• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • HD Kumaraswamy: 'ತೆನೆ' ಹೊರುತ್ತಾನಾ ರೌಡಿ ಶೀಟರ್? ಎಚ್‌ಡಿಕೆ ಜೊತೆ ಕಾಣಿಸಿಕೊಂಡ ಬಂಡೆ ಮಂಜ!

HD Kumaraswamy: 'ತೆನೆ' ಹೊರುತ್ತಾನಾ ರೌಡಿ ಶೀಟರ್? ಎಚ್‌ಡಿಕೆ ಜೊತೆ ಕಾಣಿಸಿಕೊಂಡ ಬಂಡೆ ಮಂಜ!

ಎಚ್‌ಡಿಕೆ ಜೊತೆ ರೌಡಿಶೀಟರ್ ಬಂಡೆ ಮಂಜ!

ಎಚ್‌ಡಿಕೆ ಜೊತೆ ರೌಡಿಶೀಟರ್ ಬಂಡೆ ಮಂಜ!

ಕುಖ್ಯಾತ ರೌಡಿಶೀಟರ್‌ಗಳಾದ ಸೈಲೆಂಟ್ ಸುನೀಲ (Silent Sunil), ಫೈಟರ್ ರವಿ (Fighter Ravi), ನಾಗ (Naga), ಬೆತ್ತನಗೆರೆ ಶಂಕರ (Bettanagere Shankara) ಸೇರಿದಂತೆ ಹಲವರು ಬಿಜೆಪಿ ಘಟಾನುಘಟಿ ನಾಯಕರ ಜೊತೆ ಗುರುತಿಸಿಕೊಂಡಿದ್ದರು. ಇದೇ ವಿಚಾರವನ್ನು ಇಟ್ಟುಕೊಂಡೇ ಕಾಂಗ್ರೆಸ್ (Congress), ಜೆಡಿಎಸ್ (JDS) ನಾಯಕರು ಬಿಜೆಪಿ ವಿರುದ್ಧ ಮುಗಿಬಿದ್ದಿದ್ದರು. ಇದೀಗ ಜೆಡಿಎಸ್‌ ಕೂಡ ರೌಡಿಶೀಟರ್‌ಗಳಿಗೆ ರೆಡ್ ಕಾರ್ಪೆಟ್ ಹಾಸುವ ಹಾದಿಯತ್ತ ಹೋಗ್ತಿದೆಯಾ ಅನ್ನೋ ಅನುಮಾನ ಶುರುವಾಗಿದೆ.

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ (Karnataka Aassembly Elections) ಹತ್ತಿರವಾಗುತ್ತಿದ್ದಂತೆ ಮತ್ತೆ ರೌಡಿಶೀಟರ್‌ಗಳ (rowdy sheeters) ಸದ್ದು ಜೋರಾಗುತ್ತಿದೆ. ಈ ಹಿಂದೆ ಸಾಲು ಸಾಲು ರೌಡಿ ಶೀಟರ್‌ಗಳು ಬಿಜೆಪಿ (BJP) ಸೇರಲು ಮುಂದೆ ಬಂದಿದ್ದರು. ಕುಖ್ಯಾತ ರೌಡಿಶೀಟರ್‌ಗಳಾದ ಸೈಲೆಂಟ್ ಸುನೀಲ (Silent Sunil), ಫೈಟರ್ ರವಿ (Fighter Ravi), ನಾಗ (Naga), ಬೆತ್ತನಗೆರೆ ಶಂಕರ (Bettanagere Shankara) ಸೇರಿದಂತೆ ಹಲವರು ಬಿಜೆಪಿ ಘಟಾನುಘಟಿ ನಾಯಕರ ಜೊತೆ ಗುರುತಿಸಿಕೊಂಡಿದ್ದರು. ಇದೇ ವಿಚಾರವನ್ನು ಇಟ್ಟುಕೊಂಡೇ ಕಾಂಗ್ರೆಸ್ (Congress), ಜೆಡಿಎಸ್ (JDS) ನಾಯಕರು ಬಿಜೆಪಿ ವಿರುದ್ಧ ಮುಗಿಬಿದ್ದಿದ್ದರು. ಇದೀಗ ಜೆಡಿಎಸ್‌ ಕೂಡ ರೌಡಿಶೀಟರ್‌ಗಳಿಗೆ ರೆಡ್ ಕಾರ್ಪೆಟ್ ಹಾಸುವ ಹಾದಿಯತ್ತ ಹೋಗ್ತಿದೆಯಾ ಅನ್ನೋ ಅನುಮಾನ ಶುರುವಾಗಿದೆ.


ಎಚ್‌ಡಿ ಕುಮಾರಸ್ವಾಮಿ ಜೊತೆ ರೌಡಿಶೀಟರ್ ಬಂಡೆ ಮಂಜ?


ಬಿಜೆಪಿ ಆಯ್ತು ಈಗ ಜೆಡಿಎಸ್ ಸರದಿ ಶುರುವಾದಂತೆ ಕಾಣುತ್ತಿದೆ. ಮಾಜಿ ಸಿಎಂ‌ ಕುಮಾರಸ್ವಾಮಿ ಜೊತೆ ರೌಡಿ ಶೀಟರ್ ಒಬ್ಬ ಕಾಣಿಸಿಕೊಂಡಿದ್ದಾನೆ. ಬೆಮೆಲ್ ಕೃಷ್ಣಪ್ಪ ಕೊಲೆಯ ಎ2 ಆರೋಪಿ ರೌಡಿಶೀಟರ್ ಬಂಡೆ ಮಂಜ ಎಚ್‌ಡಿಕೆ ಜೊತೆ ಕಾಣಿಸಿಕೊಂಡ ಫೋಟೋವೊಂದು ವೈರಲ್ ಆಗುತ್ತಿದೆ.


ಜೆಡಿಎಸ್ ಶಾಸಕರೊಂದಿಗೆ ಸಂಪರ್ಕದಲ್ಲಿದ್ದಾನಾ ಬಂಡೆ ಮಂಜ?


ನೆಲಮಂಗಲ ಜೆಡಿಎಸ್ ಶಾಸಕ ಶ್ರೀನಿವಾಸಮೂರ್ತಿ ಜೊತೆ ರೌಡಿ ಶೀಟರ್ ಬಂಡೆ ಮಂಜ ಒಡನಾಟ ಇಟ್ಟುಕೊಂಡಿರುವ ಆರೋಪ ಕೇಳಿ ಬಂದಿದೆ. ಗುದ್ದಲಿ ಪೂಜೆ ಕಾರ್ಯಕ್ರಮವೊಂದರಲ್ಲಿ ಶಾಸಕರ ಜೊತೆ ಪ್ರತ್ಯಕ್ಷ‍ನಾಗಿದ್ದಾನಂತೆ. ರೌಡಿ ಶೀಟರ್ ಬಂಡೆ ಮಂಜ ಶಾಸಕರೊಂದಿಗೆ ಕೇಕ್ ಕತ್ತರಿಸಿರುವ ಫೋಟೋ ವೈರಲ್ ಆಗಿದೆ.


ಇದನ್ನೂ ಓದಿ: MLA’s Salary: ನಮ್ಮ ಶಾಸಕರ ಸಂಬಳವೆಷ್ಟು? ಸಚಿವರ ವೇತನದ ಬಗ್ಗೆ ನಿಮಗೆಷ್ಟು ಗೊತ್ತು?


ವಿಡಿಯೋ, ಫೋಟೋ ರಿಲೀಸ್ ಮಾಡಿದ ಕಾಂತರಾಜು


ಎಚ್‌ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ನಾಯಕರ ಜೊತೆ ಬಂಡೆ ಮಂಜ ಇರುವ ವಿಡಿಯೋ, ಫೋಟೋಗಳನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಕಾಂತರಾಜು ರಿಲೀಸ್ ಮಾಡಿದ್ದಾರೆ. ಇತ್ತೀಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಕಾಂತರಾಜು ಇದೀಗ ಫೋಟೋ ರಿಲೀಸ್ ಮಾಡಿದ್ದಾರೆ.




ನೆಲಮಂಗಲ ಶಾಸಕರ ವಿರುದ್ಧ ಕಾಂತರಾಜು ಆರೋಪ

top videos


    ನೆಲಮಂಗಲ ಶಾಸಕ ಶ್ರೀನಿವಾಸ ಮೂರ್ತಿ ವಿರುದ್ಧ ಕಾಂತರಾಜು ಗಂಭೀರ ಆರೋಪ ಮಾಡಿದ್ದಾರೆ.  ಒಬ್ಬ ದೊಡ್ಡ ಕಳ್ಳ, ಫ್ರಾಡ್ ಅಂತ ಕಾಂತರಾಜು ಆರೋಪಿಸಿದ್ದಾರೆ. ಬಿಎಂ‌ಎಲ್ ಕೃಷ್ಣಪ್ಪ ಕೊಲೆ ಪ್ರಕರಣ ಆರೋಪಿಗಳೆಲ್ಲ ಶಾಸಕರ ಜೊತೆಯಲ್ಲೆ ಇದ್ದಾರೆ . ಶಾಸಕರು ನೆಲಮಂಗಲವನ್ನ ರಕ್ತಮಂಗಲವನ್ನಾಗಿಸುತ್ತಿದ್ದಾರೆ ಅಂತ ಶಾಸಕ ಶ್ರೀನಿವಾಸಮೂರ್ತಿ ವಿರುದ್ದ ಮಾಜಿ ಎಂ‌ಎಲ್‌ಸಿ ಕಾಂತರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    First published: