Chikkaballapur: ಯಾರದ್ದೋ ಮೇಲಿನ ಕೋಪಕ್ಕೆ ಮತ್ಯಾರದ್ದೋ ಮೇಲೆ ಚಾಕುವಿನಿಂದ ದಾಳಿ; ಆರೋಪಿ ಅರೆಸ್ಟ್

ಇನ್ನೂ ಘಟನೆ ನಡೆದ ಕೇವಲ ನಾಲ್ಕು ಗಂಟೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾರದ್ದೋ ಮೇಲಿನ ಕೋಪಕ್ಕೆ ಈ ರೀತಿ ಮಾರಣಾಂತಿಕ ದಾಳಿ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿಕ್ಕಬಳ್ಳಾಫುರದ (Chikkaballapur) ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ಲಾಂಗ್ ಬೀಸಿದ (Attack) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ, ರೌಡಿಶೀಟರ್ ಅರ್ಜುನ್ ಎಂಬಾತನನ್ನು ಬಂಧಿಸಿದ್ದಾರೆ. ಚಿಕ್ಕಬಳ್ಳಾಫುರ ನಗರದ ಬಾಪೂಜಿ ನಗರದ ನಿವಾಸಿ ಅರ್ಜುನ್ ಬಂಧಿತ ಆರೋಪಿಯಾಗಿದ್ದಾನೆ. ಜುಲೈ 31ರಂದು ರಾತ್ರಿ ನಗರದ ಬಲಮುರಿ ವೃತ್ತ ಬಜಾರ್ ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ಚಾಕುವಿನಿಂದ ದಾಳಿ (Knife Attack) ನಡೆಸಿದ್ದ ಅರ್ಜುನ್ ಪರಾರಿಯಾಗಿದ್ದನು. ಈ ದಾಳಿಯಲ್ಲಿ ಏಳು ಜನರು ಗಾಯಗೊಂಡಿದ್ದು, ಇವರ ಪೈಕಿ ಒಬ್ಬರನ್ನು ಬೆಂಗಳೂರಿನ ಆಸ್ಪತ್ರೆಗೆ (Bengaluru Hospital) ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರು ಜನರಿಗೆ ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ (Chikkaballapur Hospital) ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ಬಳಿಕ ಕಾರ್ಯಪ್ರವೃತ್ತರಾದ ಪೊಲೀಸರು (Police) ಆರೋಪಿಯನ್ನು ಬೆಳಗಿನ ಜಾವ ಸುಮಾರು ಮೂರು ಗಂಟೆಗೆ ಚಿಕ್ಕಬಳ್ಳಾಫುರ ತಾಲೂಕಿನ ಕಳವಾರ ಬಳಿ ದೇವಸ್ಥಾನದ (Kalavara Temple) ಬಳಿ ಆರೋಪಿ ಬಂಧಿಸಿದ್ದಾರೆ. ಬಂಧನದ ವೇಳೆ ಅರ್ಜುನ್ ಬಳಿಯಲ್ಲಿದ್ದ  ಚಾಕು, ಮಚ್ಚು ಲಾಂಗ್ ಗಳನ್ನು ಸೇರಿ ಬೈಕ್ ಜಪ್ತಿ ಮಾಡಿದ್ದಾರೆ.

ಯಾರು ಈ ಅರ್ಜುನ್?

ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಅರ್ಜುನ್ ವಿರುದ್ಧ ರೌಡಿಶೀಟರ್ ಪ್ರಕರಣ ದಾಖಲಾಗಿದೆ. ಕಂದವಾರದ ದೇವಸ್ಥಾನ ಬಳಿಯೇ ಮಲಗಿಕೊಳ್ಳುತ್ತಿದ್ದನು ಎಂದು ತಿಳಿದು ಬಂದಿದೆ.

ದಾಳಿ ನಡೆಸಿದ್ದು ಯಾಕೆ?

ಈ ಘಟನೆಗೂ ಮುನ್ನ ಕೆಲ ದಿನಗಳ ಹಿಂದೆ ತನ್ನ ಪಕ್ಕದಲ್ಲಿ ಮಲಗಿದ್ದ ವ್ಯಕ್ತಿಯ ಮೊಬೈಲ್ ಕಳ್ಳತನ ಮಾಡಿದ್ದನು. ಆ ವ್ಯಕ್ತಿ ತನ್ನ ಮೊಬೈಲ್ ನೀಡೆಂದು ಕೇಳಿದಾಗ ಚಾಕು ತೋರಿಸಿ ಬೆದರಿಕೆ ಸಹ ಹಾಕಿದ್ದನು. ಮರುದಿನ ಮೊಬೈಲ್ ಕಳೆದುಕೊಂಡ ವ್ಯಕ್ತಿ ತನ್ನ ಸ್ನೇಹಿತ ಜೊತೆ ಬಂದು ಅರ್ಜುನ್ ಗೆ ನಾಲ್ಕು ಧರ್ಮದೇಟು ನೀಡಿ ಮೊಬೈಲ್ ತೆಗೆದುಕೊಂಡು ಹೋಗಿದ್ರು.

ಇದನ್ನೂ ಓದಿ:  Real Hero: ಮುಸ್ಲಿಂ ಯುವಕನ ಜೀವ ಉಳಿಸಿದ ಹಿಂದೂ ಯುವಕ! ಮಾನವೀಯತೆಗಿಂತ ಮಿಗಿಲಾದ ಧರ್ಮ ಇಹುದೇನು?

ಇದೇ ವಿಚಾರಕ್ಕೆ ರಾತ್ರಿ ಜೂನಿಯರ್ ಕಾಲೇಜು ಬಳಿ ಗಲಾಟೆ ನಡೆದಿದೆ. ಇದರಿಂದ ಕೋಪಗೊಂಡ ಅರ್ಜುನ್, ಬೈಕ್ ಮೇಲೆ ಬಂದು ಸಿಕ್ಕ ಸಿಕ್ಕವರ ಮೇಲೆ ಚಾಕುವಿನಿಂದ ದಅಳಿ ನಡೆಸಿ ಪರಾರಿಯಾಗಿದ್ದನು. ಮಹಿಳೆ ಸೇರಿದಂತೆ ಏಳು ಜನರು ದಾಳಿಯಲ್ಲಿ ಗಾಯಗೊಂಡಿದ್ದರು.

ಯಾರದ್ದೋ ಮೇಲಿನ ಕೋಪಕ್ಕೆ ದಾಳಿ

ಇನ್ನೂ ಘಟನೆ ನಡೆದ ಕೇವಲ ನಾಲ್ಕು ಗಂಟೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾರದ್ದೋ ಮೇಲಿನ ಕೋಪಕ್ಕೆ ಈ ರೀತಿ ಮಾರಣಾಂತಿಕ ದಾಳಿ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.

ಸಾರ್ವಜನಿಕರ ಮೇಲೆ ಇಂತಹ ದಾಳಿಗಳು ಅಮೆರಿಕದಲ್ಲಿ ನಡೆಯುತ್ತಿರುವ ಬಗ್ಗೆ ಹೆಚ್ಚು ವರದಿ ಆಗುತ್ತಿರುತ್ತವೆ. ಆದ್ರೆ ಈ ಘಟನೆ ಬಳಿಕ ಚಿಕ್ಕಬಳ್ಳಾಪುರ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆರೋಪಿಯ ಬಂಧನದ ಬಳಿಕ ಜನರು ಭಯಪಡುವ ಅಗತ್ಯ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ಬಗ್ಗೆ ಸುಧಾಕರ್ ಪ್ರತಿಕ್ರಿಯೆ

ಚಿಕ್ಕಬಳ್ಳಾಪುರ ನಗರದಲ್ಲಿ ನೆನ್ನೆ ರಾತ್ರಿ ನಡೆದ ಹಲ್ಲೆ ಪ್ರಕರಣದಲ್ಲಿ ದುಷ್ಕರ್ಮಿಯನ್ನು ಸಾಕ್ಷಿ ಸಮೇತ ಪತ್ತೆಹಚ್ಚಲಾಗಿದ್ದು ತಡರಾತ್ರಿ 3ಗಂಟೆ ಹೊತ್ತಿಗೆ ಬಂಧಿಸಲಾಗಿದೆ.

ಹಲ್ಲೆಯಲ್ಲಿ ಗಾಯಗೊಂಡಿದ್ದ 6 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆ ಪೈಕಿ ಒಬ್ಬರಿಗೆ ಬೆಂಗಳೂರಿನ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 6 ಜನ ಗಾಯಾಳುಗಳು ಜೀವಾಪಾಯದಿಂದ ಪಾರಾಗಿದ್ದು ಅವರ ಚಿಕಿತ್ಸಾ ಜವಾಬ್ದಾರಿಯನ್ನು ನಾನು ಸಂಪೂರ್ಣವಾಗಿ ವಹಿಸಲು ನಿರ್ಧರಿಸಿದ್ದೇನೆ.

ಇದನ್ನೂ ಓದಿ:  Amit Shah: ಸಿದ್ದರಾಮೋತ್ಸವ ಬೆನ್ನಲ್ಲೇ ರಾಜ್ಯಕ್ಕೆ ಅಮಿತ್ ಶಾ ಆಗಮನ; ಇದರ ಹಿಂದಿದ್ಯಾ ರಾಜಕೀಯ ಲೆಕ್ಕಾಚಾರ?

ದುಷ್ಕರ್ಮಿಯನ್ನು ಶೀಘ್ರವಾಗಿ ಪತ್ತೆಹಚ್ಚಿ ಬಂಧಿಸಲು ರಾತ್ರಿಯಿಡೀ ಶ್ರಮಿಸಿದ ಎಸ್ಪಿ ನಾಗೇಶ್, ಡಿವೈಎಸ್ಪಿ ವಾಸುದೇವ್, ಸರ್ಕಲ್ ಇನ್ಸ್ಪೆಕ್ಟರ್ ರಾಜು ಮತ್ತು ಎಲ್ಲ ಪೊಲೀಸ್ ಸಿಬ್ಬಂದಿಗಳಿಗೆ ಧನ್ಯವಾದಗಳು.
Published by:Mahmadrafik K
First published: