ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆರ್.ಎಸ್. ಪಾಟೀಲ ಆಯ್ಕೆ - ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಹೈಕಮಾಂಡ್

ಹಾಲಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಪ್ರಧಾನ ಕಾರ್ಯದರ್ಶಿಗಳಾದ ರವಿ ಬಗಲಿ, ಸಂಗರಾಜ ದೇಸಾಯಿ ಕೂಡ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದರು. ಹಾಲಿ ಅಧ್ಯಕ್ಷರಿಗೆ ವಯಸ್ಸು ಅಡ್ಡಿಯಾದರೆ, ಆರ್. ಎಸ್. ಪಾಟೀಲ ಕೂಚಬಾಲ ಅವರಿಗೆ ರೆಡ್ಡಿ ಸಮುದಾಯ್ಕಕೆ ಸೇರಿರುವುದು ಅನುಕೂಲವಾಗಿದೆ.

news18
Updated:January 12, 2020, 2:59 PM IST
ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆರ್.ಎಸ್. ಪಾಟೀಲ ಆಯ್ಕೆ - ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಹೈಕಮಾಂಡ್
ಆರ್.ಎಸ್. ಪಾಟೀಲ ಕೂಚಬಾಳ
  • News18
  • Last Updated: January 12, 2020, 2:59 PM IST
  • Share this:
ವಿಜಯಪುರ(ಜ. 12): ವಿಜಯಪುರ ಬಿಜೆಪಿ ನೂತನ ಅಧ್ಯಕ್ಷರಾಗಿ ಆರ್.ಎಸ್. ಪಾಟೀಲ ಕೂಚಬಾಳ ಆಯ್ಕೆಯಾಗಿದ್ದಾರೆ. ವಿಜಯಪುದಲ್ಲಿ ಇಂದು ಬಿಜೆಪಿ ರಾಜ್ಯ ಚುನಾವಣೆ ಉಸ್ತುವಾರಿ ಹಾಲಪ್ಪ ಆಚಾರ ಉಸ್ತುವಾರಿಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ.

ಈವರೆಗೆ 2 ಬಾರಿ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಆರ್. ಎಸ್. ಪಾಟೀಲ ಕೂಚಬಾಳ, ಈ ಹಿಂದೆ ಮುದ್ದೇಬಿಹಾಳ ವಿಧಾನಸಭೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರು. ಆದರೆ, ಎ.ಎಸ್. ಪಾಟೀಲ ನಡಹಳ್ಳಿ ಅವರಿಗೆ ಟಿಕೆಟ್ ನೀಡಿದ್ದರಿಂದ ಅವರು ಟಿಕೆಟ್ ವಂಚಿತರಾಗಿದ್ದರು.

ಇದನ್ನೂ ಓದಿ: ಕೊಚ್ಚಿ ಮಾದರಿಯಲ್ಲಿ ಆದೇಶ ಬಂದರೆ ಬೆಂಗಳೂರಿನಲ್ಲಿ ನೆಲಕ್ಕುರುಳುತ್ತವೆ ಸಾವಿರಾರು ಅಕ್ರಮ ಕಟ್ಟಡಗಳು!

ದೇವರ ಹಿಪ್ಪರಗಿ ಕ್ಷೇತ್ರದ ಬಿಜೆಪಿ ಶಾಸಕ ಸೋಮನಗೌಡ ಬಿ. ಪಾಟೀಲ್ ಅವರ ಆಪ್ತರಾಗಿರುವ ಕೂಚಬಾಳ ಅವರು ರೆಡ್ಡಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸೋಮನಗೌಡ ಪಾಟೀಲ ಮತ್ತು ಮುದ್ದೇಬಿಹಾಳ ಬಿಜೆಪಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಇಬ್ಬರೂ ಕೂಡ ಇದೇ ರೆಡ್ಡಿ ಸಮುದಾಯದ ಮುಖಂಡರೇ ಆಗಿದ್ದಾರೆ. ಈ ಇಬ್ಬರಿಗೂ ಭವಿಷ್ಯದಲ್ಲಿ ಪ್ರತಿಸ್ಪರ್ಧಿಯಾಗುವುದನ್ನು ತಪ್ಪಿಸಲು ಕೂಚಬಾಳ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ಮಾಡುವ ಮೂಲಕ ಬಿಜೆಪಿ ಜಾಣ ಆಯ್ಕೆ ಮಾಡಿದೆ. ಅಲ್ಲದೇ, ಈವರೆಗೂ ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನ ರೆಡ್ಡಿ ಸಮುದಾಯಕ್ಕೆ ಸಿಗದ ಹಿನ್ನೆಲೆಯಲ್ಲಿ ಈ ಬಾರಿ ಅವಕಾಶ ಕಲ್ಪಿಸಲಾಗಿದೆ ಎನ್ನಲಾಗಿದೆ.

ರಾಜ್ಯ ಚುನಾವಣೆ ಉಸ್ತುವಾರಿ ಹಾಲಪ್ಪ ಆಚಾರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಇಂದು ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಆಗಮನಕ್ಕೂ ಮುಂಚೆ ಈ ಆಯ್ಕೆ ನಡೆಸಲಾಗಿದೆ.  ಇದರಿಂದಾಗಿ ಇಂದು ಆರ್.ಎಸ್. ಪಾಟೀಲ ಕೂಚಬಾಳ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಖಲಿಸ್ತಾನದ ಪ್ರತ್ಯೇಕತಾವಾದಿಯ ಬಂಧನ; ಸಿಸಿಬಿ ಪೊಲೀಸರಿಂದ ಕಾರ್ಯಾಚರಣೆ

ನಳೀನಕುಮಾರ ಕಟೀಲ ಇಂದು ಪೌರತ್ವ ಕಾಯಿದೆಯ ಬಗ್ಗೆ ಅರಿವು ಮೂಡಿಸಲು ವಿಜಯಪುರ ನಗರಕ್ಕೆ ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮದ ಸಂದರ್ಭದಲ್ಲಿಯೇ ಅಧಿಕಾರ ಸ್ವೀಕರಿಸಿದರೆ, ಮತ್ತೊಂದು ಕಾರ್ಯಕ್ರಮದ ಖರ್ಚು ಉಳಿತಾಯವಾಗಲಿದೆ ಎಂದೇ ಅಂದಾಜಿಸಲಾಗಿದೆ.ಈ ಮಧ್ಯೆ ಮತ್ತೊಂದು ಅವಧಿಗೆ ಅಧ್ಯಕ್ಷರಾಗಲು ಇಷ್ಟಪಟ್ಟಿದ್ದ ಹಾಲಿ ಅಧ್ಯಕ್ಷ ಚಂದ್ರಶೇಖರ ಕವಟಗಿ ಅವರಿಗೆ ವಯಸ್ಸು ಅಡ್ಡಿಯಾಗಿದೆ. ಜಿಲ್ಲಾಧ್ಯಕ್ಷರಾಗಲು ಬಿಜೆಪಿ ನಿಗದಿಪಡಿಸಿರುವ ವಯೋಮಿತಿಗಿಂತ ಚಂದ್ರಶೇಖರ ಕವಟಗಿ ಅವರ ವಯಸ್ಸು ಹೆಚ್ಚು. ಅಲ್ಲದೇ, ಮತ್ತೊಬ್ಬ ಆಕಾಂಕ್ಷಿ ರವಿಕಾಂತ ಬಗಲಿ ಅವರು ಪ್ರಬಲ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದ್ದರೂ ಅವರು ಯತ್ನಾಳ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ, ಸಂಗರಾಜ ದೇಸಾಯಿ ಲಿಂಗಾಯಿತ ಗಾಣಿಗ ಸಮಾಜಕ್ಕೆ ಸೇರಿದ್ದರೂ, ಅವರು ಯಡಿಯೂರಪ್ಪ ಬಿಜೆಪಿ ತೊರೆದಾಗ ಕೆಜೆಪಿ ಸೇರಿದ್ದರು. ಈ ಅಂಶ ಅವರಿಗೆ ಹಿನ್ನಡೆಗೆ ಕಾರಣವಾಗಿದೆ. ಮತ್ತೊಬ್ಬ ಮುಖಂಡ ಅಶೋಕ ಅಲ್ಲಾಪೂರ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದರೂ, ಅವರು ಎಲೆಮರೆಯ ಕಾಯಿಯಂತಿರುವುದು ಹಿನ್ನಡೆಗೆ ಕಾರಣ ಎನ್ನಲಾಗಿದೆ.

ಈ ಎಲ್ಲ ಅಂಶಗಳನ್ನು ಪರಿಗಣಿಸಿ ಆರ್.ಎಸ್. ಪಾಟೀಲ ಕೂಚಬಾಳ ಅವರಿಗೆ ವಿಜಯಪುರ ಬಿಜೆಪಿ ನೂತನ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದೇ ಅರ್ಥೈಸಲಾಗುತ್ತಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:January 12, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ