Belagavi: ಸಾವಿನಲ್ಲಿ ಸಾರ್ಥಕತೆ, ನಾಲ್ವರ ಜೀವ ಉಳಿಸಿ ಅಂಧರಿಗೆ ಬೆಳಕಾದ RSS ಕಾರ್ಯಕರ್ತ

ಅವರ ಮಿದುಳು ನಿಷ್ಕ್ರಿಯವಾಗಿತ್ತು. ಅಂಗಾಂಗಳು ಕಾರ್ಯನಿರ್ವಹಿಸುತ್ತಿದ್ದವು. ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಸಹೋದರರು, ಪತ್ನಿ ಹಾಗೂ ಕುಟುಂಬ ಸದಸ್ಯರಿಗೆ ಆಪ್ತಸಮಾಲೋಚನೆ ಮಾಡಿ, ನಿಮ್ಮ ವ್ಯಕ್ತಿ ನೀಡುವ ಅಂಗಾಂಗಳಿಂದ ಮತ್ತೊಬ್ಬರ ಜೀವ ಉಳಿಯುತ್ತದೆ ಎಂದು ಮನವರಿಕೆ ಮಾಡಿಕೊಡಲಾಯಿತು.

ಉಮೇಶ್ ಬಸವಣ್ಣಿ ದಂಡಗಿ

ಉಮೇಶ್ ಬಸವಣ್ಣಿ ದಂಡಗಿ

  • Share this:
ಬೆಳಗಾವಿ(ಮಾರ್ಚ್.16): ಇಲ್ಲಿನ ಹನುಮಾನ ನಗರದ ಆರ್ ಎಸ್‍ಎಸ್ ಕಾರ್ಯಕರ್ತ (RSS Activist) ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದು, ತಮ್ಮ ಅಂಗಾಂಗಗಳನ್ನು ದಾನ (Organ Donation) ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಬೆಳಗಾವಿಯ ಮಹಾಬಳೇಶ್ವರ ನಗರದ ನಿವಾಸಿ ಉಮೇಶ ಬಸವಣ್ಣಿ ದಂಡಗಿ (Umesh Basanni Dandagi) ಎಂಬುವವರ ಮಿದುಳು‌ ನಿಷ್ಕ್ರಿಯಗೊಂಡಿತ್ತು (Barin Dead).ಇದರಿಂದ ಆತನ ಕುಟುಂಬಸ್ಥರು (Family) ಅಂಗಾಗ ದಾನ ಮಾಡುವ ಮೂಲಕಸಾವಿನಲ್ಲೂ ಸಾರ್ಥಕತೆ ಮೆರೆಯುವ ಮೂಲಕನಾಲ್ವರ ಜೀವ ಉಳಿಸಿ ಅಂಧರಿಬ್ಬರ ಬಾಳಿಗೆ ಬೆಳಕಾಗಿದ್ದಾರೆ.

ಮಂಗಳವಾರ ತಡರಾತ್ರಿ ಮನೆಯಲ್ಲಿ ಆಕಸ್ಮಿಕವಾಗಿ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಈ ವೇಳೆ ಅವರನ್ನು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು‌.

ಮೆದುಳು ನಿಷ್ಕ್ರಿಯ

ಆದರೆ ಅವರ ಮಿದುಳು ನಿಷ್ಕ್ರಿಯವಾಗಿತ್ತು. ಅಂಗಾಂಗಳು ಕಾರ್ಯನಿರ್ವಹಿಸುತ್ತಿದ್ದವು. ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಸಹೋದರರು, ಪತ್ನಿ ಹಾಗೂ ಕುಟುಂಬ ಸದಸ್ಯರಿಗೆ ಆಪ್ತಸಮಾಲೋಚನೆ ಮಾಡಿ, ನಿಮ್ಮ ವ್ಯಕ್ತಿ ನೀಡುವ ಅಂಗಾಂಗಳಿಂದ ಮತ್ತೊಬ್ಬರ ಜೀವ ಉಳಿಯುತ್ತದೆ ಎಂದು ಮನವರಿಕೆ ಮಾಡಿಕೊಡಲಾಯಿತು.

ಹೃದಯ ಕಸಿ

ಈ ವೇಳೆ ಕುಟುಂಬಸ್ಥರು ಸ್ವಇಚ್ಛೆಯಿಂದ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಕೊಂಡರು. ಬಳಿಕ ವೇಳೆ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಹೃದಯವನು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿಗೆ ಕಸಿ ಮಾಡುವಲ್ಲಿ ಇಲ್ಲಿನ ವೈದ್ಯರು‌ ಮುಂದಾದರು.

ಇದನ್ನೂ ಓದಿ: Sirsi Jathre: ದಕ್ಷಿಣ ಭಾರತದ ಅತಿದೊಡ್ಡ ಜಾತ್ರೆಗೆ ಚಾಲನೆ, ಗದ್ದುಗೆಯಲ್ಲಿ ವಿರಾಜಮಾನಳಾದ ಶಿರಸಿ ಮಾರಿಕಾಂಬೆ

ಇನ್ನೂ ಲಿವರ್ ಅನ್ನು ಸಾಂಬ್ರಾ ವಿಮಾನ ನಿಲ್ದಾಣದವರಗೆ ರಸ್ತೆ‌ ಮೂಲಕ ಝೀರೋ ಟ್ರಾಫಿಕ್‌ನಲ್ಲಿ ತೆರಳಿ ಅಲ್ಲಿಂದ ವಿಮಾನದಲ್ಲಿ ಬೆಂಗಳೂರಿಗೆ ತೆಗೆದುಕೊಂಡು ಹೋಗಲಾಯಿತು‌. ಇದಲ್ಲದೇ ಕಿಡ್ನಿಗಳನ್ನು ಹುಬ್ಬಳ್ಳಿಯ ತತ್ವಾದರ್ಶ ಹಾಗೂ ಎಸ್ ಡಿಎಂ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಚರ್ಮ ಹಾಗೂ ಕಣ್ಣುಗಳ ದಾನ

ಚರ್ಮ ಹಾಗೂ ಕಣ್ಣುಗಳನ್ನು ದಾನ ಮಾಡಿದರು. ಕಣ್ಣುಗಳನ್ನು ಇಬ್ಬರು ಅಂಧರಿಗೆ ಕಸಿ ಮಾಡಲಾಗುತ್ತದೆ. ಇಬ್ಬರು ಅಂಧರ ಬಾಳಿಗೆ ಬೆಳಕಾಗಿದ್ದಾರೆ.ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿದ್ದ ಕುಟುಂಬವು ಸದಾ ಜನರ ಕಷ್ಟಕ್ಕೆ ಸ್ಪಂಧಿಸುವಲ್ಲಿ ಮುಂದಡಿ ಇರುತ್ತಿತ್ತು. ಉಮೇಶ ಮೃತಪಟ್ಟರೂ ಕೂಡ 4ಜನರ ಜೀವ ಉಳಿಸಿದ ಸಾರ್ಥಕತೆ ಉಮೇಶ ಅವರದ್ದಾಗಿತ್ತು.

ಇನ್ನೂ ಅತ್ಯಂತ ಜನಸಂದಣಿ ಹಾಗೂ ಸಂಚಾರ ದಟ್ಟಣೆಯಿಂದ ಕೂಡಿದ ರಸ್ತೆಯಲ್ಲಿ ಗ್ರೀನ್ ಕಾರಿಡಾರ ನಿರ್ಮಿಸಿ ಅಂಗಾಂಗಳನ್ನು ಶೀಘ್ರ ಸ್ಥಳಾಂತರಿಸಲು ಅವಕಾಶ ಕಲ್ಪಿಸಿಕೊಟ್ಟ ಬೆಳಗಾವಿ ಹಾಗೂ ಹುಬ್ಬಳ್ಳಿ ಪೊಲೀಸ್ ಇಲಾಖೆಯ ಕಾರ್ಯವೂ ಅತ್ಯಂತ ಶ್ಲಾಘನೀಯವಾದದ್ದು.

ಇದನ್ನೂ ಓದಿ: Bengaluru: ನೀವು ವಾಸಿಸುತ್ತಿರುವ ಫ್ಲಾಟ್‌ ಅಧಿಕೃತವೇ? ಇಲ್ಲವಾದ್ರೆ ಬೀದಿಗೆ ಬರಬೇಕಾಗಬಹುದು ಹುಷಾರ್!

ಮೃತರಿಗೆ ತಾಯಿ, ಪತ್ನಿ, ಮಗಳು, ಸಹೋದರರು ಅಪಾರ ಬಂದು ಬಳಗದವರಿದ್ದಾರೆ. ಅಂಗಾಂಗಳನ್ನು ದಾನ ಮಾಡಿದ ವ್ಯಕ್ತಿ ಹಾಗೂ ಆತನ ಕುಟುಂಬ ಸದಸ್ಯರ ಕಾರ್ಯವನ್ನು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ.ಜಾಲಿ ಹಾಗೂ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.

ಅಂಗಾಗ ದಾನದ ಮಹತ್ವವೇನು?

ಆರೋಗ್ಯ ಅಂಗವನ್ನು (ದಾನಿ) ಜೀವಂತವಾಗಿರುವ ಅಥವಾ ಮೃತ ವ್ಯಕ್ತಿಯಿಂದ ತೆಗೆದುಕೊಳ್ಳಲಾಗುತ್ತದೆ. ಅದನ್ನು ಆಯಾ ಸ್ವೀಕರಿಸುವವರು ಅಥವಾ ಅಂಗಾಂಗ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗೆ ಕಸಿಮಾಡಲಾಗುತ್ತದೆ. ದಾನ ಮಾಡಿದ ಅಂಗಗಳು ಸ್ವೀಕರಿಸುವವರಿಗೆ ದೀರ್ಘ ಮತ್ತು ಉತ್ತಮ ಗುಣಮಟ್ಟದ ಜೀವನದ ಅವಕಾಶವನ್ನು ನೀಡುತ್ತದೆ. ಬ್ರೈನ್ ಡೆಡ್ ಎಂದು ವೈದ್ಯರು ಘೋಷಿಸಿದ ಸಂದರ್ಭ ಇಂತಹ ಅನೇಕ ಪ್ರಕರಣಗಳಲ್ಲಿ ಕುಟುಂಬಸ್ಥರು ಅಂಗಾಂಗ ದಾನ ಮಾಡಲು ಮುಂದಾಗುತ್ತಾರೆ.
Published by:Divya D
First published: