ಬೆಂಗಳೂರು (ನ. 4): ಆರ್ಆರ್ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳಲ್ಲಿ ನಿನ್ನೆ ಉಪಚುನಾವಣೆ ನಡೆದಿದೆ. ನ. 10ಕ್ಕೆ ಫಲಿತಾಂಶವೂ ಹೊರಬೀಳಲಿದೆ. ಆರ್ಆರ್ ನಗರದಲ್ಲಿ ಮತಯಂತ್ರಗಳನ್ನು ಇಟ್ಟಿರುವ ಸ್ಟ್ರಾಂಗ್ ರೂಂಗೆ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ. ಮೂರು ಹಂತಗಳಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದ್ದು, ಸ್ಟ್ರಾಂಗ್ ರೂಂ ಸುತ್ತ ಹಾಗೂ ದ್ವಾರದ ಬಳಿ ಸಿಎಪಿಎಫ್ ಸಿಬ್ಬಂದಿಯನ್ನು ಕಾವಲಿರಿಸಲಾಗಿದೆ. ಎರಡನೇ ಹಂತದಲ್ಲಿ ನಗರ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ. ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯ ಹೊರ ಆವರಣದಲ್ಲಿ ಕೆಎಸ್ಆರ್ಪಿ ತುಕಡಿಯಿಂದ ಭದ್ರತೆ ಒದಗಿಸಲಾಗಿದೆ.
ಸ್ಟ್ರಾಂಗ್ ರೂಂ ಬಳಿ ಮೂರು ಪಾಳಿಯಂತೆ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ. ಪ್ರತಿ ಪಾಳಿಗೆ 150 ಪೊಲೀಸರ ನಿಯೋಜನೆ ಮಾಡಲಾಗಿದೆ. ಓರ್ವ ಎಸಿಪಿ, ಮೂವರು ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಬಂದೋಬಸ್ತ್ ವಹಿಸಲಾಗಿದೆ. ಆರ್ಆರ್ ನಗರದ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿರುವ ಸ್ಟ್ರಾಂಗ್ ರೂಂ ಹಾಗೂ ಶಾಲೆಯ ಸುತ್ತ ಸಿಸಿಟಿವಿಗಳ ಅಳವಡಿಕೆ ಮಾಡಲಾಗಿದೆ. ಪ್ರತಿಯೊಂದನ್ನು ಸಿಸಿಟಿವಿಗಳ ಮೂಲಕ ಮಾನಿಟರ್ ಮಾಡಲಾಗುತ್ತಿದೆ.
ಇದನ್ನೂ ಓದಿ: ಚಿಕ್ಕಮಗಳೂರು; ಅಕ್ರಮ ಸಂಬಂಧ ಹೊಂದಿದ್ದ ಗಂಡನ ಒತ್ತಾಯಕ್ಕೆ ಹೆಂಡತಿ ಆತ್ಮಹತ್ಯೆ
ಸ್ಟ್ರಾಂಗ್ ರೂಂಗೆ ಪೊಲೀಸರು ಮತ್ತು ಚುನಾವಣಾ ಅಧಿಕಾರಿಗಳು ಹೊರತುಪಡಿಸಿ ಬೇರೆಯವರಿಗೆ ಶಾಲೆ ಪ್ರವೇಶ ನಿರ್ಬಂಧಿಸಲಾಗಿದೆ. ಶಾಲೆಯ ಬಳಿ ಬರುವ ಪ್ರತಿ ವಾಹನ ಹಾಗೂ ಪ್ರತಿಯೊಬ್ಬರನ್ನು ಪರಿಶೀಲನೆ ನಡೆಸಿ ಬಿಡಲಾಗುತ್ತಿದೆ. ನಿನ್ನೆ ಆರ್ಆರ್ ನಗರದಲ್ಲಿ ಶೇ. 45.24ರಷ್ಟು ಮತದಾನ ನಡೆದಿದೆ. ಶಿರಾದಲ್ಲಿ ಶೇ. 82.31ರಷ್ಟು ಮತದಾನ ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ