ಆರ್​ಆರ್​ ನಗರ ಉಪ ಚುನಾವಣೆ: ಹಣ-ಕುಕ್ಕರ್​ ಕೊಟ್ಟು ಮತ ಕೇಳುತ್ತಿರುವ ಮುನಿರತ್ನ, ಕಾಂಗ್ರೆಸ್​ ನಾಯಕರಿಂದ ದೂರು

ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಗೆ ಈ ಚುನಾವಣೆಯಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಹಾಗೂ ಡಿ.ಕೆ. ಸುರೇಶ್​ ಕ್ಷೇತ್ರದಲ್ಲಿ ಮಿಂಚಿನ ಪ್ರಚಾರ ನಡೆಸುತ್ತಿದ್ದು ಮುನಿರತ್ನ ಅವರನ್ನು ಸೋಲಿಸಲೇಬೇಕು ಎಂದು ಪಣತೊಟ್ಟಿದ್ದಾರೆ.

ಮುನಿರತ್ನ

ಮುನಿರತ್ನ

 • Share this:
  ಬೆಂಗಳೂರು (ಅಕ್ಟೋಬರ್​ 20); ರಾಜರಾಜೇಶ್ವರಿ ನಗರ (ಆರ್​ಆರ್​ ನಗರ) ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಎಂದು ಅಡ್ಡ ದಾರಿ ಹಿಡಿದಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ ಮತದಾರರಿಗೆ ಹಣ ನೀಡಿ ಗುರುತಿನ ಚೀಟಿಯನ್ನು ಪಡೆಯುತ್ತಿದ್ದಾರೆ. ಅಲ್ಲದೆ, ಮತಕ್ಕೆ ಕುಕ್ಕರ್​ ಸೀರೆ ಕೊಡುವ ಮೂಲಕ ಅಕ್ರಮ ಎಸಗುತ್ತಿದ್ದಾರೆ ಎಂದು ಕಾಂಗ್ರೆಸ್​ ನಾಯಕರು ಆರೋಪಿಸಿದ್ದಾರೆ. ಅಲ್ಲದೆ, ಚುನಾವಣಾ ಆಯುಕ್ತರಿಗೆ ದೂರು ನೀಡಲು ಮುಂದಾಗಿದ್ದಾರೆ.

  ಮುನಿರತ್ನ ಕಾಂಗ್ರೆಸ್​ ಪಕ್ಷದಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ ಕಾರಣಕ್ಕೆ ಆರ್​ಆರ್​ ನಗರದಲ್ಲಿ ಮತ್ತೆ ಉಪ ಚುನಾವಣೆ ಎದುರಾಗಿದೆ. ಅಸಲಿಗೆ ಆರ್​ಆರ್​ ನಗರಕ್ಕೆ ಕಳೆದ ವರ್ಷವೇ ಚುನಾವಣೆ ನಡೆಯಬೇಕಿತ್ತು. ಆದರೆ, ವೋಡರ್​ ಐಡಿ ಪ್ರಕರಣ ಇನ್ನೂ ಜೀವಂತ ಇದ್ದ ಕಾರಣ ಕೋರ್ಟ್​ ಚುನಾವಣೆಗೆ ಅನುಮತಿ ನೀಡಿರಲಿಲ್ಲ. ಆದರೆ, ಇದೀಗ ಕೊನೆಗೂ ಚುನಾವಣೆ ಎದುರಾಗಿದೆ.

  ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಗೆ ಈ ಚುನಾವಣೆಯಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಹಾಗೂ ಡಿ.ಕೆ. ಸುರೇಶ್​ ಕ್ಷೇತ್ರದಲ್ಲಿ ಮಿಂಚಿನ ಪ್ರಚಾರ ನಡೆಸುತ್ತಿದ್ದು ಮುನಿರತ್ನ ಅವರನ್ನು ಸೋಲಿಸಲೇಬೇಕು ಎಂದು ಪಣತೊಟ್ಟಿದ್ದಾರೆ. ಹೀಗಾಗಿ ಆರ್​ಆರ್​ ನಗರ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ.

  ಇದನ್ನೂ ಓದಿ : ಇಂದು ಸಂಜೆ 6 ಗಂಟೆಗೆ ಮನ್​ ಕಿ ಬಾತ್ ಕಾರ್ಯಕ್ರಮದಲ್ಲಿ ಜನರಿಗೆ ವಿಶೇಷ ಸಂದೇಶ ನೀಡಲಿರುವ ಪ್ರಧಾನಿ ಮೋದಿ

  ಆದರೆ, ಈ ನಡುವೆ ಗೆಲುವು ಸಾಧಿಸಲೇಬೇಕು ಎಂಬ ಕಾರಣಕ್ಕಾಗಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಕ್ಷೇತ್ರದಲ್ಲಿ ಜನರಿಗೆ ಹಣ, ಸೀರೆ ಮತ್ತು ಕುಕ್ಕರ್​ ನೀಡಿ ಮತಚೀಟಿಯನ್ನು ಅಕ್ರಮವಾಗಿ ಪಡೆಯುತ್ತಿದ್ದಾರೆ. ಅಲ್ಲದೆ, ಬಿಜೆಪಿ ಕಾರ್ಯಕರ್ತರು ಹಣ ನೀಡಿ ಬಿಜೆಪಿ ಮತ ಎಂಬ ಜನರಿಂದ ಬರೆಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಮುನಿರತ್ನ ವಿರುದ್ಧ ಕಾಂಗ್ರೆಸ್​ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಲು ಮುಂದಾಗಿದ್ದಾರೆ. ಸಂಜೆ 4ಕ್ಕೆ ದೂರು ನೀಡಲಿದ್ದಾರೆ ಎಂದು ತಿಳಿದುಬಂದಿದೆ.

  ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ನೇತೃತ್ವದಲ್ಲಿ ದೂರು ನೀಡಲಿದ್ದು, ಇದೀಗ ವೋಟರ್ ಐಡಿಗಳನ್ನು ಜನರಿಗೆ ವಾಪಸ್​ ನೀಡುವಂತೆ ದೂರಿನಲ್ಲಿ ಮನವಿ ಮಾಡಲಿದ್ದಾರೆ ಎಂದು ಕಾಂಗ್ರೆಸ್​ ಮೂಲಗಳು ತಿಳಿಸಿವೆ.
  Published by:MAshok Kumar
  First published: