HOME » NEWS » State » RSS AND BJP SEEKS DONATIONS FOR RAM MANDIR TO PROFESSOR KS BHAGAVAN SESR PMTV

ರಾಮನನ್ನೇ ವಿರೋಧಿಸಿದ ಸಾಹಿತಿ ಪ್ರೋ.ಕೆಎಸ್‌.ಭಗವಾನ್ ಬಳಿ ರಾಮಮಂದಿರಕ್ಕೆ ದೇಣಿಗೆ ಕೇಳಿದ ಆರ್‌ಎಸ್‌ಎಸ್, ಬಿಜೆಪಿ

ರಾಮನ ಬಗ್ಗೆ ಸದಾ ವಿವಾದತಾತ್ಮಕ ಹೇಳಿಕೆ ನೀಡುವ ಮೂಲಕ ರಾಮ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದವರು ಪ್ರೋ ಭಗವಾನ್​

news18-kannada
Updated:January 18, 2021, 8:15 PM IST
ರಾಮನನ್ನೇ ವಿರೋಧಿಸಿದ ಸಾಹಿತಿ ಪ್ರೋ.ಕೆಎಸ್‌.ಭಗವಾನ್ ಬಳಿ ರಾಮಮಂದಿರಕ್ಕೆ ದೇಣಿಗೆ ಕೇಳಿದ ಆರ್‌ಎಸ್‌ಎಸ್, ಬಿಜೆಪಿ
ರಾಮನ ಬಗ್ಗೆ ಸದಾ ವಿವಾದತಾತ್ಮಕ ಹೇಳಿಕೆ ನೀಡುವ ಮೂಲಕ ರಾಮ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದವರು ಪ್ರೋ ಭಗವಾನ್​
  • Share this:
ಮೈಸೂರು (ಜ. 18):  ರಾಮ ದೇವರಲ್ಲ, ರಾಮ ಮಧ್ಯೆ ಕುಡಿಯುತ್ತಿದ್ದ, ಸೀತಾಮಾತೆ ಮಾತ್ರ ಪವಿತ್ರಳು ರಾಮ ಮರ್ಯಾದ ಪುರುಷನಲ್ಲ. ಹೀಗೆ ಪದೇ ಪದೇ ರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದವರು ಹಿರಿಯ ಸಾಹಿತಿ ಪ್ರೋ ಕೆ.ಎಸ್.ಭಗವಾನ್ . ತಮ್ಮ ಈ ಹೇಳಿಕೆಗಳಿಂದಲೇ ರಾಮ ಭಕ್ತರ ಕಣ್ಣಿಗೆ ಸಾಕಷ್ಟು ಗುರಿಯಾಗಿದ್ದರು. ಸದಾ ರಾಮನ ವಿಷಯದಿಂದ ಸುದ್ದಿಯಾಗುತ್ತಿದ್ದ ಪ್ರೋ ಕೆಎಸ್​ ಭಗವಾನ್​ ಬಳಿಯೇ ಈಗ ರಾಮ ಮಂದಿರ ನಿರ್ಮಾಣಕ್ಕೆ ಆರ್​ಎಸ್​ ಎಸ್​ ಹಾಗೂ ಬಿಜೆಪಿ ಮುಖಂಡರು ದೇಣಿಗೆ ಕೇಳಿದ್ದಾರೆ. ರಾಮ ಹಾಗೂ ಹಿಂದೂ ದೇವತೆಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ಭಗವಾನ್​ ಬಳಿಯೇ ರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿ ದೇಣಿಗೆ ಕೇಳಿರುವುದು ಅಚ್ಚರಿ ಮೂಡಿಸಿದೆ. ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಕಾರ್ಯ ನಡೆಯುತ್ತಿದ್ದು, ಅದರ ಅಂಗವಾಗಿ ಭಗವಾನ್​ ಮನೆಗೆ ತೆರಳಿದ ರಾಮ ಭಕ್ತರು ಮಂದಿರ ನಿರ್ಮಾಣಕ್ಕೆ ಸಹಾಯ ನೀಡುವಂತೆ ಕೋರಿದ್ದಾರೆ. 

ಭಾನುವಾರ  ಭಗವಾನ್​ ಅವರ ಮನೆಗೆ ಭೇಟಿ ನೀಡಿದ ಆರ್​ಎಸ್​ಎಸ್​ ಕಾರ್ಯಕರ್ತರು ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಮಾಹಿತಿ ಪುಸ್ತಿಕೆ ನೀಡಿ, ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ. ಮನೆಗೆ ಬಂದಿದ್ದ ಇಬ್ಬರು ಆರ್‌ಎಸ್‌ಎಸ್‌ ಮುಖಂಡರ ಜೊತೆ ಸೌಜನ್ಯತೆಯಿಂದ ವರ್ತಿಸಿದ ಕೆ.ಎಸ್. ಭಗವಾನ್ ನಿಮ್ಮ ನಿಧಿ ಸಮರ್ಪಣಾ ಅಭಿಯಾನ ಮುಂದುವರಿಯಲಿ, ಆದಷ್ಟು ಬೇಗ ಅಭಿಯಾನ ಮುಗಿಸಿ ಎಂದು ಸಲಹೆ ನೀಡಿದರು.

ಇಂದು ಸಹ ರಾಮ ಮಂದಿರಕ್ಕೆ ನಿಧಿ ಸಂಗ್ರಹ ಅಭಿಯಾನದಲ್ಲಿ ಭಾಗಿಯಾಗಿದ್ದ  ಬಿಜೆಪಿ ಮುಖಂಡರು ಮತ್ತೆ ಸಾಹಿತಿ ಪ್ರೋ. ಭಗವಾನ್  ಮನೆಗೆ ತೆರಳಿ ಅಚ್ಚರಿ ಮೂಡಿಸಿದ್ದಾರೆ.  ರಾಮಮಂದಿರ ನಿಧಿ ಸಮರ್ಪಣ ಅಭಿಯಾನದ ಕರಪತ್ರ ನೀಡಿದ ಮನವಿ ಮಾಡಿಕೊಂಡಿದ್ದಾರೆ.  ಕುವೆಂಪುನಗರ ಬಡವಾಣೆ ವ್ಯಾಪ್ತಿಯ ವಾರ್ಡ್‌ ನಂ 51ರ ಕಾರ್ಪೋರೇಟರ್ ರಮೇಶ್ ಬಿಜೆಪಿ ಕಾರ್ಯಕರ್ತರು ಭಗವಾನ್‌ ಮನೆಯಲ್ಲಿ ಕಾಣಿಸಿಕೊಂಡಿದ್ದು, ರಾಮಮಂದಿರಕ್ಕೆ ನೀವು ಸಹಕಾರ ನೀಡಿ ಎಂದು ಕೋರಿಕೊಂಡಿದ್ದಾರೆ.

ಇದನ್ನು ಓದಿ: ಫೆ. 19ರಂದು ತೆರೆಗೆ ಬರಲಿದೆ ಆ್ಯಕ್ಷನ್​​ ಪ್ರಿನ್ಸ್​ ಅಭಿನಯದ ಪೊಗರು ಸಿನಿಮಾ

ಒಂದು ದಿನ ಆರ್‌ಎಸ್ಎಸ್‌ ಕಾರ್ಯಕರ್ತರು ಮತ್ತೊಂದು ದಿನ ಬಿಜೆಪಿ ಕಾರ್ಯಕರ್ತರು ಭಗವಾನ್‌ ಮನೆಗೆ ನೀಡಿ ದೇಣಿಗೆ ಕೇಳಿರೋದು ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.

ಶ್ರೀರಾಮನ ಅಸ್ತಿತ್ವದ ಬಗ್ಗೆ ಪದೇ ಪದೇ ಟೀಕಿಸಿ ವಿವಾದಕ್ಕೆ ಕಾರಣವಾಗಿದ್ದ ಸಾಹಿತಿ ಭಗವಾನ್​,  ಕಾಶ್ಮೀರದದಲ್ಲಿನ 370ನೇ ವಿಧಿ ರದ್ದು ಮಾಡಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿರನ್ನ ಬೆಂಬಲಿಸಿದ್ದರು.ಆ ಸಂದರ್ಭದಲ್ಲಿ ಒಳ್ಳೆ ಕೆಲಸ ಮಾಡಿದರೆ ನಾನು ಅವರನ್ನ ಬೆಂಬಲಿಸುವುದಾಗಿ ಬಹಿರಂಗವಾಗಿ ಮಾತನಾಡಿದ್ದರು.

ದೇಣಿಗೆ ಕೇಳಿದವರಿಗೆ ಭಗವಾನ್​ ಹೇಳಿದ್ದೇನು?ರಾಮ ಮಂದಿರಕ್ಕೆ ದೇಣಿಗೆ ಕೇಳಿರುವ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಮುಖಂಡರಿಗೆ ಖಡಕ್ ಉತ್ತರ ನೀಡಿರುವ, ಪ್ರೋ.ಕೆ.ಎಸ್. ಭಗವಾನ್ . ನೀವು ಶಿವನ ದೇವಾಲಯ ಕಟ್ಟಿದ್ದರೆ ನಾನು ದೇಣಿಗೆ ಕೊಡುತ್ತೇನೆ. ಆದರೆ, ಸಮಾನತೆ ವಿರುದ್ದ ಇರುವ ರಾಮನ ಮಂದಿರಕ್ಕೆ ನಾನು ದೇಣಿಗೆ ನೀಡುವುದಿಲ್ಲ ಎಂದು  ಉತ್ತರಿಸಿ ಕಳುಹಿಸಿದ್ದಾರೆ. ಶ್ರೀರಾಮ ಮಹಾ ತಪಸ್ವಿ ಶಂಬುಕನ್ನ ಕೊಂದಿದ್ದಾನೆ, ಗರ್ಭಿಣಿಯಾಗಿದ್ದ ಸೀತೆಯನ್ನ ಕಾಡಿಗೆ ಕಳುಹಿಸಿದ್ದಾರೆ. ಶ್ರೀರಾಮ ಅಮರರಾಗಿದ್ದರೆ ಅವರು ಯಾಕಾಗಿ ಸರಾಯು ನದಿಯಲ್ಲಿ ಬಿದ್ದು ಸಾವನ್ನಪ್ಪುತ್ತಿದ್ದರು. ಕೃಷ್ಣ ಹಾಗೂ ರಾಮ ಚಾತುರ್ವಣದ ಪರವಾಗಿದ್ದವರು. ಅವರ ದೇವಾಲಯಗಳಿಗೆ ನಾನು ಹಣ ನೀಡುವುದಿಲ್ಲ. ರಾಮ ಮಂದಿರ ಏಕೆ ಬೇಡ ಅಂತ ಪುಸ್ತಕವನ್ನೇ ಬರೆದಿದ್ದೇನೆ. ಅದನ್ನ ಓದಿದರೆ ನನ್ನ ಉದ್ದೇಶ ಅರ್ಥ ಆಗಲಿದೆ ಎಂದು ನ್ಯೂಸ್18 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ
Published by: Seema R
First published: January 18, 2021, 7:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories