ಆರ್.ಆರ್ ನಗರ ಉಪ ಚುನಾವಣೆ; ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ಅವರನ್ನು ಬೆಂಬಲಿಸಿದ ಒಕ್ಕಲಿಗರ ಸಭೆ

ಆರ್​.ಆರ್​. ನಗರ ಚುನಾವಣೆ ಕಾಂಗ್ರೆಸ್​ ಪಕ್ಷಕ್ಕಿಂತ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರಿಗೆ ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿ ಹೇಗಾದರೂ ಮಾಡಿ ಮುನಿರತ್ನ ಅವರಿಗೆ ಸೋಲುಣಿಸಲೇಬೇಕು ಎಂದು ನಿರ್ಧರಿಸಿರುವ ಡಿಕೆಶಿ ಮತ್ತು ಅವರ ಸಹೋದರ ಸಂಸದ ಡಿ.ಕೆ. ಸುರೇಶ್​ ಈಗಾಗಲೇ ಕ್ಷೇತ್ರದಾದ್ಯಂತ ಮಿಂಚಿನ ಪ್ರಚಾರ ನಡೆಸುತ್ತಿದ್ದಾರೆ.

ಆರ್​ಆರ್​ ನಗರ ಅಭ್ಯರ್ಥಿ ಕುಸುಮಾ ಮತ್ತು ಡಿಕೆ ಶಿವಕುಮಾರ್​.

ಆರ್​ಆರ್​ ನಗರ ಅಭ್ಯರ್ಥಿ ಕುಸುಮಾ ಮತ್ತು ಡಿಕೆ ಶಿವಕುಮಾರ್​.

 • Share this:
  ಬೆಂಗಳೂರು (ಅಕ್ಟೋಬರ್ 23); ರಾಜ್ಯದಲ್ಲಿ ಉಪ ಚುನಾವಣೆ ಗರಿಗೆದರಿದೆ. ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಿದರೂ ಸಹ ಸರ್ಕಾರ ಸುಭದ್ರವಾಗಿಯೇ ಇರಲಿದೆ. ಆದರೆ, ಆರ್.ಆರ್​. ನಗರದ ಚುನಾವಣೆ ಮಾತ್ರ ಮಾಮೂಲಿ ಚುನಾವಣೆಯಂತಲ್ಲದೆ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಾಟಾಗಿದೆ. ಹೀಗಾಗಿ ಇಲ್ಲಿ ಗೆಲುವು ಸಾಧಿಸುವುದು ಎರಡೂ ಪಕ್ಷಗಳಿಗೆ ಪ್ರತಿಷ್ಠೆಯ ವಿಚಾರವಾಗಿ ಬದಲಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಚುನಾವಣಾ ರಂಗು ಹರಡಿದ್ದು, ಬಿಜೆಪಿ ಮತ್ತು ಕಾಂಗ್ರೆಸ್​ ನಾಯಕರು ಎಡಬಿಡದೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಈ ನಡುವೆ ಒಕ್ಕಲಿಗರ ಸಭೆ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ. ಹೆಚ್ ಅವರಿಗೆ ಬೆಂಬಲ ನೀಡುವುದಾಗಿ ಘೋಷಿಸಿದೆ.

  ಆರ್​.ಆರ್​. ನಗರದ ಐಡಿಯಲ್ ಹೋಮ್ಸ್ ನಲ್ಲಿರುವ ಒಕ್ಕಲಿಗರ ಭವನದಲ್ಲಿ ಇಂದು ಎಲ್ಲಾ ಒಕ್ಕಲಿಗ ನಾಯಕರ ಸಮ್ಮುಖದಲ್ಲಿ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಕೆಪಿಸಿಸಿ ಅದ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕರಾದ ರಾಮಲಿಂಗರೆಡ್ಡಿ, ಸೌಮ್ಯಾ ರೆಡ್ಡಿ ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಭಾಗಿಯಾಗಿದ್ದರು. ಸಭೆಯಲ್ಲಿ ಚರ್ಚೆ ನಡೆಸಿದ ನಾಯಕರು ಕೊನೆಗೆ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ಅವರಿಗೆ ಮತ ನೀಡುವುದಾಗಿ ಘೋಷಿಸಿದ್ದಾರೆ.

  ಬೆಂಗಳೂರು ಗ್ರಾಮಾಂತರ ಲೋಕಸಭೆಗೆ ಸೇರುವ ಆರ್​ಆರ್​ ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗರ ಮತ ಅಧಿಕವಾಗಿದೆ. ಹೀಗಾಗಿ ಒಕ್ಕಲಿಗ ನಾಯಕರು ಇಂದು ಸಭೆ ನಡೆಸಿ ತೆಗೆದುಕೊಂಡಿರುವ ನಿರ್ಧಾರ ಉಪ ಚುನಾವಣೆ ಫಲಿತಾಂಶದ ಮೇಲೆ ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

  ಇನ್ನೂ ಆರ್​.ಆರ್​. ನಗರ ಚುನಾವಣೆ ಕಾಂಗ್ರೆಸ್​ ಪಕ್ಷಕ್ಕಿಂತ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರಿಗೆ ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿ ಹೇಗಾದರೂ ಮಾಡಿ ಮುನಿರತ್ನ ಅವರಿಗೆ ಸೋಲುಣಿಸಲೇಬೇಕು ಎಂದು ನಿರ್ಧರಿಸಿರುವ ಡಿಕೆಶಿ ಮತ್ತು ಅವರ ಸಹೋದರ ಸಂಸದ ಡಿ.ಕೆ. ಸುರೇಶ್​ ಈಗಾಗಲೇ ಕ್ಷೇತ್ರದಾದ್ಯಂತ ಮಿಂಚಿನ ಪ್ರಚಾರ ನಡೆಸುತ್ತಿದ್ದಾರೆ.

  ಈ ನಡುವೆ ರಾಜರಾಜೇಶ್ವರಿ ನಗರದ ಚುನಾವಣೆ ಪ್ರಚಾರದ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲ್ ಇಬ್ಬರ ನಡುವೆ ಗುರುವಾರ ಟ್ವಿಟರ್​ನಲ್ಲಿ ಪರಸ್ಪರ ದೊಡ್ಡ ಮಟ್ಟದ ವಾಗ್ದಾಳಿಯೇ ನಡೆದಿತ್ತು.

  ಇದನ್ನೂ ಓದಿ : ಕೊರೋನಾ ಲಸಿಕೆ ಸಿದ್ಧವಾಗಿದೆ, ಇನ್ನೂ ಒಂದೇ ವಾರದಲ್ಲಿ ಜನರ ಬಳಕೆಗೆ ಲಭ್ಯ: ಡೊನಾಲ್ಡ್​ ಟ್ರಂಪ್ ಘೋಷಣೆ

  ಕಾಂಗ್ರೆಸ್​ ಪಕ್ಷದಲ್ಲಿದ್ದು ಗೆಲುವು ಸಾಧಿಸಿದ್ದ ಶಾಸಕ ಮುನಿರತ್ನ ಕಳೆದ ವರ್ಷ ಬಿಜೆಪಿ ಪಕ್ಷಕ್ಕೆ ಪಕ್ಷಾಂತರ ಮಾಡಿದ್ದರು. ಹೀಗಾಗಿ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಹೀಗಾಗಿ ಆರ್​.ಆರ್​. ನಗರಕ್ಕೆ ಕಳೆದ 10 ತಿಂಗಳ ಹಿಂದೆಯೇ ಚುನಾವಣೆ ನಡೆಯಬೇಕಿತ್ತು.

  ಆದರೆ, ಮುನಿರತ್ನ ವಿರುದ್ಧ ಐಡಿ ಕಾರ್ಡ್​ ಹಗರಣದ ಪ್ರಕರಣ ಕೋರ್ಟ್​ನಲ್ಲಿ ಬಾಕಿ ಇದ್ದ ಕಾರಣ ಈ ಕ್ಷೇತ್ರದ ಚುನಾವಣೆಯನ್ನು ಚುನಾವಣಾ ಆಯೋಗ ಮುಂದೂಡಿತ್ತು. ಆದರೆ, ಈಗ ಚುನಾವಣೆ ನಡೆಯುತ್ತಿದ್ದು ಈ ಕ್ಷೇತ್ರದ ಫಲಿತಾಂಶದ ಮೇಲೆ ಇದೀಗ ಎಲ್ಲರ ಕುತೂಹಲದ ಕಣ್ಣು ನೆಟ್ಟಿದೆ.
  Published by:MAshok Kumar
  First published: