ಹುಬ್ಬಳ್ಳಿ: ಆ ಒಂದು ಪುಟ್ಟ ವಸ್ತುವಿಗೆ (Small things) ಇಲ್ಲಿ ಕೊಲೆ (Murder) ನಡೆದೇ ಹೋಯಿತು. ಐದು ರೂಪಾಯಿ ಕಿಮ್ಮತ್ತಿನ (5 rupees value) ವಸ್ತುವನ್ನು ಕೊಡಲಿಲ್ಲ ಅಂತ ಯುವಕನ (Young Boy) ಬರ್ಬರ ಹತ್ಯೆ ನಡೆದಿದೆ. “ಹೇ ಅದ್ನ ತೊಗೊಂಡು ಬಾ” ಅಂತ ಆ ರೌಡಿಶೀಟರ್ (Rowdy Sheeter) ಹೇಳ್ದ, “ನನ್ನ ಹತ್ರ ಹಣ (Money) ಇಲ್ಲಾ ಅಣ್ಣಾ” ಅಂತ ಇವ್ನು ಹೇಳಿದ. ಅಷ್ಟೇ ಸಾಕಾಯಿತು ಒಂದು ಕೊಲೆಗೆ. ಅಂದಹಾಗೆ ವಾಣಿಜ್ಯ ವಹಿವಾಟು ಇತ್ಯಾದಿ ಕಾರಣಕ್ಕೆ ಹುಬ್ಬಳ್ಳಿ (Hubballi) ‘ಛೋಟಾ ಮುಂಬೈ’ (Chota Mumbai) ಅಂತಾನೇ ಪ್ರಸಿದ್ಧಿ. ಆದ್ರೆ ಬರ ಬರ್ತಾ ಈ ಊರು ‘ಮಿನಿ ಬಿಹಾರ’ (Mini Bihar) ಆಗ್ತಾ ಇದೆಯಾ ಅನ್ನೋ ಪ್ರಶ್ನೆ ಹುಟ್ಟಿಕೊಳ್ಳಲಾರಂಭಿಸಿದೆ. ಅದಕ್ಕೂ ಕಾರಣಗಳು ಇಲ್ಲದಿಲ್ಲ. ಈ ಛೋಟಾ ಮುಂಬೈಯಲ್ಲಿ ಆಗಾಗ ಕೊಲೆಗಳು ನಡೆಯುತ್ತಲೇ ಇವೆ. ಅದೂ ಸಹ ಕ್ಷುಲಕ ಕಾರಣಗಳಿಗಾಗಿ. ಇದೀಗ ಅಂಥದ್ದೇ ಒಂದು ಕ್ಷುಲ್ಲಕ ಕಾರಣಕ್ಕಾಗಿ ಹುಬ್ಬಳ್ಳಿಯಲ್ಲಿ ಕೊಲೆಯೊಂದು ನಡೆದು ಹೋಗಿದೆ.
5 ರೂಪಾಯಿಯ ವಸ್ತುವಿಗಾಗಿ ನಡೆಯಿತು ಕೊಲೆ
ಈ ಕೊಲೆ ನಡೆದಿರೋದು ಐದು ರೂಪಾಯಿ ಕಿಮ್ಮತ್ತಿನ ವಸ್ತುವಿಗಾಗಿ ಅನ್ನೋದು ಅಚ್ಚರಿ ಎನಿಸಿದ್ರೂ ಸತ್ಯ. ಹಾಗೆ ನೋಡಿದ್ರೆ ಕೊಲೆಯಾದವನು ತಾನಾಯಿತು, ತನ್ನ ಕೆಲಸ ಆಯಿತು ಅಂದ್ಕೊಂಡಿರೋನು. ಯಾರ ತಂಟೆಗೂ ಹೋಗದೆ ಸುಖಕರ ಜೀವನ ಸಾಗಿಸುತ್ತಿದ್ದವನ ಮೇಲೆ ಅದ್ಯಾರ ವಕ್ರದೃಷ್ಟಿ ಬಿತ್ತೋ ಗೊತ್ತಿಲ್ಲ, ನೋಡ ನೋಡುತ್ತಿದ್ದಂತೆಯೇ ಅವನ ಮರ್ಡನ್ ನಡೆದು ಹೋಗಿದೆ.
ಹೌದು ಇಂಥದ್ದೊಂದು ವಿಚಿತ್ರ ಘಟನೆಗೆ ಹುಬ್ಬಳ್ಳಿ ಸಾಕ್ಷಿಯಾಗಿದೆ.... ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲಿ ಕೊಲೆಯಾಗಿ ಹೋದ ಈತನ ಹೆಸರು ಮೆಹಬೂಬ್ ಸಾಬ್. ಇವ್ನು ಹುಬ್ಬಳ್ಳಿಯ ಆನಂದ ನಗರ ನಿವಾಸಿ. ಸುಮಾರು ವರ್ಷಗಳಿಂದ ಆನಂದ ನಗರದಲ್ಲಿ ಟೈಲ್ಸ್ ಕೆಲಸ ಮಾಡಿಕೊಂಡು ಉತ್ತಮ ಜೀವನ ನಡೆಸುತ್ತಿದ್ದ. ಆದರೆ ಹಳೇ ಹುಬ್ಬಳ್ಳಿಯ ಆನಂದನಗರದಲ್ಲಿ ಅವನ ಬರ್ಬರ ಹತ್ಯೆಯಾಗಿದೆ
ಪಾಪದವನ ಪ್ರಾಣ ತೆಗೆದ ವಿಮಲ್!
ಪಾನ್ ಶಾಪ್ ಬಳಿ ಗುಟ್ಕಾ ತಿನ್ನುವ ವಿಚಾರವಾಗಿ ಮೆಹಬೂಬ್ ಸಾಬ್ ಬರ್ಬರವಾಗಿ ಹತ್ಯೆಯಾಗಿದ್ದಾನೆ. ರೌಡಿ ಶೀಟರ್ ಗೌಸ್ ಮೋದಿನ್ ಎಂಬಾತ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪಾನ್ ಅಂಗಡಿ ಬಳಿ ಇದ್ದಾಗ ಗೌಸ್ ಮೋದೀನ್ ಗುಟ್ಕಾ ಕೊಡಿಸುವಂತೆ ಕೇಳಿದ್ದಾನೆ ಎನ್ನಲಾಗಿದೆ. ಈ ವೇಳೆ ನನ್ನ ಬಳಿ ಐದು ರೂಪಾಯಿ ಇಲ್ಲಾ ಅಣ್ಣಾ ಎಂದು ಮೆಹಬೂಬ್ ಸಾಬ್ ಹೇಳಿದ್ದಾನೆ. ಇದರಿಂದ ಕುಪಿತಗೊಂಡ ಗೌಸ್ ಮೋದಿನ್, ಮಾರಕಾಸ್ತ್ರದಿಂದ ಇರಿದು ಎಸ್ಕೇಪ್ ಆಗಿದ್ದಾನೆ.
ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೆಹಬೂಬ್ ನನ್ನು ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೆಹಬೂಬ್ ಸಾಬ್ ಕಳಸದ ಸಾವನ್ನಪ್ಪಿದ್ದಾನೆ.
ತೀವ್ರ ರಕ್ತಸ್ರಾವದಿಂದ ಹಾರಿಹೋಯ್ತು ಪ್ರಾಣ
ಮೆಹಬೂಬ್ ಹೊಟ್ಟೆಗೆ ಮಾರಕಾಸ್ತ್ರದಿಂದ ಇರಿದಿರೋದನ್ನು ಬಿಟ್ಟರೆ ಬೇರೆ ಯಾವುದೇ ರೀತೀಯ ಗಾಯಗಳಾಗಿಲ್ಲ. ಕೇವಲ ಒಂದು ಭಾಗದಲ್ಲಿ ಇರಿದಿರೋದ್ರಿಂದ ಪ್ರಾಣ ಹೋಗಿರೋದಕ್ಕೆ ಪೊಲೀಸರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕುಡಿದ ಮತ್ತಿನಲ್ಲಿ ಇರಿದ ರಭಸಕ್ಕೆ ತೀವ್ರ ರಕ್ತಸ್ರಾವವಾಗಿ ಪ್ರಾಣಪಕ್ಷಿ ಹಾರಿಹೋಗಿರಬಹುದೆಂದುಕೊಂಡಿದ್ದಾರೆ. ಆದರೆ ಚಿಕ್ಕ ವಸ್ತುವಿಗಾಗಿ ದೊಡ್ಡ ಪ್ರಾಣವೊಂದು ಹೋಗಿರೋದು ಆತಂಕಕ್ಕೆ ಕಾರಣವಾಗಿದೆ.
ಮಗನನ್ನು ಕಳೆದುಕೊಂಡು ಪೋಷಕರ ಕಣ್ಣೀರು
ಕ್ಷುಲ್ಲಕ ಕಾರಣಕ್ಕೆ ತನ್ನ ಮಗನನ್ನು ಕಳೆದುಕೊಂಡಿರೋ ಪೋಷಕರು, ಕಣ್ಣೀರು ಹಾಕುತ್ತಿದ್ದಾರೆ. ನನ್ನ ಮಗ ಯಾರೊಂದಿಗು ದುಷ್ಮನಿ ಇಟ್ಟುಕೊಂಡಿರಲಿಲ್ಲ. ಹೊರಗೆ ಹೋಗಿ ಬರ್ತೀನಿ ಅಂತ ಹೋದವನು ಹೆಣವಾಗಿ ಬಂದಿದ್ದಾನೆ. ಗುಟ್ಕಾ ಕೊಡಿಸು ಅಂತ ಕೇಳಿದ್ದಕ್ಕೆ ತನ್ನ ಮಗ ಹಣ ಇಲ್ಲಾ ಅಂತ ಹೇಳಿದ್ದಾನೆ. ಅಷ್ಟಕ್ಕೆ ದುಷ್ಕರ್ಮಿಗಳು ನನ್ನ ಕೊಲೆ ಮಾಡಿ ಓಡಿ ಹೋಗಿದ್ದಾರೆ ಎಂದು ಮೆಹಬೂಬ್ ಸಾಬ್ ತಂದೆ ರಫೀಕ್ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: MLA T Raghumurthy: ಶಾಸಕ ಟಿ. ರಘುಮೂರ್ತಿ ಕಾರ್ ಅಪಘಾತ, ಪ್ರಾಣಾಪಾಯದಿಂದ ಪಾರು
ರಫೀಕ್ ಗೆ ನಾಲ್ವರು ಮಕ್ಕಳಿದ್ದು, ಎರಡನೆಯ ಮಗನಾಗಿದ್ದ ಮೆಹಬೂಬ್ ಸಾಬ್ ಗೆ ಕೆಲ ತಿಂಗಳುಗಳ ಹಿಂದೆಯಷ್ಟೇ ಮದುವೆ ಮಾಡಿದ್ದರು ಎನ್ನಲಾಗಿದೆ. ತನ್ನ ವೃತ್ತಿಯಾಯಿತು, ತನ್ನ ಸಂಸಾರವಾಯಿತು ಅಂದುಕೊಂಡವನಿಗೆ ಗುಟ್ಕಾ ರೂಪದಲ್ಲಿ ಯಮ ವಕ್ಕರಿಸಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರೋ ಹಳೆ ಹುಬ್ಬಳ್ಳಿ ಠಾಣೆ ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಮುಖ್ಯ ಆರೋಪಿ ರೌಡಿಶೀಟರ್ ಗೌಸ್ ಮೋದಿನ್ ಮಾತ್ರ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ