ಕೋಲಾರ(ಮೇ.5): ಕೋಲಾರದ (Kolar) ಹಂಚಾಳ ಬಳಿ ಇರುವ ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್ನ ಐಷಾರಾಮಿ ವಿಲ್ಲಾದ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ನಿನ್ನೆ ಒಟ್ಟು 4 ಕೋಟಿ 5 ಲಕ್ಷ ರೂ. ನಗದು (Money) ಪತ್ತೆಯಾಗಿದ್ದು, ಭಾರೀ ಸಂಚಲನ ಸೃಷ್ಟಿಸಿತ್ತು. ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ ಎಂಬುವರಿಗೆ ಸೇರಿದ ವಿಲ್ಲಾ ಇದಾಗಿದ್ದು, ವಿಲ್ಲಾ ಬಳಿ ಬಿಟ್ಟು ಹೋಗಿದ್ದ ಕಾರಿನಲ್ಲಿ 3 ಗೋಣಿ ಚೀಲದಲ್ಲಿ ಬರೋಬ್ಬರಿ 1.5 ಕೋಟಿ ರೂಪಾಯಿ ಇತ್ತು.
ಅತ್ತ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿದ್ದರಿಂದ ಕಾರನ್ನು ವಿಲ್ಲಾ ಬಳಿಯೇ ಬಿಟ್ಟು ಪರಾರಿಯಾಗಿದ್ದರು. ಬಳಿಕ ವಿಲ್ಲಾವನ್ನೂ ಪರಿಶೀಲಿಸಿದ್ದ ಪೊಲೀಸರು 2.54 ಕೋಟಿ ರೂಪಾಯಿ ಹಣ ಪತ್ತೆ ಹಚ್ಚಿದ್ದರು. ಒಟ್ಟಾರೆಯಾಗಿ ಇಲ್ಲಿ ಅಕ್ರಮವಾಗಿ ಇಟ್ಟಿದ್ದ ಸುಮಾರು ₹ 4.04 ಕೋಟಿ ವಶಕ್ಕೆ ಪಡೆಯಲಾಗಿತ್ತು. ಆದರೀಗ ಈ ಹಣ ಯಾರದ್ದು ಎಂಬ ಮಾಹಿತಿಯೂ ಬಯಲಾಗಿದೆ.
ಇದನ್ನೂ ಓದಿ: Karnataka Election News: ಸುದೀಪ್ ಅಭಿಮಾನಿಗಳಿಗೆ ಪೊಲೀಸರ ಲಾಠಿ ಏಟು!
ಹೌದು ಕೋಲಾರದ ಹಂಚಾಳ ಗ್ರಾಮದ ಬಳಿಯ ಐಷಾರಾಮಿ ಜಿಯೋನ್ ಹಿಲ್ಸ್ ಗಾಲ್ಪ್ ವಿಲ್ಲಾ ಒಳಗೆ 2.54 ಕೋಟಿ, ವಿಲ್ಲಾ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿ 1.5 ಕೋಟಿ ಮೊತ್ತ ಪತ್ತೆಯಾದ ಬಳಿಕ ಭಾರೀ ಕೋಲಾಹಲ ಸೃಷ್ಟಿಯಾಗಿತ್ತು. ಅಲ್ಲದೇ ಈ ಹಣವನ್ನು ಬಂಗಾರಪೇಟೆ ಕ್ಷೇತ್ರದ ಪಂಚಾಯಿತಿವಾರು ಹೆಸರು ಬರೆದು ಹಣದ ಬಂಡಲ್ ಮಾಡಿ ಇಡಲಾಗಿತ್ತು.
ಇನ್ನು ಈ ಹಣ ಯಾರದ್ದೆಂದು ತನಿಖೆ ನಡೆಸಲಾಗಿದ್ದು, ಈ ವೇಳೆ ಬಂಗಾರಪೇಟೆ ಕೈ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಆಪ್ತ ರಮೇಶ್ ಯಾದವ್ ಮನೆಯಲ್ಲಿ ಪತ್ತೆಯಾಗಿದೆ ಎಂಬುವುದು ತಿಳಿದು ಬಂದಿದೆ. ಅಲ್ಲದೇ ಹಣ ಪತ್ತೆಯಾದ ಕಾರು ನಾರಾಯಣಸ್ವಾಮಿಯವರಿಗೇ ಸೇರಿದ್ದು ಎಂಬುವುದೂ ತಿಳಿದು ಬಂದಿದೆ.
ಹೀಗಾಗಿ ರೇಡ್ನಲ್ಲಿ ಸಿಕ್ಕಿರುವ ಹಣ ಬಂಗಾರಪೇಟೆ ಕೈ ಅಭ್ಯರ್ಥಿ ಎಸ್.ಎನ್ ನಾರಾಯಣಸ್ವಾಮಿಗೆ ಸೇರಿದ್ದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ ಇದು ಮತದಾರರಿಗೆ ಹಂಚಲು ಕೂಡಿಟ್ಟ ಹಣವಾಗಿರಬಹುದು ಎಂದು ಊಹಿಸಲಾಗಿದ್ದು, ಹಣದ ಜೊತೆ ನಾರಾಯಣಸ್ವಾಮಿ ಹೆಸರಿರೊ ಎನ್ವಲಪ್ ಕವರ್ಗಳೂ ಪತ್ತೆಯಾಗಿವೆ ಎನ್ನಲಾಗಿದೆ.
ಇದನ್ನೂ ಓದಿ: Karnataka Election 2023: ಕೈ ಪ್ರಣಾಳಿಕೆಗೆ ಬೆಂಕಿ ಇಟ್ಟ ಈಶ್ವರಪ್ಪ; ಕಾಂಗ್ರೆಸ್ನಿಂದ ಭಯೋತ್ಪಾದನೆ ಕುಮ್ಮಕ್ಕು!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ