ಬೆಂಗಳೂರು: ಆತ ಕುಖ್ಯಾತ ರೌಡಿ ಶೀಟರ್. ಅಂದುಕೊಂಡಂತೆ ಆಗಿದಿದ್ದರೆ ಇವತ್ತು ಆತ ಗ್ರಾಮ ಪಂಚಾಯಿತಿ ಎಲೆಕ್ಷನ್ ಗೆ ನಾಮಿನೇಷನ್ ಹಾಕುತ್ತಿದ್ದ. ಆದರೆ ಅದೃಷ್ಟ ಕೈಕೊಟ್ಟು ಒಂದು ತಿಂಗಳ ಹಿಂದಿನ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾನೆ. ಆತ ಬೇರ್ಯಾರು ಅಲ್ಲಾ, ಕುಖ್ಯಾತ ರೌಡಿ ಶೀಟರ್ ಕುಣಿಗಲ್ ಗಿರಿ.
ಅಪರಾಧ ಚಟುವಟಿಕೆಗಳಲ್ಲಿ ಸದಾ ಸಕ್ರಿಯನಾಗಿರುತ್ತಿದ್ದ ಗಿರಿ ಇತ್ತೀಚೆಗೆ ತಾನು ಯಾವುದೇ ಅಪರಾಧದಲ್ಲಿ ತೊಡಗಿಲ್ಲ ಅಂತೇಳಿ ಕುಣಿಗಲ್ ನಲ್ಲಿ ಉಳಿದುಕೊಂಡಿದ್ದ. ಆದರೆ ಕುಣಿಗಲ್ ನಲ್ಲಿ ಇದ್ದರೂ ಬೆಂಗಳೂರು ಕ್ರೈಂ ನಲ್ಲಿ ಮಾತ್ರ ಸಕ್ರಿಯನಾಗಿದ್ದ. ಹೀಗೆ ಕಳೆದ ತಿಂಗಳು 7 ರಂದು ಸುಮನಹಳ್ಳಿ ಬಳಿ ಡ್ರೈವರ್ ಮಂಜುನಾಥ್ ಎಂಬಾತನನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಹಳೆ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಮಾಡಿದ್ದರಿಂದ ಕೊಲೆಯಾಗಿದೆ ಎಂದು ಸ್ವತಃ ಮೃತನ ತಂದೆ ಶ್ರೀನಿವಾಸ್ ದೂರು ಕೂಡ ಕೊಟ್ಟಿದ್ದರು.
ಇದನ್ನು ಓದಿ: ಕರ್ನಾಟಕದ ಕಾಶ್ಮೀರ ಕೊಡಗಿಗೆ ತಟ್ಟಿದ ಬುರೇವಿ ಚಂಡಮಾರುತ; ಭಾರೀ ಗಾಳಿಗೆ ನೆಲಕಚ್ಚಿದ ನೂರಾರು ಎಕರೆ ಭತ್ತ, ಕಾಫಿ ಬೆಳೆ
ಪ್ರಕರಣ ಬೆನ್ನತ್ತಿ ಹೋದ ಲಕ್ಷ್ಮಣ ಉರುಫ್ ಸುಳಿ ಸಿಕ್ಕಿಬಿದ್ದಿದ್ದ. ಆತ ನೀಡಿದ ಮಾಹಿತಿ ಮೇರೆಗೆ ಕುಣಿಗಲ್ ಗಿರಿಯನ್ನು ನೆನ್ನೆ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಕುಣಿಗಲ್ ಗಿರಿ ಇಂದು ಕುಣಿಗಲ್ ತಾಲೂಕಿನ ಸಂತೆಮಾವತ್ತೂರು ಗ್ರಾಮ ಪಂಚಾಯ್ತಿಯಲ್ಲಿ ನಾಮಪತ್ರ ಸಲ್ಲಿಸಬೇಕಿತ್ತು. ಹೌದು, ಗ್ರಾಮ ಪಂಚಾಯತ್ ಎಲೆಕ್ಷನ್ ಗೆ ಸ್ಪರ್ಧಿಸಲು ಮುಂದಾಗಿದ್ದ ಗಿರಿ ಇಂದು ನಾಮಿನೇಷನ್ ಫೈಲ್ ಮಾಡಬೇಕಿತ್ತು. ಇದಕ್ಕಾಗಿ ಆತ ಸಾಕಷ್ಟು ಸಿದ್ದತೆಗಳನ್ನು ಮಾಡಿಕೊಂಡಿದ್ದ. ಊರಲ್ಲಿ ಜೊತೆಗಾರಿಗೆಲ್ಲಾ ಬೇಕಾದನ್ನು ಕೊಡಿಸುತ್ತಿದ್ದ. ಆಗಲೇ ಪ್ರಚಾರವೂ ನಡೆದಿತ್ತು. ಹೀಗಿರುವಾಗಲೇ ಕುಣಿಗಲ್ ಗಿರಿ ಕೊಲೆ ಪ್ರಕರಣದಲ್ಲಿ ಈಗ ಕಂಬಿ ಎಣಿಸುತ್ತಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ