HOME » NEWS » State » RS 628 CRORE GIVEN BY THE NDRF TO THE STATE IS NOT ENOUGH GRANT GIVE MORE MINISTER R ASHOK REQUEST HK

ಎನ್​​ಡಿಆರ್​ಎಫ್ ಅಡಿ ನೀಡಿದ 628 ಕೋಟಿ ರೂ ಸಾಕಾಗಲ್ಲ, ಇನ್ನೂ ಹೆಚ್ಚಿನ ಅನುದಾನ ನೀಡಿ ; ಸಚಿವ ಆರ್ ಅಶೋಕ್ ಮನವಿ

ಬೆಂಗಳೂರು ಸಚಿವರಿಗೂ ಮಳೆ ಬಿದ್ದ ಜಾಗಕ್ಕೆ ಹೋಗಲು ಸೂಚನೆ ನೀಡುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೂ ತರುತ್ತೇನೆ. ನಾಳೆ ಸಿಎಂ ಮಳೆ, ಕೊರೋನಾ ವಿಚಾರವಾಗಿ ಡಿಸಿಗಳ ಜೊತೆ ವಿಡಿಯೋ ಸಭೆ ಮಾಡುತ್ತಾರೆ

news18-kannada
Updated:September 9, 2020, 3:59 PM IST
ಎನ್​​ಡಿಆರ್​ಎಫ್ ಅಡಿ ನೀಡಿದ 628 ಕೋಟಿ ರೂ ಸಾಕಾಗಲ್ಲ, ಇನ್ನೂ ಹೆಚ್ಚಿನ ಅನುದಾನ ನೀಡಿ ; ಸಚಿವ ಆರ್ ಅಶೋಕ್ ಮನವಿ
ಸಚಿವ ಆರ್. ಅಶೋಕ್
  • Share this:
ಬೆಂಗಳೂರು(ಸೆಪ್ಟೆಂಬರ್​.09): ರಾಜ್ಯದಲ್ಲಿ ಪ್ರವಾಹದಿಂದ ಒಟ್ಟು 8071 ಕೋಟಿ ರೂಪಾಯಿ ಹಾನಿಯಾಗಿದೆ. ಎನ್​​ಡಿಆರ್​ಎಫ್​​ನಿಯಮಗಳ ಪ್ರಕಾರ 628 ಕೋಟಿ ರೂಪಾಯಿ ಹಣ ನೀಡಿದ್ದಾರೆ. ಆದರೆ, ಇಷ್ಟು ಹಣ ಸಾಕಾಗುವುದಿಲ್ಲ, ಇನ್ನೂ ಹೆಚ್ಚು ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ ಎಂದು ಕಂದಾಯ ಸಚಿವ ಆರ್​ ಅಶೋಕ್​​​ ತಿಳಿಸಿದರು. ಕೇಂದ್ರ ತಂಡದ ಜೊತೆಗೆ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ತಂಡಗಳಾಗಿ ಕೇಂದ್ರ ತಂಡ ಎಲ್ಲಾ ಕಡೆ ಒಂದು ಗಂಟೆಗೂ ಹೆಚ್ಚು ಸಮಯ ಅಧ್ಯಯನ ಮಾಡಿದೆ. 200-300 ಕಿಲೋ ಮೀಟರ್ ಪ್ರವಾಸ ಮಾಡಿ ಅಧ್ಯಯನ ಮಾಡಿದೆ. ಒಂದು ಕಡೆ ಮಾತ್ರ ಗಲಾಟೆ ಆಗಿದೆ. ಕೊಡಗು, ಬೆಳಗಾವಿ ಸೇರಿದಂತೆ ಹಲವು ಕಡೆ ಭೇಟಿ ನೀಡಿದ್ದಾರೆ. ಕೇಂದ್ರ ತಂಡಕ್ಕೆ ಆಯಾ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಸಚಿವರು ಹೇಳಿದರು.

ಮೂರು ಭಾಗಗಳಾಗಿ ನಮ್ಮ ಅಧಿಕಾರಿಗಳ ಜೊತೆ ಕೇಂದ್ರ ತಂಡ ಸ್ಥಳ‌ ವೀಕ್ಷಣೆ ಮಾಡಿದ್ದಾರೆ. ಆಯಾ ಜಿಲ್ಲಾಧಿಕಾರಿಗಳು ಪ್ರವಾಹದ ಪೋಟೋ ನೀಡಿ, ಮುಖ್ಯಮಂತ್ರಿಗಳ ಜೊತೆ ಕೂಡ ಸಭೆ ಮಾಡಿದ್ದಾರೆ. ಕೃಷಿ ಹಾನಿ- 3,31,170 ಹೆಕ್ಟೇರ್, ತೋಟಗಾರಿಕೆ- 32976 ಹೆಕ್ಟೇರ್, ಮನೆಗಳ ಹಾನಿ-10978, ರಸ್ತೆಗಳು - 14182 ಕಿ. ಮೀ ಹಾನಿಯಾಗಿದೆ. ಸೇತುವೆಗಳು -1268 ಹಾನಿ, ಕೆರೆಗಳು -360 ಹಾನಿ, ಸರ್ಕಾರಿ ಕಟ್ಟಡಗಳು -3168 ಹಾನಿಯಾಗಿವೆ. ಒಟ್ಟು 8071 ಕೋಟಿ ರೂಪಾಯಿ ಹಾನಿ ಆಗಿದೆ ಅಂತ ಅಂದಾಜು ಮಾಡಿದ್ದೇವೆ ಎಂದರು

 ನಾಳೆ ಜಿಲ್ಲಾಧಿಕಾರಿಗಳ ಜೊತೆಗೆ  ಸಿಎಂ ಸಭೆ

ಬೆಂಗಳೂರಿನಲ್ಲಿ ಮಳೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ರಾತ್ರಿ ಏಕಾಏಕಿಯಾಗಿ ಮಳೆ ಬಂದಿದೆ. ನಮ್ಮ ಶಾಸಕರುಗಳು, ಸಚಿವರುಗಳು ಅವರ ಕ್ಷೇತ್ರಕ್ಕೆ ಹೋಗಲು ಸೂಚನೆ ನೀಡಿದ್ದೇನೆ. ನಾನು ಕೂಡಾ ಅನೇಕ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದು, ಜೊತೆಗೆ ಸಚಿವ ಭೈರತಿ ಬಸವರಾಜ್ ಕೂಡ ಅನೇಕ ಕಡೆ ಹೋಗಿದ್ದಾರೆ‌ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ : Sira By Election : ಉಪಚುನಾವಣೆಗೆ ಮುನ್ನವೇ ಕಾವೇರಿದ ರಾಜಕೀಯ; ಶಿರಾ ಕ್ಷೇತ್ರದಲ್ಲಿ ಖಾತೆ ತೆರೆಯಲು ಬಿಜೆಪಿ ಸಿದ್ಧತೆ

ಬೆಂಗಳೂರು ಸಚಿವರಿಗೂ ಮಳೆ ಬಿದ್ದ ಜಾಗಕ್ಕೆ ಹೋಗಲು ಸೂಚನೆ ನೀಡುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೂ ತರುತ್ತೇನೆ. ನಾಳೆ ಸಿಎಂ ಮಳೆ, ಕೊರೋನಾ ವಿಚಾರವಾಗಿ ಡಿಸಿಗಳ ಜೊತೆ ವಿಡಿಯೋ ಸಭೆ ಮಾಡುತ್ತಾರೆ ಎಂದರು.
ಡ್ರಗ್ಸ್ ಪ್ರಕರಣದಲ್ಲಿ ಶಾಸಕ ಜಮೀರ್ ಅಹಮ್ಮದ್ ಹೆಸರು ಪ್ರಸ್ತಾಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಗೃಹ ಸಚಿವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಅದರ ಬಗ್ಗೆ ಏನು ಮಾತನಾಡುವುದಿಲ್ಲ. ತನಿಖೆ ನಡೆಯುತ್ತಿದೆ. ಗೃಹ ಸಚಿವರೇ ಅದರ ಬಗ್ಗೆ ಪ್ರತಿಕ್ರಿಯೆ ಕೊಡುತ್ತಾರೆ ಎಂದು ಸಚಿವ ಆರ್​ ಅಶೋಕ್​​​ ತಿಳಿಸಿದರು.
Published by: G Hareeshkumar
First published: September 9, 2020, 3:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories