HOME » NEWS » State » RR NAGAR MORE THAN 200 JDS ACTIVIST JOINS CONGRESS PARTY SESR ASTV

ಆರ್​ಆರ್​ನಗರ ಉಪಚುನಾವಣೆ: ಜೆಡಿಎಸ್​ ತೊರೆದು ಕಾಂಗ್ರೆಸ್​ ಸೇರಿದ 200ಕ್ಕೂ ಹೆಚ್ಚು ಕಾರ್ಯಕರ್ತರು

ಕಾಂಗ್ರೆಸ್​​ ಇತಿಹಾಸ ಗಮನಿಸಿ ಮುಖಂಡರು ನಮ್ಮ ಪಕ್ಷ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಾಗಿ ತ್ರಿವರ್ಣ ಧ್ವಜದ ಶಾಲು ಮೈಮೇಲೆ ಹಾಕುವ ಸೌಭಾಗ್ಯ ಎಲ್ಲರಿಗೂ ಸಿಗುವುದಿಲ್ಲ

news18-kannada
Updated:October 16, 2020, 5:56 PM IST
ಆರ್​ಆರ್​ನಗರ ಉಪಚುನಾವಣೆ: ಜೆಡಿಎಸ್​ ತೊರೆದು ಕಾಂಗ್ರೆಸ್​ ಸೇರಿದ 200ಕ್ಕೂ ಹೆಚ್ಚು ಕಾರ್ಯಕರ್ತರು
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಅ.16): ಉಪಚುನಾವಣೆ ಹೊತ್ತಲ್ಲಿ ಜೆಡಿಎಸ್​ ನಾಯಕರಿಗೆ ಕಾಂಗ್ರೆಸ್​ ರಾಜ್ಯಾಧ್ಯಕ್ಷ ದೊಡ್ಡ ಶಾಕ್​ ನೀಡಿದ್ದಾರೆ. ಮೂರು ಪಕ್ಷಗಳ ಪ್ರತಿಷ್ಠಿತ ಕಣವಾಗಿರುವ ರಾಜಾರಾಜೇಶ್ವರಿನಗರ ಉಪಚುನಾವಣೆ ಕ್ಷೇತ್ರದ 200ಕ್ಕೂ ಹೆಚ್ಚು ಕಾರ್ಯಕರ್ತರು ಪಕ್ಷ ತೊರೆದಿದ್ದಾರೆ.  ಕ್ಷೇತ್ರದ ​ ಟಿಕೆಟ್​ ಕೈ ತಪ್ಪಿದ ಹಿನ್ನಲೆ   ಆರ್​ಆರ್​ ನಗರ ಕ್ಷೇತ್ರದ ಜೆಡಿಎಸ್​​ ಅಧ್ಯಕ್ಷ ಬೆಟ್ಟಸ್ವಾಮಿ ಗೌಡ ಕೆಪಿಸಿಸಿ ಅಧ್ಯಕ್ಷರ ಸಮ್ಮುಖದಲ್ಲಿ ಕಾಂಗ್ರೆಸ್​ ಸೇರಿದ್ದಾರೆ. ಇವರ ಜೊತೆಗೆ 200 ಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ಮುಖಂಡರು ಕಾಂಗ್ರೆಸ್​ ಸೇರ್ಪಡನೆಗೊಂಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್​ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್​ ಅವರನ್ನು ಬರಮಾಡಿಕೊಂಡಿದ್ದಾರೆ. ಈ ವೇಳೆ ಸಂಸದ ಡಿಕೆ ಸುರೇಶ್​ ಕೂಡ ಉಪಸ್ಥಿತರಿದ್ದರು. 



ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್​, ಆರ್ ಆರ್ ನಗರ ಕ್ಷೇತ್ರದ ರಾಜಕಾರಣ, ಕಾಂಗ್ರೆಸ್​​ ಇತಿಹಾಸ ಗಮನಿಸಿ ಮುಖಂಡರು ನಮ್ಮ ಪಕ್ಷ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಾಗಿ ತ್ರಿವರ್ಣ ಧ್ವಜದ ಶಾಲು ಮೈಮೇಲೆ ಹಾಕುವ ಸೌಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಆರ್ ಎಸ್ಎಸ್ ನವರು ಕೂಡ ಕಾಂಗ್ರೆಸ್ ನಲ್ಲಿಂದಲೇ ಹೋದವರು ಎಂದರು.

ಕಾರ್ಯಕರ್ತರನ್ನು ಯಾವುದೇ ಒತ್ತಡ ಹಾಕಿ ಕರೆತಂದಿಲ್ಲ. ನಿಮ್ಮ ಮೇಲೆ ನಾವು ಕೇಸ್ ಹಾಕುತ್ತೇವೆ ಎಂದು ಹೇಳಿಲ್ಲ. ಅವರೇ  ಬೇಷರತ್ತಾಗಿ ಆಗಿ ಬಂದಿದ್ದಾರೆ. ಇದು ನಮಗೂ ಒಳ್ಳೆಯದು. ಮತ್ತೊಮ್ಮೆ ಕಾಂಗ್ರೆಸ್ ಅನ್ನು ಕ್ಷೇತ್ರದಲ್ಲಿ ಉಳಿಸಬೇಕು ಎಂದು ಈ ನಾಯಕರು ನಮ್ಮ ಪಕ್ಷಕ್ಕೆ ಸೇರಿದ್ದಾರೆ. ಮುಂದೆ ಭವಿಷ್ಯ ಇದ್ದರೆ ಅದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಎನ್ನುವುದು ಬಹಳಷ್ಟು ಜನರಿಗೆ ಅರಿವಾಗಿದೆ.

ಬೆಟ್ಟಸ್ವಾಮಿ ಗೌಡ ಒಬ್ಬ ಶಾಸಕರಾಗಬೇಕಾದ ಅರ್ಹತೆ ಉಳ್ಳ ವ್ಯಕ್ತಿ. ಅವರು ಸೇರಿರುವುದು ಸಂತಸ ತಂದಿದೆ. ಇವತ್ತಿನಿಂದ ನೀವು ಕಾಂಗ್ರೆಸ್ ಕಾರ್ಯಕರ್ತರು. ಒಮ್ಮೆ ಕಾಂಗ್ರೆಸ್ ಕಾರ್ಯಕರ್ತ ಆದ ಬಳಿಕ ಹೊಸಬರು ಹಳಬರು ಅಂತ ಭೇದಭಾವ ಇಲ್ಲ ಎಂದರು.

ಎಚ್​ಡಿಕೆಗೆ ಟಾಂಗ್​:

ಪಕ್ಷ ಸೇರ್ಪಡೆಗೊಂಡ ಜೆಡಿಎಸ್ ಕಾರ್ಯಕರ್ತರು ಜೆಡಿಎಸ್ ಬಾವುಟ ಹಿಡಿದುಕೊಂಡು ಬಂದು ಇಲ್ಲಿಟ್ಟು ಕಾಂಗ್ರೆಸ್ ಬಾವುಟ ಹಾಕಿಕೊಳ್ಳುತ್ತೇವೆ ಎಂದರು. ನಾನು ಬೇಡಪ್ಪ ಬೇಡ, ಈಗಾಗಲೇ ಅವರು ಟೆನ್ಶನ್ ನಿಂದ ಏನೇನೋ ಮಾತಾಡುತ್ತಿದ್ದಾರೆ ಎಂದೆ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಅವರನ್ನು ಕುಟುಕಿದರು.
Published by: Seema R
First published: October 16, 2020, 5:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories