HOME » NEWS » State » RR NAGAR CONGRESS CANDIDATE KUSUMA HANUMANTHARAYAPPA ASSETS DETAILS SESR SHM

Kusuma Hanumantharayappa: ಕೋಟಿ ರೂ ಒಡತಿ ಆರ್​ಆರ್​ನಗರ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ

ಒಂದು ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಹೊಂದಿರುವ ಕುಸಮಾ ಸಾಲಗಾರ್ತಿ ಕೂಡ ಆಗಿದ್ದಾರೆ

news18-kannada
Updated:October 14, 2020, 4:19 PM IST
Kusuma Hanumantharayappa: ಕೋಟಿ ರೂ ಒಡತಿ ಆರ್​ಆರ್​ನಗರ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ
ಕಾಂಗ್ರೆಸ್​ ನಾಯಕರ ಜೊತೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ
  • Share this:
ಬೆಂಗಳೂರು (ಅ.13): ಆರ್​ಆರ್​ ನಗರ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರಿಗೆ ಜೊತೆಯಾದರು. ಎರಡನೇ ಬಾರಿ ಇಂದು ನಾಮಪತ್ರ ಸಲ್ಲಿಸಿರುವ ಅವರು ಇದೇ ವೇಳೆ ತಮ್ಮ ಆಸ್ತಿವಿವರವನ್ನು ಸಲ್ಲಿಸಿದ್ದಾರೆ. ಒಂದು ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಹೊಂದಿರುವ ಕುಸಮಾ ಸಾಲಗಾರ್ತಿ ಕೂಡ ಆಗಿದ್ದಾರೆ . ನಾಲ್ಕು ಬ್ಯಾಂಕ್​ ಖಾತೆ ಹೊಂದಿದ್ದು,  45 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕುಸುಮಾ ಅವರು ಹೊಂದಿದ್ದಾರೆ.   ಇನ್ನು ಈ ಆಸ್ತಿ ವಿವರದಲ್ಲಿ ಅವರು, ಗಂಡ ಡಿಕೆ ರವಿ ಹಾಗೂ ಕುಟುಂಬಸ್ಥರ ಹೆಸರನ್ನು ತಮ್ಮ ಅಫಿಡವಿಟ್​ನಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ.

https://www.facebook.com/KusumaH.INC/posts/154520766422492

ಡಿಕೆ ಶಿವಕುಮಾರ್​ ಅವರ ಸಲಹೆಯಂತೆ ಸೋಮವಾರ ಅವರು ನಾಮಪತ್ರ ಸಲ್ಲಿಸಿದ್ದರು ಜ್ಯೋತಿಷಿಗಳ ತಿಳಿಸಿದಂತೆ  12 ಗಂಟೆಯಿಂದ 12. 15ರೊಳಗೆ ಅವರ ತಂದೆ ಹನುಮಂತರಾಯಪ್ಪ ಜೊತೆ ನಾಮಪತ್ರ ಸಲ್ಲಿಸಿದ್ದರು. ಇಂದು ಕಾಂಗ್ರೆಸ್​ ನಾಯಕರೊಂದಿಗೆ ಮತ್ತೊಮ್ಮೆ ಅಧಿಕೃತವಾಗಿ ಅವರು ನಾಮಪತ್ರ ಸಲ್ಲಿಸಿದ್ದಾರೆ.

ಕುಸುಮಾ ಆಸ್ತಿವಿವರ ಇಂತಿದೆ. 

ಒಂದು ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿರುವ ಕುಸುಮಾ, ನಗದು ರೂಪದಲ್ಲಿ 1,41,050 ರೂ ಹೊಂದಿದ್ದಾರೆ. ನಾಲ್ಕು ಬ್ಯಾಂಕ್ ಅಕೌಂಟ್ ಗಳಲ್ಲಿ ಸುಮಾರು 6 ಲಕ್ಷ ಹಣ ಹೊಂದಿದ್ದಾರೆ.  ವಿವಿಧ ಬಾಂಡ್, ಷೇರುಗಳಲ್ಲಿ ಸುಮಾರು 2, 45, 000 ರೂ ಹೂಡಿಕೆ ಮಾಡಿದ್ದು, ಅವರು ಯಾವುದೇ ಸ್ವಂತ ವಾಹನ ಹೊಂದಿಲ್ಲ.

ಅನಿಲ್ ಗೌಡ ಎಚ್ ಎಂಬುವವರಿಂದ ವೈಯಕ್ತಿಕ ಸಾಲ 2,05,000 ರೂ ಸಾಲ ಪಡೆದಿದ್ದು,  ಎ ಬಿಎಚ್ ಇನ್ಫ್ರಾಸ್ಟ್ರಕ್ಚರ್ಸ್ ನಿಂದ 56, 58, 316 ರೂ  ಸಾಲ ಹೊಂದಿದ್ದಾರೆ. 1,100 ಗ್ರಾಂ  ಚಿನ್ನ ಬೆಳ್ಳಿ ಹೊಂದಿದ್ದು ಇದರ ಮಾರುಕಟ್ಟೆ ಮೌಲ್ಯ  45 ಲಕ್ಷ ರೂಪಾಯಿ.

ಇದನ್ನು ಓದಿ: ಚುನಾವಣಾ ನೀತಿ ಸಂಹಿತೆ, ಕೋವಿಡ್-19 ಮಾರ್ಗಸೂಚಿ ಪಾಲಿಸುವುದು ಕಡ್ಡಾಯ: ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ಇವರ ಒಟ್ಟು ಚರಾಸ್ತಿ ಮೌಲ್ಯ1,13,02,197. 38 ರೂ ಆಗಿದ್ದು, ಕೃಷಿ, ವಾಣಿಜ್ಯ ಭೂಮಿ, ಸ್ಥಿರಾಸ್ತಿ ವಿವರ ವಿಭಾಗದಲ್ಲಿ ತಮ್ಮ ಹೆಸರಿನಲ್ಲಿ ಯಾವುದೇ ಕೃಷಿ ಭೂಮಿ ಇಲ್ಲ. ಬಿಬಿಎಂಪಿ ವಾರ್ಡ್ 40 ರಲ್ಲಿ 1500 ಚದರ ಅಡಿ ಹಾಗೂ 2380 ಚದರಡಿ ವಿಸ್ತೀರ್ಣದ ಎರಡು ನಿವೇಶನ ಇದ್ದು ಇದರ ಸದ್ಯದ ಮಾರುಕಟ್ಟೆ ಮೌಲ್ಯ ಒಟ್ಟು 1,37,10,000 ರೂಪಾಯಿ.

ಜೆಡಿಎಸ್​ ವಿ ಕೃಷ್ಣಮೂರ್ತಿ ಹಾಗೂ ಬಿಜೆಪಿ ಅಭ್ಯರ್ಥಿ ಮುನಿರತ್ನ ಕೂಡ ಇಂದು ತಮ್ಮ ಪಕ್ಷದ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿ ಆರ್​ಆರ್​ ನಗರ ಕ್ಷೇತ್ರವಾಗಿದ್ದು, ಅಭ್ಯರ್ಥಿಗಳ ಗೆಲುವಿಗೆ ನಾಯಕರು ಹಲವು ರಣತಂತ್ರ ಏಣೆಯಲು ಮುಂದಾಗಿದ್ದಾರೆ.
Published by: Seema R
First published: October 14, 2020, 4:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories