಡಲಿದ್ದು, ಸ್ಥಳೀಯ ಮಠ ಮಂದಿರ ಜೊತೆ ಸೇರಿ ಮಾಡಲಾಗುವುದು ಎಂದರು. ಇನ್ನು ಸಮಾಜದ ಪರಿವರ್ತನೆಗೆ ಮುಂದಿನ ಮೂರು ವರ್ಷ ಕೆಲಸ ಮಾಡಲಾಗುವುದು. ಭಾರತದ ಇತಿಹಾಸದಿಂದ ಪ್ರೇರಣೆ ಪಡೆದು ವೈಚಾರಿಕ ಜಾಗೃತಿ ಪ್ರಾರಂಭಿಸಲಾಗುವುದು. ದೇಶದಲ್ಲಿ ಲೋಕತಂತ್ರ ವ್ಯವಸ್ಥೆ ಇದೆ, ರಾಮ ಮಂದಿರ ನಿರ್ಮಾಣ ಆರ್ ಎಸ್ ಎಸ್ ನಿರ್ಧಾರ ಅಲ್ಲ, ಸಮಾಜದ ಎಲ್ಲಾ ವರ್ಗದ ಜನ ಕೈಜೋಡಿಸುತ್ತಿದ್ದಾರೆ. ಇದು ಸುಪ್ರೀಂಕೋರ್ಟ್ ಆದೇಶ, ಉಚ್ಚ ನ್ಯಾಯಾಲಯದ ಆದೇಶ ಪಾಲನೆ ಮಾಡಲಾಗುತ್ತಿದೆ ಅಷ್ಟೇ. ಇದರ ವಿರೋಧ ಕೇವಲ ರಾಜಕೀಯ ಉದ್ದೇಶದಿಂದ ಮಾಡುತ್ತಿದ್ದಾರೆ ಅಷ್ಟೇ ವ್ಯಕ್ತಿಗತಿಯಿಂದ ಇವರು ರಾಮ ಮಂದಿರ ನಿರ್ಮಾಣ ಪರವಿದ್ದಾರೆ.  ಸಂಘದ ಹಲವಾರು ಸದಸ್ಯರು ಅಂತರ್ಜಾತಿ ಮದ್ವೆ ಆಗಿದ್ದಾರೆ. ಸಂಘ ಪರಿವಾರ ಹಿಂದೂ ಸಮಾಜ ಒಂದು ಎಂದು ಪ್ರತಿಪಾದನೆ ಮಾಡುತ್ತದೆ. ವಿಶ್ವೇಶ್ವರ ತೀರ್ಥರು ಅಸ್ಪೃಶ್ಯತೆ ವಿರುದ್ಧ ಭಾಷಣ ಮಾಡಿದ್ದಾರೆ ಅವರ ಹೇಳಿಕೆ ನಮಗೆ ಪ್ರೇರಣೆ. ಪೇಜಾವರ ವಿಶ್ವಪ್ರಸನ್ನ ತೀರ್ಥ ಹೇಳಿಕೆ ಪೂರ್ತಿಯಾಗಿ ನಾನು ಗಮನ ನೀಡಿಲ್ಲ ಎಂದುದತ್ತಾತ್ರೇಯ ಹೊಸಬಾಳೇ ತಿಳಿಸಿದರು
Published by:Seema R
First published: