HOME » NEWS » State » RR NAGAR BY ELECTION SECTION 144 TILL NOVEMBER 4TH AND ALCOHOL SALES PROHIBITED LG

ಆರ್​ಆರ್​​ ನಗರ ಉಪಚುನಾವಣೆ: ನ.4ರವರೆಗೆ ನಿಷೇಧಾಜ್ಞೆ, ನಾಳೆವರೆಗೆ ಮದ್ಯ ಮಾರಾಟ ನಿಷೇಧ

ಮೂವರು ಡಿಸಿಪಿ, 8 ಎಸಿಪಿಗಳು, 30 ಜನ ಇನ್ಸ್‌ಪೆಕ್ಟರ್​​ಗಳನ್ನು  ಈಗಾಗಲೇ ಆರ್ ಆರ್ ನಗರದಲ್ಲಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಈವರೆಗೆ ಚುನಾವಣೆ ಸಂಬಂಧ 8 ಎಫ್ಐಆರ್ , 25 ಎನ್​ಸಿಆರ್​​ ದಾಖಲಾಗಿವೆ.

news18-kannada
Updated:November 2, 2020, 2:43 PM IST
ಆರ್​ಆರ್​​ ನಗರ ಉಪಚುನಾವಣೆ: ನ.4ರವರೆಗೆ ನಿಷೇಧಾಜ್ಞೆ, ನಾಳೆವರೆಗೆ ಮದ್ಯ ಮಾರಾಟ ನಿಷೇಧ
ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್
  • Share this:
ಬೆಂಗಳೂರು(ನ.02): ನಾಳೆ ಆರ್ ಆರ್ ನಗರ ಹಾಗೂ ಶಿರಾ ಉಪಚುನಾವಣೆ ನಡೆಯಲಿದೆ. ರಾಜರಾಜೇಶ್ವರಿ ನಗರ ಉಪಚುನಾವಣೆಗೆ ಪೊಲೀಸ್ ಇಲಾಖೆ ವಹಿಸಿರುವ ಬಂದೋಬಸ್ತ್​ ಬಗ್ಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.  ಭದ್ರತೆಗಾಗಿ 2563 ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆರ್​ಆರ್​ ನಗರ ಸೂಕ್ಷ್ಮ ಕ್ಷೇತ್ರವಾಗಿರುವುದರಿಂದ ಅತಿ ಹೆಚ್ಚು ಬಂದೋಬಸ್ತ್ ಕಲ್ಪಿಸಲಾಗುತ್ತದೆ. ಹೀಗಾಗಿ ಮೊಬೈಲ್ ಸ್ಕ್ವಾಡ್ ನಿಯೋಜನೆ ಮಾಡಲಾಗಿದೆ. ಎಲ್ಲಾ ಬೂತ್ ಗಳಿಗೆ ತೆರಳಿ ಸೂಪರ್ ವೈಸ್ ಮಾಡುವುದು ಇವರ ಕೆಲಸವಾಗಿರುತ್ತದೆ.  ಕಾನೂನು ಸುವ್ಯವಸ್ಥೆ ಸಲುವಾಗಿ 36 ಪಿಎಸ್ಐಗಳನ್ನು ನೇಮಕ ಮಾಡಲಾಗಿದೆ. ಇಷ್ಟೇ ಅಲ್ಲದೇ 21  ಮಂದಿ ಇನ್ಸ್‌ಪೆಕ್ಟರ್​​ಗಳನ್ನು ನೇಮಿಸಲಾಗಿದೆ. ಮೂರು ಕಂಪನಿ 3 ಸಿಆರ್​ಪಿಎಫ್​ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. 19 ಕೆಎಸ್​ಆರ್​​ಪಿ ತುಕಡಿಯನ್ನು, 20 ಸಿಎಆರ್​ ತುಕಡಿಯನ್ನು ನಿಯೋಜಿಸಲಾಗಿದೆ ಎಂದರು.

ಜೊತೆಗೆ 32 ಹೊಯ್ಸಳ ವಾಹನಗಳು, 91 ಚೀತಾ ವಾಹನಗಳನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.

ನಾಳೆ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಜೊತೆಗೆ 4ನೇ ತಾರೀಖಿನವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಹೊರಗಡೆಯಿಂದ ಬಂದವರು ಕ್ಷೇತ್ರದಲ್ಲಿ ಇರಬಾರದು. ಯಾರಾದರೂ ಇದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲೆಡೆ ಸ‌ಂಪೂರ್ಣ ಬಂದೋಬಸ್ತ್ ಮಾಡಲಾಗಿದೆ.  ಮತದಾರರು ನಿರ್ಭೀತಿಯಿಂದ ಬಂದು ಮತ ಚಲಾಯಿಸಿ ಎಂದು ಪೊಲೀಸ್ ಕಮೀಷನರ್ ಕಮಲ್ ಪಂತ್ ಹೇಳಿದ್ದಾರೆ.

ನನಗೆ ರಾಜಕೀಯ ಗೊತ್ತಿಲ್ಲ ಅನ್ಕೊಂಡಿದಾರೆ; ಆದ್ರೆ ಈಗ ನನ್ನಾಟ ಶುರುವಾಗಿದೆ; ಸಚಿವ ಎಚ್​.ನಾಗೇಶ್

ಇನ್ನು, ಅತಿ ಸೂಕ್ಷ್ಮ ಮತಗಟ್ಟೆಗಳು 82, ಒಟ್ಟು 678 ಮತಗಟ್ಟೆಗಳನ್ನು ಮಾಡಲಾಗಿದೆ. ಮೂವರು ಡಿಸಿಪಿ, 8 ಎಸಿಪಿಗಳು, 30 ಜನ ಇನ್ಸ್‌ಪೆಕ್ಟರ್​​ಗಳನ್ನು  ಈಗಾಗಲೇ ಆರ್ ಆರ್ ನಗರದಲ್ಲಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಈವರೆಗೆ ಚುನಾವಣೆ ಸಂಬಂಧ 8 ಎಫ್ಐಆರ್ , 25 ಎನ್​ಸಿಆರ್​​ ದಾಖಲಾಗಿವೆ.

ಆರ್​​ ಆರ್​ ನಗರದಲ್ಲಿ ಒಟ್ಟು 678 ಮತಗಟ್ಟೆಗಳು, 141 ಸ್ಥಳಗಳು, 82 ಸೂಕ್ಷ್ಮ ಮತಗಟ್ಟೆಗಳು, 596  ಸಾಮಾನ್ಯ ಮತಗಟ್ಟೆಗನ್ನು ಸ್ಥಾಪಿಸಲಾಗಿದೆ.
ಭದ್ರತೆ

8 ಎಸಿಪಿ,
30 ಇನ್ಸ್‌ಪೆಕ್ಟರ್
ಪಿಎಸ್ಐ 94
ಎಎಸ್ಐ 185
ಪಿಸಿ 1547
ಹೋಂ ಗಾರ್ಡ್ 699
ಒಟ್ಟು 2563 ಸಿಬ್ಬಂದಿ ನಿಯೋಜನೆ
Published by: Latha CG
First published: November 2, 2020, 2:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories