ಆರ್ ಆರ್ ನಗರ ಉಪ ಚುನಾವಣೆ
ಮತಕೇಂದ್ರದ ಬಳಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಹ್ಯಾಂಡ್ ಗ್ಲೌಸ್
ಸರ್ಕಾರ ಮತದಾನ ಮಾಡಲು ಹ್ಯಾಂಡ್ ಗ್ಲೌಸ್ ವಿತರಣೆ ಮಾಡಿತು
ಆದ್ರೆ ಗ್ಲೌಸ್ ಬಳಸಿದ ನಂತರ ವಿಲೇವಾರಿಗೆ ಪ್ಲಾನ್ ಮಾಡದ ಅಧಿಕಾರಿಗಳು
ಮತ ಕೇಂದ್ರಗಳ ಬಳಿ ಚೆಲ್ಲಾಪಿಲ್ಲಿಯಾಗಿ ಬಿದ್ದುರುವ ಹ್ಯಾಂಡ್ ಗ್ಲೌಸ್
ಜಾಲಹಳ್ಳಿಯ ಸಿದ್ದಾರ್ಥ ನಗರದ ಮತಕೇಂದ್ರದ ಬಳಿ ಘಟನೆ
1, 1A, 2, 2A, 3, 3A, 4, 4A ಮತ ಕೇಂದ್ರಗಳ ಬಳಿ ಹ್ಯಾಂಡ್ ಗ್ಲೌಸ್ ಆತಂಕ
ಮತಗಟ್ಟೆ ಸುತ್ತಮುತ್ತಲ ನಿವಾಸಿಗಳಲ್ಲಿ ಆತಂಕ
ಶಿರಾ ವಿಧಾನಸಭಾ ಕ್ಷೇತ್ರ ಮತ್ತು ಆರ್ಆರ್ ನಗರ ವಿಧಾನಸಭಾ ಕ್ಷೇತ್ರಕ್ಕೆ ಇಂದು (ನ. 3) ಉಪಚುನಾವಣೆ ನಡೆಯುತ್ತಿದೆ. ಮತದಾನ ಪ್ರಕ್ರಿಯೆ ಬೆಳಗ್ಗೆ 7 ಗಂಟೆಗೆ ಪ್ರಾರಂಭಗೊಂಡಿದೆ. ಶಿರಾದಲ್ಲಿ ಕಾಂಗ್ರೆಸ್ನಿಂದ ಟಿ.ಬಿ ಜಯಚಂದ್ರ, ಬಿಜೆಪಿಯಿಂದ ರಾಜೇಶ್ ಗೌಡ ಹಾಗೂ ಜೆಡಿಎಸ್ ನ ಅಮ್ಮಾಜಮ್ಮ ಅಭ್ಯರ್ಥಿಗಳಾಗಿದ್ದಾರೆ. ಆರ್ಆರ್ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಕುಸುಮಾ, ಬಿಜೆಪಿಯಿಂದ ಮುನಿರತ್ನ ಹಾಗೂ ಜೆಡಿಎಸ್ನಿಂದ ಕೃಷ್ಣಮೂರ್ತಿ ಸ್ಪರ್ಧೆಗೆ ಇಳಿದಿದ್ದಾರೆ. ಇಂದು ನಡೆಯುತ್ತಿರುವ ಎರಡು ಕ್ಷೇತ್ರಗಳ ಉಪಚುನಾವಣೆಯ ಬಗ್ಗೆ ಕ್ಷಣಕ್ಷಣದ ಮಾಹಿತಿ ಇಲ್ಲಿದೆ...