ಆರ್​ ಆರ್​ ನಗರ ಉಪಚುನಾವಣೆ: ಫಲಿತಾಂಶಕ್ಕೂ ಮುನ್ನ ಟೆಂಪಲ್ ರನ್ ನಡೆಸಿದ ಕೈ ಅಭ್ಯರ್ಥಿ ಕುಸುಮಾ

ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಕುಸುಮಾ ಭೇಟಿ ನೀಡಿ ಶಿವನ ಆಶೀರ್ವಾದ ಪಡೆದಿದ್ದಾರೆ. ಬಳಿಕ ಕುಸುಮಾ ಶಕ್ತಿ ದೇವತೆಯ ಮೊರೆ ಹೋಗಿದ್ದು, ರಾಜರಾಜೇಶ್ವರಿ ದೇವಿಯ ಆಶೀರ್ವಾದ ಪಡೆದಿದ್ದಾರೆ.

ಆರ್​ ಆರ್​​ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ

ಆರ್​ ಆರ್​​ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ

 • Share this:
  ಬೆಂಗಳೂರು(ನ.10): ಆರ್​ ಆರ್​ ನಗರ ಮತ್ತು ಶಿರಾ ಕ್ಷೇತ್ರದಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ಮತಎಣಿಕೆ ಆರಂಭವಾಗಿದೆ. ಎರಡೂ ಕ್ಷೇತ್ರಗಳಲ್ಲೂ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಗೆಲುವು ಯಾರದ್ದಾಗಲಿದೆ ಎಂಬ ಕುತೂಹಲ ಮನೆ ಮಾಡಿದೆ. ಇಂದು ಉಪಚುನಾವಣೆ ಫಲಿತಾಂಶ ಹೊರಬೀಳುವ ಹಿನ್ನೆಲೆ ಕಾಂಗ್ರೆಸ್​, ಬಿಜೆಪಿ ಮತ್ತು ಜೆಡಿಎಸ್​ ನಾಯಕರು ಟೆಂಪಲ್ ರನ್ ನಡೆಸಿದ್ದಾರೆ. ಆರ್​ ಆರ್​ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಬೆಳಗ್ಗೆಯಿಂದಲೇ ದೇವರ ಮೊರೆ ಹೋಗಿದ್ದಾರೆ. ಗೆಲುವು ತಮ್ಮದಾಗಬೇಕೆಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಮೊದಲಿಗೆ ಕುಮಾರ ಪಾರ್ಕ್​​ನಲ್ಲಿರುವ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಕುಸುಮಾ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ.

  ಬಳಿಕ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಕುಸುಮಾ ಭೇಟಿ ನೀಡಿ ಶಿವನ ಆಶೀರ್ವಾದ ಪಡೆದಿದ್ದಾರೆ. ಬಳಿಕ ಕುಸುಮಾ ಶಕ್ತಿ ದೇವತೆಯ ಮೊರೆ ಹೋಗಿದ್ದು, ರಾಜರಾಜೇಶ್ವರಿ ದೇವಿಯ ಆಶೀರ್ವಾದ ಪಡೆದಿದ್ದಾರೆ.

  Bihar Assembly Election 2020 Results Live: ಬಿಹಾರ ಚುನಾವಣೆ – ಮತ ಎಣಿಕೆ ಆರಂಭ; ಎನ್​ಡಿಎ ಮಹಾಘಟಬಂಧನ ಸಮಬಲ ಮುನ್ನಡೆ

  ಕಾಂಗ್ರೆಸ್​ಅಭ್ಯರ್ಥಿ ಕುಸುಮಾ ಟೆಂಪಲ್ ರನ್ ನಡೆಸುವುದರಲ್ಲಿ ಬ್ಯುಸಿಯಾಗಿದ್ದರೆ, ಬಿಜೆಪಿ ಅಭ್ಯರ್ಥಿ ಮುನಿರತ್ನ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಫಲಿತಾಂಶ ಬರುವವರೆಗೂ ಮನೆಯಲ್ಲಿಯೇ ಇರುವುದಾಗಿ ಮುನಿರತ್ನ ಹೇಳಿದ್ದಾರೆ ಎನ್ನಲಾಗಿದೆ. ಮುನಿರತ್ನ ಅವರು ನಿನ್ನೆ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದಿದ್ದಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಮುನಿರತ್ನ ನಿನ್ನೆ ತಡರಾತ್ರಿ ಮನೆಗೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.

  ಸದ್ಯ ಮುನಿರತ್ನ ಅವರು ಮನೆಯಲ್ಲಿಯೇ ಕುಳಿತು ಫಲಿತಾಂಶ ವೀಕ್ಷಣೆ ಮಾಡುತ್ತಿದ್ದಾರೆ. ಸದ್ಯ ಆರ್​ ಆರ್​ ನಗರದಲ್ಲಿ ಮೂರನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಮುನ್ನಡೆಯಲ್ಲಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ಹಿನ್ನಡೆ ಸಾಧಿಸಿದ್ದಾರೆ.
  Published by:Latha CG
  First published: